ವಿಜಯ್ ದೇವರಕೊಂಡ ಜೊತೆ ಮುಂದಿನ ವರ್ಷ ಮದ್ವೆಯಾಗ್ತಾರಾ ರಶ್ಮಿಕಾ ಮಂದಣ್ಣ ?
ಕಿರಿಕ್ ಪಾರ್ಟಿ ಚಿತ್ರದ ನಂತರ ರಶ್ಮಿಕಾ ಮಂದಣ್ಣ ಬೆಳೆದು ನಿಂತ ರೀತಿ ಕಂಡು ಈ ಕ್ಷಣಕ್ಕೂ ಕನ್ನಡದ ಪ್ರೇಕ್ಷಕರಲ್ಲೊಂದು ಅಚ್ಚರಿಯಿದೆ. ಯಾಕೆಂದರೆ ಕನ್ನಡದ ಜೊತೆಯಲ್ಲಿ ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ಮಿಂಚುವುದರ ಜೊತೆ ಕೈ ತುಂಬಾ ಕೆಲಸ ಗಿಟ್ಟಿಸಿಕೊಳ್ಳುವುದು ಸುಲಭ ಅಲ್ಲ.ಆದರೆ .. ರಶ್ಮಿಕಾ ವಿಚಾರದಲ್ಲಿ ಇದೆಲ್ಲವೂ ಸಲೀಸು ಎಂಬಂತೆ ನಡೆದು ಹೋಗಿದೆ.
ಇಂಥಾ ರಶ್ಮಿಕಾ ಮಂದಣ್ಣ ಆಂಧ್ರದ ರೌಡಿ ವಿಜಯ್ ದೇವರಕೊಂಡ ಜೊತೆ ಲವ್ವಲ್ಲಿ ಬಿದ್ದಿದ್ದಾರೆ ಎನ್ನುವ ಅನುಮಾನ ಅನೇಕರಿಗೆ ಇದೆ. ಇಬ್ಬರ ನಡುವೆ ಇರುವುದು ಸ್ನೇಹ ಅಲ್ಲ ಬದಲಿಗೆ ಪ್ರೇಮ ಎನ್ನುವ ಮಾತು ಆಗಾಗ ಕೇಳಿ ಬರುತ್ತೆ. ಇದಕ್ಕೆ ಪೂರಕವಾಗಿ ಇಬ್ಬರ ನಡಾವಳಿ ಕೂಡ ಹಾಗೇ ಇದೆ. ಗೋವಾದಿಂದ ಹಿಡಿದು ಅಮೆರಿಕಾದವರೆಗೆ ಜೊತೆ ಜೊತೆಯಾಗಿಯೇ ಪ್ರವಾಸಕ್ಕೆ ತೆರಳುವ ಇಬ್ಬರು ದೀಪಾವಳಿ ಹಬ್ಬವನ್ನು ಪ್ರತಿ ವರ್ಷ ಜೊತೆಯಲ್ಲಿ ಆಚರಿಸುತ್ತಾ ಬಂದಿದ್ದಾರೆ. ಮೊನ್ನೆ ಜೊತೆಯಲ್ಲಿ ಬೊಂಬಾಟ್ ಭೋಜನ ಸವಿದಿದ್ದಾರೆ. ದೇಶವ್ಯಾಪಿ ಚರ್ಚೆಗೀಡಾಗಿದ್ದಾರೆ. ಇದರ ನಡುವೆ ಈಗ ರಶ್ಮಿಕಾ ಮಂದಣ್ಣ ಪ್ರೀತಿ-ಪ್ರೇಮದ ಬಗ್ಗೆ ಮಾತನಾಡಿದ್ದಾರೆ. ಮದುವೆಯ ಬಗ್ಗೆ ಕೇಳಲಾದ ಪ್ರಶ್ನೆಗೆ ಎಲ್ಲರಿಗೆ ವಿಚಾರ ಗೊತ್ತಿದೆಯಲ್ಲ ಎಂದು ಹೇಳುವ ಮೂಲಕ ವಿಜಯ್ ದೇವರಕೊಂಡ ಜೊತೆಗಿನ ತಮ್ಮ ಸಂಬಂಧವನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.

ಹೌದು, ಪುಷ್ಪ 2 ಚಿತ್ರದ ಪ್ರಚಾರದಲ್ಲಿ ಭಾಗಿಯಾಗಿದ್ದ ರಶ್ಮಿಕಾಗೆ ನಿರೂಪಕರು ನಿನ್ನೆ ಪ್ರಶ್ನೆಯನ್ನು ಕೇಳಿದ್ದರು. 'ನೀವು ಸಿನಿಮಾ ಇಂಡಸ್ಟ್ರಿಯನ್ನು ಮದುವೆ ಆಗ್ತೀರಾ ಅಥವಾ ಹೊರಗಿನವರನ್ನು ಮದುವೆ ಆಗ್ತೀರಾ? ನೀವು ಕ್ಲ್ಯಾರಿಟಿ ಕೊಟ್ಟರೆ ನಾವು ಹುಡುಗನನ್ನು ಹುಡುಕುತ್ತೇವೆ ಎಂದು ನಿರೂಪಕರು ಕೇಳಿದಾಗ ನಸು ನಕ್ಕ ರಶ್ಮಿಕಾ ಎಲ್ಲರಿಗೂ ಈ ವಿಷಯ ಗೊತ್ತು ಎಂದಿದ್ದಾರೆ. ಆ ನಂತರ ಕೂಡ ನಮಗೆ ಗೊತ್ತಿಲ್ಲ. ಒಂದು ಸಣ್ಣ ಸುಳಿವು ಕೊಡಿ ಎಂದು ಮತ್ತೆ ಪ್ರಶ್ನಿಸಿದಾಗ ಹಾಗೆ ಹೇಳುವುದು ಬೇಡ. ನಾನೇ ಖುದ್ದಾಗಿ ಒಂದು ದಿನ ಎಲ್ಲವನ್ನೂ ಹೇಳುತ್ತೇನೆ ಎಂದು ಹೇಳಿದ್ದಾರೆ. ನಿಮಗೆ ಯಾವ ಉತ್ತರ ಬೇಕು ಎಂಬುದು ನಂಗೆ ಗೊತ್ತು. ನನಗೆ ಚೆನ್ನಾಗಿ ಗೊತ್ತು' ಎಂದು ಎಂದು ಕೂಡ ರಶ್ಮಿಕಾ ಮಂದಣ್ಣ ಹೇಳಿದ್ದಾರೆ.
ರಶ್ಮಿಕಾ ಮಂದಣ್ಣ ಅವರ ಈ ಮಾತುಗಳನ್ನು ಕೇಳಿ ಅನೇಕರು ವಿಜಯ್ ದೇವರಕೊಂಡ ಅವರನ್ನು ರಶ್ಮಿಕಾ ಮಂದಣ್ಣ ಮದ್ವೆಯಾಗುವುದು ಖಚಿತ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಮುಖದಲ್ಲಿನ ನಗು ಮತ್ತು ಪ್ರಶ್ನೆ ಕೇಳಿದಾಗ ನಾಚಿಕೊಂಡ ರೀತಿಯನ್ನೆಲ್ಲ ನೋಡುತ್ತಿದ್ದರೆ ಶೀಘ್ರದಲ್ಲಿಯೇ ವಿಜಯ್ ದೇವರಕೊಂಡ ಜೊತೆಗಿನ ತಮ್ಮ ಸಂಬಂಧವನ್ನು ರಶ್ಮಿಕಾ ಮಂದಣ್ಣ ಅಧಿಕೃತವಾಗಿ ಹೇಳಬಹುದು ಎನ್ನುತ್ತಿದ್ದಾರೆ. 2025ರಲ್ಲಿ ರಶ್ಮಿಕಾ ಮಂದಣ್ಣ ಸಪ್ತಪದಿ ತುಳಿಯುವುದು ಗ್ಯಾರೆಂಟಿ ಎನ್ನುವ ಭವಿಷ್ಯವಾಣಿಯನ್ನು ಕೂಡ ಹೇಳುತ್ತಿದ್ದಾರೆ.
ಅಂದ್ಹಾಗೇ ಕಳೆದ ಕೆಲ ದಿನಗಳ ಹಿಂದೆಯಷ್ಟೇ ವಿಜಯ್ ದೇವರಕೊಂಡ ನಾನು ಸಿಂಗಲ್ ಅಲ್ಲ ಎಂದು ಹೇಳಿದ್ದರು. ನನಗೆ ಈಗ 35 ವರ್ಷ, ನಾನು ಇನ್ನೂ ಒಬ್ಬಂಟಿಯಾಗಿದ್ದೇನೆ ಎಂದು ನಿಮಗೆ ಅನ್ಸುತ್ತಾ ಎಂದು ಸಂದರ್ಶನದಲ್ಲಿ ಪ್ರಶ್ನೆ ಕೇಳಿದ್ದ ವಿಜಯ್ ದೇವರಕೊಂಡ ನಾನು ಒಬ್ಬರನ್ನೂ ಪ್ರೀತಿಸುತ್ತಿದ್ದೇನೆ ಎಂದು ಹೇಳಿದ್ದರು. ಪ್ರೀತಿಸುವುದು ಹೇಗೆ ಎನ್ನುವುದು ನನಗೆ ಗೊತ್ತು ಎಂದಿದ್ದರು. ಈಗ ರಶ್ಮಿಕಾ ಮಂದಣ್ಣ ತಮ್ಮ ಮದುವೆ ಮತ್ತು ಹುಡುಗನ ಬಗ್ಗೆ ಪುಷ್ಪ 2 ವೇದಿಕೆಯಲ್ಲಿ ಮಾತನಾಡಿದ್ದಾರೆ.
ಇನ್ನುಳಿದಂತೆ ಸದ್ಯಕ್ಕೆ ರಶ್ಮಿಕಾ ಮಂದಣ್ಣ ಪುಷ್ಪ 3 ಚಿತ್ರದ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ. ಸಲ್ಮಾನ್ ಖಾನ್ ಅಭಿನಯದ ಸಿಕಂದರ್ ಚಿತ್ರದಲ್ಲಿ ಕೂಡ ರಶ್ಮಿಕಾ ನಾಯಕಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಆಯುಷ್ಮಾನ್ ಖುರಾನ ಜೊತೆ ಥಾಮಾ ಚಿತ್ರದಲ್ಲಿ ಕೂಡ ರಶ್ಮಿಕಾ ಕಾಣಿಸಿಕೊಳ್ಳಲಿದ್ದಾರೆ. ಅತ್ತ ವಿಜಯ್ ದೇವರಕೊಂಡ ಕೂಡ ಚಿತ್ರವೊಂದನ್ನು ಒಪ್ಪಿಕೊಂಡಿದ್ದು ಇನ್ನು ಹೆಸರಿಡದ ಈ ಚಿತ್ರ ಮುಂದಿನ ವರ್ಷ ತೆರೆಗೆ ಬರುವ ನಿರೀಕ್ಷೆ ಇದೆ.


Click it and Unblock the Notifications











