ಅಲ್ಲು ಅರ್ಜುನ್ ಸಹೋದರನನ್ನು 'ಈ ನನ್ ಮಗ' ಎಂದ ವರ್ಮಾ

ವಿವಾದಾತ್ಮಕ ನಿರ್ದೇಶಕ ಎಂದೆ ಗುರುತಿಸಿಕೊಂಡಿರುವ ರಾಮ್ ಗೋಪಾಲ್ ವರ್ಮಾ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿ ಇರ್ತಾರೆ. ತೆಲುಗು ಸಿನಿಮಾರಂಗ ಹಾಗೂ ರಾಜಕೀಯ ವ್ಯಕ್ತಿಗಳನ್ನು ಟಾರ್ಗೆಟ್ ಮಾಡಿ, ಅವರ ವೈಯಕ್ತಿಕ ವಿಚಾರಗಳನ್ನು ಕೆದಕಿ ಟ್ವೀಟ್ ಮಾಡುವುದು ವರ್ಮಾಗೆ ಅಭ್ಯಾಸವಾಗಿದೆ.

ಇದೀಗ, ತೆಲುಗಿನ ಸ್ಟಾರ್ ನಟ ಅಲ್ಲು ಅರ್ಜುನ್ ಸಹೋದರ ಅಲ್ಲು ಸಿರೀಶ್ ಕುರಿತು ಟ್ವೀಟ್ ಮಾಡಿರುವ ಆರ್‌ಜಿವಿ 'ಈ ನನ್ ಮಗ' ಎಂದು ಸಂಭೋದಿಸಿದ್ದಾರೆ. ಇದು ಅಲ್ಲು ಅಭಿಮಾನಿಗಳನ್ನು ಕೆರಳಿಸಿದೆ. 'ದೊಡ್ಡ ನಿರ್ದೇಶಕ ಆಗಿದ್ದರೂ ಇಂತಹ ಕೀಳುಮಟ್ಟದ ಪ್ರಚಾರ ನಿಮಗೆ ಬೇಕಿಲ್ಲ' ಎಂದು ಫ್ಯಾನ್ಸ್ ತಿರುಗಿಬಿದ್ದಾರೆ. ಅಷ್ಟಕ್ಕೂ, ರಾಮ್ ಗೋಪಾಲ್ ವರ್ಮಾ ಅಲ್ಲು ಸಿರೀಶ್‌ ಬಗ್ಗೆ ಏನು ಹೇಳಿದ್ದಾರೆ? ಈ ನನ್ ಮಗ ಎಂದು ಸಂಭೋದಿಸಿದ್ದು ಏಕೆ? ಮುಂದೆ ಓದಿ...

ಹೊಗಳಿಕೆಯೋ ಅಥವಾ ತೆಗಳಿಕೆಯೋ

ಹೊಗಳಿಕೆಯೋ ಅಥವಾ ತೆಗಳಿಕೆಯೋ

ಇತ್ತೀಚಿಗಷ್ಟೆ ಅಲ್ಲು ಸಿರೀಶ್ ವರ್ಕೌಟ್ ಮಾಡುತ್ತಿರುವ ಫೋಟೋ ಬಹಿರಂಗವಾಗಿತ್ತು. ತಮ್ಮ ಮುಂದಿನ ಸಿನಿಮಾಗಳ ತಯಾರಿ ನಡೆಸುತ್ತಿರುವ ಅಲ್ಲು ಅರ್ಜುನ್ ಸಹೋದರ ಸಿಕ್ಸ್‌ಪ್ಯಾಕ್ ಮಾಡಿ ಕಟ್ಟುಮಸ್ತಾಗಿ ಸಿದ್ದವಾಗುತ್ತಿದ್ದಾರೆ. ಅಲ್ಲು ಸಿರೀಶ್‌ರ ಈ ಲುಕ್‌ ಕಂಡು ಫಿದಾ ವರ್ಮಾ, ಹೊಗಳುವ ವಿಧಾನದಲ್ಲೂ ತಮ್ಮ ವರಸೆ ತೋರಿಸಿ ಟೀಕೆಗೆ ಗುರಿಯಾಗಿದ್ದಾರೆ.

'ಈ ನನ್ ಮಗ' ಎಂದ ಆರ್‌ಜಿವಿ

'ಈ ನನ್ ಮಗ' ಎಂದ ಆರ್‌ಜಿವಿ

ಅಲ್ಲು ಸಿರೀಶ್ ವರ್ಕೌಟ್ ಫೋಟೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಆರ್‌ಜಿವಿ, ''ಈ ನನ್ ಮಗ ಹಾಲಿವುಡ್ ನಟ, ಬಾಡಿ ಬಿಲ್ಡರ್ ಅರ್ನಾಲ್ಡ್‌ರ ಮಗ ಅಲ್ಲ, ಅಲ್ಲು ಅರವಿಂದ್ ಮಗ'' ಎಂದು ಪೋಸ್ಟ್ ಹಾಕಿದ್ದಾರೆ. ಓರ್ವ ಹಿರಿಯ ನಿರ್ದೇಶಕನಾಗಿದ್ದು ಅಲ್ಲು ಸಿರೀಶ್‌ರನ್ನ 'ಈ ನನ್ ಮಗ' ಎಂದು ಹೇಳಿದ್ದಕ್ಕೆ ಅಭಿಮಾನಿಗಳು ವರ್ಮಾ ವಿರುದ್ಧ ಮುಗಿಬಿದ್ದಿದ್ದಾರೆ.

ಅಲ್ಲು ಸಿರೀಶ್ ಮುಂದಿನ ಸಿನಿಮಾ?

ಅಲ್ಲು ಸಿರೀಶ್ ಮುಂದಿನ ಸಿನಿಮಾ?

2013ರಲ್ಲಿ ಗೌರವಂ ಚಿತ್ರದೊಂದಿಗೆ ನಾಯಕನಾಗಿ ಸಿನಿ ಇಂಡಸ್ಟ್ರಿ ಪ್ರವೇಶಿಸಿದ ಅಲ್ಲು ಸಿರೀಶ್, ಕೊತ್ತ ಜಂಟಾ, ಶ್ರೀರಸ್ತು ಶುಭಮಸ್ತು, ಒಕ್ಕ ಕ್ಷಣಂ, ಎಬಿಸಿಡಿ ಅಂತಹ ಸಿನಿಮಾಗಳನ್ನು ಮಾಡಿದ್ದಾರೆ. ಅದ್ಯಾವುದು ದೊಡ್ಡ ಮಟ್ಟದ ಯಶಸ್ಸು ಕೊಟ್ಟಿಲ್ಲ. ಈಗ, ಮುಂದಿನ ಚಿತ್ರಕ್ಕಾಗಿ ಬಾಡಿ ಬಿಲ್ಡ್ ಮಾಡಿ ಬರ್ತಿದ್ದಾರೆ. ಮೇ 30ರಂದು ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದು ಆ ದಿನ ಹೊಸ ಪ್ರಾಜೆಕ್ಟ್ ಘೋಷಣೆ ಮಾಡುವ ಸಾಧ್ಯತೆ ಇದೆ.

Recommended Video

Shahrukh Khan ಕಷ್ಟದ ದಿನಗಳನ್ನು ಕಣ್ಣಾರೆ ನೋಡಿದ್ದೇನೆ ಎಂದ Manoj Bajpai | Filmibeat Kannada
ಕೊರೊನಾ ಬಿಕ್ಕಟ್ಟಿನಲ್ಲೂ ಸತತ ಸಿನಿಮಾ

ಕೊರೊನಾ ಬಿಕ್ಕಟ್ಟಿನಲ್ಲೂ ಸತತ ಸಿನಿಮಾ

ಕೊರೊನಾ ವೈರಸ್ ಕಾಟದಿಂದ ಇಡೀ ದೇಶ ಒದ್ದಾಡುತ್ತಿದೆ. ಇಂತಹ ಸಮಯದಲ್ಲೂ ಆರ್‌ಜಿವಿ ಸತತವಾಗಿ ಸಿನಿಮಾಗಳನ್ನು ಮಾಡುವ ಮೂಲಕ ಗಮನ ಸೆಳೆದರು. ಆರ್‌ಜಿವಿ ವರ್ಲ್ಡ್ ಥಿಯೇಟರ್ ಎಂಬ ತಮ್ಮದೇ ಸ್ವಂತ ಒಟಿಟಿ ವೇದಿಕೆ ಸೃಷ್ಟಿಸಿಕೊಂಡು ಕ್ಲೈಮ್ಯಾಕ್ಸ್, ನಗ್ನಂ, ಪವರ್ ಸ್ಟಾರ್, ದಿಶಾ ಮರ್ಡರ್, ಡೇಂಜರಸ್, ಕೊರೊನಾ ವೈರಸ್, 12 ಓ ಕ್ಲಾಕ್, ದೆಯ್ಯಂ ಹೀಗೆ ಹಲವು ಚಿತ್ರ ತಯಾರಿಸಿದ್ದಾರೆ.

More from Filmibeat

English summary
Tollywood Director Ram Gopal Varma abused actor Allu Sirish Twitter.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X