For Quick Alerts
  ALLOW NOTIFICATIONS  
  For Daily Alerts

  ಬಾಹುಬಲಿ ನಿರ್ದೇಶಕ ರಾಜಮೌಳಿ ಮತ್ತು ಕುಟುಂಬಕ್ಕೆ ಕೊರೊನಾ

  |

  ಖ್ಯಾತ ನಿರ್ದೇಶಕ ರಾಜಮೌಳಿಗೆ ಕೊರೊನಾ ಸೋಂಕು ಧೃಡಪಟ್ಟಿದೆ. ಈ ವಿಷಯವನ್ನು ರಾಜಮೌಳಿ ಅವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

  ರಾಜಮೌಳಿ ಜೊತೆಗೆ ಅವರ ಕುಟುಂಬ ಸದಸ್ಯರೂ ಸಹ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಕೆಲವು ದಿನಗಳಿಂದ ಅವರಿಗೆ ತುಸು ಜ್ವರವಿತ್ತಂತೆ.

  ಜ್ವರ ವಾಸಿಯಾಯಿತಾದರೂ ಮನೆಯ ಸದಸ್ಯರೆಲ್ಲರೂ ಕೊರೊನಾ ಪರೀಕ್ಷೆಗೆ ಒಳಪಟ್ಟಿದ್ದಾರೆ. ಎಲ್ಲರಿಗೂ ಕೊರೊನಾ ಇರುವುದು ಖಾತ್ರಿಯಾಗಿದೆ.

  ತಮಗಿರುವುದು ರೋಗಲಕ್ಷಣರಹಿತವಾದ ಕೊರೊನಾ ಎಂದಿರುವ ರಾಜಮೌಳಿ, ಪ್ರಸ್ತುತ ಮನೆಯ ಸದಸ್ಯರೆಲ್ಲರೂ ವೈದ್ಯರ ಸಲಹೆ ಮೇರೆಗೆ ಮನೆಯಲ್ಲಿಯೇ ಕ್ವಾರಂಟೈನ್ ಆಗಿದ್ದೇವೆ ಎಂದಿದ್ದಾರೆ ರಾಜಮೌಳಿ.

  ಮತ್ತೊಂದು ಟ್ವೀಟ್‌ನಲ್ಲಿ 'ನಮ್ಮಲ್ಲಿ ಯಾರಿಗೂ ರೋಗಲಕ್ಷ್ಣಗಳು ಈಗಿಲ್ಲ, ಎಲ್ಲರೂ ಆರಾಮವಾಗಿದ್ದೇವೆ. ಎಲ್ಲರೂ ಸಹ ಮುನ್ನೆಚ್ಚರಿಕೆ ಹಾಗೂ ವೈದ್ಯರ ಸಲಹೆಗಳನ್ನು ಪಾಲಿಸುತ್ತಿದ್ದೇವೆ' ಎಂದು ಹೇಳಿದ್ದಾರೆ.

  ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡಿಕೊಳ್ಳುವ ಪ್ರಯತ್ನದಲ್ಲಿ ನಿರತರಾಗಿದ್ದು, ಆದಷ್ಟು ಬೇಗ ಗುಣಮುಖರಾಗಿ ಪ್ಲಾಸ್ಮಾ ದಾನ ಮಾಡಲು ಕಾತುರರಾಗಿ ಕಾಯುತ್ತಿದ್ದೇವೆಂದಿದ್ದಾರೆ ರಾಜಮೌಳಿ.

  English summary
  Director Rajamouli and his family today tested coronavirus positive. He share the news through twitter.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X