'ಅತ್ಯಾಚಾರಿಗಳಿಗೆ ಸಹಕರಿಸಬೇಕು' ಎಂದ ನಿರ್ದೇಶಕನ ವಿರುದ್ಧ ರೊಚ್ಚಿಗೆದ್ದ ನೆಟ್ಟಿಗರು

'ಮಹಿಳೆಯರೇ ತಮ್ಮ ಜೊತೆ ಕಾಂಡೋಮ್ ಇಟ್ಟುಕೊಂಡು ಓಡಾಡಿ. ಅತ್ಯಾಚಾರಿಗಳಿಗೆ ಕಾಂಡೋಮ್ ನೀಡಿ ಸಹಕರಿಸಿ, ಇದರಿಂದ ಕೊಲೆ ನಡೆಯುವುದನ್ನು ತಪ್ಪಿಸಬಹುದು' ಇದು ಮಹಿಳೆಯರಿಗೆ ನಿರ್ದೇಶಕರೊಬ್ಬರು ನೀಡಿದ ಹೊಸ ಸಲಹೆ. ಹೌದು, ತೆಲುಗು ಚಿತ್ರನಿರ್ದೇಶಕ ಡೇನಿಯಲ್ ಶ್ರವಣ್ ಹೇಳಿದ ವಿವಾದಾತ್ಮಕ ನೆಟ್ಟಿಗರ ಕಂಗಣ್ಣಿಗೆ ಗುರಿಯಾಗಿದೆ.

ಇತ್ತೀಚಿಗೆ ನಿರ್ದೇಶಕ ಡೇನಿಯಲ್ ಶ್ರವಣ್ ಫೇಸ್ ಬುಕ್ ನಲ್ಲಿ ವಿವಾದಾತ್ಮಕ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ವಿವಾದ ಸೃಷ್ಟಿಸುತ್ತಿದ್ದಂತೆ ಡಿಲಿಟ್ ಮಾಡಿದ್ದಾರೆ. ಹೈದರಾಬಾದ್ ನಲ್ಲಿ ನಡೆದ ಪಶು ವೈದ್ಯೆ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ ಖಂಡಿಸಿ ಇಡೀ ದೇಶವೇ ಆಕ್ರೋಶ ವ್ಯಕ್ತಪಡಿಸುತ್ತಿದೆ. ಕಾಮುಕರನ್ನು ಮಟ್ಟಹಾಕಲು ಕಠಿಣ ಕಾನೂನು ಜಾರಿಯಾಗಬೇಕಿದೆ ಎಂದು ಸಾರ್ವಜನಿಕವಾಗಿ ಕೂಗು ಕೇಳಿ ಬರುತ್ತಿದೆ.

ಇದಕ್ಕೆ ಸಂಬಂಧಿಸಿದಂತೆ ಡೇನಿಯಲ್ ತನ್ನ ಫೇಸ್ ಬುಕ್ ನಲ್ಲಿ "ಮಹಿಳೆಯರು ತಮ್ಮ ಜೊತೆ ಕಾಂಡೋಮ್ ಇಟ್ಟುಕೊಂಡು ಅತ್ಯಾಚಾರಿಗಳಿಗೆ ಸಹಕರಿಸಬೇಕು. ಹಿಂಸಾಚಾರವಿಲ್ಲದೆ ಅತ್ಯಾಚಾರವನ್ನು ಕಾನೂನು ಬದ್ಧ ಗೊಳಿಸಬೇಕು. 18 ವರ್ಷ ಮೇಲ್ಪಟ್ಟ ಹುಡುಗಿಯರಿಗೆ ಅತ್ಯಾಚಾರದ ಬಗ್ಗೆ ಶಿಕ್ಷಣ ನೀಡಬೇಕು. ವೀರಪ್ಪನ್ ಸಾಯಿಸಿದರಿಂದ ಸ್ಮಗ್ಲಿಂಗ್ ನಿಂತಿಲ್ಲ, ಲಾಡೇನ್ ಗಲ್ಲಿಗೆ ಹಾಕಿದ್ದರಿಂದ ಭಯೋತ್ಪಾದನೆ ನಿಂತಿಲ್ಲ. ಹಾಗೆಯೆ ನಿರ್ಭಯ ಕಾಯಿದೆಯಿಂದ ಅತ್ಯಾಚಾರ ನಿಲ್ಲುವುದಿಲ್ಲ. ಹುಡುಗಿಯರಿಗೆ ಸೆಕ್ಸ್ ಎಜುಕೇಶನ್ ನೀಡಬೇಕು. ಪುರುಷರ ಲೈಂಗಿಕ ಆಸೆಯನ್ನು ಮಹಿಳೆಯರು ಈಡೇರಿಸಿದರೆ ಕೊಲೆ ನಡೆಯುವುದಿಲ್ಲ. ಈ ರೀತಿಯ ಕೂನೂನನ್ನು ಸರ್ಕಾರ ಜಾರಿ ತರಬೇಕು" ಎಂದು ಬರೆದುಕೊಂಡಿದ್ದಾರೆ.

Director Daniel Shravan Controversial Statement About Rap And Murdered

ಶ್ರವಣ್ ಈ ರೀತಿಯ ಪೋಸ್ಟ್ ಹಾಕುತ್ತಿದ್ದಂತೆ ಆಕ್ರೋಶ ಬುಗಿಲೆದ್ದಿದೆ. ತಕ್ಷಣ ಪೋಸ್ಟ್ ಡಿಲಿಟ್ ಮಾಡಿ ಇದು ಚಿತ್ರದ ಡೈಲಾಡ್, ಚಿತ್ರದಲ್ಲಿ ವಿಲನ್ ಹೇಳುವ ಡೈಲಾಗ್ ಅಂತ ಸಮರ್ತಿಸಿಕೊಂಡಿದ್ದಾರೆ. ಶ್ರವನ್ ಪೊಸ್ಟ್ ಗೆ ಅನೇಕ ಕಲಾವಿದರು ಕೂಡ ತರಾಟೆಗೆ ತೆಗೆದುಕೊಂಡಿದ್ದಾರೆ. ಬಾಲಿವುಡ್ ನಟಿ ಕುಬ್ರ ಸೇಠ್, ಗಾಯಕಿ ಚಿನ್ಮಯಿ ಶ್ರೀಪಾದ ಸೇರಿದಂತೆ ಅನೇಕರು ಆಕ್ರೋಶ ಹೊರಹಾಕುತ್ತಿದ್ದಾರೆ.

More from Filmibeat

English summary
Telugu director Daniel Shravan controversial statement about rap and murdered.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X