ನಾಗಾರ್ಜುನರ ನಿರೀಕ್ಷೆಯ ಚಿತ್ರ ಸೋಲಲು ಕಾರಣ ಅ ಒಂದು ದೃಶ್ಯ?

ಅಕ್ಕಿನೇನಿ ನಾಗಾರ್ಜುನ ವೃತ್ತಿ ಜೀವನದಲ್ಲಿ 'ಮನ್ಮಥಡು' ಸಿನಿಮಾ ಬಹಳ ದೊಡ್ಡ ಸಕ್ಸಸ್ ಕೊಟ್ಟಿತ್ತು. ಈ ಸಿನಿಮಾ ಬಂದ ನಂತರ ನಾಗಾರ್ಜುನ ಹೆಸರಿನ ಹಿಂದೆ 'ಮನ್ಮಥಡು' ಎಂಬ ಟ್ಯಾಗ್ ಅಂಟಿಕೊಂಡಿತು. 60ರ ವಯಸ್ಸಿನಲ್ಲೂ ಚಿರಯುವಕನಂತೆ ಕಾಣಿಸಿಕೊಳ್ಳುವ ನಾಗಾರ್ಜುನಗೆ ಈ ಹೆಸರು ಹೇಳಿ ಮಾಡಿಸಿದಂತಿತ್ತು.

ಒಮ್ಮೆ ಸೂಪರ್ ಹಿಟ್ ಆದ ಚಿತ್ರದ ಶೀರ್ಷಿಕೆ ಬಳಸಿಕೊಂಡು ಇನ್ನೊಂದು ಚಿತ್ರ ಮಾಡಿದ ಗೆದ್ದ ಉದಾಹರಣೆ ಬಹಳ ಕಡಿಮೆ. ಈ ವಿಚಾರದಲ್ಲಿ ನಾಗಾರ್ಜುನ ಸಿನಿಮಾ ಸಹ ಇದೆ. ಮನ್ಮಥಡು 2 ಎಂದು ಹೆಸರಿಟ್ಟು ಸಿನಿಮಾವೊಂದು ಮಾಡಲಾಯಿತು. ರಿಲೀಸ್‌ಗೂ ಮೊದಲು ಈ ಚಿತ್ರದ ಮೇಲೆ ಭಾರಿ ನಿರೀಕ್ಷೆ ಇತ್ತು. ಆದರೆ, ಒಂದೇ ಒಂದು ದೃಶ್ಯದಿಂದ ಈ ಚಿತ್ರ ಸೋಲು ಕಂಡಿತು ಎಂದು ನಿರ್ದೇಶಕ ಹೇಳಿಕೊಂಡಿದ್ದಾರೆ. ಯಾವುದು ಆ ದೃಶ್ಯ? ಮುಂದೆ ಓದಿ....

ನಾಗಾರ್ಜುನಗೆ ಹಿಟ್ ಕೊಟ್ಟ ಚಿತ್ರ

ನಾಗಾರ್ಜುನಗೆ ಹಿಟ್ ಕೊಟ್ಟ ಚಿತ್ರ

ಕೆ ವಿಜಯ ಭಾಸ್ಕರ್ ನಿರ್ದೇಶನದಲ್ಲಿ ಮೂಡಿಬಂದಿದ್ದ ಚಿತ್ರ ಮನ್ಮಥಡು. 2002ರಲ್ಲಿ ತೆರೆಕಂಡಿದ್ದ ಈ ಚಿತ್ರವನ್ನು ನಾಗಾರ್ಜುನ ನಿರ್ಮಿಸಿ ನಾಯಕನಾಗಿ ನಟಿಸಿದ್ದರು. ಸೋನಾಲಿ ಬೇಂದ್ರೆ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದರು. ನಾಗಾರ್ಜುನ ವೃತ್ತಿ ಜೀವನದಲ್ಲಿ ಈ ಸಿನಿಮಾ ದೊಡ್ಡ ಯಶಸ್ಸು ತಂದು ಕೊಡ್ತು. 2019ರಲ್ಲಿ ಮತ್ತೊಮ್ಮೆ ಮನ್ಮಥಡು 2 ಎಂದು ಹೊಸ ಸಿನಿಮಾ ಬಂತು.

ಮನ್ಮಥಡು 2 ಸೋಲು

ಮನ್ಮಥಡು 2 ಸೋಲು

2019ರಲ್ಲಿ ಮನ್ಮಥಡು 2 ಸಿನಿಮಾ ಬಂತು. ಈ ಚಿತ್ರಕ್ಕೂ ನಾಗಾರ್ಜುನ ಬಂಡವಾಳ ಹಾಕಿದ್ದರು. ರಾಹುಲ್ ರವಿಚಂದ್ರನ್ ನಿರ್ದೇಶಿಸಿದ್ದ ಈ ಚಿತ್ರದಲ್ಲಿ ರಕುಲ್ ಪ್ರೀತ್ ಸಿಂಗ್ ನಾಯಕಿಯಾಗಿ ನಟಿಸಿದರು. ಇವರ ಜೊತೆ ಕೀರ್ತಿ ಸುರೇಶ್, ಸಮಂತಾ, ಅಕ್ಷರಾ ಗೌಡ ಕಾಣಿಸಿಕೊಂಡಿದ್ದರು. ಈ ಚಿತ್ರ ನಿರೀಕ್ಷೆಯಂತೆ ಬಿಸಿನೆಸ್ ಮಾಡಿಲಿಲ್ಲ. ಮೆಚ್ಚುಗೆಯೂ ಗಳಿಸಿಲಿಲ್ಲ. ಈ ಚಿತ್ರದ ಸೋಲಿಗೆ ದೃಶ್ಯವೊಂದು ಕಾರಣ ಎಂದು ನಿರ್ದೇಶಕ ರಾಹುಲ್ ಈಗ ಹೇಳಿಕೊಂಡಿದ್ದಾರೆ.

ಆ ಒಂದು ದೃಶ್ಯದಿಂದ ಚಿತ್ರಕ್ಕೆ ಹಿನ್ನಡೆ ಆಯಿತು

ಆ ಒಂದು ದೃಶ್ಯದಿಂದ ಚಿತ್ರಕ್ಕೆ ಹಿನ್ನಡೆ ಆಯಿತು

ಮನ್ಮಥಡು ಎಂದ ತಕ್ಷಣ ಸಂಪೂರ್ಣವಾಗಿ ಕೌಟುಂಬಿಕ ಸಿನಿಮಾ ಎಂದು ಜನ ನಂಬಿದ್ದರು. ಆದರೆ, ಮೊದಲ ಇಪ್ಪತ್ತು ನಿಮಿಷದಲ್ಲಿ ರೊಮ್ಯಾಂಟಿಕ್ ದೃಶ್ಯಗಳು ಹೆಚ್ಚಿದ್ದವು. ಒಂದು ದೃಶ್ಯವೊಂದರಲ್ಲಿ ನಾಗಾರ್ಜುನ ಅಭಿನಯ ನೋಡಿದ ಅಭಿಮಾನಿಗಳು ಸ್ವಲ್ಪ ಮುಜುಗರ ಪಟ್ಟರು. ಇದು ವಿಮರ್ಶೆಯಲ್ಲೂ ಟೀಕೆಗೆ ಗುರಿಯಾಗಿತ್ತು. ಆ ದೃಶ್ಯ ಚಿತ್ರೀಕರಣ ಮಾಡಬೇಕಾದರೆ ಬಹಳ ನಗುತ್ತಿದ್ದೆವು, ಆದರೆ ಚಿತ್ರಮಂದಿರದಲ್ಲಿ ಜನರಿಗೆ ಇಷ್ಟ ಆಗಲ್ಲ ಎನ್ನುವುದು ಆಮೇಲೆ ಗೊತ್ತಾಯಿತು. ಆ ದೃಶ್ಯದಿಂದ ಸಿನಿಮಾಗೆ ಹಿನ್ನಡೆ ಆಯಿತು ಎಂದು ನಿರ್ದೇಶಕ ರಾಹುಲ್ ತಿಳಿಸಿದ್ದಾರೆ.

Recommended Video

ಮತ್ತೊಂದು ಹೊಸ ದಾಖಲೆ ಬರೆದು ಭಾರತದಲ್ಲೇ No 1 ಆದ KGF 2 | Filmibeat Kannada
ಮೂರು ಪ್ರಾಜೆಕ್ಟ್‌ನಲ್ಲಿ ನಾಗ್ ಬ್ಯುಸಿ

ಮೂರು ಪ್ರಾಜೆಕ್ಟ್‌ನಲ್ಲಿ ನಾಗ್ ಬ್ಯುಸಿ

ಕೊರೊನಾ ಭೀತಿಯ ನಡುವೆಯೂ ನಾಗಾರ್ಜುನ ನಟಿಸಿದ್ದ 'ವೈಲ್ಡ್ ಡಾಗ್' ಸಿನಿಮಾ ಬಿಡುಗಡೆಯಾಗಿತ್ತು. ಹಿಂದಿಯ 'ಬ್ರಹ್ಮಾಸ್ತ್ರ' ಚಿತ್ರದಲ್ಲಿ ನಾಗಾರ್ಜುನ ನಟಿಸಿದ್ದಾರೆ. ಇದರ ಜೊತೆಗೆ ಎರಡು ಪ್ರಾಜೆಕ್ಟ್‌ನಲ್ಲಿ ನಾಗ್ ಅಭಿನಯಿಸಲಿದ್ದಾರೆ.

More from Filmibeat

English summary
Director Rahul Ravindran revealed about Nagarjuna starrer manmadhudu 2 disaster.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X