'ಟೈಗರ್.. ಟೈಗರ್' ಎಂದು ಗುಡ್ ನ್ಯೂಸ್ ಕೊಟ್ಟೇಬಿಟ್ರಾ ರುಕ್ಮಿಣಿ ವಸಂತ್?

ಕನ್ನಡ ನಟಿ ರುಕ್ಮಿಣಿ ವಸಂತ್ ಈಗ ತೆಲುಗು, ತಮಿಳು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಶೀಘ್ರದಲ್ಲೇ ಬಾಲಿವುಡ್ ಅಂಗಳಕ್ಕೆ ಕಾಲಿಟ್ಟರೂ ಅಚ್ಚರಿಪಡಬೇಕಿಲ್ಲ. ತಿಂಗಳ ಹಿಂದೆಯಷ್ಟೆ ವಿಜಯ್ ಸೇತುಪತಿ ಜೊತೆ ರುಕ್ಕು ನಟಿಸಿದ್ದ 'ಏಸ್' ಸಿನಿಮಾ ತೆರೆಗೆ ಬಂದಿತ್ತು. ಇತ್ತೀಚೆಗೆ ಓಟಿಟಿಗೆ ಬಂದು ಸದ್ದು ಮಾಡ್ತಿದೆ.

ಸದ್ಯ ತಮಿಳಿನ 'ಮದರಾಸಿ' ಎಂಬ ಚಿತ್ರದಲ್ಲಿ ರುಕ್ಮಿಣಿ ವಸಂತ್ ನಟಿಸುತ್ತಿದ್ದಾರೆ. ಮತ್ತಷ್ಟು ಸಿನಿಮಾಗಳಲ್ಲಿ ನಟಿಸೋ ಬಗ್ಗೆ ಚರ್ಚೆ ನಡೀತಿದೆ. ಇತ್ತೀಚೆಗೆ ಪ್ರಭಾಸ್ ನಟನೆಯ 'ಸ್ಪಿರಿಟ್' ಚಿತ್ರಕ್ಕೆ ರುಕ್ಕು ನಾಯಕಿ ಎನ್ನುವ ಊಹಾಪೋಹ ಶುರುವಾಗಿತ್ತು. ಆದರೆ ತ್ರಿಪ್ತಿ ಡಿಮ್ರಿ ನಾಯಕಿ ಎಂದು ಘೋಷಿಸಿದ ಬಳಿಕ ಆ ಸುದ್ದಿ ತಣ್ಣಗಾಗಿತ್ತು. ಇನ್ನು ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಜ್ಯೂ. ಎನ್‌ಟಿಆರ್ ನಟನೆಯ ಚಿತ್ರಕ್ಕೂ ರುಕ್ಮಿಣಿ ನಾಯಕಿ ಎನ್ನುವ ಗುಸುಗುಸು ಬಹಳ ದಿನಗಳಿಂದ ಕೇಳಿಬರ್ತಿದೆ.

Did Rukmini Vasanth Just Drop a Hint About Acting with Jr NTR

ಈಗಾಗಲೇ ಪ್ರಶಾಂತ್ ನೀಲ್ ಸಿನಿಮಾ ಚಿತ್ರೀಕರಣ ಆರಂಭಿಸಿದ್ದಾರೆ. ಕುಮಟಾದ ಧಾರೇಶ್ವರದಲ್ಲಿ ಸೆಟ್ ಹಾಕಿ ಒಂದು ಶೆಡ್ಯೂಲ್ ಮುಗಿಸಿದ್ದಾರೆ. ಅದಕ್ಕೂ ಮುನ್ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಒಂದಷ್ಟು ದೃಶ್ಯಗಳನ್ನು ಸೆರೆಹಿಡಿಯಲಾಗಿತ್ತು. ಚಿತ್ರದಲ್ಲಿ 'ಡ್ರ್ಯಾಗನ್' ಎಂಬ ಟೈಟಲ್ ಅನ್ನು ಪರಿಶೀಲಿಸುತ್ತಿದ್ದಾರೆ ಎನ್ನಲಾಗ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗುತ್ತಿದೆ.

ಸದ್ಯ ರುಕ್ಮಿಣಿ ವಸಂತ್ ಮಾಡಿರುವ ಪೋಸ್ಟ್ ಬಹಳ ಚರ್ಚೆ ಹುಟ್ಟಾಕ್ಕಿದೆ. ಪ್ರಶಾಂತ್ ನೀಲ್ ಹಾಗೂ ಜ್ಯೂ. ಎನ್‌ಟಿಆರ್ ಚಿತ್ರಕ್ಕೆ ರುಕ್ಕು ಲುಕ್ ಟೆಸ್ಟ್ ಮಾಡಲಾಗಿದೆ ಎನ್ನುವ ಊಹಾಪೋಹ ಶುರುವಾಗಿದೆ. ಇನ್‌ಸ್ಟಾಗ್ರಾಮ್‌ನಲ್ಲ 3 ಫೋಟೊಗಳನ್ನು ಹಂಚಿಕೊಂಡಿರುವ ಚೆಲುವೆ "tiger tiger burning bright" ಎಂದು ಬರೆದುಕೊಂಡಿದ್ದಾರೆ. ತೆಲುಗು ನಟ ಜ್ಯೂ. ಎನ್‌ಟಿಆರ್ ಅವರನ್ನು ಅಭಿಮಾನಿಗಳು ಯಂಗ್ ಟೈಗರ್ ಎಂದು ಕರೆದುವುದು ಗೊತ್ತೇಯಿದೆ. ಅವರೊಟ್ಟಿಗೆ ಸಿನಿಮಾ ಮಾಡುವ ಬಗ್ಗೆ ರುಕ್ಮಿಣಿ ಹೀಗೆ ಪೋಸ್ಟ್ ಮಾಡಿ ಸುಳಿವು ಕೊಟ್ಟಿದ್ದಾರೆ ಎಂದು ಅಭಿಮಾನಿಗಳು ಊಹಿಸುತ್ತಿದ್ದಾರೆ.

ಹುಲಿಯ ಚಿತ್ರಗಳಿರುವ ಶರ್ಟ್ ಅನ್ನು ರುಕ್ಮಿಣಿ ವಸಂತ್ ತೊಟ್ಟು ಮಿರರ್ ಸೆಲ್ಫಿ ತೆಗೆದುಕೊಂಡಿದ್ದಾರೆ. ಅದಕ್ಕೆ ಈ ರೀತಿ ಕ್ಯಾಪ್ಷನ್ ಕೊಟ್ಟಿರಬಹುದು ಎನ್ನುವುದು ಕೆಲವರ ಲೆಕ್ಕಾಚಾರ. NTRNEEL ಚಿತ್ರದಲ್ಲಿ ನಟಿಸುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ. ತಾರಕ್ ಅಭಿಮಾನಿಗಳು ಮಾತ್ರ ಸೋಶಿಯಲ್ ಮೀಡಿಯಾದಲ್ಲಿ ರುಕ್ಮಿಣಿ ವಸಂತ್ ಹೆಸರನ್ನು ಟ್ರೆಂಡ್ ಮಾಡುತ್ತಿದ್ದಾರೆ.

ಈ ಹಿಂದೆಯೇ ತೆಲುಗು ಸಂದರ್ಶನವೊಂದರಲ್ಲಿ 'ಡ್ರ್ಯಾಗನ್' ಚಿತ್ರದಲ್ಲಿ ನಟಿಸುವ ಬಗ್ಗೆ ರುಕ್ಮಿಣಿ ವಸಂತ್ ಅವರಿಗೆ ಪ್ರಶ್ನೆ ಎದುರಾಗಿತ್ತು. ಅದಕ್ಕೆ ಉತ್ತರಿಸಿದ್ದ ಚೆಲುವೆ "ಇದು ಒಳ್ಳೆಯ ರೂಮರ್, ನಿಜವಾದರೆ ಚೆನ್ನಾಗಿರುತ್ತದೆ. ಆದರೆ ಈವರೆಗೆ ಈ ಬಗ್ಗೆ ನನ್ನ ಬಳಿ ಯಾವುದೇ ಮಾತುಕತೆ ನಡೆದಿಲ್ಲ. ಒಂದು ವೇಳೆ ಅವಕಾಶ ಸಿಕ್ಕರೆ ಖಂಡಿತ ನಟಿಸುತ್ತೇನೆ. ಕೇಳಿದ್ರೆ ಈಗ್ಲೇ ಸಹಿ ಮಾಡ್ತೀನಿ" ಎಂದು ಹೇಳಿ ನಕ್ಕಿದ್ದರು.

NTRNEEL ಚಿತ್ರಕ್ಕೆ ನಾಯಕಿ ಆಯ್ಕೆ ಇನ್ನು ಆಗಿಲ್ಲ. ರುಕ್ಮಿಣಿಗೆ ಆ ಅವಕಾಶ ಸಿಗುತ್ತಾ ಗೊತ್ತಿಲ್ಲ. ಇನ್ನು ಈ ಚಿತ್ರವನ್ನು ಕಲ್ಯಾಣ್ ರಾಮ್, ನವೀನ್ ಯೆರ್ನೇನಿ ಮತ್ತು ವೈ. ರವಿಶಂಕರ್ ನಿರ್ಮಾಣ ಮಾಡುತ್ತಿದ್ದಾರೆ. ಮುಂದಿನ ವರ್ಷ ಜೂನ್ 25ಕ್ಕೆ ಸಿನಿಮಾ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ. ಇದೊಂದು ಹೈವೋಲ್ಟೇಜ್ ಆಕ್ಷನ್ ಸಿನಿಮಾ ಎನ್ನುವುದು ಗೊತ್ತಾಗುತ್ತಿದೆ.

More from Filmibeat

English summary
Will Rukmini Vasanth Star Opposite Jr. NTR in the Pan-India Film 'Dragon'?;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X