Tamannaah Bhatia: ಭದ್ರತೆ ದಾಟಿ ತಮನ್ನಾ ಬಳಿಗೆ ಬಂದ ಅಭಿಮಾನಿ, ನಟಿಯ ಪ್ರತಿಕ್ರಿಯೆಗೆ ಫ್ಯಾನ್ಸ್ ಮೆಚ್ಚುಗೆ
ಇತ್ತೀಚೆಗೆ ಅಭಿಮಾನಿ ಜೊತೆಗೆ ಕಾವಾಲಾ ಹಾಡಿಗೆ ಏರ್‌ಪೋರ್ಟ್‌ನಲ್ಲಿ ಅಭಿಮಾನಿಯೊಂದಿಗೆ ಹೆಜ್ಜೆ ಹಾಕಿ ಮನಗೆದ್ದಿದ್ದ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಮತ್ತೆ ಈಗ ಸುದ್ದಿಯಲ್ಲಿದ್ದಾರೆ. ಆಕೆಯ ಅಭಿಮಾನಿಗಳಂತೂ ತಮ್ಮ ನಟಿ ದೇವತೆ ಎಂದು ಹಾಡಿ ಹೊಗಳುತ್ತಿದ್ದಾರೆ. ಅದಕ್ಕೆ ಕಾರಣವಾಗಿದ್ದು, ಕೇರಳದಲ್ಲಿ ಅಭಿಮಾನಿಯೊಂದಿಗೆ ಆಕೆ ನಡೆದುಕೊಂಡ ರೀತಿ.
ಕೇರಳದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಅವರು, ವಾಪಸ್ ಹೋಗುವಾಗ ಅಭಿಮಾನಿಯೊಬ್ಬರು ಬಿಗಿ ಭದ್ರತೆಯನ್ನು ದಾಟಿ ತಮನ್ನಾ ಅವರ ಬಳಿಗೆ ಬಂದು, ಮಾತನಾಡಿಸಲು ಯತ್ನಿಸಿದ್ದಾರೆ. ಫೋಟೋ ಬೇಕು ಎಂದು ಕೇಳಿಕೊಂಡಿದ್ದಾರೆ. ಘಟನೆಗೆ ಭದ್ರತಾ ಸಿಬ್ಬಂದಿ ಪ್ರತಿಕ್ರಿಯಿಸಿದ್ದು ಮತ್ತು ನಟಿ ತಮನ್ನಾ ಭಾಟಿಯಾ ಪ್ರತಿಕ್ರಿಯಿಸಿದ್ದು ಭಾರಿ ವೈರಲ್ ಆಗಿದೆ.

ನಿಜವಾಗಿ ನಡೆದಿದ್ದು ಏನು...?
ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಪ್ರೀತಿಯಿಂದ ಹಂಚಿಕೊಳ್ಳುತ್ತಿರುವ ವಿಡಿಯೋದಲ್ಲಿ ಇರುವುದು ಏನು ಎಂದರೆ, ನಟಿ ತಮನ್ನಾ ಕೇರಳದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದಾರೆ. ತೆಳು ಹಸಿರು ಮತ್ತು ಗುಲಾಬಿ ಬಣ್ಣದ ಸೀರೆಯುಟ್ಟು ಅಪ್ಸರೆಯಂತೆ ಕಾಣುತ್ತಿರುವ ಆಕೆ, ಭಾರೀ ಆಭರಣಗಳನ್ನು ಧರಿಸಿ ಮಿಂಚುತ್ತಿದ್ದರು.
ಕಾರ್ಯಕ್ರಮ ಮುಗಿಸಿ ಎರಡೂ ಕಡೆಗಳಲ್ಲಿ ಅಭಿಮಾನಿಗಳು ನಿಂತಿದ್ದ ಜಾಗದಿಂದ ಭಾರೀ ಭದ್ರತೆಯೊಂದಿಗೆ ವಾಪಸ್ ತೆರಳುತ್ತಿದ್ದ ಅವರು ಖುಷಿಯಿಂದ ಕೈಬೀಸುತ್ತಿದ್ದರು. ಈ ವೇಳೆ ತಮನ್ನಾ ತನ್ನ ಅಭಿಮಾನಿಗಳತ್ತ ಕೈ ಬೀಸುತ್ತಿರುವುದನ್ನು ಕಾಣಬಹುದು. ಇಷ್ಟರಲ್ಲೇ ಅಭಿಮಾನಿಯೊಬ್ಬರು ಬ್ಯಾರಿಕೇಡ್ ಹಾರಿ, ತಮನ್ನಾ ಬಳಿಗೆ ಬಂದಿಉ ಕೈ ಹಿಡಿಯಲು ಯತ್ನಿಸಿದ್ದಾರೆ.
ತಮನ್ನಾ ಕೆಲ ಕ್ಷಣಗಳಲ್ಲೇ ಸವಾರಿಕೊಂಡು ಇರಲಿ ಎಂದು ಹೇಳಿದರೂ, ಭದ್ರತಾ ಸಿಬ್ಬಂದಿ ಮಾತ್ರ ಎಚ್ಚರಿಕೆ ಕಾರಣಕ್ಕೆ ಅಭಿಮಾನಿಯನ್ನು ಹಿಂದಕ್ಕೆ ಎಳೆಯುತ್ತಾರೆ. ಬಳಿಕ ಸೆಕ್ಯುರಿಟಿಗೆ ಅಭಿಮಾನಿಯನ್ನು ಬಿಡಲು ಮತ್ತು ಅಭಿಮಾನಿಗೆ ಕೂಲ್ ಆಗಿ ಇರಲು ತಿಳಿಸುತ್ತಾರೆ. ಆತನನ್ನು ಶಾಂತಗೊಳಿಸಿ ಶೇಕ್‌ಹ್ಯಾಂಡ್ ಮಾಡಿ ಸೆಲ್ಫೀಗೆ ಫೋಸ್ ಕೊಡುತ್ತಾರೆ. ಬಳಿಕ ಅಭಿಮಾನಿ ಕುಣಿದಾಡುವುದು ಈ ವಿಡಿಯೋದಲ್ಲಿ ಕಾಣಬಹುದು.

ತಮನ್ನಾ ಅವರ ಶಾಂತವಾಗಿರು ಸನ್ನೆಗೆ ಅಭಿಮಾನಿಗಳ ಪ್ರತಿಕ್ರಿಯೆ
ಅಭಿಮಾನಿಯೊಂದಿಗೆ ತಮನ್ನಾ ನಡೆದುಕೊಂಡ ರೀತಿಗೆ ಅಭಿಮಾನಿಗಳು ಮತ್ತು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಟ್ವಿಟರ್ ಬಳಕೆದಾರರೊಬ್ಬರು ವಿಡಿಯೋ ಹಂಚಿಕೊಂಡಿದ್ದು, ಆಕೆಯದ್ದು ವಿನಮ್ರ ವ್ಯಕ್ತಿತ್ವ ಎಂದು ಹೇಳಿದ್ದಾರೆ. ಮತ್ತೊಬ್ಬರು, ಅವರು ಪರಿಸ್ಥಿತಿಯನ್ನು ನಿಭಾಯಿಸಿದ ರೀತಿ ಹೆಚ್ಚು ಇಷ್ಟವಾಯಿತು ಎಂದು ಹೇಳಿದ್ದಾರೆ.
ಮತ್ತೊಬ್ಬರು ಅಭಿಮಾನಿಯ ವರ್ತನೆಯನ್ನು ಅತಿರೇಕ ಎಂದು ಕರೆದಿದ್ದು, ಇಂತಹ ಘಟನೆ ನಡೆಯಬಾರದು ಎಂದು ಆಕ್ಷೇಪಿಸಿದ್ದಾರೆ. "ಅವನು ಮಾಡಿದ್ದು ತುಂಬಾ ಅವಮಾನಕರ ಮತ್ತು ಅನುಚಿತ. ಆದರೆ ಬಳಿಕ ಆತ ವರ್ತಿಸಿದ್ದು ಮಾತ್ರ ಏನೋ ಘನಕಾರ್ಯ ಸಾಧಿಸಿದಂತೆ. ಇಲ್ಲಿ ನಟಿಯ ಕರುಣೆಯೇ ಆತನನ್ನು ಕಾಪಾಡಿದೆ. ಇಂತಹ ಘಟನೆ ನಡೆದಿದ್ದಕ್ಕೆ ಕಾರ್ಯಕ್ರಮ ಸಂಘಟಕರನ್ನು ದೂಷಿಸಬೇಕಾಗಿದೆ" ಎಂದಿದ್ದಾರೆ.
ಸದ್ಯ ನಟಿ ತಮನ್ನಾ ಭಾಟಿಯಾ ತೆಲುಗು, ತಮಿಳು, ಕನ್ನಡ ಅಲ್ಲದೇ ಬಾಲಿವುಡ್ ಅಂಗಳಕ್ಕೂ ಪ್ರವೇಶಿಸಿದ್ದಾರೆ. ಇತ್ತೀಚೆಗೆ ಅವರ ನಟನೆಯ ಎರಡು ಸೀರಿಸ್‌ಗಳು (ಜೀ ಕರ್ದಾ ಮತ್ತು ಲಸ್ಟ್ ಸ್ಟೋರಿಸ್ 2) ಒಟಿಟಿಯಲ್ಲಿ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಂಡಿವೆ. ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ 'ಜೈಲರ್' ಸಿನಿಮಾದಲ್ಲಿ ತಮನ್ನ ನಟಿಸಿದ್ದು, 'ಕಾವಾಲಾ' ಹಾಡು ಆಕೆಯ ಪ್ರಸಿದ್ಧಿಯನ್ನು ಮತ್ತಷ್ಟು ಹೆಚ್ಚಿಸಿದೆ. ಜೈಲರ್ ಸಿನಿಮಾ ಆಗಸ್ಟ್ 10ಕ್ಕೆ ಬಿಡುಗಡೆಯಾಗಲಿದೆ.


Click it and Unblock the Notifications











