ಅಲ್ಲು ಅರ್ಜುನ್ 'ಪುಷ್ಪ' ಸಿನಿಮಾದಿಂದ ನಟ ವಿಜಯ್ ಸೇತುಪತಿ ಔಟ್?

ಟಾಲಿವುಡ್ ನಲ್ಲಿ ಸದ್ಯ ಟ್ರೆಂಡಿ ಟಾಪಿಕ್ ಅಂದರೆ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಸಿನಿಮಾ. ಇತ್ತೀಚಿಗೆ ಅಲ್ಲು ಹುಟ್ಟುಹಬ್ಬದ ಪ್ರಯುಕ್ತ ರಿಲೀಸ್ ಆದ ಪೋಸ್ಟರ್ ಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದ್ದು, ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಅಲಾ ವೈಕುಂಠಪುರಂಲೋ ಸಿನಿಮಾ ಸಕ್ಸಸ್ ನ ಅಲ್ಲು ಅರ್ಜುನ್ ಅಭಿನಯಿಸುತ್ತಿರುವ ಚಿತ್ರ ಇದಾಗಿದೆ.

Recommended Video

ದೇಹದ ತೂಕ ಇಳಿಸಿಕೊಳ್ಳಲು ಮಾಡಿಸಿಕೊಂಡ ಶಸ್ತ್ರಚಿಕಿತ್ಸೆಯೇ ಜೀವಕ್ಕೆ ಮುಳುವಾಯ್ತಾ??| Bullet Prakash No More

ವಿಶೇಷ ಅಂದರೆ ಚಿತ್ರದ ಫಸ್ಟ್ ಲುಕ್ ಜೊತೆಗೆ ಕಲಾವಿದರ ಬಳಗ ಸಹ ಚಿತ್ರದ ಮೇಲಿನ ನಿರೀಕ್ಷೆಯನ್ನು ಇಮ್ಮಡಿಗೊಳಿಸಿದೆ. ಚಿತ್ರದಲ್ಲಿ ಅಲ್ಲು ವಿರುದ್ಧ ಹೋರಾಡಲು ಘಟಾನುಘಟಿ ವಿಲನ್ ಗಳು ಜೊತೆಯಾಗಿದ್ದಾರೆ. ವಿಶೇಷ ಅಂದರೆ ಚಿತ್ರದ ಪ್ರಮುಖ ವಿಲನ್ ಪಾತ್ರದಲ್ಲಿ ಖ್ಯಾತ ನಟ ವಿಜಯ್ ಸೇತುಪತಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಸದ್ಯ ಹರಿದಾಡುತ್ತಿರುವ ಮಾಹಿತಿ ಪ್ರಕಾರ ವಿಜಯ್ ಸೇತುಪತಿ ಸಿನಿಮಾದಿಂದ ಹೊರನಡೆದಿದ್ದಾರಂತೆ. ಮುಂದೆ ಓದಿ...

ಸಿನಿಮಾದಿಂದ ಹೊರ ಬಂದ್ರಾ ಸೇತುಪತಿ?

ಸಿನಿಮಾದಿಂದ ಹೊರ ಬಂದ್ರಾ ಸೇತುಪತಿ?

ಖ್ಯಾತ ನಟ ವಿಜಯ್ ಸೇತುಪತಿ ಪುಷ್ಪ ಚಿತ್ರದಲ್ಲಿ ವಿಲನ್ ಆಗಿ ಅಬ್ಬರಿಸಲು ಸಜ್ಜಾಗಿದ್ದರು. ಅಲ್ಲು ಅರ್ಜುನ್ ವಿರುದ್ಧ ತೊಡೆ ತಟ್ಟಿನಿಲ್ಲಲು ತಯಾರಾಗಿದ್ದ ವಿಜಯ್ ಈಗ ನಿರ್ಧಾರ ಬದಲಾಯಿಸಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಹೌದು, ದೊಡ್ಡ ಪ್ರಾಜೆಕ್ಟ್ ನಿಂದ ವಿಜಯ್ ಸೇತುಪತಿ ಹೊರನಡೆಸಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಆದರೆ ಈ ಬಗ್ಗೆ ಸಿನಿಮಾತಂಡ ಯಾವುದೆ ಮಾಹಿತಿ ಬಹಿರಂಗ ಪಡಿಸಿಲ್ಲ.

ವಿಜಯ್ ಸೇತುಪತಿ ಹೊರ ನಡೆಯಲು ಕಾರಣವೇನು?

ವಿಜಯ್ ಸೇತುಪತಿ ಹೊರ ನಡೆಯಲು ಕಾರಣವೇನು?

ನಟ ವಿಜಯ್ ಸೇತುಪತಿ ಸಿನಿಮಾದಿಂದ ಹೊರಬರಲು ಕಾರಣ ಸಿನಿಮಾ ಬಹುಭಾಷೆಯಲ್ಲಿ ತಯಾರಾಗುತ್ತಿರುವುದು. ವಿಜಯ್ ಸೇತುಪತಿ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡುವ ವೇಳೆ ಚಿತ್ರ ತೆಲುಗಿನಲ್ಲಿ ಮಾತ್ರ ರಿಲೀಸ್ ಆಗಲಿದೆ ಎಂದು ಹೇಳಲಾಗಿತ್ತಂತೆ. ಹಾಗಾಗಿ ಸಿನಿಮಾ ಒಪ್ಪಿಕೊಂಡಿದ್ದ ವಿಜಯ್ ನಂತರ ಪ್ಯಾನ್ ಇಂಡಿಯಾ ಸಿನಿಮಾವಾಗಿ ರಿಲೀಸ್ ಆಗುತ್ತಿದೆ ಎಂದು ಗೊತ್ತಾದ ಮೇಲೆ ಸಿನಿಮಾದಿಂದ ಹೊರನಡೆದಿದ್ದಾರಂತೆ. ಅಷ್ಟಕ್ಕು ವಿಜಯ್ ಗೆ ತಮಿಳಿನಲ್ಲಿ ವಿಲನ್ ಆಗಿ ಕಾಣಿಸಿಕೊಳ್ಳಲು ಇಷ್ಟವಿಲ್ಲವಂತೆ. ತಮಿಳು ಅಭಿಮಾನಿಗಳಿಗಾಗಿ ವಿಜಯ್ ಪುಷ್ಪ ಸಿನಿಮಾದಿಂದ ಹೊರಬಂದಿದ್ದಾರೆ ಎಂದು ಹೇಳಲಾಗುತ್ತಿದೆ.

ಮಾಸ್ಟರ್ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ

ಮಾಸ್ಟರ್ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ

ವಿಜಯ್ ಸೇತುಪತಿ ಡೇಟ್ ಹೊಂದಾಣಿಕೆಯ ಕಾರಣ ಸಿನಿಮಾದಿಂದ ಹೊರ ಬಂದಿದ್ದಾರೆ ಅಂತಾನು ಹೇಳಲಾಗುತ್ತಿದೆ. ಆದರೆ ಖಚಿತ ಮಾಹಿತಿ ಬಹಿರಂಗವಾಗಿಲ್ಲ. ಆದರೆ ವಿಜಯ್ ಸದ್ಯ ತಮಿಳಿನ ಮಾಸ್ಟರ್ ಸಿನಿಮಾ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಇನ್ನೂ ತಮಿಳು, ತೆಲುಗು ಮತ್ತು ಹಿಂದಿ ಸೇರಿದಂತೆ ವಿಜಯ್ ಸೇತುಪತಿ 10ಕ್ಕು ಹೆಚ್ಚು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.

ವಿಜಯ್ ಪಾತ್ರದಲ್ಲಿ ಕನ್ನಡಿಗ

ವಿಜಯ್ ಪಾತ್ರದಲ್ಲಿ ಕನ್ನಡಿಗ

ನಟ ವಿಜಯ್ ಸೇತುಪತಿ ಚಿತ್ರದಿಂದ ಹೊರನಡೆದ ಬಳಿಕ ಆ ಜಾಗಕ್ಕೆ ಕನ್ನಡದ ಖ್ಯಾತ ನಟ ಡಾಲಿ ಧನಂಜಯ್ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೆ ಡಾಲಿಗೆ ಚಿತ್ರತಂಡದಿಂದ ಆಫರ್ ಬಂದಿದ್ದು ಲಾಕ್ ಡೌನ್ ಮುಗಿದ ಬಳಿಕ ಸಿನಿಮಾಗೆ ಸಹಿ ಮಾಡಲಿದ್ದಾರಂತೆ. ಆದರೆ ವಿಜಯ್ ಸೇತುಪತಿ ಜಾಗಕ್ಕೆ ಎಂಟ್ರಿನಾ ಅಥವಾ ಬೇರೆ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರಾ ಎನ್ನುವುದು ಖಚಿತವಾಗಿಲ್ಲ.

ಚಿತ್ರದಲ್ಲಿ ಮೂವರು ಕನ್ನಡಿಗರು?

ಚಿತ್ರದಲ್ಲಿ ಮೂವರು ಕನ್ನಡಿಗರು?

ಅಲ್ಲು ಅರ್ಜುನ್‌ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಆಯ್ಕೆಯಾಗಿದ್ದಾರೆ. ಸುಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಬಾಲಿವುಡ್ ನಟ, ಕರಾವಳಿಯ ಸುನೀಲ್ ಶೆಟ್ಟಿ ಖಳನಾಯಕನಾಗಿ ನಟಿಸಲಿದ್ದಾರೆ ಎನ್ನಲಾಗಿದೆ. ಹೀಗಾಗಿ ಧನಂಜಯ್ ಎಂಟ್ರಿ ಕೊಟ್ಟರೆ ಕನ್ನಡದ ಮೂವರು ಪುಷ್ಪ ಚಿತ್ರದಲ್ಲಿ ನಟಿಸಿದಂತೆ ಆಗುತ್ತದೆ.

More from Filmibeat

English summary
Did Actor Vijay Sethupathi walk out from Allu Arjun starrer Pushpa Film?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X