2ನೇ ಮದುವೆಯಾದ ಖ್ಯಾತ ನಿರ್ಮಾಪಕ: ಅಪ್ಪನಿಗೆ ಮಗಳ ಹೃದಯಸ್ಪರ್ಶಿ ಸಂದೇಶ
ತೆಲುಗಿನ ಖ್ಯಾತ ನಿರ್ಮಾಪಕ ದಿಲ್ ರಾಜು ಇತ್ತೀಚಿಗೆ ಎರಡನೇ ಮದುವೆಯಾಗಿದ್ದಾರೆ. ಲಾಕ್ ಡೌನ್ ನಡುವೆಯೂ ಹಸೆಮಣೆ ಏರಿರುವ ದಿಲ್ ರಾಜುಗೆ ಚಿತ್ರರಂಗದ ಗಣ್ಯರು ಶುಭಾಶಯ ಕೋರುತ್ತಿದ್ದಾರೆ. ಮೊದಲ ಪತ್ನಿಯನ್ನು ಕಳೆದುಕೊಂಡು 3 ವರ್ಷವಾಗಿದೆ.
Recommended Video
ಈಗ ದಿಲ್ ರಾಜು ತೀರಾ ಆಪ್ತರ ನಡುವೆ ನಿಜಾಮಾಬಾದ್ ನ ವೆಂಕಟೇಶ್ವರ ದೇವಸ್ಥಾನದಲ್ಲಿ ತೇಜಸ್ವಿನಿ ಜೊತೆ ಎರಡನೆ ಬರಿ ಹಸೆಮಣೆ ಏರಿದ್ದಾರೆ. ಎರಡನೇ ಮದುವೆಯ ಬಗ್ಗೆ ದಿಲ್ ರಾಜು ಎಲ್ಲಿಯೂ ಬಹಿರಂಗ ಪಡಿಸಿರಲಿಲ್ಲ. ದಿಲ್ ರಾಜು ಪುತ್ರಿ ಹನ್ಷಿತಾ ಮುಂದೆ ನಿಂತು ಅಪ್ಪನ ಮದುವೆ ಮಾಡಿಸಿದ್ದಾರೆ. ಹೊಸ ಪಯಣ ಆರಂಭಿಸಿರುವ ಅಪ್ಪನಿಗೆ ಮಗಳು ಹೃದಯಸ್ಪರ್ಶಿ ಸಂದೇಶ ಬರೆದಿದ್ದಾರೆ. ಮುಂದೆ ಓದಿ...

2017ರಲ್ಲಿ ಮೊದಲ ಪತ್ನಿಯನ್ನು ಕಳೆದುಕೊಂಡ ದಿಲ್ ರಾಜು
ದಿಲ್ ರಾಜು ಮೊದಲ ಪತ್ನಿ ಅನಿತಾ 2017ರಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಅನಿತಾ ಸಹ ಚಿತ್ರರಂಗದಲ್ಲಿ ಸಕ್ರೀಯರಾಗಿದ್ದು, ಸಿನಿಮಾ ವಿತರಕರಾಗಿ ಗುರುತಿಸಿಕೊಂಡಿದ್ದರು. ಪತ್ನಿಯನ್ನು ಕಳೆದುಕೊಂಡು 3 ವರ್ಷದ ನಂತರ ಈಗ ಎರಡನೇ ಮದುವೆಯಾಗುವ ಮೂಲಕ ಸಂತೋಷದ ಜೀವನಕ್ಕೆ ಕಾಲಿಟ್ಟಿದ್ದಾರೆ.

ಮೊದಲ ಪತ್ನಿಗೆ ಒಬ್ಬಳು ಮಗಳು
ದಿಲ್ ರಾಜು ಮತ್ತು ಅನಿತಾಗೆ ಹನ್ಷಿತಾ ಎನ್ನುವ ಒಬ್ಬಳು ಮಗಳಿದ್ದಾರೆ. ಹನ್ಷಿತಾಗೆ ಆಗಲೆ ಮದುವೆಯಾಗಿದೆ. ಬಹುರಾಷ್ಟ್ರೀಯ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದ ಹನ್ಷಿತಾ ಅರ್ಚಿತ್ ರೆಡ್ಡಿ ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. 2014ರಲ್ಲಿ ದಿಲ್ ರಾಜು ಮಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಮುಂದೆ ನಿಂತು ಅಪ್ಪನ ಮದುವೆ ಮಾಡಿಸಿದ ಮಗಳು
ಮಗಳು ಮದುವೆಯಾಗಿ ಗಂಡನ ಮನೆ ಸೇರಿದ್ದಾಳೆ. ಪತ್ನಿಯೂ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾಳೆ. ಯಾರು ಇಲ್ಲದೆ ದಿಲ್ ರಾಜು ಒಬ್ಬೊಂಟಿಯಾಗಿ ಜೀವನ ನಡೆಸುತ್ತಿದ್ದರು. ಯಾರ ಬೆಂಬಲವಿಲ್ಲದೆ ಅಪ್ಪ ಪಡುತ್ತಿದ್ದ ಕಷ್ಟ ನೋಡಿ ಅಪ್ಪನಿಗೆ ಎರಡನೇ ಮದುವೆ ಮಾಡಿಸಿದ್ದಾಳೆ ಮಗಳು. ತೇಜಸ್ವಿನಿಯನ್ನು ಹುಡುಕಿ ಮಗಳೇ ಮುಂದೆ ನಿಂತು ದಿಲ್ ರಾಜುಗೆ ಮದುವೆ ಮಾಡಿಸಿದ್ದಾರೆ.

ಅಪ್ಪನಿಗೆ ಮಗಳ ಹೃದಯಸ್ಪರ್ಶಿ ಸಂದೇಶ
"ನೀವು ನನಗೆ ಯಾವಾಗಲು ಆಧಾರಸ್ತಂಬವಾಗಿದ್ದೀರಿ. ನನ್ನನ್ನು ಯಾವಾಗಲು ಪ್ರೀತಿಯಿಂದ ನೋಡಿಕೊಂಡಿದ್ದೀರಿ ಮತ್ತು ನಮ್ಮ ಕುಟುಂಬದ ಸಂತೋಷವೇ ನಿಮ್ಮ ಮೊದಲ ಆದ್ಯತೆಯಾಗಿತ್ತು, ಧನ್ಯವಾದಗಳು. ಜೀವನದ ಹೊಸ ಪಯಣಕ್ಕೆ ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ. ನೀವು ಯಾವಾಗಲು ಪ್ರೀತಿ ಮತ್ತು ಸಂತೋಸದಿಂದ ಇರಲು ನಾನು ಬಯಸುತ್ತೇನೆ. ಪ್ರತಿ ದಿನ ನಿಮಗೆ ಅದ್ಭುತ ಅನುಭವ ನೀಡಲಿ. ಲವ್ ಯೂ ಲಾಟ್" ಎಂದು ಬರೆದುಕೊಂಡಿದ್ದಾರೆ.

ದಿಲ್ ರಾಜು ಬಳಿ ಇರುವ ಸಿನಿಮಾ
ದಿಲ್ ರಾಜು ತೆಲುಗಿನ ಖ್ಯಾತ ನಿರ್ಮಾಪಕರಲ್ಲಿ ಒಬ್ಬರಾಗಿದ್ದಾರೆ. ಬಿಗ್ ಬಜೆಟ್ ಸಿನಿಮಾಗಳನ್ನು ನೀಡಿರುವ ದಿಲ್ ರಾಜು ಬಳಿ ಸಾಕಷ್ಟು ಸಿನಿಮಾಗಳಿವೆ. ಸದ್ಯ ಪವನ್ ಕಲ್ಯಾಣ್ ಅಭಿನಯದ ವಕೀಲ್ ಸಾಬ್ ಸಿನಿಮಾಗೆ ದಿಲ್ ರಾಜು ನಿರ್ಮಾಣದಲ್ಲಿ ಮೂಡಿ ಬರುತ್ತಿದೆ. ಇದು ಬಾಲಿವುಡ್ ನ ಪಿಂಕ್ ಸಿನಿಮಾದ ರಿಮೇಕ್ ಆಗಿದೆ.


Click it and Unblock the Notifications











