ಸಮಂತಾ ಬೆತ್ತಲೆ ಫೋಟೊ ವೈರಲ್? ಅಭಿಮಾನಿಗಳು ಶಾಕ್!
ಸಿನಿಮಾಗಳಲ್ಲಿ ನಟಿಸಲಿ, ನಟಿಸದೇ ಇರಲಿ, ತೆಲುಗು ನಟಿ ಸಮಂತಾ ಕ್ರೇಜ್ ಮಾತ್ರ ಕಮ್ಮಿ ಆಗುವುದಿಲ್ಲ. ಸದ್ಯ ಮಯೋಸೈಟಿಸ್ ಸಮಸ್ಯೆಯಿಂದ ಆಕೆ ಬಳಲುತ್ತಿದ್ದು ಸಿನಿಮಾಗಳಲ್ಲಿ ನಟಿಸುವುದು ಕಮ್ಮಿ ಆಗಿದೆ. ಒಂದು ವೆಬ್ ಸೀರಿಸ್‌ನಲ್ಲಿ ಮಾತ್ರ ಆಕೆ ಬಣ್ಣ ಹಚ್ಚಿದ್ದಾರೆ.
ಮಯೋಸೈಟಿಸ್ ವಿರುದ್ಧ ಹೋರಾಟ ನಡೆಸುತ್ತಿರುವ ಸ್ಯಾಮ್ ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಬಗ್ಗೆ ಮಾಹಿತಿ ನೀಡುತ್ತಾರೆ. ಈ ಬಗ್ಗೆ ಪಾಡ್‌ಕಾಸ್ಟ್ ನಡೆಸುತ್ತಾರೆ. ಇನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಕೂಡ ಈ ಬಗ್ಗೆ ಮಾಹಿತಿ ನೀಡುತ್ತಾರೆ. ಇತ್ತೀಚೆಗಷ್ಟೇ ಸಮಂತಾ ತಮ್ಮ ಇನ್‌ಸ್ಟಾಗ್ರಾಂನಲ್ಲಿ 'ಫಾರ್ ಇನ್ಫ್ರಾರೆಡ್ ಸೌನಾ' ಉಪಯೋಗಗಳು ಎಂದು ಬರೆದು ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.

ಆ ಪೋಸ್ಟ್‌ನಲ್ಲಿ ದೀರ್ಘಕಾಲದ ಕಾಯಿಲೆಗಳು, ಚರ್ಮದ ಸೌಂದರ್ಯ, ದೇಹದ ಕೊಬ್ಬನ್ನು ಕಡಿಮೆ ಮಾಡುವುದು ಮುಂತಾದ ವಿವಿಧ ಉದ್ದೇಶಗಳಿಗಾಗಿ ಜನರು ಬಾತ್ ಟಬ್‌ನಲ್ಲಿ ಸ್ವಲ್ಪ ಸಮಯ ಇರುತ್ತಾರೆ ಎಂದು ಬರೆದುಕೊಂಡಿದ್ದಾರೆ. ಈ ವಿಧಾನವನ್ನು 'ಫಾರ್ ಇನ್ಫ್ರಾರೆಡ್ ಸೌನಾ' ಎಂದು ಕರೆಯಲಾಗುತ್ತದೆ. ತಾನೂ ಕೂಡ ಅದನ್ನೇ ಫಾಲೋ ಮಾಡುತ್ತಿದ್ದೇನೆ ಎಂದು ಸ್ಯಾಮ್ ಪೋಸ್ಟ್ ಮಾಡಿದ್ದಾರೆ.
ಫೋಟೊದಲ್ಲಿ ಸ್ಯಾಮ್ ಟವೆಲ್ ಸುತ್ತಿಕೊಂಡು ಕುಳಿತ ಫೋಟೊ ನೋಡಬಹುದು. ಆದರೆ ಈ ಫೋಟೊ ಜೊತೆಗೆ ಸಮಂತಾ ಸಂಪೂರ್ಣ ಬೆತ್ತಲಾಗಿರುವ ಫೋಟೊ ಪೋಸ್ಟ್ ಮಾಡಿ ಕೂಡಲೇ ಡಿಲೀಟ್ ಮಾಡಿದ್ದಾರೆ ಎನ್ನುವ ಚರ್ಚೆ ಶುರುವಾಗಿದೆ. ಯುವತಿಯೊಬ್ಬಳು ಬೆತ್ತಲಾಗಿ ಬಾತ್‌ಟಬ್‌ನಲ್ಲಿ ಕುಳಿತಿರುವಂತೆ ಫೋಟೊ ವೈರಲ್ ಆಗುತ್ತಿದೆ. ಆದರೆ ಅದರಲ್ಲಿ ಆಕೆಯ ಮುಖ ಕಾಣುತ್ತಿಲ್ಲ.
ಖುದ್ದು ಸಮಂತಾ ಈ ಫೋಟೊ ಹಾಕಿ ಡಿಲೀಟ್ ಮಾಡಿದ್ದಾರೆ ಎಂದು ಕೆಲವರು ವೈರಲ್ ಮಾಡುತ್ತಿದ್ದಾರೆ. ಆದರೆ ಇದೆಲ್ಲಾ ಸುಳ್ಳು. ಆಕೆಯ ಅಂತಹ ಯಾವುದೇ ಫೋಟೊ ಪೋಸ್ಟ್ ಮಾಡಿಲ್ಲ. ಕಿಡಿಗೇಡಿಗಳು ಈ ರೀತಿ ಫೋಟೊ ವೈರಲ್ ಮಾಡುತ್ತಿದ್ದಾರೆ ಎನ್ನುವ ಚರ್ಚೆಯೂ ನಡೀತಿದೆ. ಒಟ್ಟಾರೆ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪರ ವಿರೋಧ ಕಾಮೆಂಟ್ಸ್ ಬರುತ್ತಿವೆ.

ಅಭಿಮಾನಿಗಳು ಇದು ಫೇಕ್ ಎನ್ನುತ್ತಿದ್ದಾರೆ. ಆದರೆ ಇದನ್ನು ಪೋಸ್ಟ್ ಮಾಡಿರುವ ನೆಟ್ಟಿಗರು ಎರಡೂ ಫೋಟೊದಲ್ಲಿ ಕೊರಳಿನಲ್ಲಿ ಇರುವ ಸರ ಒಂದೇ. ಹಾಗಾಗಿ ಇದು ಖಂಡಿತ ಸ್ಯಾಮ್ ಪೋಸ್ಟ್ ಮಾಡಿ ಬಳಿಕ ಡಿಲೀಟ್ ಮಾಡಿರುವ ಫೋಟೊ ಎಂದು ವಾದಿಸುತ್ತಿದ್ದಾರೆ. ಆದರೆ ಈ ಫೋಟೋವನ್ನು ಸಮಂತಾ ಪೋಸ್ಟ್ ಮಾಡಿದ್ದಾರೋ ಅಥವಾ ಬೇರೆಯವರ ಫೋಟೋ ವೈರಲ್ ಆಗುತ್ತಿದೆಯೋ ಗೊತ್ತಿಲ್ಲ. ಒಟ್ಟಿನಲ್ಲಿ ಸಮಂತಾ ಹ್ಯಾಶ್ ಟ್ಯಾಗ್ ಸಾಮಾಜಿಕ ಜಾಲತಾಣದಲ್ಲಿ ಫುಲ್ ಟ್ರೆಂಡ್ ಆಗುತ್ತಿದೆ.
ಯಾರು ಈ ರೀತಿಯ ಫೋಟೊ ವೈರಲ್ ಮಾಡಿದರು ಎಂದು ಸಮಂತಾ ಅಭಿಮಾನಿಗಳು ಹುಡುಕಾಟ ಆರಂಭಿಸಿದ್ದಾರೆ. ಇನ್ನು ಆಕೆಯ ಬಗ್ಗೆ ಕೆಟ್ಟದಾಗಿ ಪೋಸ್ಟ್ ಮಾಡುತ್ತಿರುವವರ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಸಮಂತಾ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರೂ ಅದನ್ನು ಈ ರೀತಿ ಕೆಟ್ಟದಾಗಿ ಬಿಂಬಿಸುವುದು ಯಾಕೆ? ಎಂದು ಕೆಲವರು ಕೇಳುತ್ತಿದ್ದಾರೆ.
'ಖುಷಿ' ಬಳಿಕ ಸ್ಯಾಮ್ ಯಾವುದೇ ಚಿತ್ರದಲ್ಲಿ ನಟಿಸಲಿಲ್ಲ. 'ಸಿಟಾಡೆಲ್' ಹಿಂದಿ ವೆಬ್ ಸೀರಿಸ್‌ನಲ್ಲಿ ಮಿಂಚಿದ್ದಾರೆ. ಈಗಾಗಲೇ ಚಿತ್ರೀಕರಣ ಕಂಪ್ಲೀಟ್ ಆಗಿದ್ದು ಶೀಘ್ರದಲ್ಲೇ ಅಮೇಜಾನ್ ಪ್ರೈಂ ವೀಡಿಯೊದಲ್ಲಿ ಸ್ಟ್ರೀಮಿಂಗ್ ಆಗಲಿದೆ.


Click it and Unblock the Notifications











