ಮೂರೇ ವರ್ಷಕ್ಕೆ ಮುರಿದು ಬಿತ್ತು ದಾಂಪತ್ಯ ? ಪತ್ನಿ ಮತ್ತು ಮಗಳ ಫೋಟೊಗಳನ್ನೆಲ್ಲಾ ಡಿಲೀಟ್ ಮಾಡಿದ ಸ್ಟಾರ್ ಹೀರೋ

ಮದುವೆ ಒಂದು ಸಾಂಸ್ಥಿಕ ವ್ಯವಸ್ಥೆ ಎನ್ನುವ ಮಾತು ಹಿಂದೆ ಪ್ರಚಲಿತದಲ್ಲಿತ್ತು. ಆದರೆ ಈಗ ಬದಲಾದ ಸಾಮಾಜಿಕ.. ಆರ್ಥಿಕ.. ಶೈಕ್ಷಣಿಕ.. ವಿಚಾರಗಳು ಮದುವೆಯ ಪರಿಕಲ್ಪನೆ ಮತ್ತು ರೂಪುರೇಷೆಯನ್ನು ಬದಲಿಸಿವೆ. ಮದುವೆ ಈಗ ವ್ಯವಸ್ಥೆಯಾಗಿ ಉಳಿದಿಲ್ಲ. ಎರಡು ಮನಸುಗಳ ಬೆಸುಗೆಯಾಗದ ಮದುವೆ ಈಗ ಕೇವಲ ತೋರಿಕೆಯ ಸಂಪ್ರದಾಯವಾಗಿದೆ. ತೋರ್ಪಡಿಕೆಯ ಆಚರಣೆಯಾಗಿದೆ.

ಬದಲಾದ ಈ ಕಾಲದಲ್ಲಿ.. ಹಲವರು ಸ್ವಾವಲಂಬಿಯಾಗುತ್ತಿದ್ದಾರೆ. ಇವತ್ತು.. ಯಾರು.. ಯಾರ ಅಧೀನದಲ್ಲಿರಲು ಇಷ್ಟ ಪಡುವುದಿಲ್ಲ. ಹೆಣ್ಣಿಗಾಗಲಿ.. ಗಂಡಿಗಾಗಲಿ.. ಯಾರು ಯಾರಿಗೂ ಅನಿವಾರ್ಯವಲ್ಲ ಎಂಬ ಮನೋಭಾವ ಹೆಚ್ಚಾಗಿದೆ. ಮದುವೆ ಎಂಬ ವ್ಯವಸ್ಥೆ ನಶಿಸಿ ಹೋಗಲು ಇವೆಲ್ಲವೂ ಕಾರಣ ಎನ್ನುವ ಅಭಿಪ್ರಾಯ ಆಗಾಗ ವ್ಯಕ್ತವಾಗುತ್ತಲೆ ಇರುತ್ತದೆ.

digital-heartbreak-sharwanand-wipes-all-wedding-photos-amid-explosive-divorce-rumors

ಇದಕ್ಕೆ ಪೂರಕವಾಗಿ ಈಗೀಗ ವಿಚ್ಛೇದನದ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಅದರಲ್ಲಿಯೂ ಬಣ್ಣದ ಲೋಕದಲ್ಲಿಯಂತೂ ಡಿವೋರ್ಸ್‌ ಎನ್ನುವುದು ಮಾಮೂಲಿಯಾಗಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ಹಲವಾರು ಜನ ಇಲ್ಲಿಯವರೆಗೆ ವಿಚ್ಛೇದನ ಪಡೆದಿದ್ದಾರೆ. ಈ ಸಾಲಿನಲ್ಲಿ ಶರ್ವಾನಂದ್ ಕೂಡ ಸೇರಿಕೊಳ್ಳುವ ಎಲ್ಲಾ ಲಕ್ಷಣಗಳು ಸದ್ಯ ಕಂಡು ಬರುತ್ತಿವೆ.

ಹೌದು, ಶರ್ವಾನಂದ್.. ಪಕ್ಕದ ಮನೆಯ ಚಾಕ್ಲೇಟ್ ಹೀರೋ. ಹೆಚ್ಚು ಕಡಿಮೆ 21-22 ವರ್ಷಗಳಿಂದ ಚಿತ್ರರಂಗದಲ್ಲಿರುವ ಶರ್ವಾನಂದ್ ಇಲ್ಲಿಯವರೆಗೆ ಹಲವು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಆ ಪೈಕಿ ''ಗಮ್ಯಂ''.. ''ಪ್ರಸ್ತಾನಂ''.. ''ರನ್ ರಾಜಾ ರನ್''.. ''ಶತಮಾನಂ ಭವತಿ''.. ''ಮಹಾನುಭಾವಡು''.. ''ಓಕೆ ಒಕ ಜೀವಿತಂ''.. ''ಮನಮೇ''.. ಪ್ರಮುಖವಾದವು.

ಮೊನ್ನೆ ಮೊನ್ನೆಯಷ್ಟೇ ಅಂದರೆ ಏಪ್ರಿಲ್ 3ರಂದು ಇವರ ''ಬೈಕರ್'' ಚಿತ್ರ ಬಿಡುಗಡೆಯಾಗಿದೆ. ಪ್ರೇಕ್ಷಕರ ಮತ್ತು ವಿಮರ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಬಾಕ್ಸಾಫೀಸ್‌ನಲ್ಲಿಯೂ ಸದ್ದು ಮಾಡುತ್ತಿದೆ. ''ಧುರಂಧರ್'' ಅಲೆಯ ನಡುವೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

ಇಂಥಾ ಶರ್ವಾನಂದ್ ಸರಿಯಾಗಿ 2 ವರ್ಷ 10 ತಿಂಗಳ ಹಿಂದೆ ಹಿಂದೆ ಜೂನ್ 3-2023ರಂದು ತಮ್ಮ 39ನೇ ವರ್ಷದಲ್ಲಿ ರಕ್ಷಿತಾ ರೆಡ್ಡಿ ಅವರ ಜೊತೆ ಮದುವೆಯಾಗಿದ್ದರು. ರಾಜಸ್ಥಾನದ ''ದಿ ಲೀಲಾ ಪ್ಯಾಲೇಸ್'' ಇವರ ಅದ್ಧೂರಿ ಮದುವೆಗೆ ಸಾಕ್ಷಿಯಾಗಿತ್ತು.

`

ಮದುವೆಯಾದ ಮರು ವರ್ಷ ಮುದ್ದಾದ ಮಗಳನ್ನು ಕೂಡ ಬರ ಮಾಡಿಕೊಂಡಿದ್ದ ಇಬ್ಬರು ಮಗಳಿಗೆ ಲೀಲಾ ದೇವಿ ಮೈನಾನಿ ಎಂದು ನಾಮಕರಣವನ್ನು ಕೂಡ ಮಾಡಿದ್ದರು. ಆದರೆ ಈಗ ಇವರ ಬದುಕು ಹಳಿ ತಪ್ಪಿದಂತೆ ಇದೆ.

ಇದಕ್ಕೆ ಪುರಾವೆ ಎನ್ನುವಂತೆ ಶರ್ವಾನಂದ್ ತಮ್ಮ ಪತ್ನಿ ರಕ್ಷಿತಾ ರೆಡ್ಡಿ ಅವರ ಜೊತೆಗಿನ ಎಲ್ಲ ನೆನಪುಗಳನ್ನು ತಮ್ಮ ಸಾಮಾಜಿಕ ಜಾಲತಾಣದಿಂದ ಅಳಿಸಿ ಹಾಕಿದ್ದಾರೆ. ಕೇವಲ ಪತ್ನಿಯ ಫೋಟೊ ಮಾತ್ರವಲ್ಲ ತಮ್ಮ ಮಗಳು ಲೀಲಾ ಫೋಟೊವನ್ನು ಕೂಡ ಶರ್ವಾನಂದ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಉಳಿಸಿಕೊಂಡಿಲ್ಲ. ಡಿಲೀಟ್ ಮಾಡಿರಬಹುದು. ಅಥವಾ ಆರ್ಕೈವ್ ಮಾಡಿರಬಹುದು.

ಆದರೆ.. ಸದ್ಯಕ್ಕೆ ಶರ್ವಾನಂದ್ ಅವರ ವಾಲ್‌ನಿಂದ ಪತ್ನಿ ರಕ್ಷಿತಾ ರೆಡ್ಡಿ ಮತ್ತು ಮಗಳು ಲೀಲಾ ಫೋಟೊಗಳು ಮಾತ್ರ ಕಣ್ಮರೆಯಾಗಿವೆ. ಇನ್ನೂ ಎಲ್ಲರಿಗೆ ಗೊತ್ತಿರುವಂತೆ ಸೆಲೆಬ್ರಿಟಿಗಳ ಸಾಂಸಾರಿಕ ಜೀವನದ ಸುಖ ಮತ್ತು ದುಖದ ಸುಳಿವು ಸಿಗುವುದೇ ಈ ಸೋಶಿಯಲ್ ಮೀಡಿಯಾಗಳಿಂದ. ಅಲ್ಲಿ ನಡೆಯುವ ಚಟುವಟಿಕೆಗಳಿಂದ.

ಹೀಗಾಗಿ ಸದ್ಯ ಇವರ ಅಭಿಮಾನಿಗಳು ಚಿಂತಾಕ್ರಾಂತರಾಗಿದ್ಧಾರೆ. ಫೋಟೊ ಕಣ್ಮರೆಯಾಗಿರುವುದರ ಹಿಂದಿನ ರಹಸ್ಯವನ್ನು ಹುಡುಕುತ್ತಿದ್ದಾರೆ. ವಿಚ್ಚೇದನದತ್ತ ಶರ್ವಾನಂದ್ ದಾಂಪತ್ಯ ಜೀವನ ಎಂದು ಮಾತನಾಡಿಕೊಳ್ಳುತ್ತಿದ್ಧಾರೆ.

ಮತ್ತೂ ಕೆಲವರು ಶರ್ವಾನಂದ್ ತಮ್ಮ ವೈಯಕ್ತಿಕ ಬದುಕನ್ನು ಖಾಸಗಿಯಾಗಿಡಲು ಇಚ್ಚಿಸಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ, ಫೋಟೊಗಳನ್ನು ಡಿಲೀಟ್ ಮಾಡಿದ್ದಾರೆ, ದಾಂಪತ್ಯ ಜೀವನ ಚೆನ್ನಾಗಿಯೇ ಇದೆ ಎಂದು ವಾದ ಮಾಡುತ್ತಿದ್ದಾರೆ. ಎಲ್ಲರಂತೆ ಶರ್ವಾನಂದ್ ತಮ್ಮ ಕುರಿತು ಹಬ್ಬಿರುವ ಈ ಸುದ್ದಿಗೆ ಸದ್ಯ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಸತ್ಯವೇನು..? ಖುದ್ದು ಶರ್ವಾನಂದ್ ಅವರೇ ಹೇಳಬೇಕು. ಆದರೆ ಈ ಈ ಬೆಳವಣಿಗೆಯಿಂದ ಇವರ ಅಭಿಮಾನಿಗಳು ಮಾತ್ರ ಆತಂಕಗೊಂಡಿರುವುದು ಸುಳ್ಳಲ್ಲ.

English summary
Sharwanand sparks divorce rumors! The Telugu actor wipes all traces of his wedding from Instagram, leaving fans in a frenzy. Is it a technical glitch or a marriage in crisis? Click for the full breakdown of the ‘Biker’ star’s shocking move.`
Read more about: divorce tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X