twitter
    For Quick Alerts
    ALLOW NOTIFICATIONS  
    For Daily Alerts

    ಪ್ರಭಾಸ್, ಮಹೇಶ್ ಬಾಬು ಅವಶ್ಯಕತೆ ಇಲ್ಲ: ಅಪ್ಪು ಉದಾಹರಣೆ ಕೊಟ್ಟ ವರ್ಮಾ

    |

    ಸಿನಿಮಾ ರಂಗದಲ್ಲಿ ತಂತ್ರಜ್ಞಾನ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಇಲ್ಲದ ಲೋಕಗಳನ್ನು ಕಣ್ಣ ಮುಂದೆ ಬರುವಂತೆ ಕಟ್ಟಿಕೊಡುತ್ತಿದ್ದಾರೆ ನಿರ್ದೇಶಕರು ತಂತ್ರಜ್ಞರು.

    ಸಿನಿಮಾಗಳಲ್ಲಿ ತಂತ್ರಜ್ಞಾನ ಬಳಕೆ ಎಂಬುದು ಯೆಥೇಚ್ಛವಾಗಿರುವ ಸಮಯದಲ್ಲಿ ಜನಪ್ರಿಯ ನಿರ್ದೇಶಕ ರಾಮ್ ಗೋಪಾಲ್‌ ವರ್ಮಾ ಚಿತ್ರರಂಗದ ಬಗ್ಗೆ ಭವಿಷ್ಯವೊಂದನ್ನು ಹೇಳಿದ್ದು, ಅದಕ್ಕೆ ನಟ ಪುನೀತ್ ರಾಜ್‌ಕುಮಾರ್ ಅವರನ್ನು ಉದಾಹರಣೆಯಾಗಿ ತೆಗೆದುಕೊಂಡಿದ್ದಾರೆ.

    ತೆಲುಗಿನ ಟಿವಿ ಸಂದರ್ಶನದಲ್ಲಿ ಚಿತ್ರರಂಗದ ಭವಿಷ್ಯದ ಬಗ್ಗೆ ಮಾತನಾಡಿರುವ ರಾಮ್ ಗೋಪಾಲ್ ವರ್ಮಾ, ''ಪುನೀತ್ ರಾಜ್‌ಕುಮಾರ್ ನಿಧನರಾದಾಗ ಅವರು ನಟಿಸಿದ್ದ ಸಿನಿಮಾದ ಚಿತ್ರೀಕರಣದಲ್ಲಿ ಅವರು ಹೇಳಿದ್ದ ಡೈಲಾಗ್‌ಗಳ ಧ್ವನಿಯನ್ನು ಬಳಸಿಕೊಂಡು ಡೈಲಾಗ್‌ಗಳನ್ನು ಮರುಸೃಷ್ಟಿ ಮಾಡಲಾಯ್ತು. ಆ ಧ್ವನಿ ಥೇಟ್ ಅಪ್ಪು ಧ್ವನಿಯಂತೆಯೇ ಇತ್ತು'' ಎಂದಿದ್ದಾರೆ.

    ಪ್ರಭಾಸ್, ಮಹೇಶ್ ಬಾಬು ಬೇಕಾಗುವುದಿಲ್ಲ: ವರ್ಮಾ

    ಪ್ರಭಾಸ್, ಮಹೇಶ್ ಬಾಬು ಬೇಕಾಗುವುದಿಲ್ಲ: ವರ್ಮಾ

    ಹಾಗೆಯೇ ಇನ್ನು ಮುಂದೆ ಮೊಷನ್ ಕ್ಯಾಮೆರಾಗಳು ಸ್ಟಾರ್ ನಟರ ಅವಶ್ಯಕತೆಯನ್ನೂ ಸಹ ತಪ್ಪಿಸಿಬಿಡುತ್ತವೆ. ನಟನ ಮುಖದಲ್ಲಿ ಆಗುವ ಬದಲಾವಣೆಗಳನ್ನು ಅವು ಚಿತ್ರೀಕರಿಸಿಕೊಳ್ಳುತ್ತವೆ. ನಟ ನಗುವುದು, ಬೇಸರ ಮಾಡಿಕೊಳ್ಳುವುದು ಸಿಟ್ಟಾಗುವುದು ಎಲ್ಲದನ್ನೂ ದಾಖಲಿಸಿಕೊಂಡು ದೃಶ್ಯ ರೂಪದಲ್ಲಿ ನೀಡುತ್ತದೆ. ಆಗ ಸ್ಟಾರ್ ನಟರ ಅವಶ್ಯಕತೆಯೂ ನಮಗೆ ಇರುವುದಿಲ್ಲ. ಅವರ ಮುಖದ ಭಾವನೆಗಳನ್ನು ಒಮ್ಮೆ ದಾಖಲಸಿಕೊಂಡರೆ ಸಾಕು ಅದನ್ನೇ ನಾವು ಬೇರೆ ಬೇರೆ ಸಿನಿಮಾಗಳಿಗೂ ಬಳಸಬಹುದು ಎಂದಿದ್ದಾರೆ ರಾಮ್ ಗೋಪಾಲ್ ವರ್ಮಾ.

    ಮೋಷನ್ ಕ್ಯಾಪ್ಚರ್ ನಿಂದ ನಿರ್ಮಾಣ ಮಾಡಿರುವ ಅವತಾರ್

    ಮೋಷನ್ ಕ್ಯಾಪ್ಚರ್ ನಿಂದ ನಿರ್ಮಾಣ ಮಾಡಿರುವ ಅವತಾರ್

    ''ಅವತಾರ್ ಸಿನಿಮಾ ನಿರ್ಮಿಸಿರುವುದು ಹಾಗೆಯೇ. ನಟರ ಭಾವನೆಗಳನ್ನು ಕ್ಯಾಪ್ಚರ್ ಮಾಡಿ ಅವರಿಗೆ ಬೇಕಾದ ರೂಪವನ್ನು ಪಾತ್ರಕ್ಕೆ ನೀಡಿದ್ದಾರೆ. ಹಾಗೆಯೇ ಪ್ರಭಾಸ್‌ರದ್ದೊ, ಮಹೇಶ್ ಬಾಬು ಅವರದ್ದೊ ಭಾವನೆಗಳನ್ನು ಕ್ಯಾಪ್ಚರ್ ಮಾಡಿದರೆ ಪ್ರಭಾಸ್, ಮಹೇಶ್ ಬಾಬು ಅವರ ದೇಹದ ಕಾಪಿ ಮಾಡುವುದು, ಬೇರೆ ಬೇರೆ ವೇಷಗಳಲ್ಲಿ ಅವರನ್ನು ತೋರಿಸುವುದು ಕಷ್ಟವೇ ಅಲ್ಲ. ಈ ತಂತ್ರಜ್ಞಾನದಿಂದಾಗಿ ಮುಂದೆ ಮಹೇಶ್ ಬಾಬು, ಆಗಲಿ ಪ್ರಭಾಸ್ ಆಗಲಿ ಅಥವಾ ಇನ್ನಾವುದೇ ನಟನ ಅವಶ್ಯಕೆಯೇ ನಿರ್ದೇಶಕನಿಗೆ ಬೇಕಾಗುವುದಿಲ್ಲ'' ಎಂದಿದ್ದಾರೆ ರಾಮ್ ಗೋಪಾಲ್ ವರ್ಮಾ.

    ''ನೂರು ವರ್ಷದ ಬಳಿಕವೂ ಪ್ರಭಾಸ್‌ರ ಹೊಸ ಸಿನಿಮಾ ನೋಡಬಹುದು''

    ''ನೂರು ವರ್ಷದ ಬಳಿಕವೂ ಪ್ರಭಾಸ್‌ರ ಹೊಸ ಸಿನಿಮಾ ನೋಡಬಹುದು''

    ''ಈ ತಂತ್ರಜ್ಞಾನದಿಂದ ಬಹಳ ಒಳಿತೂ ಆಗುತ್ತದೆ. ನಿಜವಾದ ಪ್ರಭಾಸ್ ಅಥವಾ ಇನ್ನಾವುದೇ ನಟರಿಗೆ ವಯಸ್ಸಾಗುತ್ತದೆ. ಆದರೆ ಮೋಷನ್ ಕ್ಯಾಪ್ಚರ್ ತಂತ್ರಜ್ಞಾನದ ಮೂಲಕ ಸೃಷ್ಟಿ ಮಾಡುವ ನಟರಿಗೆ ವಯಸ್ಸೇ ಆಗುವುದಿಲ್ಲ. ಇನ್ನು ನೂರು ವರ್ಷಗಳಾದ ಬಳಿಕವೂ ನಾವು ಯಂಗ್ ಪ್ರಭಾಸ್, ಮಹೇಶ್ ಬಾಬು ಅವರ ಸಿನಿಮಾಗಳನ್ನೇ ನೋಡಬಹುದು. ಇದು ಕೆಲವೇ ವರ್ಷಗಳಲ್ಲಿ ಸಾಧ್ಯವಾಗುತ್ತದೆ. ರಾಜಮೌಳಿ ಇದನ್ನು ಬಳಸುವ ಸಾಧ್ಯತೆ ಇದೆ'' ಎಂದಿದ್ದಾರೆ ವರ್ಮಾ.

    ಬದಲಾಗಲಿದೆ ಚಿತ್ರರಂಗ

    ಬದಲಾಗಲಿದೆ ಚಿತ್ರರಂಗ

    ಮೋಷನ್ ಕ್ಯಾಪ್ಚರ್ ತಂತ್ರಜ್ಞಾನ ಈಗ ಬಹಳ ಸದ್ದು ಮಾಡುತ್ತಿದೆ. 'ಅವತಾರ್' ಸಿನಿಮಾ ಸರಣಿಯನ್ನು ಇದೇ ಮಾದರಿಯಲ್ಲಿ ಚಿತ್ರೀಕರಣ ಮಾಡಲಾಗಿದೆ. ಈ ಮಾದರಿಯಲ್ಲಿ ನಿಜ ಜಗತ್ತಿನಲ್ಲಿ ಅಸಾಧ್ಯ ಎನ್ನಿಸುವ ದೃಶ್ಯಗಳನ್ನು ಸಹ ಚಿತ್ರೀಕರಣ ಮಾಡಿ ನಿಜವೇ ಎಂಬಂತೆ ತೆರೆಯ ಮೇಲೆ ತೋರಿಸಬಹುದು. ಭವ್ಯ ಲೋಕ ತೆರೆದಿಟ್ಟ 'ಅವತಾರ್' ಸಿನಿಮಾವನ್ನು ಮೋಷನ್ ಕ್ಯಾಪ್ಚರ್ ತಂತ್ರಜ್ಞಾನ ಬಳಸಿ ಕೇವಲ ಒಂದು ದೊಡ್ಡ ಕೊಠಡಿಯಲ್ಲಿ ಚಿತ್ರೀಕರಣ ಮಾಡಲಾಗಿರುವುದು ಇದರ ಸಾಧ್ಯತೆಗೆ ಸಾಕ್ಷಿ. ವೇಗವಾಗಿ ಬೆಳೆಯುತ್ತಿರುವ ಎಐ ತಂತ್ರಜ್ಞಾನ ಸಹ ದೊಡ್ಡ ಬದಲಾವಣೆಗಳನ್ನು ಚಿತ್ರರಂಗದಲ್ಲಿ ಮಾಡಲಿದೆ.

    English summary
    Director Ram Gopal Varma predicts movie industry future. He said technology will rule the industry.
    Monday, January 9, 2023, 13:17
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X