'ಅಪ್ಪು' ನಿರ್ದೇಶಕ ಪುರಿ ಜಗನ್ನಾಥ್‌ಗೆ ಆಪ್ತನಿಂದಲೇ 80 ಕೋಟಿ ಮೋಸ, ನೋವಿನ ಕಥೆ ಬಿಚ್ಚಿಟ್ಟ ತಾಯಿ
ತೆಲುಗು ನಿರ್ದೇಶಕ ಪುರಿ ಜಗನ್ನಾಥ್ ಟೈಮೇ ಸರಿ ಇಲ್ಲ ಎನಿಸುತ್ತಿದ್ದಾರೆ. ತಮ್ಮದೆ ಪರಿಶ್ರಮದಿಂದ ಚಿತ್ರರಂಗದಲ್ಲಿ ಸ್ಟಾರ್ ನಿರ್ದೇಶಕರಾಗಿ ಗುರ್ತಿಸಿಕೊಂಡರು. ಕನ್ನಡದಲ್ಲಿ ಅಪ್ಪು, ಯುವರಾಜ ರೀತಿಯ ಹಿಟ್ ಸಿನಿಮಾಗಳನ್ನು ಟಾಲಿವುಡ್ ನಿರ್ದೇಶಕರು ಕೊಟ್ಟಿದ್ದಾರೆ. ಆದರೆ 'ಲೈಗರ್' ಸಿನಿಮಾ ಮಾಡಿ ಹೀನಾಯವಾಗಿ ಸೋತುಬಿಟ್ಟರು.
'ಲೈಗರ್' ಚಿತ್ರವನ್ನು ನಿರ್ದೇಶನ ಮಾಡುವ ಜೊತೆಗೆ ಬಂಡವಾಳ ಹೂಡಿದ್ದರು. ಸಿನಿಮಾ ಸೋತು ಸಾಕಷ್ಟು ನಷ್ಟ ಅನುಭವಿಸುವಂತಾಯಿತು. ಎಲ್ಲಕ್ಕಿಂತ ಮುಖ್ಯವಾಗಿ ಒಂದು ಕಾಲದಲ್ಲಿ ಸ್ಟಾರ್ ನಿರ್ದೇಶಕ ಎನಿಸಿಕೊಂಡಿದ್ದ ಪುರಿ ಟ್ರೋಲ್ ಆಗುವಂತಾಯಿತು. ವಿಜಯ್ ದೇವರಕೊಂಡ ನಟನೆಯ 'ಲೈಗರ್' ಸಿನಿಮಾ ನಿರ್ದೇಶಕರಿಗೆ ಮರೆಯಲಾಗದ ಪೆಟ್ಟು ಕೊಡ್ತು. ಇದೀಗ ಪುರಿ ಜಗನ್ನಾಥ್ ಕಷ್ಟದ ದಿನಗಳ ಬಗ್ಗೆ ಆತನ ತಾಯಿ ಮಾತನಾಡಿದ್ದಾರೆ. ಸಂದರ್ಶನವೊಂದರಲ್ಲಿ ಮಗನ ಏಳುಬೀಳಿನ ಕಥೆಯನ್ನು ತಾಯಿ ಅಮ್ಮಾಜಿ ಬಿಚ್ಚಿಟ್ಟಿದ್ದಾರೆ.

"ನನ್ನ ಮಗ ಅನುಭವಿಸಿದ ನೋವು ಮತ್ಯಾರಿಗೂ ಬೇಡ. ಚಿತ್ರರಂಗಕ್ಕೆ ಬರುವ ಆಸೆಯಿಂದ ಡಿಗ್ರಿ ಮುಗಿಸಿ ಹೈದರಾಬಾದಿಗೆ ಬಂದು ಫಿಲಂ ಆಫೀಸ್‌ಗಳಲ್ಲಿ ಅಲೆದಾಡಿದ್ದ. ಏಳನೇ ತರಗತಿಯಿಂದಲೇ ಅವನಿಗೆ ಸಿನಿಮಾ ಹುಚ್ಚು. ಒಂದು ದಿನ ನಾನು ಹೈದರಾಬಾದ್‌ಗೆ ಹೋಗಿದ್ದೆ. ಆ ಹೊತ್ತಿಗೆ ಪುರಿಗೆ ಇನ್ನೂ ಅವಕಾಶಗಳು ಸಿಕ್ಕಿರಲಿಲ್ಲ. ಕಾಲುಗಳು ಊದಿಕೊಂಡು ಅವತ್ತು ಅವನ ಸ್ಥಿತಿ ಕಂಡು ಬೇಸರವಾಗಿತ್ತು."
"ಊಟ ಇಲ್ಲದೇ ಅವನು ನೀರು ಕುಡಿದು ಬದುಕಿನ ದಿನಗಳಿವೆ. ಸಿನಿಮಾ ಅವಕಾಶಗಳಿಗಾಗಿ ಸುತ್ತಾಡಿ ಸುತ್ತಾಡಿ ಅವನ ಕಾಲುಗಳು ಊದಿಕೊಂಡಿದ್ದವು. ಸಾಕ್ಸ್ ಧರಿಸಲೂ ಆಗುತ್ತಿರಲಿಲ್ಲ. ಅದನ್ನು ನೋಡಿ ನನಗೆ ಅಳು ಬಂದಿತು. ಯಾಕೆ ಇಷ್ಟು ಕಷ್ಟ.. ಊರಿಗೆ ಬಂದುಬಿಡು ಹೊಲದಲ್ಲಿ ದುಡಿಯೋಣ ಎಂದೆ. ಆದರೆ ಬರಲ್ಲ ಎಂದ. ನಿರ್ದೇಶಕನಾದ ನಂತರ ಪೂರಿ ಬಳಿ ಕೆಲಸ ಮಾಡುವ ಹುಡುಗ 80 ಕೋಟಿ ರೂ. ಪಡೆದು ಮೋಸ ಮಾಡಿದ್ದ. ಒಂದು ಸಿನಿಮಾ ಕೂಡ ಸೋತು ಭಾರೀ ನಷ್ಟವಾಯಿತು. ಅದರಿಂದ ದಿಢೀರನೆ ಕುಟುಂಬ ಸಂಕಷ್ಟಕ್ಕೆ ಸಿಲುಕಿತು"

5 ಮನೆಗಳನ್ನು ಮಾರುವಂತಾಯಿತು. ಒಂದರ್ಥದಲ್ಲಿ ಬೀದಿಗೆ ಬೀಳುವ ಪರಿಸ್ಥಿತಿ. ಮೋಸ ಮಾಡಿದ ವಂಚಕನ ಕೈಕಾಲು ಮುರಿಯುವಂತೆ ಪೂರಿಗೆ ಸ್ನೇಹಿತರೊಬ್ಬರು ಸಲಹೆ ನೀಡಿದರು. ಅದಕ್ಕೆ ಆತ ಒಪ್ಪಲಿಲ್ಲ. ಯಾವ ಜನ್ಮದಲ್ಲಿ ನಾವು ಅವನಿಗೆ ಋಣಿಯಾಗಿದ್ದೇವೋ ಏನೋ, ಅದಕ್ಕೆ ಹೀಗಾಯಿತು ಎಂದು ಸುಮ್ಮನಾದ. ದೇಹದಲ್ಲಿ ಶಕ್ತಿ ಇರುವವರೆಗೂ ದುಡಿಯುತ್ತೇನೆ ಹೆದರಬೇಡಿ ಎಂದು ಸುಮ್ಮನಾದ. ನನ್ನ ಮಗನ ಮನಸ್ಸು ಅಂಥದ್ದು. ಊರಿನಲ್ಲಿ ದೇವಸ್ಥಾನ ಕಟ್ಟಿಸಿದ್ದಾರೆ. ಸಹಾಯಕ್ಕಾಗಿ ಬಂದವರಿಗೆ ಲಕ್ಷ ಲಕ್ಷ ಹಣ ಕೊಟ್ಟಿದ್ದಾನೆ ಎಂದು ಅಮ್ಮಾಜಿ ಹೇಳಿದ್ದಾರೆ.
2 ವರ್ಷಗಳ ಹಿಂದೆ ಪೂರಿ ಜಗನ್ನಾತ್ ನಿರ್ದೇಶನದ 'ಲೈಗರ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮುನ್ನರಿಸಿತ್ತು. ಮೊದಲ ಶೋನಿಂದಲೇ ನೆಗೆಟಿವ್ ಟಾಕ್ ಬಂದಿತ್ತು. ಬಳಿಕ ಸಿನಿಮಾ ಮೇಲೇಳಲೇ ಇಲ್ಲ. ನಿರ್ಮಾಪಕರಲ್ಲಿ ಪುರಿ ಒಬ್ಬರಾಗಿದ್ದರು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತೆರೆಕಂಡು ಸೋತಿತ್ತು. ಸದ್ಯ 'ಡಬಲ್ ಇಸ್ಮಾರ್ಟ್ ಶಂಕರ್' ಎನ್ನುವ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.
'ಬದ್ರಿ' ಸಿನಿಮಾ ಮೂಲಕ ನಿರ್ದೇಶಕರಾಗಿ ಚಿತ್ರರಂಗಕ್ಕೆ ಬಂದ ಪೂರಿ ಜಗನ್ನಾಥ್, ಬಳಿಕ ಹಲವು ಹಿಟ್ ಸಿನಿಮಾಗಳನ್ನು ಕೊಟ್ಟರು. ತೆಲುಗು ಬಳಿಕ ಕನ್ನಡ, ಹಿಂದಿ ಸಿನಿಮಾಗಳನ್ನು ನಿರ್ದೇಶನ ಮಾಡಿದರು. 'ಅಪ್ಪು', 'ಪೋಕಿರಿ', 'ದೇಶಮುದರು', 'ಬ್ಯುಸಿನೆಸ್‌ಮ್ಯಾನ್', 'ಬುಜ್ಜಿಗಾಡು', 'ಇಸ್ಮಾರ್ಟ್ ಶಂಕರ್' ಹೀಗೆ ಹಲವು ಬ್ಲಾಕ್‌ಬಸ್ಟರ್ ಹಿಟ್ ಕೊಟ್ಟಿದ್ದಾರೆ.


Click it and Unblock the Notifications











