ನಟಿಯ ಸೊಂಟಕ್ಕೆ ಕೈ ಹಾಕಿ ವಿಚಿತ್ರ ಡ್ಯಾನ್ಸ್ ಸ್ಟೆಪ್; ನಿರ್ದೇಶಕನ ಪ್ರತಿಕ್ರಿಯೆ ಏನು?

ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲೇ ತೆಲುಗಿನ 'ಮಿಸ್ಟರ್ ಬಚ್ಚನ್' ಸಿನಿಮಾ ತೆರೆಗೆ ಬಂದಿದೆ. ರವಿತೇಜಾ ನಟನೆಯ ಚಿತ್ರಕ್ಕೆ ಹರೀಶ್ ಶಂಕರ್ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರ ಮಿಶ್ರಪ್ರತಿಕ್ರಿಯೆ ಸಿಕ್ಕಿದೆ. ಇನ್ನು ಸಿನಿಮಾ ಸಾಂಗ್‌ಗಳ ಬಗ್ಗೆ ಬಹಳ ಹಿಂದೆಯೇ ಸಾಕಷ್ಟು ಟ್ರೋಲ್ ಎದುರಾಗಿತ್ತು.

ಆಕ್ಷನ್ ಥ್ರಿಲ್ಲರ್ 'ಮಿಸ್ಟರ್ ಬಚ್ಚನ್' ಚಿತ್ರದಲ್ಲಿ ನಟ ರವಿತೇಜಾ ಇನ್‌ಕಂ ಟ್ಯಾಕ್ಸ್ ಆಫೀಸರ್ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಭಾಗ್ಯಶ್ರೀ ಬೋರ್ಸ್ ನಾಯಕಿಯಾಗಿ ಮಿಂಚಿದ್ದಾರೆ. ಮಿಕ್ಕಿ ಜೆ ಮೇಯರ್ ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಪೀಪಲ್ ಮೀಡಿಯಾ ಫ್ಯಾಕ್ಟರಿ ಸಂಸ್ಥೆ ಚಿತ್ರಕ್ಕೆ ಹಣ ಹೂಡಿದೆ. ಟೀ ಸೀರಿಸ್ ಹಾಗೂ ಪನೋರಮಾ ಸ್ಟುಡಿಯೋಸ್ ಸಂಸ್ಥೆಗಳು ಕೈ ಜೋಡಿಸಿದೆ.

Director Harish Shankar reacts on Mr Bachchan film sitara song moves trolls

ಇತ್ತೀಚೆಗೆ ರವಿತೇಜಾ ನಟನೆಯ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಅಷ್ಟಾಗಿ ಸದ್ದು ಮಾಡ್ತಿದೆ. ಇನ್ನು ಹರೀಶ್ ಶಂಕರ್ ಹಾಗೂ ರವಿತೇಜಾ ಹ್ಯಾಟ್ರಿಕ್ ಕಾಂಬಿನೇಷನ್‌ ಸಿನಿಮಾ ಇದು. ಚಿತ್ರದ 'ಸಿತಾರ' ಸಾಂಗ್ ಬಗ್ಗೆ ಈ ಹಿಂದೆ ಕೂಡ ಟ್ರೋಲ್ ಎದುರಾಗಿತ್ತು. ನಟಿಯನ್ನು ಪ್ರದರ್ಶನದ ವಸ್ತುವಂತೆ ಬಳಸಿ ಹಾಕಿಸಿದ್ದ ಸ್ಟೆಪ್ಸ್ ಬಗ್ಗೆ ಕೆಲವರು ಬೇಸರ ವ್ಯಕ್ತಪಡಿಸಿದ್ದರು.

56 ವರ್ಷ ವಯಸ್ಸಿನ ರವಿತೇಜಾಗೂ 25 ವರ್ಷ ವಯಸ್ಸಿನ ಭಾಗ್ಯಶ್ರೀಗೂ ಅಂದೆಂತಹ ಸ್ಟೆಪ್ಸ್ ಕಂಪೋಸ್ ಮಾಡಿದ್ದಾರೆ. ಅದರಲ್ಲೂ ಕೆಲ ಫ್ರೇಮ್‌ಗಳಲ್ಲಿ ನಾಯಕಿಯ ಮುಖವೇ ತೋರಿಸದೇ ಬರೀ ಆಕೆಯ ಸೊಂಟ, ಹಿಂಬಾಗ ತೋರಿಸುವಂತಹ ಸ್ಟೆಪ್ಸ್ ಬೇಕಾ? ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ಸಿನಿಮಾ ನೋಡಿದವರು ರವಿತೇಜಾ ಆಕೆಯ ಸೊಂಟಕ್ಕೆ ಕೈ ಹಾಕಿ ಮಾಡಿರುವ ಮತ್ತೊಂದು ಸ್ಟೆಪ್ಸ್ ಬಗ್ಗೆ ಬೇಸರ ಹೊರಹಾಕುತ್ತಿದ್ದಾರೆ.

Director Harish Shankar reacts on Mr Bachchan film sitara song moves trolls

ಅಂದಹಾಗೆ 'ಸಿತಾರ' ಸಾಂಗ್‌ಗೆ ಶೇಖರ್ ಮಾಸ್ಟರ್ ಡ್ಯಾನ್ಸ್ ಕೊರಿಯೋಗ್ರಫಿ ಮಾಡಿದ್ದಾರೆ. ಸಿಆ ಸಾಂಗ್ ಬಿಟ್ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ತೇಲಿ ಬಿಟ್ಟಿದ್ದಾರೆ. ಇದ್ಯಾವ ಸೀಮೆ ಸ್ಟೆಪ್ ಅಂತ ಟ್ರೋಲ್ ಮಾಡುತ್ತಿದ್ದಾರೆ. 'ಮಿಸ್ಟರ್ ಬಚ್ಚನ್' ಸಿನಿಮಾ ಬಿಡುಗಡೆಯಾದ ಮರುದಿನವೇ ಸಕ್ಸಸ್ ಮೀಟ್ ಮಾಡಿ ಚಿತ್ರತಂಡ ಮಾತನಾಡಿದೆ. ಮುಖ್ಯವಾಗಿ ಎದುರಾದ ಟ್ರೋಲ್ಸ್ ಬಗ್ಗೆ ನಿರ್ದೇಶಕ ಹರೀಶ್ ಶಂಕರ್ ಪ್ರತಿಕ್ರಿಯಿಸಿದ್ದಾರೆ.

ಆ ಡ್ಯಾನ್ಸ್ ಮೂಮೆಂಟ್ಸ್ ನನಗೂ ಇಷ್ಟವಾಗಲಿಲ್ಲ. ಆದರೆ ಶೇಖರ್ ಮಾಸ್ಟರ್ ಮೊದಲ ದಿನವೇ ಆ ಸ್ಟೆಪ್ಸ್ ಕಂಪೋಸ್ ಮಾಡಿದರು. ಇಷ್ಟವಿಲ್ಲ ಅಂತ ಹೇಳಿದರೆ ಬೇಸರ ಮಾಡಿಕೊಳ್ಳುತ್ತಾರೆ ಎಂದು ಸುಮ್ಮನಾದೆ ಎಂದಿದ್ದಾರೆ. ಇದಕ್ಕೂ ಮುನ್ನ ಈ ಹಾಡಿನ ಬಗ್ಗೆ ಎದುರಾದ ಟ್ರೋಲ್ ಬಗ್ಗೆ ತಿರುಗೇಟು ನೀಡಿದ್ದ ಹರೀಶ್ ಶಂಕರ್ ಇದೀಗ ಮಾಧ್ಯಮಗಳ ಮುಂದೆ ಸೈಲೆಂಟ್ ಆಗಿದ್ದಾರೆ.

ಮೊದಲ ದಿನ 'ಮಿಸ್ಟರ್ ಬಚ್ಚನ್' ಸಿನಿಮಾ ವಿಶ್ವದಾದ್ಯಂತ 5 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವ ಅಂದಾಜಿದೆ. ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕಿದ್ದು ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿದೆ. ಪೂರಿ ಜಗನ್ನಾಥ್ ನಿರ್ದೇಶನದ 'ಡಬಲ್ ಇಸ್ಮಾರ್ಟ್ ಶಂಕರ್' ಸಿನಿಮಾ ಕೂಡ ಪ್ರೇಕ್ಷಕರ ನಿರೀಕ್ಷೆ ಹುಸಿಯಾಗಿಸಿದೆ. ಹಾಗಾಗಿ ಎರಡೂ ಸಿನಿಮಾಗಳು ಭಾರೀ ನಷ್ಟ ಎದುರಿಸುವ ಸಾಧ್ಯತೆಯಿದೆ.

More from Filmibeat

English summary
Raviteja starrer Mr Bachchan movie team trolled for sitara song;
Read more about: telugu ravi teja tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X