For Quick Alerts
  ALLOW NOTIFICATIONS  
  For Daily Alerts

  ಅಲ್ಲು ಅರ್ಜುನ್ ಗಾಗಿ 250 ಕಿ.ಮೀ ನಡೆದ ಅಭಿಮಾನಿ: ಸ್ಟೈಲಿಶ್ ಸ್ಟಾರ್ ಬಗ್ಗೆ ಹೇಳಿದ್ದೇನು?

  |

  ಸಿನಿಮಾ ಸ್ಟಾರ್ಸ್ ನೋಡಲು, ಮಾತನಾಡಿಸಲು ಅವರ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿರುತ್ತಾರೆ. ಅಷ್ಟೆಯಲ್ಲ ಅವರ ಹೆಸರನ್ನು, ಅವರ ಚಿತ್ರವನ್ನು ಮೈ ಮೇಲೆ ಟ್ಯಾಟ್ ಹಾಕಿಸಿಕೊಳ್ಳುವುದು, ತಮ್ಮ ಹೆಸರಿನ ಜೊತೆ ನೆಚ್ಚಿನ ನಟರ ಹೆಸರನ್ನು ಸೇರಿಸಿಕೊಳ್ಳುವುದು ಹೀಗೆ ತರಹೇವಾರಿ ರೀತಿಯಲ್ಲಿ ನೆಚ್ಚಿನ ನಟರ ಮೇಲಿನ ಅಭಿಮಾನವನ್ನು ವ್ಯಕ್ತಪಡಿಸುತ್ತಿರುತ್ತಾರೆ.

  ಇದೀಗ ಟಾಲಿವುಡ್ ನ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅಪ್ಪಟ ಅಭಿಮಾನಿಯೊಬ್ಬ ನೆಚ್ಚಿನ ನಟನನ್ನು ಭೇಟಿಯಾಗಲು ಹುಟ್ಟೂರಿನಿಂದ ಪಾದಯಾತ್ರೆ ಕೈಕೊಂಡು ಅಚ್ಚರಿ ಮೂಡಿಸಿದ್ದಾರೆ. ಈಗಾಗಲೇ 250 ಕಿ.ಮೀ ನಡೆದುಕೊಂಡು ಬಂದಿರುವ ಅಭಿಮಾನಿ ಅಲ್ಲು ಭೇಟಿಯಾಗುವ ಉತ್ಸಾಹದಲ್ಲಿದ್ದಾರೆ. ಈ ಅಭಿಮಾನಿ ಅಲ್ಲು ಅರ್ಜುನ್ ಭೇಟಿಯಾಗುತ್ತಾರಾ? ಇನ್ನು ಎಷ್ಟು ದಿನಗಳು ನಡೆಯಬೇಕು? ಮುಂದೆ ಓದಿ...

  ಕಾಡಿಗೆ ಎಂಟ್ರಿ ಕೊಟ್ಟಿದ್ದ ನಟ ಅಲ್ಲು ಅರ್ಜುನ್ ವಿರುದ್ಧ ದೂರು ದಾಖಲು

  ಮಾಚೆರ್ಲಾದಿಂದ ಹೈದರಾಬಾದ್ ಗೆ ಪಾದಯಾತ್ರೆ

  ಮಾಚೆರ್ಲಾದಿಂದ ಹೈದರಾಬಾದ್ ಗೆ ಪಾದಯಾತ್ರೆ

  ಟಾಲಿವುಡ್ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಗೆ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಅಲ್ಲು ಅಭಿನಯ, ಡ್ಯಾನ್ಸ್ ನೋಡಲು ಅಭಿಮಾನಿಗಳು ನಿದ್ದೆಗೆಟ್ಟು ಕಾಯುತ್ತಿರುತ್ತಾರೆ. ಅಲ್ಲು ಮನೆಯಿಂದ ಹೊರಬಂದರೆ ಸಾಕು ನೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ಮುಗಿಬೀಳುತ್ತಾರೆ. ಇದೀಗ ಬನ್ನಿಯ ಡೈ ಹಾರ್ಡ್ ಫ್ಯಾನ್ ಪಿ ನಾಗೇಶ್ವರ್ ರಾವ್ ತನ್ನ ಹುಟ್ಟೂರು ಆಂಧ್ರಪ್ರದೇಶದ ಮಾಚೆರ್ಲಾದಿಂದ ಹೈದರಾಬಾದ್ ಗೆ ನಡೆದುಕೊಂಡೇ ಬಂದಿದ್ದಾರೆ.

  ಅಭಿಮಾನಿ ನಾಗೇಶ್ವರ್ ರಾವ್ ಹೇಳಿದ್ದೇನು?

  ಅಭಿಮಾನಿ ನಾಗೇಶ್ವರ್ ರಾವ್ ಹೇಳಿದ್ದೇನು?

  ಇದೆ ತಿಂಗಳು 17ರಂದು ಮನೆಯಿಂದ ಹೊರಟ ನಾಗೇಶ್ವರ್ ರಾವ್ 22ರಂದು ಹೈದರಾಬಾದ್ ನ ಬಂಜಾರ ತಲುಪಿದ್ದಾರೆ. ಈ ಬಗ್ಗೆ ಮಾಧ್ಯಮದವರ ಜೊತೆ ಮಾತನಾಡಿದ ಅಭಿಮಾನಿ "ನಾನು ಸೆಪ್ಟಂಬರ್ 17ರಂದು ಪ್ರಯಾಣ ಪ್ರಾರಂಭಿಸಿದ್ದೇನೆ. ಇಂದು ಸೆಪ್ಟಂಬರ್ 22ಕ್ಕೆ ಹೈದರಾಬಾದ್ ನ ಬಂಜಾರ ಬೆಟ್ಟವನ್ನು ತಲುಪಿದ್ದೇನೆ. ಇದುವರೆಗೂ ನಾನು 250 ಕಿ.ಮಿ ನಡೆದಿದ್ದೇನೆ." ಎಂದು ಹೇಳಿದ್ದಾರೆ.

  ಕಾಡಿಗೆ ಎಂಟ್ರಿ ಕೊಟ್ಟ ಅಲ್ಲು ಅರ್ಜುನ್ ನೋಡಲು ಮುಗಿಬಿದ್ದ ಅಭಿಮಾನಿಗಳು

  ಅಲ್ಲು ಅರ್ಜುನ್ ಫ್ಲೆಕ್ಸ್ ಹಿಡುಕೊಂಡಿರುವ ಅಭಿಮಾನಿ

  ಅಲ್ಲು ಅರ್ಜುನ್ ಫ್ಲೆಕ್ಸ್ ಹಿಡುಕೊಂಡಿರುವ ಅಭಿಮಾನಿ

  ಈ ಫ್ಯಾನ್ ಬಾಯ್ ಒಬ್ಬನೆ ನಡೆದುಕೊಂಡು ಬಂದಿಲ್ಲ. ಜೊತೆಯಲ್ಲಿ ಒಂದು ಫ್ಲೆಕ್ಸ್ ಹಿಡಿದುಕೊಂಡು ಬಂದಿದ್ದಾರೆ. "ಜೈ ಅಲ್ಲು ಅರ್ಜುನ್ ಅಣ್ಣ. ಮಾಚೆರ್ಲಾದಿಂದ ಹೈದರಾಬಾದ್ ಗೆ ಪಾದಯಾತ್ರೆ" ಎಂದು ಬರೆಯಲಾಗಿದೆ. ಈಗಾಗಲೇ ಅಲ್ಲು ಅರ್ಜುನ್ ಅವರನ್ನು ಭೇಟಿಯಾಗಲು ಸಾಕಷ್ಟು ಬಾರಿ ಪ್ರಯತ್ನ ಪಟ್ಟಿದ್ದಾರಂತೆ. ಆದರೆ ಸಾಧ್ಯವಾಗಿರಲಿಲ್ಲವಂತೆ. ಆದರೆ ಈ ಬಾರಿ ಪಾದಯಾತ್ರೆ ಮೂಲಕ ಗಮನ ಸೆಳೆದ ಕಾರಣ, ಈ ಬಾರಿಯ ಪ್ರಯತ್ನ ವಿಫಲವಾಗಲ್ಲ ಎನ್ನುವ ನಂಬಿಕೆಯೊಂದಿಗೆ ನಡಿಗೆ ಮುಂದುವರೆಸಿದ್ದಾರೆ.

  ಡಾಲಿ ಕೊಟ್ಟ ಲಿಪ್ ಕಿಸ್ ಗೆ ಥ್ಯಾಂಕ್ಸ್ ಹೇಳಿದ ತೆಲುಗು ನಟಿ ಇರಾ | Oneindia Kannada
  'ಪುಷ್ಪ' ಸಿನಿಮಾದಲ್ಲಿ ಬ್ಯುಸಿ

  'ಪುಷ್ಪ' ಸಿನಿಮಾದಲ್ಲಿ ಬ್ಯುಸಿ

  ಅಲಾ ವೈಕುಂಠಪುರಮುಲೋ ದೊಡ್ಡ ಸಕ್ಸಸ್ ನ ಬಳಿಕ ಅಲ್ಲು ಅರ್ಜುನ್ 'ಪುಷ್ಪ' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ಅಲ್ಲು ಲಾರಿ ಡ್ರೈವರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಡಿ ಗ್ಲಾಮರ್ ಪಾತ್ರ ಇದಾಗಿದ್ದು, ಸಿನಿಮಾದ ಮೇಲಿನ ನಿರೀಕ್ಷೆ ಹೆಚ್ಚಾಗಿದೆ. ಅಲ್ಲು ಅರ್ಜುನ್ ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಎಲ್ಲಾ ತಯಾರಿಗಳನ್ನು ಮಾಡಿಕೊಂಡಿರುವ ಪುಷ್ಪ ತಂಡ ಸದ್ಯದಲ್ಲೇ ಚಿತ್ರೀಕರಣಕ್ಕೆ ಹೊರಡಲಿದೆ.

  English summary
  Tollywood Actor Allu Arjun Die-hard fan P Nageshwar Rao walks 250 kilometres to meet Stylish Star.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X