For Quick Alerts
  ALLOW NOTIFICATIONS  
  For Daily Alerts

  'ಆದಿಪುರುಷ' ಸಿನಿಮಾಗೆ ಪ್ರಭಾಸ್ ಆಯ್ಕೆಯ ಹಿಂದಿನ ರಹಸ್ಯ ಬಹಿರಂಗ ಪಡಿಸಿದ ನಿರ್ದೇಶಕ

  |

  ಟಾಲಿವುಡ್ ಸ್ಟಾರ್ ನಟ ಪ್ರಭಾಸ್, ದಕ್ಷಿಣ ಭಾರತೀಯ ಸಿನಿಮಾರಂಗದವರಿಗೆ ಮಾತ್ರವಲ್ಲದೆ ಬಾಲಿವುಡ್ ನವರಿಗೂ ಅಚ್ಚುಮೆಚ್ಚು. 'ಬಾಹುಬಲಿ' ಸಿನಿಮಾ ಬಳಿಕ ಪ್ಯಾನ್ ಇಂಡಿಯಾ ನಾಯಕನಾಗಿ ಮಿಂಚುತ್ತಿರುವ ಪ್ರಭಾಸ್ ಗೆ ಬೇಡಿಕೆ ಹೆಚ್ಚಾಗಿದೆ. ತೆಲುಗು ಮಾತ್ರವಲ್ಲದೆ ಹಿಂದಿಯಲ್ಲಿಯೂ ಪ್ರಭಾಸ್ ಗೆ ಸಿನಿಮಾ ಮಾಡಲು ನಿರ್ಮಾಪಕರು, ನಿರ್ದೇಶಕರು ತುದಿಗಾಲಿನಲ್ಲಿ ನಿಂತಿದ್ದಾರೆ.

  ಪ್ರಭಾಸ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತೆಲುಗು ಸಿನಿಮಾದ ಜೊತೆಗೆ ಪ್ರಭಾಸ್ ಹಿಂದಿಯ ಓಂ ರಾವತ್ ನಿರ್ದೇಶನದ ಆದಿಪುರುಷ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಭಾರಿ ನಿರೀಕ್ಷೆ ಮೂಡಿಸಿರುವ ಈ ಚಿತ್ರದ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಈ ನಡುವೆ ನಿರ್ದೇಶಕ ಓಂ ರಾವತ್ ಪ್ರಭಾಸ್ ರನ್ನ ನಾಯಕನನ್ನಾಗಿ ಮಾಡಿದ ರಹಸ್ಯವನ್ನು ಬಹಿರಂಗ ಪಡಿಸಿದ್ದಾರೆ. ಮುಂದೆ ಓದಿ...

  'ಬಾಹುಬಲಿ' ಪ್ರಭಾಸ್ ಗೆ ವಿಲನ್ ಆದ ಬಾಲಿವುಡ್ ನಟ ಸೈಫ್ ಅಲಿ ಖಾನ್

  ರಾಮನ ಪಾತ್ರದಲ್ಲಿ ಪ್ರಭಾಸ್ ಅಭಿನಯ

  ರಾಮನ ಪಾತ್ರದಲ್ಲಿ ಪ್ರಭಾಸ್ ಅಭಿನಯ

  ದಕ್ಷಿಣ ಭಾರತದ ಜೊತೆಗೆ ಬಾಲಿವುಡ್ ನಲ್ಲಿಯೂ ಬಹು ಬೇಡಿಕೆ ಇರುವ ನಟ ಪ್ರಭಾಸ್. ಆದಿಪುರುಷ ಸಿನಿಮಾದಲ್ಲಿ ರಾಮನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬಾಹುಬಲಿ ಮೂಲಕ ಕಮಾಲ್ ಮಾಡಿದ್ದ ಪ್ರಭಾಸ್ ರನ್ನು ರಾಮನ ಅವತಾರದಲ್ಲಿ ನೋಡಲು ಅಭಿಮಾನಿಗಳು ಕಣ್ಣಿಗೆ ಎಣ್ಣೆ ಬಿಟ್ಕೊಂಡು ಕಾಯುತ್ತಿದ್ದಾರೆ.

  'ಆದಿಪುರುಷ' ಚಿತ್ರದಲ್ಲಿ ಸೀತೆ ಯಾರು? ಕೀರ್ತಿ, ಕಿಯಾರಾ ಬಳಿಕ ಮತ್ತೊಂದು ಹೆಸರು

  ಪ್ರಭಾಸ್ ಆಯ್ಕೆಯ ಹಿಂದಿನ ರಹಸ್ಯ ಬಹಿರಂಗ

  ಪ್ರಭಾಸ್ ಆಯ್ಕೆಯ ಹಿಂದಿನ ರಹಸ್ಯ ಬಹಿರಂಗ

  ಪ್ರಭಾಸ್ ಅವರನ್ನು ಆಯ್ಕೆ ಮಾಡಿದ ಬಗ್ಗೆ ಮಾತನಾಡಿದ ನಿರ್ದೇಶಕ ಓಂ ರಾವತ್, ಪ್ರಭಾಸ್ ಅವರ ತೀಕ್ಷ್ಣವಾದ ಕಣ್ಣು ನೋಡಿ 'ಆದಿಪುರುಷ' ಚಿತ್ರಕ್ಕೆ ಆಯ್ಕೆ ಮಾಡಿದ್ದಾರಂತೆ. ಪ್ರಭಾಸ್ ಅವರ ಬಾಡಿ ಲಾಂಗ್ವೇಜ್ ಈ ಪಾತ್ರಕ್ಕೆ ಹೊಂದಿಕೆಯಾಗುತ್ತೆ ಎನ್ನುವ ಕಾರಣಕ್ಕೆ ಪ್ರಭಾಸ್ ಅವರೇ ಬೇಕು ಅಂತ ಆಯ್ಕೆ ಮಾಡಿರುವುದಾಗಿ ಹೇಳಿದ್ದಾರೆ. ಇನ್ನೂ ಪಾತ್ರ ಒಪ್ಪಿಕೊಂಡ ಪ್ರಭಾಸ್ ಗೆ ನಿರ್ದೇಶಕ ಓಂ ರಾವತ್ ಧನ್ಯವಾದ ತಿಳಿಸಿದ್ದಾರೆ.

  'ಲಂಕೇಶ್' ಪಾತ್ರದಲ್ಲಿ ಸೈಫ್ ಅಲಿ ಖಾನ್

  'ಲಂಕೇಶ್' ಪಾತ್ರದಲ್ಲಿ ಸೈಫ್ ಅಲಿ ಖಾನ್

  ನಟ ಸೈಫ್ ಖಾನ್ 'ಆದಿಪುರುಷ' ಸಿನಿಮಾದಲ್ಲಿ ವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸೈಫ್ ಅಲಿ ಖಾನ್, ಲಂಕೇಶ್ (ರಾವಣ) ಪಾತ್ರಕ್ಕೆ ಬಣ್ಣಹಚ್ಚುತ್ತಿದ್ದಾರೆ. ಈ ವಿಚಾರವನ್ನು ಸಿನಿಮಾ ತಂಡ ಬಹಿರಂಗ ಪಡಿಸುವ ಜೊತೆಗೆ "7000 ವರ್ಷಗಳ ಹಿಂದೆ ವಿಶ್ವದ ಅತ್ಯಂತ ಬುದ್ಧಿವಂತ ರಾಕ್ಷಸ ಅಸ್ತಿತ್ವದಲ್ಲಿದ್ದ" ಎಂದು ಹೇಳಿದ್ದಾರೆ.

  1650 ಎಕರೆ ಅರಣ್ಯ ದತ್ತುಪಡೆದ ಬಾಹುಬಲಿ ಪ್ರಭಾಸ್!

  ಪತ್ನಿ Revathi ಕಾಲೆಳೆದ Nikhil Kumaraswamy | Oneindia Kannada
  ಪ್ರಭಾಸ್ ಗೆ ಯಾರಾಗ್ತಾರೆ ನಾಯಕಿ?

  ಪ್ರಭಾಸ್ ಗೆ ಯಾರಾಗ್ತಾರೆ ನಾಯಕಿ?

  ಈ ಸಿನಿಮಾ ಹಿಂದೂ ಮಹಾಕಾವ್ಯ ರಾಮಾಯಣವನ್ನು ಆಧರಿಸಿದ್ದು ಎಂದು ಈಗಾಗಲೇ ಗೊತ್ತಾಗಿದೆ. ಪ್ರಭಾಸ್ ಇಲ್ಲಿ ರಾಮನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಂದ್ಮೇಲೆ ಸೀತೆ ಯಾರಾಗ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಈಗಾಗಲೇ ಸಾಕಷ್ಟು ನಟಿಯರ ಹೆಸರುಗಳು ಕೇಳಿ ಬರುತ್ತಿದೆ. ಆದರೆ ಸಿನಿಮಾ ತಂಡ ಇನ್ನೂ ಅಧಿಕೃತವಾಗಿ ಯಾವ ಹೆಸರನ್ನು ಬಹಿರಂಗಪಡಿಸಿಲ್ಲ. ಹಾಗಾಗಿ ಸೀತೆ ಯಾರಾಗಲಿದ್ದಾರೆ ಎನ್ನುವ ಕಾತರ ಅಭಿಮಾನಿಗಳಲ್ಲಿದೆ.

  English summary
  Director Om Raut revealed why he selected Prabhas for Adipurush movie. He says his eyes suits the character

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X