ಇಬ್ಬರು ಸ್ನೇಹಿತರು ಶತ್ರುಗಳಾಗುವ ಕತೆ 'ಸಲಾರ್' ಎಂದ ಪ್ರಶಾಂತ್ ನೀಲ್

ಪ್ರಭಾಸ್ ನಟನೆಯ 'ಸಲಾರ್' ಸಿನಿಮಾ ಬಿಡುಗಡೆಗೆ ಇನ್ನೊಂದು ತಿಂಗಳು ಮಾತ್ರ ಬಾಕಿಯಿದೆ. ಈ ವಾರವೇ ಸಿನಿಮಾ ಟ್ರೈಲರ್ ಬರಲಿದೆ. ಹೊಂಬಾಳೆ ಸಂಸ್ಥೆ ಬಹುಕೋಟಿ ವೆಚ್ಚದಲ್ಲಿ ಸರಣಿ ಸಿನಿಮಾ ನಿರ್ಮಾಣ ಮಾಡುತ್ತಿದೆ. ಘಟಾನುಘಟಿ ಕಲಾವಿದರು, ತಂತ್ರಜ್ಞರ ತಂಡ ಕಟ್ಟಿಕೊಂಡು ಪ್ರಶಾಂತ್ ನೀಲ್ ಈ ಆಕ್ಷನ್ ಎಂಟರ್‌ಟೈನರ್ ಕತೆ ಹೇಳಿದ್ದಾರೆ.

ಬಹಳ ಹಿಂದೆ ಶುರುವಾಗಿದ್ದ 'ಸಲಾರ್' ಸಿನಿಮಾ ಅಂತೂ ಇಂತೂ ಡಿಸೆಂಬರ್ 22ಕ್ಕೆ ತೆರೆಗಪ್ಪಳಿಸಲಿದೆ. ಡಿಸೆಂಬರ್ 1ಕ್ಕೆ ಜಬರ್ದಸ್ತ್ ಟ್ರೈಲರ್ ರಿಲೀಸ್ ಪ್ಲ್ಯಾನ್ ನಡೀತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ 'ಸಲಾರ್' ಆರ್ಭಟ ನಡೆಯಲಿದೆ. ಸಿನಿಮಾ ಕತೆ ಬಗ್ಗೆ ಯಾವುದೇ ಸುಳಿವು ಬಿಟ್ಟುಕೊಡದೇ ಚಿತ್ರತಂಡ ಜಾಣ್ಮೆ ಮೆರೆದಿದೆ. ಆದರೆ ಇದು ಕನ್ನಡದ 'ಉಗ್ರಂ' ರೀಮೆಕ್ ಅನ್ನೋ ಮಾತುಗಳು ಕೇಳಿಬರುತ್ತಲೇಯಿದೆ.

Prashanth-neel-on- prabhas-salaar-story

'ಉಗ್ರಂ' ಕತೆಯನ್ನೇ ಕೊಂಚ ಬದಲಿಸಿ ಬಹಳ ದೊಡ್ಡದಾಗಿ 2 ಭಾಗಗಳಾಗಿ ಸಿನಿಮಾ ರಿಲೀಸ್ ಮಾಡಲಾಗುತ್ತಿದೆ. ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಪ್ರಭಾಸ್ ಆರ್ಭಟ ನೋಡಲು ಸಿನಿರಸಿಕರು ಕಾಯುತ್ತಿದ್ದಾರೆ. ಇನ್ನು ಚಿತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್ ಬಹಳ ಮುಖ್ಯವಾದ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಪ್ರಭಾಸ್ ಗ್ಯಾಂಗ್‌ಸ್ಟರ್ 'ಸಲಾರ್' ಆಗಿ ಅಬ್ಬರಿಸಿದ್ರೆ, ರಾಜಮನ್ನಾರ್ ಆಗಿ ಮತ್ತೊಂದು ಪಾತ್ರದಲ್ಲಿ ಪೃಥ್ವಿರಾಜ್ ಕಾಣಿಸಿಕೊಂಡಿದ್ದಾರೆ.

'KGF' ಸರಣಿಗೆ ಕೆಲಸ ಮಾಡಿದ ಬಹುತೇಕ ತಂಡ ಈ ಚಿತ್ರಕ್ಕೂ ಕೆಲಸ ಮಾಡಿದೆ. ಇಷ್ಟುದಿನ 'ಸಲಾರ್' ಕತೆ ಬಗ್ಗೆ ಮೌನವಾಗಿದ್ದ ಪ್ರಶಾಂತ್ ನೀಲ್ ಕೊನೆಗೂ ಮಾತನಾಡಿದ್ದಾರೆ. ಬಾಲಿವುಡ್ ಪಿಂಕ್‌ವಿಲ್ಲಾ ಸಂದರ್ಶನದಲ್ಲಿ ಸಿನಿಮಾ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲೂ ಚಿತ್ರದ ಕತೆಯ ಎಳೆಯ ಬಗ್ಗೆ ಸುಳಿವು ನೀಡಿದ್ದಾರೆ. 'ಸಲಾರ್' ಇಬ್ಬರು ಸ್ನೇಹಿತರ ಸಿನಿಮಾ ಎಂದು ಮಾಹಿತಿ ನೀಡಿದ್ದಾರೆ.

"ಸಲಾರ್ ಇಬ್ಬರು ಸ್ನೇಹಿತರು ದೊಡ್ಡ ಶತ್ರುಗಳಾಗಿ ಬದಲಾಗುವ ಕತೆ. ಸ್ನೇಹವೇ ಚಿತ್ರದ ಮುಖ್ಯವಾದ ಅಂಶ. ಇಬ್ಬರು ಆತ್ಮೀಯ ಸ್ನೇಹಿತರ ಜರ್ನಿಯನ್ನು ನಾವು ಎರಡು ಭಾಗಗಳಲ್ಲಿ ಹೇಳುತ್ತೇವೆ. ನಾವು ಸೃಷ್ಟಿಸಿರುವ 'ಸಲಾರ್' ಪ್ರಪಂಚದ ಝಲಕ್ ಅನ್ನು ಪ್ರೇಕ್ಷಕರಿಗೆ ಟ್ರೈಲರ್‌ನಲ್ಲಿ ತೋರಿಸಲಿದ್ದೇವೆ" ಎಂದಿದ್ದಾರೆ.

Prashanth-neel-on- prabhas-salaar-story

ನಾನು ಬಾಂಧವ್ಯಗಳ ಬಗ್ಗೆ ಕತೆ ಬರೆಯುತ್ತೇನೆ. ಸ್ನೇಹಿತ, ತಾಯಿ, ತಂದೆ ಹೀಗೆ ಬಾಂಧವ್ಯ ಕತೆ ನನ್ನ ಸಿನಿಮಾದಲ್ಲಿ ಇರುತ್ತದೆ. ಮೊದಲಿಗೆ ಬಾಂಧವ್ಯ ಬರೆದರೂ ಬಳಿಕ ಆಕ್ಷನ್ ಅದಕ್ಕೆ ಸೇರಿಕೊಳ್ಳುತ್ತದೆ. KGF ಸರಣಿ ಹಾಗೂ ಸಲಾರ್ ಎರಡೂ ಬೇರೆ ಬೇರೆ ಸಿನಿಮಾಗಳು. ಬೇರೆ ಬೇರೆ ಎಮೋಷನ್‌ನ ಬೇರೆ ಬೇರೆ ರೀತಿ ಹೇಳಲಾಗಿದೆ. ಪ್ರೇಕ್ಷಕರ ಮತ್ತೊಂದು KGF ನಿರೀಕ್ಷೆ ಮಾಡಬಾರದು. ಇದು ಬೇರೆಯದ್ದೇ ಪ್ರಪಂಚ. ಅದರದ್ದೇ ಆದ ಪಾತ್ರಗಳು, ಎಮೋಷನ್ ಈ ಚಿತ್ರದಲ್ಲಿ ಇರಲಿದೆ."

"ನಿಜ ಹೇಳಬೇಕು ಅಂದ್ರೆ ಕೆಜಿಎಫ್ ಎರಡು ಭಾಗವಾಗಿರಲಿಲ್ಲ, ಆದರೆ 'ಸಲಾರ್' ಭಾಗ. ಕಥೆಯು ತುಂಬಾ ದೊಡ್ಡದಾಗಿದೆ, ಈ ಕತೆಯನ್ನು 6 ಗಂಟೆಗಳ ಸಿನಿಮಾ ಮಾಡಬಹುದು. ಎರಡನೇ ಭಾಗಕ್ಕೆ ಸಾಕಷ್ಟು ವಿಷಯವಿದೆ ಮತ್ತು ಸಲಾರ್ ಭಾಗ-1 ಒಂದನ್ನು ವೀಕ್ಷಿಸಿದಾಗ ಪ್ರೇಕ್ಷಕರು ಸಹ ಅದೇ ರೀತಿ ಭಾವಿಸುತ್ತಾರೆ. ಇದೊಂದು ಶುದ್ಧ ಕಥೆ ಆಧಾರಿತ ಚಿತ್ರ. ವಾಸ್ತವವಾಗಿ, ನಾನು ಕೆಜಿಎಫ್‌ನಲ್ಲಿ ಕೆಲಸ ಮಾಡಲು ಪ್ರಾರಂಭಿಸುವ ಮೊದಲೇ ನಾನು ಸಲಾರ್ ಬರೆದಿದ್ದೆ" ಎಂದು ಪ್ರಶಾಂತ್ ನೀಲ್ ವಿವರಿಸಿದ್ದಾರೆ.

ಪ್ರಶಾಂತ್ ನೀಲ್ ಇಷ್ಟೆಲ್ಲಾ ಹೇಳಿದರೂ 'ಸಲಾರ್' ರಿಲೀಸ್ ಆಗುವರೆಗೂ ಇದು 'ಉಗ್ರಂ' ರೀಮೆಕ್ ಹೌದೋ, ಅಲ್ಲವೋ ಎನ್ನುವ ಚರ್ಚೆ ನಿಲ್ಲುವುದಿಲ್ಲ. ಕೊನೆ ಪಕ್ಷ ಟ್ರೈಲರ್ ಆ ಅನುಮಾನ ಸುಳ್ಳಾಗಿಸುತ್ತಾ ಕಾದು ನೋಡಬೇಕಿದೆ.

More from Filmibeat

English summary
Prashanth neel opens up about Salaar story;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X