"ನಾನು, ರಮ್ಯಾಕೃಷ್ಣ ಒಟ್ಟಿಗಿಲ್ಲ.. ಮಗ ಕ್ರಾಸ್‌ಬೀಡ್": ಡೈವೋರ್ಸ್ ಬಗ್ಗೆ ಕೃಷ್ಣವಂಶಿ ಮಾತು

ನಿರ್ದೇಶಕ ಕೃಷ್ಣವಂಶಿ ಹಾಗೂ ಬಹುಭಾಷಾ ನಟಿ ರಮ್ಯಾಕೃಷ್ಣ ಪ್ರೀತಿ ಮದುವೆ ಆಗಿದ್ದರು. ಆದರೆ ಕೆಲ ವರ್ಷಗಳಿಂದ ಇವರಿಬ್ಬರ ಡೈವೋರ್ಸ್ ಬಗ್ಗೆ ಗುಸುಗುಸು ಕೇಳಿಬರುತ್ತಲೇ ಇದೆ. ಇತ್ತೀಚೆಗೆ ಸಂದರ್ಶನಗಳಲ್ಲಿ ತಮ್ಮ ಸಾಂಸಾರಿಕ ಜೀವನದ ಬಗ್ಗೆ ನಿರ್ದೇಶಕ ಕೃಷ್ಣವಂಶಿ ಓಪನ್ ಆಗಿ ಮಾತನಾಡುತ್ತಿದ್ದಾರೆ. ಸದ್ಯ ನಾವಿಬ್ಬರು ಒಟ್ಟಿಗೆ ಒಂದೇ ಮನೆಯಲ್ಲಿ ವಾಸಿಸುತ್ತಿಲ್ಲ. ಹಾಗಂದ ಮಾತ್ರಕ್ಕೆ ಡಿವೋರ್ಸ್ ಅನ್ನುವುದೆಲ್ಲಾ ಸುಳ್ಳು ಎಂದು ಹೇಳಿದ್ದಾರೆ.

ಕೃಷ್ಣವಂಶಿ ನಿರ್ದೇಶನದ 'ಚಂದ್ರಲೇಖ' ಚಿತ್ರದಲ್ಲಿ ರಮ್ಯಾಕೃಷ್ಣ ನಟಿಸಿದ್ದರು. ಆ ಸಿನಿಮಾ ಶೂಟಿಂಗ್ ಸಮಯದಲ್ಲೇ ಇಬ್ಬರೂ ಪ್ರೀತಿ ಮದುವೆ ಆಗಿದ್ದರು. ಇವರಿಗೆ ಒಬ್ಬ ಗಂಡು ಮಗ ಕೂಡ ಇದ್ದಾನೆ. ರಮ್ಯಾಕೃಷ್ಣ ಇವತ್ತಿಗೂ ಬಹುಬೇಡಿಕೆಯ ನಟಿಯಾಗಿ ಗುರ್ತಿಸಿಕೊಂಡಿದ್ದು, ಪವರ್‌ಫುಲ್‌ ರೋಲ್‌ಗಳಲ್ಲಿ ನಟಿಸಿ ಅಬ್ಬರಿಸುತ್ತಿದ್ದಾರೆ. 'ಲೈಗರ್' ಚಿತ್ರದಲ್ಲಿ ವಿಜಯ್ ದೇವರಕೊಂಡ ತಾಯಿ ಪಾತ್ರದಲ್ಲಿ ಮಿಂಚಿದ್ದಾರೆ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸಿನಿಮಾ ರಿಲೀಸ್ ಆಗಿ ಸದ್ದು ಮಾಡುತ್ತಿದೆ. ಇನ್ನು ಕೃಷ್ಣವಂಶಿ ನಿರ್ದೇಶನದ 'ರಂಗ ಮಾರ್ತಾಂಡ' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ.

'ರಂಗ ಮಾರ್ತಾಂಡ' ಸಿನಿಮಾ ಪ್ರಮೋಷನ್ ಭಾಗವಾಗಿ ಕೃಷ್ಣವಂಶಿ ಸಾಕಷ್ಟು ಸಂದರ್ಶನಗಳಲ್ಲಿ ಭಾಗವಹಿಸಿ ಮಾತನಾಡುತ್ತಿದ್ದಾರೆ. ಸಿನಿಮಾ ಜೊತೆಗೆ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಕೂಡ ಸಾಕಷ್ಟು ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಗಾಸಿಪ್‌ಗಳು ಎಲ್ಲರಿಗೂ ಇಷ್ಟ. ಅದಕ್ಕೆ ಮಾತನಾಡುತ್ತಾರೆ. ನಾನು ಅದಕ್ಕೆಲ್ಲಾ ತಲೆ ಕೆಡಿಸಿಕೊಳ್ಳುವುದಿಲ್ಲ. ನನ್ನ ಮತ್ತು ರಮ್ಯಾಕೃಷ್ಣ ನಡುವೆ ಸಂಬಂಧ ಹೇಗಿದೆ ಅನ್ನುವುದು ನಮಗೆ ಗೊತ್ತು. ನನ್ನ ಮಗ ಕೂಡ ಇದಕ್ಕೆಲ್ಲಾ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ.

ನಾನು, ರಮ್ಯಾಕೃಷ್ಣ ಒಟ್ಟಿಗಿಲ್ಲ- ಕೃಷ್ಣವಂಶಿ

ನಾನು, ರಮ್ಯಾಕೃಷ್ಣ ಒಟ್ಟಿಗಿಲ್ಲ- ಕೃಷ್ಣವಂಶಿ

ರಮ್ಯಾಕೃಷ್ಣ ಹಾಗೂ ಕೃಷ್ಣವಂಶಿ ದಂಪತಿ ದೂರಾಗಿದ್ದಾರೆ. ಇಬ್ಬರೂ ಡೈವೋರ್ಸ್ ತಗೆದುಕೊಳ್ಳುತ್ತಿದ್ದಾರೆ ಅನ್ನುವ ಮಾತುಗಳು ಬಹಳ ದಿನಗಳಿಂದ ಕೇಳಿಬರ್ತಿದೆ. ಈ ಬಗ್ಗೆ ಮಾತನಾಡಿರುವ ಕೃಷ್ಣವಂಶಿ "ನಾನು ತಾಯಿ ಜೊತೆ ಹೈದರಾಬಾದ್‌ನಲ್ಲಿದ್ದೀನಿ, ಆಕೆ ಪೋಷಕರ ಜೊತೆ ಚೆನ್ನೈನಲ್ಲಿ ಇದ್ದಾಳೆ. ಮಗ ರಿತ್ವಿಕ್ ಕೂಡ ಆಕೆಯ ಜೊತೆ ಇದ್ದಾನೆ. ಹಾಗಂತ ನಾವಿಬ್ಬರು ದೂರಾಗಿಲ್ಲ. ಪ್ರತಿದಿನ ಫೋನ್ ಮಾಡಿ ಮಾತನಾಡುತ್ತೇವೆ. ಸಮಯ ಸಿಕ್ಕಾಗಲೆಲ್ಲಾ ಆಕೆ ನಮ್ಮ ಮನೆಗೆ ಬರ್ತಾಳೆ, ನಾನು ಅವರ ಮನೆಗೆ ಹೋಗುತ್ತೇನೆ. ದೂರ ಇದಷ್ಟು ನಮ್ಮಿಬ್ಬರ ಬಂಧ ಗಟ್ಟಿಯಾಗುತ್ತದೆ" ಎಂದಿದ್ದಾರೆ.

ಮಗ ರಿತ್ವಿಕ್ ಕ್ರಾಸ್‌ಬ್ರೀಡ್!

ಮಗ ರಿತ್ವಿಕ್ ಕ್ರಾಸ್‌ಬ್ರೀಡ್!

"ನಮ್ಮ ಮಗ ರಿತ್ವಿಕ್ ಸಿಕ್ಕಾಪಟ್ಟೆ ಶಾರ್ಪ್, ಆಕ್ಟೀವ್. ಎಷ್ಟೇ ಆದರೂ ಕ್ರಾಸ್‌ಬ್ರೀಡ್ ಅಲ್ಲವಾ? ನನ್ನದು ತೆಲುಗು, ರಮ್ಯಾಕೃಷ್ಣ ತಮಿಳು. ನಾನು ನಿರ್ದೇಶಕ, ಆಕೆ ನಟಿ, ಹಾಗಾಗಿ ಕ್ರಾಸ್‌ಬ್ರೀಡ್. ರಿತ್ವಿಕ್ ಈಗ 10ನೇ ತರಗತಿ ಓದುತ್ತಿದ್ದಾನೆ. ಒಮ್ಮೆ ಕ್ರಿಕೆಟ್ ಪ್ಲೇಯರ್ ಆಗ್ತೀನಿ ಅಂತಾನೆ, ಮತ್ತೊಮ್ಮೆ ಬ್ಯುಸಿನೆಸ್‌ ಮಾಡ್ತೀನಿ ಅಂತಾನೆ, ಮಗದೊಮ್ಮೆ ಕ್ರಿಪ್ಟೊ ಕರೆನ್ಸಿ ಅಂತ ಹೇಳ್ತಿರ್ತಾನೆ. ಅವನದು ಟೀನೇಜ್, ಏನು ಮಾಡುವುದಕ್ಕೆ ಆಗುವುದಿಲ್ಲ. ಆ ವಯಸ್ಸಿನಲ್ಲಿ ಆಯೋಚನೆಗಳು ಅದೇ ರೀತಿ ಇರುತ್ತದೆ".

ಡೈವೋರ್ಸ್ ಗಾಸಿಪ್ ಕೃಷ್ಣವಂಶಿ ಮಾತು

ಡೈವೋರ್ಸ್ ಗಾಸಿಪ್ ಕೃಷ್ಣವಂಶಿ ಮಾತು

ರಮ್ಯಾಕೃಷ್ಣ ಚೆನ್ನೈನಲ್ಲಿ, ನೀವು ಹೈದರಾಬಾದ್‌ನಲ್ಲಿ ವಾಸಿಸುತ್ತಿದ್ದೀರಾ. ಹಾಗಾಗಿ ಡೈವೋರ್ಸ್ ಗಾಸಿಪ್‌ ಶುರುವಾಗಿದೆ ಅನ್ನುವ ಪ್ರಶ್ನೆಗೆ "ಅದಕ್ಕೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಇನ್ನು ಮಗ ಕೂಡ ಅದನ್ನು ಕಿವಿ ಹಾಕಿಕೊಳ್ಳುವುದಿಲ್ಲ. ಯಾರು ಏನು ಆತಂಕಪಡುವುದು ಬೇಡ. ಬೇಸರಗೊಳ್ಳುವುದು ಬೇಡ. ನಾನು ರಮ್ಯಾಕೃಷ್ಣ ಒಂದಾಗಿ ಇದ್ದೀವಿ. ಇಂತಹ ಗಾಸಿಪ್‌ಗಳು ಸರ್ವೇಸಾಮಾನ್ಯ. ಎಲ್ಲರಿಗೂ ಗಾಸಿಪ್ ಅಂದರೆ ಇಷ್ಟ. ಇದು ಕೇವಲ ಫನ್‌ಗಾಗಿ ಅಷ್ಟೇ" ಎಂದು ಕೃಷ್ಣವಂಶಿ ಹೇಳಿದ್ದಾರೆ.

ರಮ್ಯಾಕೃಷ್ಣಗೆ ಪೈಪೋಟಿ ನೀಡಲು ಸಾಧ್ಯವಾಗುತ್ತಿಲ್ಲ

ರಮ್ಯಾಕೃಷ್ಣಗೆ ಪೈಪೋಟಿ ನೀಡಲು ಸಾಧ್ಯವಾಗುತ್ತಿಲ್ಲ

"ಪತ್ನಿ ರಮ್ಯಾಕೃಷ್ಣ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಾ ಜೋರಾಗಿ ಮಿಂಚುತ್ತಿದ್ದಾರೆ. ನಾಲ್ಕೈದು ವರ್ಷಗಳಿಂದ ನನ್ನ ಸಿನಿಮಾಗಳು ಗೆಲ್ಲುತ್ತಿಲ್ಲ. ಆಕೆಗೆ ಪೈಪೋಟಿ ನೀಡುವುದು ಕಷ್ಟವಾಗುತ್ತಿದೆ. ಆದಷ್ಟು ಮತ್ತೆ ಗೆಲುವಿನ ಲಯಕ್ಕೆ ಮರಳುವ ವಿಶ್ವಾಸ ಇದೆ" ಎಂದು ನಿರ್ದೇಶಕ ಕೃಷ್ಣವಂಶಿ ಯೂಟ್ಯೂಬ್ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಕೃಷ್ಣವಂಶಿ ನಿರ್ದೇಶನದ 'ರಂಗ ಮಾರ್ತಾಂಡ' ಸಿನಿಮಾ ಶೀಘ್ರದಲ್ಲೇ ತೆರೆಗೆ ಬರಲಿದೆ. ಇನ್ನು ನಟಿ ರಮ್ಯಾಕೃಷ್ಣ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲೂ ನಟಿಸಿದ್ದಾರೆ.

More from Filmibeat

English summary
Director Krishna Vamsi Gives Clarity About Ramya Krishnan Divorce Rumors. Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X