'ಕಲ್ಕಿ 2098 AD' ಸ್ಟೋರಿ ಲೀಕ್; ಫಸ್ಟ್ ರಿವ್ಯೂ ಕೂಡ ಬಂದುಬಿಡ್ತು!
ಪ್ರಭಾಸ್ ನಟನೆಯ 'ಕಲ್ಕಿ 2098 AD' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಹಾಲಿವುಡ್ ರೇಂಜ್‌ನಲ್ಲಿ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗಿದೆ. ಮುಂದಿನ ವಾರವೇ ಕಲ್ಕಿ ಆರ್ಭಟ ಶುರುವಾಗಿದೆ. ನಾಗ್ ಅಶ್ವಿನ್ ಈ ಸೈನ್ಸ್ ಫಿಕ್ಷನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.
ವೈಜಯಂತಿ ಮೂವೀಸ್ ಬ್ಯಾನರ್‌ನಲ್ಲಿ ಬಹಳ ಅದ್ಧೂರಿಯಾಗಿ 'ಕಲ್ಕಿ 2098 AD' ಸಿನಿಮಾ ನಿರ್ಮಾಣವಾಗಿದೆ. 500 ಕೋಟಿ ರೂ.ಗೂ ಅಧಿಕ ಹಣ ಸುರಿದಿದ್ದಾರೆ ಎನ್ನಲಾಗ್ತಿದೆ. ಬಿಡುಗಡೆಗೆ ಒಂದು ವಾರ ಬಾಕಿ ಇದ್ದರೂ ದೊಡ್ಡಮಟ್ಟದಲ್ಲಿ ಸಿನಿಮಾ ಬಝ್ ಕ್ರಿಯೇಟ್ ಮಾಡಿಲ್ಲ. ಆದರೆ ಸಿನಿಮಾ ರಿಲೀಸ್ ಬಳಿಕ ಗ್ಯಾರೆಂಟಿ ಸದ್ದು ಮಾಡುತ್ತದೆ, ಪ್ರೇಕ್ಷಕರನ್ನು ಸೆಳೆಯುತ್ತದೆ ಎನ್ನುವ ನಿರೀಕ್ಷೆಯಿದೆ.

ಪ್ರಭಾಸ್ ಜೊತೆಗೆ ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ, ಕಮಲ್ ಹಾಸನ್, ದಿಶಾ ಪಟಾನಿ ನಟಿಸಿದ್ದಾರೆ. ಸದ್ಯ ಕಲ್ಕಿ ಸಿನಿಮಾ ಕಥೆಯೇನು? ಎನ್ನುವ ಬಗ್ಗೆ ನಿರ್ದೇಶನ ನಾಗ್ ಅಶ್ವಿನ್ ಮಾತನಾಡಿದ್ದಾರೆ. 5 ವರ್ಷ ವ್ಯಯಿಸಿ ಕಥೆ ಬರೆದುಕೊಂಡೆ. ಬಳಿಕ ಸಿನಿಮಾ ಶುರುವಾಯಿತು. ಈ ಬಿಡುಗಡೆ ಹಂತಕ್ಕೆ ಬಂದು ನಿಂತಿದೆ ಎಂದಿದ್ದಾರೆ.
"ಬಾಲ್ಯದಿಂದಲೂ ನಾನು ಪೌರಾಣಿಕ ಚಿತ್ರಗಳನ್ನು ಹೆಚ್ಚು ಇಷ್ಟಪಡುತ್ತೇನೆ. 'ಪಾತಾಳ ಭೈರವಿ', 'ಭೈರವ ದ್ವೀಪ', 'ಆದಿತ್ಯ 369' ಹೀಗೆ ಪ್ರತಿಯೊಂದು ಸಿನಿಮಾವೂ ವಿಭಿನ್ನ. ಹಾಲಿವುಡ್‌ನ ಸ್ಟಾರ್ ವಾರ್ಸ್ ಕೂಡ ತುಂಬಾ ಚೆನ್ನಾಗಿದೆ. ಆದರೆ ಇವು ನಮ್ಮ ಕಥೆಗಳು ಅಲ್ಲವೇ? ಪಾಶ್ಚಿಮಾತ್ಯ ದೇಶಗಳ ಹಿನ್ನೆಲೆಯಲ್ಲಿ ಯಾವಾಗಲೂ ಕಥೆ ನಡೆಯಬೇಕೆ? ಎನಿಸುತ್ತಿತ್ತು"

"ನಮ್ಮ ಪುರಾಣಗಳಲ್ಲಿ ನಾವು ಓದುವ ಮಹಾನ್ ಯುದ್ಧವೆಂದರೆ ಮಹಾಭಾರತ. ದೊಡ್ಡ ಸಂಖ್ಯೆಯಲ್ಲಿ ದೊಡ್ಡ ಪಾತ್ರಗಳು ಇರುತ್ತದೆ. ಅದು ಕೃಷ್ಣನ ಅವತಾರದೊಂದಿಗೆ ಕೊನೆಗೊಳ್ಳುತ್ತದೆ. ಅಲ್ಲಿಂದ ನಾವು ಕಲಿಯುಗವನ್ನು ಪ್ರವೇಶಿಸಿದಾಗ ಈ ಕಥೆ ಹೇಗೆ ಹೋಗುತ್ತದೆ ಎಂಬ ಸೃಜನಶೀಲ ಕಲ್ಪನೆಯೊಂದಿಗೆ ನಾನು ಈ ಕಥೆಯನ್ನು ಬರೆದಿದ್ದೇನೆ. ದಶಾವತಾರದಲ್ಲಿ ಕೃಷ್ಣನ ಮುಂದಿನ ಅವತಾರ ಕಲ್ಕಿ"
"ಈ ಕಲಿಯುಗದಲ್ಲಿ ಇದು ಹೇಗೆ ಸಂಭವಿಸುತ್ತದೆ? ಇದು ಹೇಗೆ ಕಲ್ಕಿ ಅವತಾರ ಮುಂದುವರೆಯಬಹುದು ಎಂಬುದು ಇಲ್ಲಿದೆ. ಇದು ನಾವು ಓದಿದ ಎಲ್ಲಾ ಪುರಾಣಗಳಿಗೂ ಅಂತ್ಯ ಬಿಂದುವಿದ್ದಂತೆ. ಕಲಿಯ ಪಾತ್ರವು ಪ್ರತಿಯೊಂದು ಯುಗದಲ್ಲೂ ಇರುತ್ತದೆ. ಒಂದು ಯುಗದಲ್ಲಿ ರಾವಣನಂತೆ, ಇನ್ನೊಂದು ಯುಗದಲ್ಲಿ ದುರ್ಯೋಧನನಂತೆ, ಒಂದೊಂದು ಜಾಗದಲ್ಲಿ ಒಂದೊಂದು ರೂಪ ತಳೆದು ಕಲಿಯುಗಕ್ಕೆ ಬಂದಾಗ ಅದೇ ಕೊನೆಯ ರೂಪ ಎಂದು ಭಾವಿಸಿದರೆ, ಅವರ ಜೊತೆಗಿನ ಜಗಳ ಹೇಗಿರುತ್ತದೆ ಎಂಬ ಕಲ್ಪನೆಯೊಂದಿಗೆ ಈ ಕಥೆ ಬರೆಯಲು ಐದು ವರ್ಷ ಬೇಕಾಯಿತು" ಎಂದು ನಿರ್ದೇಶಕರು ವಿವರಿಸಿದ್ದಾರೆ.
ಈಗಾಗಲೇ ಸೆನ್ಸಾರ್ ಮುಗಿಸಿ 'ಕಲ್ಕಿ 2098 AD' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಐಮ್ಯಾಕ್ಸ್ ವರ್ಷನ್‌ನಲ್ಲಿ ಕೂಡ ಈ ದೃಶ್ಯಕಾವ್ಯ ತೆರೆಗೆ ಬರಲಿದೆ. ಇನ್ನು ಸೆನ್ಸಾರ್ ಮಂಡಳಿಯಲ್ಲಿ ಸಿನಿಮಾ ನೋಡಿದವರು ಮೆಚ್ಚಿಕೊಂಡಿದ್ದಾರೆ. ಸಿನಿಮಾ ಮುಗಿದ ಬಳಿಕ ಎಲ್ಲರೂ ಎದ್ದು ನಿಂತು ಚಪ್ಪಾಳೆ ತಟ್ಟಿ ತಂಡವನ್ನು ಅಭಿನಂದಿಸಿದ್ದಾರೆ ಎಂದು ವರದಿಯಾಗಿದೆ. ತೆಲುಗು, ಕನ್ನಡ ಸೇರಿದಂತೆ 5 ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರಲಿದೆ.
3 ಗಂಟೆಗಳ ದೃಶ್ಯಕಾವ್ಯ 'ಕಲ್ಕಿ 2098 AD' ಎಂದು ವರ್ಣಿಸಲಾಗುತ್ತಿದೆ. ಪ್ರಭಾಸ್, ಕಮಲ್, ಅಮಿತಾಬ್ ಎಲ್ಲರೂ ಚೆನ್ನಾಗಿ ನಟಿಸಿದ್ದಾರೆ. ಹಿನ್ನೆಲೆ ಸಂಗೀತ ಮತ್ತಷ್ಟು ಚೆನ್ನಾಗಿ ಇರಬೇಕಿತ್ತು ಎಂದು ಸಿನಿಮಾ ನೋಡಿದವರು ಹೇಳಿದ್ದಾರೆ. ಇನ್ನು ಚಿತ್ರದ ಕಾಲಾವಧಿ 2 ಗಂಟೆ 50 ನಿಮಿಷಕ್ಕೂ ಹೆಚ್ಚು ಎನ್ನಲಾಗ್ತಿದೆ. ಇನ್ನು ಕೆಲ ನಿರ್ದೇಶಕರು, ನಟರು ಚಿತ್ರದಲ್ಲಿ ಗೆಸ್ಟ್ ಅಪಿಯರೆನ್ಸ್ ಮಾಡಿದ್ದು ಅದು ಸಿನಿರಸಿಕರಿಗೆ ಕಿಕ್ ಕೊಡುತ್ತದೆ ಎಂದು ಹೇಳಲಾಗುತ್ತಿದೆ.


Click it and Unblock the Notifications