Don't Miss!
- Sports
ಐಪಿಎಲ್ 2021: ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ ಚೆನ್ನೈ ಸೂಪರ್ ಕಿಂಗ್ಸ್
- News
ಕೊರೊನಾ ಏರಿಕೆ; ಭಾರತವನ್ನು ಕೆಂಪು ಪಟ್ಟಿಗೆ ಸೇರಿಸಲು ಬ್ರಿಟನ್ ನಿರ್ಧಾರ
- Finance
ಅಡಿಕೆ, ಕಾಫಿ, ಮೆಣಸು ಹಾಗೂ ರಬ್ಬರ್ನ ಏಪ್ರಿಲ್ 19ರ ಮಾರುಕಟ್ಟೆ ದರ ಇಲ್ಲಿದೆ
- Education
GIC Of India Officer Scale I Admit Card 2021: ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- Automobiles
ಪವರ್ಫುಲ್ ಎಂಜಿನ್ ಹೊಂದಿರುವ ಟೊಯೊಟಾ ಫಾರ್ಚೂನರ್ ಲೆಜೆಂಡರ್ ಎಸ್ಯುವಿ ಕಾರಿನ ವಿಡಿಯೋ
- Lifestyle
ಪ್ರತಿದಿನ ಒಂದು ಕಪ್ ಅನಾನಸ್ ಸೇವಿಸುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳಿವು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಪ್ರಭಾಸ್ ಅಭಿಮಾನಿಗಳ ಕ್ಷಮೆ ಕೇಳಿದ ನಿರ್ದೇಶಕ ನಾಗ್ ಅಶ್ವಿನ್
ಪ್ರಭಾಸ್ ಸಿನಿಮಾಕ್ಕಾಗಿ ಅಭಿಮಾನಿಗಳು ತುದಿ ಗಾಲಲ್ಲಿ ನಿಂತು ಕಾಯುತ್ತಿದ್ದಾರೆ. ಜುಲೈ 30 ರಂದು ರಾಧೆ-ಶ್ಯಾಂ ಸಿನಿಮಾ ಬಿಡುಗಡೆ ಆಗುತ್ತಿದ್ದು, ಮೂರು ವರ್ಷಗಳ ನಂತರ ಪ್ರಭಾಸ್ ಅಭಿನಯದ ಸಿನಿಮಾ ಒಂದು ಚಿತ್ರಮಂದಿರದಲ್ಲಿ ಬಿಡುಗಡೆ ಆಗುತ್ತಿದೆ.
ಈ ನಡುವೆ ಪ್ರಭಾಸ್ ಎರಡು ಭಾರಿ ಬಜೆಟ್ ನ ಸಿನಿಮಾಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಒಂದು ಕನ್ನಡದ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶಿಸುತ್ತಿರುವ 'ಸಲಾರ್', ಬಾಲಿವುಡ್‌ನ ಓಂ ರಾವತ್ ನಿರ್ದೇಶಿಸುತ್ತಿರುವ 'ಆದಿಪುರುಷ್'.
ಈ ನಡುವೆ ಹೆಸರಿಡದ ಮತ್ತೊಂದು ಸಿನಿಮಾಕ್ಕೆ ಪ್ರಭಾಸ್ ಎಸ್ ಅಂದಿದ್ದು, ಆ ಸಿನಿಮಾವನ್ನು ಪ್ರತಿಭಾವಂತ ನಿರ್ದೇಶಕ ನಾಗ್ ಅಶ್ವಿನ್ ನಿರ್ದೇಶಿಸಲಿದ್ದಾರೆ. ಆದರೆ ನಾಗ್ ಅಶ್ವಿನ್ ಇತ್ತೀಚೆಗೆ ಟ್ವಿಟ್ಟರ್‌ನಲ್ಲಿ ಪ್ರಭಾಸ್ ಅಭಿಮಾನಿಗಳ ಕ್ಷಮೆ ಕೇಳಿದ್ದಾರೆ. ಅದಕ್ಕೆ ಕಾರಣವೂ ಇದೆ.

ಫೆಬ್ರವರಿ 26 ಕ್ಕೆ ಅಪ್‌ಡೇಟ್ ನೀಡುವುದಾಗಿ ಹೇಳಿದ್ದರು
ನಾಗ್ ಅಶ್ವಿನ್ ನಿರ್ದೇಶಿಸುತ್ತಿರುವ ಸಿನಿಮಾದಲ್ಲಿ ಪ್ರಭಾಸ್, ದೀಪಿಕಾ ಪಡುಕೋಣೆ, ಅಮಿತಾಬ್ ಬಚ್ಚನ್ ನಟಿಸಲಿದ್ದಾರೆ. ಈ ಸಿನಿಮಾದ ಬಗ್ಗೆ ಫೆಬ್ರವರಿ 26 ಕ್ಕೆ ಅಪ್‌ಡೇಟ್ ನೀಡುವುದಾಗಿ ನಾಗ್ ಅಶ್ವಿನ್ ಹೇಳಿದ್ದರು. ಅದಕ್ಕಾಗಿ ಪ್ರಭಾಸ್ ಅಭಿಮಾನಿಗಳು ಕಾತರರಾಗಿದ್ದರು.

ದಯವಿಟ್ಟು ನನ್ನನ್ನು ಕ್ಷಮಿಸಿಬಿಡಿ: ನಾಗ್ ಅಶ್ವಿನ್
ಆದರೆ ನಾಗ್ ಅಶ್ವಿನ್ ಅನ್ನು ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಅಭಿಮಾನಿಗಳು ಪ್ರಶ್ನಿಸಿದಾಗ, ಸಿನಿಮಾ ಬಗ್ಗೆ ಫೆಬ್ರವರಿ 26ಕ್ಕೆ ಯಾವುದೇ ಅಪ್‌ಡೇಟ್ ನೀಡಲಾಗುತ್ತಿಲ್ಲ ಎಂದಿದ್ದಾರೆ. 'ಫೆಬ್ರವರಿ 26 ಕ್ಕೆ ಯಾವುದೇ ಅಪ್‌ಡೇಟ್ ನೀಡುವುದಿಲ್ಲ, ದಯವಿಟ್ಟು ನನ್ನನ್ನು ಕ್ಷಮಿಸಿ, ಅಪ್‌ಡೇಟ್ ನೀಡಲು ಇದು ಸೂಕ್ತ ಸಮಯವಲ್ಲ' ಎಂದು ನಾಗ್ ಅಶ್ವಿನ್ ಟ್ವೀಟ್ ಮಾಡಿದ್ದಾರೆ.

ಮಾಯಾವಿಲೋಕದ ಕತೆಯುಳ್ಳ ಸಿನಿಮಾ
ನಾಗ್ ಅಶ್ವಿನ್, ಪ್ರಭಾಸ್‌ಗಾಗಿ ನಿರ್ದೇಶಿಸುತ್ತಿರುವ ಸಿನಿಮಾ ಮಾಯಾಲೋಕದ ಕತೆಯುಳ್ಳ ಸಿನಿಮಾ ಆಗಿರಲಿದೆಯಂತೆ. ಸಿನಿಮಾದಲ್ಲಿ ಪ್ರಭಾಸ್ ಸಮುದ್ರ ರಾಜನ ಪಾತ್ರ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಈ ಸಿನಿಮಾದ ಕತೆಯನ್ನು ಖ್ಯಾತ ನಿರ್ದೇಶಕ ಸಿಂಗಿಂತಂ ಶ್ರೀನಿವಾಸ್ ಜೊತೆ ಸೇರಿ ಬರೆದಿದ್ದಾರೆ ನಾಗ್ ಅಶ್ವಿನ್.

'ಸಲಾರ್' ಸಿನಿಮಾದ ಮೊದಲ ಹಂತದ ಚಿತ್ರೀಕರಣ ಮುಗಿದಿದೆ
ಇನ್ನು ಪ್ರಭಾಸ್ ನಟನೆಯ 'ಸಲಾರ್' ಸಿನಿಮಾದ ಮೊದಲ ಹಂತದ ಚಿತ್ರೀಕರಣ ಈಗಾಗಲೇ ಮುಗಿದಿದೆ. ಈ ಸಿನಿಮಾದಲ್ಲಿ ಶ್ರುತಿ ಹಾಸನ್ ನಾಯಕಿಯಾಗಿದ್ದಾರೆ. ಇನ್ನು 'ಆದಿಪುರುಷ್' ಸಿನಿಮಾ ರಾಮಾಯಣದ ಕತೆ ಹೊಂದಿದ್ದು, ರಾವಣನಾಗಿ ಸೈಫ್ ಅಲಿ ಖಾನ್ ನಟಿಸುತ್ತಿದ್ದಾರೆ. ಭಾರತದ ಈವರೆಗೆ ಅತಿ ಹೆಚ್ಚು ಬಜೆಟ್ ನ ಸಿನಿಮಾ ಇದಾಗಿರಲಿದೆ.