ಮದುವೆ ಸಂಭ್ರಮದಲ್ಲಿ ನಿರ್ದೇಶಕ ಕೋಡಿ ರಾಮಕೃಷ್ಣ ಪುತ್ರಿ ಕೋಡಿ ಪ್ರವಲ್ಲಿಕಾ

ತೆಲುಗು ಸಿನಿ ಅಂಗಳದ ಪ್ರಖ್ಯಾತ ನಿರ್ದೇಶಕ ದಿವಂಗತ ಕೋಡಿ ರಾಮಕೃಷ್ಣ ಪುತ್ರಿ ಕೋಡಿ ಪ್ರವಲ್ಲಿಕಾ ದಾಂಪತ್ಯ ಬದುಕಿಗೆ ಕಾಲಿಟ್ಟಿದ್ದಾರೆ. ಹೈದರಾಬಾದ್ ನಲ್ಲಿರುವ ಕನ್ವೆನ್ಷನ್ ಸೆಂಟರ್ ವೊಂದರಲ್ಲಿ ಚಂದು ಮಹೇಶ್ ಜೊತೆಗೆ ಕೋಡಿ ಪ್ರವಲ್ಲಿಕಾ ವಿವಾಹ ಮಹೋತ್ಸವ ಅದ್ಧೂರಿಯಾಗಿ ನಡೆದಿದೆ.

ಚಂದು ಮಹೇಶ್-ಕೋಡಿ ಪ್ರವಲ್ಲಿಕಾ ಮದುವೆಗೆ ಕುಟುಂಬಸ್ಥರು, ಬಂಧು-ಮಿತ್ರರು, ಟಾಲಿವುಡ್ ನ ದಿಗ್ಗಜರು ಸಾಕ್ಷಿ ಆಗಿದ್ದಾರೆ. ನವ ದಂಪತಿಗಳಿಗೆ ತೆಲುಗಿನ ನಟ-ನಟಿಯರು ಶುಭಾಶಯ ತಿಳಿಸಿದ್ದಾರೆ.

ಅಂದ್ಹಾಗೆ, ತೆಲುಗಿನಲ್ಲಿ 'ಇಂಟಿಲೋ ರಾಮಯ್ಯ ವೀದಿಲೋ ಕೃಷ್ಣಯ್ಯ', 'ಸಿಂಹಪುರಿ ಸಿಂಹಂ', 'ಶ್ರೀನಿವಾಸ ಕಲ್ಯಾಣಂ', 'ಅಮ್ಮೋರು', 'ಕ್ಯಾಪ್ಟನ್', 'ದೇವಿ ಪುತ್ರುಡು', 'ಅಂಜಿ', 'ಅರುಂಧತಿ', 'ಅವತಾರಂ' ಸೇರಿದಂತೆ ಹಲವು ಸೂಪರ್ ಹಿಟ್ ಚಿತ್ರಗಳನ್ನು ನಿರ್ದೇಶಿಸಿದವರು ಕೋಡಿ ರಾಮಕೃಷ್ಣ.

Director Kodi Ramakrishna daughter Kodi Pravallika gets married

ನಟಿ ರಮ್ಯಾ, ದಿಗಂತ್ ಅಭಿನಯದ ಕನ್ನಡದಲ್ಲಿ ತೆರೆಗೆ ಬಂದ 'ನಾಗರಹಾವು' ಚಿತ್ರಕ್ಕೂ ಇದೇ ಕೋಡಿ ರಾಮಕೃಷ್ಣ ಆಕ್ಷನ್ ಕಟ್ ಹೇಳಿದ್ದರು.

ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಕೋಡಿ ರಾಮಕೃಷ್ಣ ಕಳೆದ ವರ್ಷ (2019 ಫೆಬ್ರವರಿ 22) ಹೈದರಾಬಾದ್ ನಲ್ಲಿ ಇಹಲೋಕ ತ್ಯಜಿಸಿದ್ದರು.

More from Filmibeat

English summary
Director Kodi Ramakrishna daughter Kodi Pravallika gets married to Chandu Mahesh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X