"ಕೀರವಾಣಿ ಒಬ್ಬ ಕಾ*ಮುಕ, ಆ ವಯಸ್ಸಿನ ಹುಡುಗಿಯರನ್ನು ಕೇಳ್ತಾನಂತೆ"; ಗೀತಾಕೃಷ್ಣ ಆರೋಪ
ಟಾಲಿವುಡ್‌ವುಡ್‌ನಲ್ಲಿ ಹೊಸ ವಿವಾದ ಭುಗಿಲೆದ್ದಿದೆ. ತೆಲುಗು ಕಿರುತೆರೆಯ 'ಪಾಡುತ ತೀಯಗ' ಮ್ಯೂಸಿಕ್ ರಿಯಾಲಿಟಿ ಶೋ ಬಗ್ಗೆ ಮಾಜಿ ಸ್ಪರ್ಧಿ ಪ್ರವಸ್ತಿ ಆರಾಧ್ಯ ಗಂಭೀರ ಆರೋಪಗಳನ್ನು ಮಾಡಿದ್ದರು. ಶೋನಲ್ಲಿ ಸ್ವಜನ ಪಕ್ಷಪಾತ ಮಾಡ್ತಾರೆ, ಸ್ಪರ್ಧಿಗಳನ್ನು ಎಕ್ಸ್‌ಪೋಸ್ ಮಾಡುವಂತೆ ಬಟ್ಟೆ ಹಾಕಲು ಹೇಳ್ತಾರೆ, ಬಾಡಿ ಶೇಮಿಂಗ್ ಮಾಡ್ತಾರೆ ಎಂದು ಆರೋಪಿಸಿದ್ದರು.
ತೀರ್ಪುಗಾರರಾದ ಖ್ಯಾತ ಸಂಗೀತ ನಿರ್ದೇಶಕ ಎಂ. ಎಂ ಕೀರವಾಣಿ, ಗಾಯಕಿ ಸುನಿತಾ ಹಾಗೂ ಗೀತಸಾಹಿತಿ ಚಂದ್ರಬೋಸ್ ಬಗ್ಗೆಯೂ ಪ್ರವಸ್ತಿ ಆರಾಧ್ಯ ಅಸಮಾಧಾನ ಹೊರ ಹಾಕಿದ್ದರು. ಶೋ ಆಯೋಜಕರು, ಕಾಸ್ಟ್ಯೂಮ್ಸ್ ವಿಭಾಗದ ವರ್ತನೆ ಬಗ್ಗೆ ಕೂಡ ಆಕೆ ಆರೋಪ ಮಾಡಿದ್ದರು. ಮುಖ್ಯವಾಗಿ ತೀರ್ಪುಗಾರ್ತಿ ಸುನಿತಾ ಬಗ್ಗೆ ಆಕ್ರೋಶ ಹೊರ ಹಾಕಿದ್ದು ಆಕೆ ಕೂಡ ಪ್ರತಿಕ್ರಿಯೆ ನೀಡಿದ್ದು ಗೊತ್ತೇಯಿದೆ. ಇದೆಲ್ಲದರ ನಡುವೆ ಕೀರವಾಣಿ ವಿರುದ್ಧ ಇದೀಗ ನಿರ್ದೇಶಕ ಗೀತಕೃಷ್ಣ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಈ ಟಿವಿ ಕನ್ನಡದಲ್ಲಿ 'ಎದೆ ತುಂಬಿ ಹಾಡುವೆನು' ಕಾರ್ಯಕ್ರಮದ ತೆಲುಗು ಅವತರಣಿಕೆ 'ಪಾಡುತ ತೀಯಗ'. ಖ್ಯಾತ ಗಾಯಕ ಎಸ್. ಪಿ ಬಾಲಸುಬ್ರಮಣ್ಯಂ ಅವರ ನೇತೃತ್ವದಲ್ಲಿ ಈ ಸಂಗೀತ ಕಾರ್ಯಕ್ರಮ ಬಹಳ ಯಶಸ್ವಿಯಾಗಿ ನಡೆಯುತ್ತಿತ್ತು. ಬಳಿಕ ತೀರ್ಪುಗಾರರು ಬದಲಾಗುತ್ತಾ ಬಂದಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಕೀರವಾಣಿ, ಸುನಿತಾ ಹಾಗೂ ಚಂದ್ರಬೋಸ್ ತೀರ್ಪುಗಾರರಾಗಿ ಇದ್ದಾರೆ. 20ಕ್ಕೂ ಅಧಿಕ ಸೀಸನ್‌ಗಳಾಗಿ ಶೋ ನಡೆದು ಬಂದಿದೆ.
ಯೂಟ್ಯೂಬ್ ವೀಡಿಯೋ ಮಾಡಿ ಮಾತನಾಡಿದ್ದ ಗಾಯಕಿ ಪ್ರವಸ್ತಿ ಆರಾಧ್ಯ "ಶೋ ವೇಳೆ ಜಡ್ಜಸ್ ನನ್ನನ್ನು ಟಾರ್ಗೆಟ್ ಮಾಡುತ್ತಿದ್ದರು. ಸುಖಾಸುಮ್ಮನೆ ನನಗೆ ನೆಗೆಟಿವ್ ಕಾಮೆಂಟ್ಸ್ ಸಿಗುತ್ತಿತ್ತು. ಪ್ರೊಡಕ್ಷನ್ ಡಿಪಾರ್ಟ್‌ಮೆಂಟ್ ಕೆಟ್ಟದಾಗಿ ನಡೆದುಕೊಳ್ಳುತ್ತಿದ್ದರು. ಕಾಸ್ಟ್ಯೂಮರ್ಸ್ ಕೂಡ ಯಾವುದೋ ಬಟ್ಟೆ ಕೊಟ್ಟು ಹಾಕಿಕೊಳ್ಳೋಕೆ ಹೇಳುತ್ತಿದ್ದರು. ಹೊಕ್ಕಳ ಕಾಣುವಂತೆ ಸೀರೆ ಉಡಲು ಹೇಳುತ್ತಿದ್ದರು ಅಂತೆಲ್ಲಾ ಆರೋಪ ಮಾಡಿದ್ದಾರೆ. ಈ ವಿಚಾರ ಭಾರೀ ಸಂಚಲನ ಸೃಷ್ಟಿಸಿದೆ.
ಇದೀಗ 'ಪಾಡುತ ತೀಯಗ' ಶೋ ಬಗ್ಗೆ ಖ್ಯಾತ ನಿರ್ದೇಶಕ ಗೀತಕೃಷ್ಣ ಗಂಭೀರ ಆರೋಫಗಳನ್ನು ಮಾಡಿದ್ದಾರೆ. ಯೂಟ್ಯೂಬ್ ಚಾನಲ್ ಸಂದರ್ಶನಗಳಲ್ಲಿ ಅವರು ಮಾತನಾಡಿದ್ದಾರೆ. ಮುಖ್ಯವಾಗಿ ಆಸ್ಕರ್ ಪ್ರಶಸ್ತಿ ವಿಜೇತ ಎಂ. ಎಂ ಕೀರವಾಣಿ ಬಗ್ಗೆ ಗೀತಕೃಷ್ಣ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗಿದೆ. ಕೀರವಾಣಿ ಸ್ತ್ರೀ ಪೀಡಕ, ಚಿಕ್ಕ ಹುಡುಗಿಯರೇ ಬೇಕು ಎಂದು ಕೇಳುತ್ತಾನಂತೆ, ಆತನ ಕ್ಯಾರೆಕ್ಟರ್ ಸರಿಯಿಲ್ಲ ಎಂದು ಗೀತಕೃಷ್ಣ ಆರೋಪಿಸಿದ್ದಾರೆ.

"ಕೀರವಾಣಿ ಒಬ್ಬ ಕಾ*ಮುಕ. ಹುಡುಗಿಯರನ್ನು ಸಪ್ಲೆ ಮಾಡುವ ಬ್ರೋಕರ್‌ಗಳ ಬಳಿ ಚಿಕ್ಕ ವಯಸ್ಸಿನ ಹುಡುಗಿಯರನ್ನು ಕೇಳ್ತಾನಂತೆ. ಸ್ಕೂಲ್ ಡ್ರೆಸ್ ಹಾಕಿಕೊಂಡು ಬರೋಕೆ ಹೇಳ್ತಾನಂತೆ. ಇದನ್ನು ಏಳೆಂಟು ವರ್ಷಗಳಿಂದ ನನಗೆ ಕೆಲವರು ಹೇಳುತ್ತಿದ್ದರು. ನನಗೂ ಕೀರವಾಣಿ ಪರಿಯಯ, ಸ್ನೇಹಿತ, ಕೆಲ ವರ್ಷಗಳ ಹಿಂದೆ ನನ್ನ ರೂಮಿಗೆ ಬರ್ತಿದ್ದ, ಆತ ಒಬ್ಬ ವ್ಯಭಿಚಾರಿ ಅಂತೆ. ಅದು ಸರೀನಾ ತಪ್ಪಾ ಅಂದ್ರೆ ನನಗೆ ಗೊತ್ತಿಲ್ಲ, ಅದು ಆತನ ವ್ಯಕ್ತಿಗತ ವಿಷಯ. ಸಂಗೀತದಲ್ಲಿ ಕೀರವಾಣಿ ಸಾಧನೆ ಮಾಡಿದ್ದಾನೆ. ಪ್ರತಿಭೆ ಬೇರೆ, ಗುಣ ಬೇರೆ" ಎಂದು ಗೀತಕೃಷ್ಣ ಆರೋಪಿಸಿದ್ದಾರೆ.
ಇನ್ನು ಸುನಿತಾ ದೊಡ್ಡ ಗಾಯಕಿ ಏನಲ್ಲ. ಚಂದ್ರಬೋಸ್ ಕೂಡ ಹೇಳಿಕೊಳ್ಳುವಂತಲ್ಲ ಗೀತಸಾಹಿತಿ ಅಲ್ಲ, ಏನೋ ಆಸ್ಕರ್ ಬಂದಿದೆಯಂತೆ. 'ನಾಟು ನಾಟು' ಹಾಡು ಬರೆಯೋಕೆ 100 ದಿನ ತಗೊಂಡಿದ್ದನಂತೆ, ನಾಉ 5 ನಿಮಿಷಕ್ಕೆ ಬರೆದುಬಿಡ್ತೀನಿ ಎಂದು ನಿರ್ದೇಶಕ ಗೀತಕೃಷ್ಣ ಹೇಳಿದ್ದಾರೆ. ಮತ್ತೊಂದು ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಮಾತನಾಡಿರುವ ಗೀತಕೃಷ್ಣ ಕೀರವಾಣಿ ವಿರುದ್ಧ ಪೋಕ್ಸೊ(POCSO) ಕೇಸ್ ಹಾಕಬೇಕು ಎಂದು ಆಗ್ರಹಿಸಿದ್ದಾರೆ.
ಖ್ಯಾತ ನಿರ್ದೇಶಕ ಕೆ. ವಿಶ್ವನಾಥ್ ಗರಡಿಯಲ್ಲಿ ಪಳಗಿದವರು ಗೀತ ಕೃಷ್ಣ. 90ರ ದಶಕದಲ್ಲಿ 'ಸಂಕೀರ್ತನಾ', 'ಕೋಕಿಲ' ರೀತಿಯ ಹಿಟ್ ಸಿನಿಮಾಗಳನ್ನು ನಿರ್ದೇಶಿಸಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಯಾವುದೇ ಸಿನಿಮಾ ನಿರ್ದೇಶನ ಮಾಡ್ತಿಲ್ಲ. ಬದಲಿಗೆ ಸೋಶಿಯಲ್ ಮೀಡಿಯಾದಲ್ಲಿ ಚಿತ್ರರಂಗ ಹಾಗೂ ಕಲಾವಿದರು, ತಂತ್ರಜ್ಞರ ಬಗ್ಗೆ ಆರೋಪಗಳನ್ನು ಮಾಡಿ ಸುದ್ದಿ ಆಗುತ್ತಿರುತ್ತಾರೆ.


Click it and Unblock the Notifications











