For Quick Alerts
  ALLOW NOTIFICATIONS  
  For Daily Alerts

  ಮದುವೆಯಾಗಿ ಮಗುವಿದ್ದ ಮಹಿಳೆಯ ಪ್ರೀತಿಸಿ ಮದುವೆಯಾದ ರಾಜಮೌಳಿ: ಏನಿದು ಪ್ರೇಮಕತೆ?

  |

  ಯಾವ ಸ್ಟಾರ್ ನಟನಿಗೂ ಕಡಿಮೆ ಇಲ್ಲದಂಥಹಾ 'ಸ್ಟಾರ್‌ಡಮ್' ಗಳಿಸಿದ್ದಾರೆ ನಿರ್ದೇಶಕ ರಾಜಮೌಳಿ. ನಟರ ಸಿನಿಮಾಗಳಿಗೆ ಅಭಿಮಾನಿಗಳು ಕಾದಂತೆ ರಾಜಮೌಳಿ ಸಿನಿಮಾಗಳಿಗೆ ಕಾಯಲಾಗುತ್ತದೆ.

  ರಾಜಮೌಳಿ ನಿರ್ದೇಶಿಸಿರುವ ಯಾವೊಂದು ಸಿನಿಮಾ ಸಹ ಫ್ಲಾಪ್ ಆಗಿಲ್ಲ ಬದಲಿಗೆ ಎಲ್ಲ ಸಿನಿಮಾಗಳೂ ಸೂಪರ್-ಡೂಪರ್ ಹಿಟ್. ಇದಕ್ಕೆ ಕಾರಣ ಸಿನಿಮಾ ಚಿತ್ರೀಕರಣ ಪ್ರಾರಂಭ ಮಾಡುವ ಮುನ್ನವೇ ಅವರು ಮಾಡಿಕೊಳ್ಳುವ ಹೋಮ್‌ವರ್ಕ್‌.

  ಚಿತ್ರೀಕರಣ ಸೆಟ್‌ನಲ್ಲಿ ಸಹ ಅತ್ಯಂತ ಶ್ರದ್ಧೆಯಿಂದ ತಮ್ಮನ್ನು ತಾವು ತೊಡಗಿಸಿಕೊಳ್ಳುವ ರಾಜಮೌಳಿ, ತಮ್ಮದೇ ಆದ ತಂತ್ರಜ್ಞರ ತಂಡವನ್ನು ಹೊಂದಿದ್ದಾರೆ. ತಂಡದಲ್ಲಿ ರಾಜಮೌಳಿ ಪತ್ನಿ ರಮಾ ಸಹ ಇದ್ದಾರೆ. ರಮಾ ರಾಜಮೌಳಿ ಹೆಸರಿಗೆ ವಸ್ತ್ರ್ ವಿನ್ಯಾಸಕಿ ಆದರೆ ಸಿನಿಮಾದ ಕತೆ, ಪಾತ್ರದ ಆಯ್ಕೆ, ಸಂಗೀತ ಎಲ್ಲ ವಿಷಯಗಳಲ್ಲಿಯೂ ರಾಜಮೌಳಿಗೆ ಸಲಹೆಗಳನ್ನು ನೀಡುತ್ತಿರುತ್ತಾರೆ. ರಾಜಮೌಳಿ ಹಾಗೂ ರಮಾ ಜೋಡಿ ಟಾಲಿವುಡ್‌ನ ಮುದ್ದಾದ ಜೋಡಿಗಳಲ್ಲಿ ಒಂದು.

  ರಾಜಮೌಳಿಗಿಂತ ನಾಲ್ಕು ವರ್ಷ ದೊಡ್ಡವರು ರಮಾ

  ರಾಜಮೌಳಿಗಿಂತ ನಾಲ್ಕು ವರ್ಷ ದೊಡ್ಡವರು ರಮಾ

  ರಾಜಮೌಳಿ ಅವರು ರಮಾ ಅವರನ್ನು ಪ್ರೀತಿಸಿ ಮದುವೆಯಾದರು. ರಾಜಮೌಳಿಗಿಂತಲೂ ನಾಲ್ಕು ವರ್ಷ ದೊಡ್ಡವರು ರಮಾ. ಈ ಇಬ್ಬರು ಮದುವೆ ಆಗುವ ವೇಳೆಗಾಗಲೆ ರಮಾ ಅವರಿಗೆ ಮದುವೆಯಾಗಿ ಒಂದು ಮಗು ಸಹ ಇತ್ತು. ಆದರೂ ಸಹ ರಾಜಮೌಳಿಗೆ ರಮಾ ಮೇಲೆ ಮನಸ್ಸಾಗಿತ್ತು. ಇವರಿಬ್ಬರ ಪ್ರೇಮಕತೆ ಬಹಳ ಅದ್ಭುತವಾಗಿದೆ.

  ಎಳವೆಯಲ್ಲೇ ಸಾಕಷ್ಟು ಕಷ್ಟ ಅನುಭವಿಸಿದ್ದ ರಮಾ

  ಎಳವೆಯಲ್ಲೇ ಸಾಕಷ್ಟು ಕಷ್ಟ ಅನುಭವಿಸಿದ್ದ ರಮಾ

  ಚಿಕ್ಕಂದಿನಲ್ಲಿಯೇ ತಂದೆಯನ್ನು ಕಳೆದುಕೊಂಡ ರಮಾ ತಾಯಿಯ ಆರೈಕೆಯಲ್ಲಿ ಕಷ್ಟದಲ್ಲಿಯೇ ಬೆಳೆದರು. ರಮಾ ಅವರಿಗೆ ಸಹೋದರಿ ಶ್ರೀವಲ್ಲಿ. ಇಬ್ಬರೂ ಸಹ ಅಮ್ಮನ ನೆರಳಲ್ಲಿ ಸಂಸ್ಕಾರ, ಸಹನೆ, ದುಡಿಮೆ, ಕ್ರಿಯಾಶೀಲತೆ ಕಲಿತುಕೊಂಡರು. 1990ರಲ್ಲಿ ರಮಾ ಅವರು ಪದವಿ ಶಿಕ್ಷಣ ಪಡೆಯುವ ಸಂದರ್ಭದಲ್ಲಿ ಅವರ ತಾಯಿ ರಮಾರ ಮದುವೆ ಮಾಡಿಬಿಟ್ಟರು. ರಮಾಗೆ ಒಂದು ಗಂಡು ಮಗು ಸಹ ಆಯಿತು. ಆದರೆ ರಮಾರ ಪತಿ ಕಡಿದು ಪ್ರತಿದಿನ ರಂಪ ಮಾಡುತ್ತಿದ್ದ. ರಮಾರಿಗೆ ಪ್ರತಿದಿನವೂ ನರಕ ನೋಡುವಂತಾಗಿತ್ತು. ಕೊನೆಗೊಂದು ದಿನ ಮಗನನ್ನು ಕರೆದುಕೊಂಡು ಪತಿಯನ್ನು ಬಿಟ್ಟು ಅಕ್ಕ ಶ್ರೀವಲ್ಲಿಯ ಮನೆಗೆ ಹೋಗಿಬಿಟ್ಟರು ರಮಾ.

  ರಾಜಮೌಳಿ ಸಹ ಕೀರವಾಣಿ ಮನೆಯಲ್ಲಿಯೇ ಇದ್ದರು

  ರಾಜಮೌಳಿ ಸಹ ಕೀರವಾಣಿ ಮನೆಯಲ್ಲಿಯೇ ಇದ್ದರು

  ರಮಾರ ಅಕ್ಕ ಶ್ರೀವಲ್ಲಿ ಖ್ಯಾತ ಸಂಗೀತ ನಿರ್ದೇಶಕ ಎಂಎಂ ಕೀರವಾಣಿಯ ಪತ್ನಿ. ಕೀರವಾಣಿ-ಶ್ರೀವಲ್ಲಿ ಮನೆಯಲ್ಲಿದ್ದುಕೊಂಡು ರಮಾ ಜಸ್ಟ್ ವೆಲ್ಲೋ ಮೀಡಿಯಾ ಹೆಸರಿನ ಸಂಸ್ಥೆಯಲ್ಲಿ ಕೆಲಸ ಮಾಡಲು ಆರಂಭಿಸಿದರು. ಯೆಲ್ಲೋ ಮೀಡಿಯಾ ಸಂಸ್ಥೆ ತೆಲುಗಿನ 'ಅಮೃತಂ' ಧಾರಾವಾಹಿ ನಿರ್ಮಾಣ ಮಾಡಿತ್ತು. ರಮಾ ಅವರು ಕೀರವಾಣಿ ಮನೆಗೆ ಬಂದಾಗ ಅಲ್ಲಿಯೇ ರಾಜಮೌಳಿ ಸಹ ಇದ್ದರು. ಕೀರವಾಣಿಗೆ ಸಹೋದರ ಸಂಬಂಧಿ ಆಗಿದ್ದ ರಾಜಮೌಳಿ ಆ ಸಮಯದಲ್ಲಿ ನಿರ್ದೇಶಕ ರಾಘವೇಂದ್ರ ಅವರಿಗೆ ಸಹಾಯಕರಾಗಿದ್ದರು.

  ಶಾಂತಿ ನಿವಾಸ ಧಾರಾವಾಹಿ ನಿರ್ದೇಶಿಸುತ್ತಿದ್ದ ರಾಜಮೌಳಿ

  ಶಾಂತಿ ನಿವಾಸ ಧಾರಾವಾಹಿ ನಿರ್ದೇಶಿಸುತ್ತಿದ್ದ ರಾಜಮೌಳಿ

  ರಾಘವೇಂದ್ರ ರಾವ್ 'ಶಾಂತಿ ನಿವಾಸ' ಧಾರವಾಹಿ ಚಿತ್ರೀಕರಣ ಆರಂಭಿಸಿದ್ದರು. ರಾಜಮೌಳಿ ಆ ಧಾರಾವಾಹಿಗೆ ನಿರ್ದೇಶಕರಾಗಿದ್ದರು. ಆ ಸಮಯದಲ್ಲಿ ರಮಾ, ರಾಜಮೌಳಿ ಅವರೊಟ್ಟಿಗೆ ಧಾರಾವಾಹಿ ಕುರಿತು ಸಲಹೆಗಳನ್ನು ನೀಡುತ್ತಿದ್ದರು. ಇಬ್ಬರೂ ಸಿನಿಮಾ, ಧಾರಾವಾಹಿ ಇತರೆ ವಿಷಯಗಳ ಬಗ್ಗೆ ಚರ್ಚೆ ಮಾಡುತ್ತಿದ್ದರು. ಅದೇ ಸಮಯದಲ್ಲಿ ರಮಾ ತಮ್ಮ ಪತಿಯಿಂದ ವಿಚ್ಛೇಧನ ಸಹ ಪಡೆದುಕೊಂಡರು.

  ಮೊದಲ ಸಿನಿಮಾ ಸಂದರ್ಭದಲ್ಲಿಯೇ ಮದುವೆ

  ಮೊದಲ ಸಿನಿಮಾ ಸಂದರ್ಭದಲ್ಲಿಯೇ ಮದುವೆ

  2001 ರಲ್ಲಿ ರಾಜಮೌಳಿ ತಮ್ಮ ಮೊದಲ ಸಿನಿಮಾ 'ಸ್ಟುಡೆಂಟ್ ನಂ 1' ಆರಂಭಿಸಿದರು. ರಾಘವೇಂದ್ರ ರಾವ್ ಅವರೇ ಸಿನಿಮಾಕ್ಕೆ ಬಂಡವಾಳ ಹೂಡಿದರು. ರಮಾ, ರಾಜಮೌಳಿಗೆ ಸಹಾಯಕರಾಗಿ ಕೆಲಸ ಮಾಡಿದ್ದರು. ಆ ಸಿನಿಮಾದಲ್ಲಿ ಕಾಸ್ಟೂಮ್ ಡಿಸೈನ್ ಸಹ ಮಾಡಿದ್ದರು. ಅದೇ ಸಿನಿಮಾದ ಚಿತ್ರೀಕರಣದ ವೇಳೆಯಲ್ಲಿ ಕೆಲವೇ ಮಂದಿ ಗೆಳೆಯರ ಮುಂದೆ ರಾಜಮೌಳಿ, ರಮಾ ಅವರನ್ನು ವಿವಾಹವಾದರು.

  ರೈತರಿಂದ ನೇರವಾಗಿ ತರಕಾರಿ ಖರೀದಿಸಿ ರೈತರ ಕಷ್ಟಕ್ಕೆ ನೆರವಾದ ಉಪೇಂದ್ರ | Filmibeat Kannada
  ಎಲ್ಲ ಗುಣಗಳೂ ರಮಾ ಅವರಲ್ಲಿತ್ತು: ರಾಜಮೌಳಿ

  ಎಲ್ಲ ಗುಣಗಳೂ ರಮಾ ಅವರಲ್ಲಿತ್ತು: ರಾಜಮೌಳಿ

  ರಾಜಮೌಳಿ ಒಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಂತೆ ನಾನು ಎಂಥಹಾ ಹುಡುಗಿಯನ್ನು ವಿವಾಹವಾಗಬೇಕು ಎಂದುಕೊಂಡಿದ್ದೆನೊ ಆ ಎಲ್ಲ ಗುಣಗಳು ನನಗೆ ರಮಾರಲ್ಲಿ ಕಂಡವು ಹಾಗಾಗಿ ವಿವಾಹವಾದೆ. ಅಂದಿನಿಂದ ಇಂದಿನವರೆಗೂ ನಮ್ಮಿಬ್ಬರ ನಡುವೆ ಸಣ್ಣ ಮನಸ್ಥಾಪ ಸಹ ಬಂದಿಲ್ಲ ಎಂದಿದ್ದಾರೆ ರಾಜಮೌಳಿ. ರಮಾ ಸಹ ಬೇರೊಂದು ಸಂದರ್ಶನದಲ್ಲಿ ಇದೇ ಮಾತು ಹೇಳಿದ್ದಾರೆ. ರಮಾರ ಮಗನನ್ನು ತಮ್ಮ ಮಗನಂತೆ ಸಾಕಿದ ರಾಜಮೌಳಿ ಇತ್ತೀಚೆಗಷ್ಟೆ ಮಗನಿಗೆ ಮದುವೆ ಮಾಡಿದರು. ಮಗನ ಜೊತೆಗೆ ಹೆಣ್ಣು ಮಗುವೊಂದನ್ನು ದತ್ತು ಪಡೆದು ಸಾಕುತಿದ್ದಾರೆ ಈ ದಂಪತಿ.

  English summary
  Director Rajamouli and Rama Rajamouli's love story. Rama married a man before marrying Rajamouli.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X