ನಟಿಯ ಜೊತೆ ಮಿತಿಮೀರಿದ ರಾಮ್ ಗೋಪಾಲ್ ವರ್ಮಾ ವರ್ತನೆ: ವಿಡಿಯೋ ವೈರಲ್
ತೆಲುಗಿನ ವಿವಾದಾತ್ಮಕ ನಿರ್ದೇಶಕ ಅಂತಾನೆ ಖ್ಯಾತಿಗಳಿಸಿರುವ ರಾಮ್ ಗೋಪಾಲ್ ವರ್ಮಾ ತಮ್ಮ ಸಿನಿಮಾಗಳಿಂದ ಸುದ್ದಿಯಲ್ಲಿರುವ ಕಾಲ ಹೋಗಿ ಈಗ ವಿವಾದಾತ್ಮಕ ಹೇಳಿಕೆಗಳು, ಟ್ವೀಟ್ ಗಳಿಂದಷ್ಟೆ ಸುದ್ದಿಯಾಗುತ್ತಿದ್ದಾರೆ. ರಾಮ್ ಗೋಪಾಲ್ ವರ್ಮಾ ತಮ್ಮ ಪ್ರತಿಭೆಯನ್ನೆಲ್ಲ ವಿವಾದ ಸೃಷ್ಟಿಸುವುದಕ್ಕೆ ಮಾತ್ರ ಬಳಸುತ್ತಿದ್ದಾರೆ. ಸದಾ ಒಂದಲ್ಲೊಂದು ಹೇಳಿಕೆಗಳನ್ನು ನೀಡುತ್ತಾ ವಿವಾದ ಮೈಮೇಲೆ ಎಳೆದುಕೊಳ್ಳುತ್ತಿರುವ ವರ್ಮಾ ಇದೀಗ ಸಾಮಾಜಿಕ ಜಾಲತಾಣದಲ್ಲಿ ನಟಿಯ ಜೊತೆ ಮನಬಂದಂತೆ ಡಾನ್ಸ್ ಮಾಡಿ, ಬಳಿಕ ಕಾಲಿಗೆ ಬೀಳುವ ವಿಡಿಯೋ ಶೇರ್ ಮಾಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ವಿಡಿಯೋದಲ್ಲಿ ಹೇಗೋ ಬೇಕೋ ಹಾಗೆ ಡಾನ್ಸ್ ಮಾಡಿ ಬಳಿಕ ಈ ವಿಡಿಯೋದಲ್ಲಿರುವ ವ್ಯಕ್ತಿ ತಾನಲ್ಲ ಎಂದಿದ್ದಾರೆ. ಅಷ್ಟಕ್ಕೂ ಈ ವಿಡಿಯೋದಲ್ಲಿ ಮನಬಂದಂತೆ ಡಾನ್ಸ್ ಮಾಡಿರುವ ವ್ಯಕ್ತಿ ತಾನಲ್ಲ, ಅಮೆರಿಕಾದ ಅಧ್ಯಕ್ಷ ಜೋ ಬೈಡನ್ ಮೇಲೆ ಪ್ರಮಾಣ ಮಾಡುತ್ತೇನೆ ಎಂದು ಹೇಳಿಕೊಂಡಿದ್ದಾರೆ.
ಅಷ್ಟಕ್ಕೂ ರಾಮ್ ಗೋಪಾಲ್ ವರ್ಮಾ ಜೊತೆ ಡಾನ್ಸ್ ಮಾಡಿರುವ ನಟಿ ಮತ್ತು ಮಾಡಲ್ ಇನಾಯಾ ಸುಲ್ತಾನ. ಇಬ್ಬರೂ ಮನಬಂದಂತೆ ಡಾನ್ಸ್ ಮಾಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಡಾನ್ಸ್ ಮಾಡುತ್ತಾ ನಟಿಯನ್ನು ಹೇಗ್ ಬೇಕೋ ಹಾಗೆ ತಬ್ಬಿಕೊಂಡಿದ್ದಾರೆ, ಸ್ಪರ್ಶಿಸಿದ್ದಾರೆ, ಬಳಿಕ ಆಕೆಯ ಕಾಲಿಗೆ ಬಿದ್ದಿದ್ದಾರೆ. ಚಿತ್ರ-ವಿಚಿತ್ರವಾಗಿ ಆಡುತ್ತಿರುವ ರಾಮ್ ಗೋಪಾಲ್ ವರ್ಮಾ ವಿಡಿಯೋ ನೋಡಿ ನೆಟ್ಟಿಗರು ಕಿಡಿ ಕಾರುತ್ತಿದ್ದಾರೆ. ಇನ್ನು ಕೆಲವರು ವರ್ಮಾ ಕಾಲೆಳೆಯುತ್ತಿದ್ದಾರೆ.

ಈ ವಿಡಿಯೋ ಶೇರ್ ವರ್ಮಾ, "ಈ ವಿಡಿಯೋದಲ್ಲಿರುವ ವ್ಯಕ್ತಿ ನಾನಲ್ಲ ಮತ್ತು ಕೆಂಪು ಬಣ್ಣದ ಹುಡುಗಿ ಇನಾಯಾ ಸುಲ್ತಾನ್ ಅಲ್ಲ ಎಂದು ನಾನು ಮತ್ತೊಮ್ಮೆ ಸ್ಪಷ್ಟಪಡಿಸುತ್ತೇನೆ. ಅಮೆರಿಕದ ಅಧ್ಯಕ್ಷ ಜೋ ಬೈಡನ್ ಮೇಲೆ ಪ್ರಮಾಣ ಮಾಡುತ್ತೇನೆ" ಎಂದು ರಾಮ್ ಗೋಪಾಲ್ ವರ್ಮಾ ಹೇಳಿದ್ದಾರೆ.
ರಾಮ್ ಗೋಪಾಲ್ ವರ್ಮಾ ಏನೆ ಹೇಳಿದರೂ ಇದು ವರ್ಮಾ ಮತ್ತು ಇನಾಯಾ ಸುಲ್ತಾನ್ ಎನ್ನುವುದು ಎಲ್ಲರಿಗೂ ಗೊತ್ತಾಗುತ್ತಿದೆ. ಅಂದಹಾಗೆ ಹೀಗೆ ಮನಬಂದಂತೆ ಡಾನ್ಸ್ ಮಾಡಿದ್ದು, ಇನಾಯಾ ಸುಲ್ತಾನ್ ಹುಟ್ಟುಹಬ್ಬದ ದಿನ. ಇತ್ತೀಚಿಗಷ್ಟೆ ಇನಾಯಾ ಸುಲ್ತಾನ್ ರಾಮ್ ಗೋಪಾಲ್ ವರ್ಮಾ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಹುಟ್ಟುಹಬ್ಬ ಆಚರಣೆಯ ಫೋಟೋಗಳು ಸಹ ವೈರಲ್ ಆಗಿವೆ. ಇಬ್ಬರನ್ನು ತಬ್ಬಿಕೊಂಡು ವಿಚಿತ್ರವಾಗಿ ವರ್ತಿಸುತ್ತಿರುವ ರಾಮ್ ಗೋಪಾಲ್ ಫೋಟೋವನ್ನು ಇನಾಯಾ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

ರಾಮ್ ಗೋಪಾಲ್ ಜೊತೆ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿರುವ ಫೋಟೋ ಶೇರ್ ಮಾಡಿ, " ಇದು ನನ್ನ ಜೀವನದ ಅತ್ಯಂತ ಉತ್ತಮ ಮತ್ತು ಮರೆಯಲಾಗದ ಕ್ಷಣ. ನನ್ನ ಹುಟ್ಟುಹಬ್ಬ" ಎಂದು ಬರೆದುಕೊಂಡು ಹಾರ್ಟ್ ಇಮೋಜಿ ಹಾಕಿದ್ದಾರೆ.
ರಾಮ್ ಗೋಪಾಲ್ ವರ್ಮಾ ಅವರ ಮಿತಿ ಮೀರಿದ ವರ್ತನೆಗಳು ಇದೇ ಮೊದಲಲ್ಲ ಈ ಹಿಂದೆಯೂ ನಟಿಯರ ಜೊತೆ ಮನಬಂದಂತೆ ನಡೆದುಕೊಂಡ ಉದಾಹರಣೆಗಳಿವೆ. ಇತ್ತೀಚಿಗೆ ರಾಮ್ ಗೋಪಾಲ್ ವರ್ಮಾ, ಮಾಜಿ ಬಿಗ್‌ಬಾಸ್ ಸ್ಪರ್ಧಿ ಅರಿಯಾನಾಗೆ ಸಂದರ್ಶನವೊಂದನ್ನು ನೀಡಿದ್ದು, ಸಂದರ್ಶನದಲ್ಲಿ ರಾಮ್ ಗೋಪಾಲ್ ವರ್ಮಾ ಆಡಿರುವ ಮಾತುಗಳು, ನಡೆದುಕೊಂಡ ರೀತಿ ಕೂಡ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ಮಾದಕ ಉಡುಗೆ ತೊಟ್ಟು ವರ್ಮಾ ಜೊತೆಗೆ ಜಿಮ್ ಮಾಡುವ ಅರಿಯಾನಾ ಅಲ್ಲಿಯೇ ಸಂದರ್ಶನ ಮಾಡಿ ಗಮನ ಸೆಳೆದಿದ್ದರು. ಸಂದರ್ಶನದಲ್ಲಿ ಹಲವು ಖಾಸಗಿ ವಿಷಯಗಳು. ಮಹಿಳೆಯ ಅಂದ ಇನ್ನಿತರೆ ವಿಷಯಗಳು ಚರ್ಚೆಯಾಗಿದ್ದವು. ವರ್ಮಾ ಅಂತೂ ಬಹಳ ತುಂಟತನದಿಂದ ತುಂಬಿದ ಉತ್ತರಗಳನ್ನು ನೀಡಿದ್ದರು, ವರ್ಮಾರ ಮಾತುಗಳು ಸಖತ್ ವೈರಲ್ ಆಗಿತ್ತು.


Click it and Unblock the Notifications











