ಅಖಂಡ ಭಾಗ 2ಕ್ಕೆ ಸಜ್ಜಾದ ನಂದಮೂರಿ ಬಾಲಕೃಷ್ಣ!
ನಟ ನಂದಮೂರಿ ಬಾಲಕೃಷ್ಣ ಅಭಿನಯದ ಅಖಂಡ ಸಿನಿಮಾ ಸೂಪರ್ ಸಕ್ಸಸ್ ಕಂಡಿದೆ. ಬಾಲಕೃಷ್ಣ ಅಭಿಮಾನಿಗಳು ಮತ್ತು ಚಿತ್ರರಂಗಕ್ಕೆ ಅಖಂಡ ಸಕ್ಸಸ್ ಸಂತಸ ತಂದಿದೆ. ಕೊರೊನಾ ಬಳಿಕ ಸೂಪರ್ ಹಿಟ್ ಲಿಸ್ಟ್ ಸೇರಿದ ಮೊದಲ ಸಿನಿಮಾ ಇದು. 'ಅಖಂಡ' ರಿಲೀಸ್ ಆಗಿ ಧೂಳೆಬ್ಬಿಸಿದೆ. ವಿಶ್ವದಾದ್ಯಂತ ಬಾಲಯ್ಯನ ಅಭಿಮಾನಿಗಳು 'ಅಖಂಡ' ಚಿತ್ರದ ರಿಲೀಸನ್ನು ಹಬ್ಬದ ಹಾಗೆ ಆಚರಿಸಿದ್ದಾರೆ.
'ಅಖಂಡ' ಒಟಿಟಯಲ್ಲಿ ರಿಲೀಸ್ ಆಗಿದೆ. ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಒಟಿಟಿ ಪ್ಲಾಟ್ ಫಾರ್ಮ್‌ನಲ್ಲಿ ರಿಲೀಸ್ ಆಗಿದೆ. ಚಿತ್ರ ರಿಲೀಸ್ ಆದ, 24 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಸಾರ್ವಕಾಲಿಕ ದಾಖಲೆಯನ್ನು ಸೃಷ್ಟಿಸಿದೆ. ಚಿತ್ರ ಒಟಿಟಿಗೆ ಬರುತ್ತಲೇ, ಸಿನಿಮಾ ನೋಡುಗರ ಸಂಖ್ಯೆ ಗಗನಕ್ಕೇರಿದೆ. ಇಲ್ಲಿ ತನಕ ಯಾವ ತೆಲುಗು ಸಿನಿಮಾ ಮಾಡದ ರೆಕಾರ್ಡ್ ಮಾಡಿದೆ ಅಖಂಡ.
ವಿಶೇಷ ಅಂದರೆ ಅಖಂಡ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆದರೂ ಕೂಡ, ಚಿತ್ರ ಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಒಟಿಟಿಯಲ್ಲಿ ಚಿತ್ರ ರಿಲೀಸ್ ಆಗಿ ವಾರಗಳು ಕಳೆಯುತ್ತಿದ್ದರೂ ಕೂಡ, ಚಿತ್ರ ಮಂದಿರಗಳಲ್ಲಿ ಬೇಡಿಕೆ ಮಾತ್ರ ಕಡಿಮೆ ಆಗಿಲ್ಲ. ಹಾಗಾಗಿ ಚಿತ್ರ ತಂಡ ಈ ಮತ್ತೊಂದು ಹೊಸ ಯೋಜನೆಗೆ ಕೈ ಹಾಕಿದೆ.

ನಿರ್ದೇಶಕ ಬೋಯಪಾಟಿ ಶ್ರೀನು ಈಗ ಅಖಂಡ ಸೀಕ್ವೆಲ್ ಮಾಡುವ ಬಗ್ಗೆ ಯೋಚಿಸುತ್ತಿದ್ದಾರೆ, ಎಂಬ ಸುದ್ದಿ ಎಲ್ಲೆಡೆ ಹಬ್ಬಿದೆ. ಅಖಂಡ ಸಿನಿಮಾದ ಎರಡನೇ ಭಾಗವನ್ನು ಪ್ಯಾನ್ ಇಂಡಿಯಾ ಚಲನಚಿತ್ರವಾಗಿ ನಿರ್ಮಿಸಲು ಯೋಜನೆ ನಡೆಯುತ್ತಿದೆ ಅಂತೆ. ಅಖಂಡ ಭಾಗ ಒಂದು ಕೇವಲ ತೆಲುಗಿನಲ್ಲಿ ಮಾತ್ರ ರಿಲೀಸ್ ಆಗಿತ್ತು. ಆದರೆ ನಾರ್ತ್‌ನಲ್ಲಿ ಸೌತ್ ಸಿನಿಮಾಗಳಿಗೆ ಹೆಚ್ಚಿನ ಬೇಡಿಕೆ ಇರುವ ಕಾರಣ, ಅಖಂಡ 2 ಚಿತ್ರವನ್ನು ಪ್ಯಾನ್ ಇಂಡಿಯಾ ಸಿನಿಮಾ ಆಗಿ ಮಾಡಲು ನಿರ್ದೇಶಕ ಪ್ಲ್ಯಾನ್ ಮಾಡುತ್ತಿದ್ದಾರಂತೆ.
ಸದ್ಯದಲ್ಲಿಯೇ 'ಅಖಂಡ' ಸೀಕ್ವೆಲ್ ಸಿನಿಮಾ ಬಗ್ಗೆ ಚಿತ್ರ ತಂಡ ಮಾಹಿತಿ ನೀಡಲಿದೆ. ಇದು ಬಾಲಯ್ಯನ ಅಭಿಮಾನಿಗಳಿಗೆ ಸಿಹಿ ಸುದ್ದಿಯೇ ಸರಿ. ಅಖಂಡ ಭಾಗ ಒಂದು ನೋಡಿ ಮೆಚ್ಚಿದವರು ಬಾಲಯ್ಯನ ಮುಂದಿನ ಸಿನಿಮಾಗಾಗಿ ಕಾಯುತ್ತಿದ್ದಾರೆ.
ನಂದಮೂರಿ ಬಾಲಕೃಷ್ಣ ಅವರ ಸಿನಿಮಾಗಳೇ ಒಂದು ರೀತಿ ವಿಭಿನ್ನ. ಎಲ್ಲದರಲ್ಲೂ ಅವರು ಒಂದು ಕೈ ಹೆಚ್ಚು ಎಂದು ಹೇಳ ಬಹುದು. ಅದು ಫೈಟ್ ಆಗಿರಲಿ, ಡೈಲಾಗ್ಸ್ ಆಗಿರಲಿ, ಡಾನ್ಸ್ ಆಗಿರಲಿ ಎಲ್ಲದರಲ್ಲೂ ಬಾಲಯ್ಯ ಅವರು ಡಿಫ್ರೆಂಟ್. ಅವರು ಹೊಡೆಯುವ ಡೈಲಾಗ್ಸ್‌ಗಳಿಗೇನೆ ಸಾಕಷ್ಟು ಅಭಿಮಾನಿಗಳಿದ್ದಾರೆ. ಈಗ ಅಖಂಡ ಸಿನಿಮಾದ ಮೂಲಕ ಚಿತ್ರ ಮಂದಿರಗಳ ಗಲ್ಲಾ ಪೆಟ್ಟಿಗೆ ಮಾತ್ರ ಅಲ್ಲ. ಓಟಿಟಿಯಲ್ಲೂ ದಾಖಲೆ ಬರೆದು ಮತ್ತಷ್ಟು ಬೇಡಿಕೆ ಹೆಚ್ಚಿಸಿಕೊಂಡಿದ್ದಾರೆ ಬಾಲಯ್ಯ.


Click it and Unblock the Notifications











