ತಿರುಪತಿ ತಿಮ್ಮಪ್ಪನ ಮೇಲೆ ಆಣೆ ಮಾಡಿದ ರಾಮ್ ಗೋಪಾಲ್ ವರ್ಮಾ
ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಇದ್ದಲ್ಲಿ ವಿವಾದಗಳು ಇದ್ದೇ ಇರುತ್ತವೆ. ಅವರನ್ನು ಸುತ್ತಿಕೊಂಡಿರುವ ವಿವಾದಗಳೆಲ್ಲವನ್ನು ಅವರೇ ಸೃಷ್ಟಿಸಿಕೊಂಡಿದ್ದಾರೆ. ಖ್ಯಾತ ನಟ ಪವರ್ ಸ್ಟಾರ್ ಎಂದು ಹೆಸರಿಟ್ಟು ಸಿನಿಮಾವೊಂದನ್ನು ಘೊಷಿಸಿರುವ ಅವರು, ಈಗಾಗಲೇ ಚಿತ್ರೀಕರಣವನ್ನು ಸಹ ಪ್ರಾರಂಭಿಸಿದ್ದಾರೆ. ಈ ಸಿನಿಮಾ ಭಾರಿ ವಿವಾದವನ್ನು ಹುಟ್ಟುಹಾಕಿದೆ.
Recommended Video
ಪವನ್ ಕಲ್ಯಾಣ್ ಅವರನ್ನು ಹೋಲುವ ನಟರನ್ನು ಹಾಕಿಕೊಂಡು ಸಿನಿಮಾ ಪ್ರಾರಂಭಿಸಿರುವ ರಾಮ್ ಗೋಪಾಲ್ ವರ್ಮಾ ಅವರ ಈ ಹುಡುಗಾಟಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ.
ಪವನ್ ಕಲ್ಯಾಣ್ ಹಾಗೂ ಮೆಗಾಸ್ಟಾರ್ ಚಿರಂಜೀವಿ ಅಭಿಮಾನಿಗಳು ರಾಮ್ ಗೋಪಾಲ್ ವರ್ಮಾ ಮೇಲೆ ಸಿಟ್ಟಾಗಿದ್ದು, ಸಿನಿಮಾವನ್ನು ನಿಲ್ಲಿಸಬೇಕು ಎಂಬ ಒತ್ತಾಯಗಳು ಕೇಳಿಬರುತ್ತಿವೆ.

ಅನವಶ್ಯಕ ವಿವಾದ ಸೃಷ್ಟಿಸುತ್ತಿದ್ದಾರೆ: ವರ್ಮಾ
ಇದಕ್ಕೆ ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯಿಸಿರುವ ರಾಮ್ ಗೋಪಾಲ್ ವರ್ಮಾ, 'ಪವರ್ ಸ್ಟಾರ್ ಸಿನಿಮಾದ ಬಗ್ಗೆ ಕೆಲವರು ಅನವಶ್ಯಕ ವಿವಾದ ಸೃಷ್ಟಿಸುತ್ತಿದ್ದಾರೆ. ಈ ಸಿನಿಮಾದ ಮೂಲಕ ಯಾರನ್ನು ಕೆಟ್ಟದಾಗಿ ಬಿಂಬಿಸುವುದಿಲ್ಲ' ಎಂದು ರಾಮ್ ಗೋಪಾಲ್ ವರ್ಮಾ ಹೇಳಿದ್ದಾರೆ.

ಬಾಲಾಜಿ ಮೇಲೆ ಆಣೆಮಾಡಿದ ವರ್ಮಾ
ಇಷ್ಟೆ ಅಲ್ಲ, 'ಸಿನಿಮಾದಲ್ಲಿ ಯಾರ ಬಗ್ಗೆಯೂ ಕೆಟ್ಟದಾಗಿ, ಅವಮಾನಕಾರಿವಾಗಿ ತೋರಿಸುವುದಿಲ್ಲ ಎಂದು ನಾನು ತಿರುಪತಿ ಬಾಲಾಜಿ ಮೇಲೆ ಪ್ರಮಾಣ ಮಾಡಿ ಹೇಳುತ್ತಿದ್ದೇನೆ' ಎಂದು ಟ್ವಿಟ್ಟರ್‌ನಲ್ಲಿ ಕೈ ಮುಗಿದಿದ್ದಾರೆ ರಾಮ್ ಗೋಪಾಲ್ ವರ್ಮಾ.

ಸಿನಿಮಾದಲ್ಲಿ ಯಾರು ನಟಿಸಲಿದ್ದಾರೆ
ಪವರ್ ಸ್ಟಾರ್ ಸಿನಿಮಾದಲ್ಲಿ ಪಿಕೆ, ಎಂಎಸ್, ಚಿತ್ರದಲ್ಲಿ ಪಿಕೆ, ಎಂಎಸ್, ಎನ್‌ಬಿ ಮತ್ತು ಟಿಎಸ್ ಒಬ್ಬ ರಶ್ಯನ್ ಮಹಿಳೆ, ಕೆಲವು ಎಮ್ಮೆಗಳು, ಕತ್ತೆಗಳು ಮತ್ತು ಆರ್‌ಜಿವಿ ನಟಿಸಲಿದ್ದಾರೆ ಎಂದು ವರ್ಮಾ ಹೇಳಿದ್ದರು.

ಸಿನಿಪ್ರಿಯರಿಗೆ ಗೊತ್ತಿರುವ ಸಂಗತಿಯೇ
ಪಿಕೆ ಎಂದರೆ ಪವನ್ ಕಲ್ಯಾನ್, ಎಮ್‌ಎಸ್ ಎಂದರೆ ಮೆಗಾಸ್ಟಾರ್ ಸ್ಟಾರ್ ಚಿರಂಜೀವಿ, ಎನ್‌ಬಿ ಎಂದರೆ ಅವರ ಸಹೋದರ ನಾಗಬಾಬು, ಟಿಎಸ್ ಎಂದರೆ ನಿರ್ದೇಶಕ ತ್ರಿವಿಕ್ರಮ್ ಇದು ತೆಲುಗು ಸಿನಿಪ್ರೇಕ್ಷಕರಿಗೆ ಗೊತ್ತಿರುವ ಸಂಗತಿಯೇ.


Click it and Unblock the Notifications











