"ರಾಮ್ ಚರಣ್ ಗ್ಲೋಬಲ್ ಸ್ಟಾರ್ ಅಲ್ಲ"; ತೆಲುಗು ನಿರ್ದೇಶಕ ಕೃಷ್ಣ ವಂಶಿ ಶಾಕಿಂಗ್ ಕಾಮೆಂಟ್
ಪ್ಯಾನ್ ಇಂಡಿಯಾ ಸಿನಿಮಾ ಮಾಡಿದ ಹಲವು ಸೂಪರ್‌ಸ್ಟಾರ್‌ಗಳು ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ. ಗ್ಲೋಬಲ್ ಮಾರುಕಟ್ಟೆಯಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಅವರಲ್ಲಿ ರಾಮ್ ಚರಣ್ ಹಾಗೂ ಜೂ.ಎನ್‌ಟಿಆರ್ ಕೂಡ ಮುಂಚೂಣಿಯಲ್ಲಿದ್ದಾರೆ. ರಾಜಮೌಳಿ ನಿರ್ದೇಶಿಸಿದ 'RRR' ಸಿನಿಮಾದ ಬಳಿಕ ತೆಲುಗಿನ ಈ ಇಬ್ಬರು ಸ್ಟಾರ್‌ಗಳು ಜಾಗತಿಕ ಮಾರುಕಟ್ಟೆಯಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ.
ಮೆಗಾ ಪವರ್‌ಸ್ಟಾರ್ ರಾಮ್ ಚರಣ್ ಹಾಗೂ ಯಂಗ್ ಟೈಗರ್ ಜೂ.ಎನ್‌ಟಿಆರ್‌ಗೂ ಮುನ್ನ ಬಾಲಿವುಡ್‌ನ ಸೂಪರ್‌ಸ್ಟಾರ್‌ಗಳು ಕೂಡ ಸದ್ದು ಮಾಡಿದ್ದಾರೆ. ಅವರಲ್ಲಿ ಶಾರುಖ್ ಖಾನ್, ಆಮಿರ್ ಖಾನ್ ಹೆಸರುಗಳು ಮುಂಚೂಣಿಯಲ್ಲಿ ಬರುತ್ತಿವೆ. ಸದ್ಯ ಟಾಲಿವುಡ್‌ನ ಜನಪ್ರಿಯ ನಿರ್ದೇಶಕ ಕೊಟ್ಟ ಹೇಳಿಕೆಯೊಂದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

'RRR' ಸಿನಿಮಾ ಗ್ಲೋಬಲ್ ರಿಲೀಸ್ ಕಂಡ ಬಳಿಕ ಹಾಲಿವುಡ್ ನಿರ್ದೇಶಕರೇ ಫಿದಾ ಆಗಿದ್ದರು. ಜಾಗತಿಕ ಮಟ್ಟದಲ್ಲಿ ವಿಶ್ವ ದಾಖಲೆ ಬರೆದ ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿದ್ದ ಜೇಮ್ಸ್ ಕ್ಯಾಮರೂನ್ ಕೂಡ ಈ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು. ರಾಮ್ ಚರಣ್ ಹಾಗೂ ಜೂ.ಎನ್‌ಟಿಆರ್ ನಟನೆಯನ್ನು ನೋಡಿ ಮೆಚ್ಚಿಕೊಂಡಿದ್ದರು. ಆದರೆ, ಕೃಷ್ಣ ವಂಶಿ ಮಾತ್ರ ರಾಮ್ ಚರಣ್ ಗ್ಲೋಬಲ್ ಸ್ಟಾರ್ ಅಂತ ಹೇಳಿದ್ದಾರೆ. ಅಷ್ಟಕ್ಕೂ ಇವರು ಯಾಕೆ ಹೀಗಂದರು?
ಕೃಷ್ಣ ವಂಶಿ ತೆಲುಗಿನಲ್ಲಿ 'ಚಂದ್ರಲೇಖಾ', 'ಮುರಾರಿ', 'ಖಡ್ಗಂ', 'ರಾಖಿ' ಅಂತಹ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಹಾಗೆಯೇ ರಾಮ್ ಚರಣ್ ನಟಿಸಿದ 'ಗೋವಿಂದುಡು ಅಂದರಿವಾಡೆಲೆ' ಸಿನಿಮಾವನ್ನು ಕೃಷ್ಣ ವಂಶಿನೇ ನಿರ್ದೇಶಿಸಿದ್ದರು. ಆದರೆ, ಈ ಸಿನಿಮಾ ನಿರೀಕ್ಷೆ ಮಾಡಿದಷ್ಟು ಸದ್ದು ಮಾಡಲಿಲ್ಲ. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಎಲ್ಲಾ ಹೀರೋಗಳ ಫಾಲೋವರ್ಸ್ ಜೊತೆನೂ ಈ ನಿರ್ದೇಶಕ ಕನೆಕ್ಟ್ ಆಗುತ್ತಿದ್ದಾರೆ.
ಈ ವೇಳೆ ನೆಟ್ಟಿಗರು "ರಾಮ್ ಚರಣ್ ಜೊತೆ ಇನ್ನೊಂದು ಸಿನಿಮಾ ಯಾವಾಗ ಮಾಡುತ್ತೀರಾ?" ಎಂದು ಪ್ರಶ್ನೆ ಮಾಡಿದ್ದರು. ಆ ಪ್ರಶ್ನೆಗೆ ಪ್ರತಿಕ್ರಿಯಿಸಿದ ನಿರ್ದೇಶಕ ಕೃಷ್ಣ ವಂಶಿ "ತನ್ನ ಬಳಿಕ ರಾಮ್‌ಚರಣ್‌ಗಾಗಿ ಭರ್ಜರಿ ಐಡಿಯಾ ಇದೆ. ಕ್ರೇಜಿ ಸ್ಕ್ರಿಪ್ಟ್ ಕೂಡ ರೆಡಿ ಮಾಡಿದ್ದೇನೆ. ಆದರೆ ಅದೆಲ್ಲವೂ ಈಗ ಚರಣ್ ಕೈಯಲ್ಲಿದೆ" ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಇದೇ ವೇಳೆ ಇನ್ನೊಬ್ಬರು ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು ಜೊತೆ ಮತ್ತೊಂದು ಸಿನಿಮಾ ಯಾವಾಗ ಮಾಡುತ್ತೀರಾ? ಎಂದು ಪ್ರಶ್ನೆ ಮಾಡಿದ್ದರು. ಅದಕ್ಕೆ ಉತ್ತರಿಸಿದ ನಿರ್ದೇಶಕ, ಮಹೇಶ್ ಬಾಬು ಈಗ ಇಂಟರ್‌ನ್ಯಾಷನಲ್ ಸ್ಟಾರ್ ಆಗಿದ್ದಾರೆ. ಅವರೊಂದಿಗೆ ಸಿನಿಮಾ ಮಾಡುವುದು ಕಷ್ಟ ಎಂದಿದ್ದಾರೆ. ಹಾಗೇ ಈಗಾಗಲೇ ಗ್ಲೋಬಲ್ ಸ್ಟಾರ್ ಆಗಿ ಹೊರ ಹೊಮ್ಮಿರುವ ರಾಮ್‌ಚರಣ್‌ಗಿಂತ ಇನ್ನೂ ಜಾಗತಿಕ ಮಾರುಕಟ್ಟೆಗೆ ಪ್ರವೇಶಿಸದ ಮಹೇಶ್ ಬಾಬುವನ್ನು ವಿಭಿನ್ನವಾಗಿ ನಡೆಸಿಕೊಳ್ಳುತ್ತಿರುವ ಆಶ್ಚರ್ಯ ತಂದಿದೆ ಎಂದಿದ್ದಾರೆ.
ಒಟ್ನಲ್ಲಿ ನಿರ್ದೇಶಕ ಕೃಷ್ಣ ವಂಶಿ ಗ್ಲೋಬಲ್ ಸ್ಟಾರ್ ರಾಮ್‌ಚರಣ್‌ಗೆ ಸಿನಿಮಾ ಮಾಡಬೇಕು ಅಂತ ಅಭಿಮಾನಿಗಳು ಬಯಸುತ್ತಿದ್ದಾರೆ. ಈಗಾಗಲೇ ಅವರಿಗಾಗಿ ಸಿದ್ಧಪಡಿಸಿರುವ ಸ್ಕ್ರಿಪ್ಟ್ ಅವರಿಗೆ ಹೊಂದಾಣಿಕೆ ಆಗುತ್ತೋ ಇಲ್ಲವೋ ಗೊತ್ತಿಲ್ಲ. ಒಂದು ವೇಳೆ ರಾಮ್ ಚರಣ್ ಗ್ರೀನ್ ಸಿಗ್ನಲ್ ಕೊಟ್ಟರೆ ಮತ್ತೆ ಈ ಜೋಡಿ ಸಿನಿಮಾ ಮಾಡುವ ಸಾಧ್ಯತೆಯಿದೆ. ಸದ್ಯ ರಾಮ್‌ಚರಣ್ ಸುಕುಮಾರ್ ಹಾಗೂ ಅವರ ಶಿಷ್ಯ ಬುಚ್ಚಿಬಾಬು ಜೊತೆ ಸಿನಿಮಾ ಮಾಡಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.


Click it and Unblock the Notifications











