ಪ್ರಿಯಾಂಕಾ ಚೋಪ್ರಾ ಸಹೋದರಿ ಮನ್ನಾರಗೆ ಪಬ್ಲಿಕ್‌ನಲ್ಲಿ ಚುಂಬಿಸಿದ ನಿರ್ದೇಶಕ, ಜನರ ಖಂಡನೆ

ಕೆಲವು ನಿರ್ದೇಶಕರಿಗೆ ಸಾರ್ವಜನಿಕವಾಗಿ ತಮ್ಮ ಚಿತ್ರದ ನಟಿಯರೊಂದಿಗೆ ಹೇಗೆ ವರ್ತಿಸಬೇಕು ಎಂಬುದು ತಿಳಿದಿರುವುದಿಲ್ಲ. ಹದ್ದುಮೀರಿ ವರ್ತಿಸುವ ಹಲವು ನಿರ್ದೇಶಕರು ಇದ್ದಾರೆ. ಇದಕ್ಕೆ ಮಂಗಳವಾರದ ಘಟನೆ ಸಾಕ್ಷಿಯಾಗಿದೆ. ಪ್ರಿಯಾಂಕಾ ಚೋಪ್ರಾ ಅವರ ಸೋದರ ಸಂಬಂಧಿ ನಟಿ ಮನ್ನಾರ ಚೋಪ್ರಾ ಅವರನ್ನು ನಿರ್ದೇಶಕರೊಬ್ಬರು ಕ್ಯಾಮೆರಾ ಮುಂದೆಯೇ ಚುಂಬಿಸಿದ್ದಾರೆ.

ನಿರ್ದೇಶಕ ಎಎಸ್ ರವಿಕುಮಾರ್ ಚೌಧರಿ ತಮ್ಮ ಮುಂಬರುವ ಸಿನಿಮಾ ತಿರಗಬಡರ ಸಾಮಿ (Thiragabadara Saami) ಚಿತ್ರದ ಪ್ರಚಾರಕ್ಕೆ ನಟಿ ಮನ್ನಾರ ಅವರ ಜೊತೆಗೆ ಬಂದಿದ್ದರು. ಈ ವೇಳೆ ಕ್ಯಾಮೆರಾಗಳ ಎದುರು ನಟಿಯನ್ನು ಬರಸೆಳೆದು ಚುಂಬಿಸಿದ್ದಾರೆ. ಇದಕ್ಕೆ ಹಲವರು ನಿರ್ದೇಶಕನಿಗೆ ಸರಿಯಾಗಿ ಉಗಿದಿದ್ದಾರೆ.

director-ravi-kumar-chowdary-kissed

ಆನ್‌ಲೈನ್‌ನಲ್ಲಿ ವೈರಲ್ ಆಗಿರುವ ವಿಡಿಯೊದಲ್ಲಿ, ನಟಿ ಮನ್ನಾರ ಅವರು ನಿರ್ದೇಶಕ ಎಎಸ್ ರವಿಕುಮಾರ್ ಚೌಧರಿ ಅವರ ಜೊತೆಗೆ ಕ್ಯಾಮೆರಾಗಳಿಗೆ ಪೋಸ್ ನೀಡುತ್ತಿದ್ದಾರೆ. ಈ ವೇಳೆ ನಿರ್ದೇಶಕ ಆಕೆಯ ಭುಜದ ಸುತ್ತ ಕೈ ಹಾಕಿದ್ದರು. ಇದೇ ವೇಳೆ ಆಕೆಯನ್ನು ಬರಸೆಳೆದು ಚುಂಬಿಸಿದ್ದಾರೆ.

ಘಟನೆಗೆ ಹೇಗೆ ಪ್ರತಿಕ್ರಿಯಿಸಬೇಕು ಎಂದು ತಿಳಿಯದೆ ನಟಿ ಮನ್ನಾರ ಆಶ್ಚರ್ಯದಿಂದ ನಿಂತಿದ್ದರು. ಟ್ವಿಟರ್‌ನಲ್ಲಿ ಈ ವಿಡಿಯೋ ಹಲವರು ಹಂಚಿಕೊಂಡಿದ್ದು, ವೈರಲ್ ಆಗಿತ್ತು. ನಿರ್ದೇಶಕನ ನಡವಳಿಕೆಗೆ ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ದೂಷಿಸಿದ್ದಾರೆ.

ನೆಟ್ಟಿಗರೊಬ್ಬರು "ಇದರಿಂದ ಅವಳಿಗೆ ಎಷ್ಟು ಮುಜುಗರವಾಗಿರಬೇಡ" ಎಂದಿದ್ದಾರೆ. ಮತ್ತೊಬ್ಬರು, ಅಲ್ಲಿಯೇ ಲೈಂಗಿಕ ಕಿರುಕುಳ ನಡೆಯುತ್ತಿದೆ. ಆಕೆಗೆ ನಾಚಿಕೆಯಾಗುತ್ತಿರಬಹುದು, ಎಲ್ಲವೂ ಸರಿಯಿದೆ ಎಂದು ತೋರಿಸಿಕೊಳ್ಳುತ್ತಿರಬಹುದು. ಆದರೆ ಒಳಗೊಳಗೆ ಆಕೆ ಕೋಪಗೊಂಡಿದ್ದಾಳೆ" ಎಂದು ಬರೆದಿದ್ದಾರೆ.

"ಏನು ತೆವಲು ಇದು? ಚಿತ್ರೋದ್ಯಮವು ಮೊಳಕೆಯೊಡೆಯುತ್ತಿರುವ MeToo ಘಟನೆಗಳನ್ನು ಗುರುತಿಸಬೇಕು. ಅವುಗಳನ್ನು ಬೆಳೆಯಲು ಬಿಡಬಾರದು. ನಿಮ್ಮ ಮನೆಯನ್ನು ಸರಿಯಾಗಿ ನಿಭಾಯಿಸಲು ಆಗದೆ ನಿಮ್ಮ ಚಲನಚಿತ್ರಗಳಲ್ಲಿ ಸಾರ್ವಜನಿಕರಿಗೆ ಬೋಧಿಸಲು ನೀವು ಅನರ್ಹರು" ಎಂದು ಮತ್ತೊಬ್ಬರು ಕಿಡಿಕಾರಿದ್ದಾರೆ.

director-ravi-kumar-chowdary-kissed

ಇಂತಹ ಘಟನೆಗೆ ಒಳಗಾಗಿದ್ದ ಕಾಜಲ್ ಅಗರ್ವಾಲ್

ಇಂತಹ ಘಟನೆಗಳಿ ಸುದ್ದಿಯಾಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಖ್ಯಾತ ನಟಿ ಕಾಜಲ್ ಅಗರ್ವಾಲ್ ಕೂಡ ಇದೇ ರೀತಿಯ ಘಟನೆಗೆ ಒಳಗಾಗಿದ್ದರು. ಛಾಯಾಗ್ರಾಹಕ ಚೋಟಾ ಕೆ ನಾಯ್ಡು ವೇದಿಕೆಯಲ್ಲಿ ಕಾಜಲ್ ಅಗರ್ವಾಲ್‌ಗೆ ಮುತ್ತಿಟ್ಟ ಫೋಟೋಗಳು ವೈರಲ್ ಆಗಿದ್ದವು.

ಇನ್ನು, ಘಟನೆ ಕುರಿತು ನಟಿ ಮನ್ನಾರ ಇನ್ನೂ ಪ್ರತಿಕ್ರಿಯಿಸಿಲ್ಲ. ತಿರಗಬಡರ ಸಾಮಿ ಚಿತ್ರದಲ್ಲಿ ಮನ್ನಾರ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗಷ್ಟೇ ದಿಲ್ ರಾಜು ಟೀಸರ್ ಬಿಡುಗಡೆ ಮಾಡಿದ್ದು, ಎಲ್ಲರ ಗಮನ ಸೆಳೆದಿದೆ. ಚಿತ್ರದಲ್ಲಿ ಮಕರಂದ್ ದೇಶಪಾಂಡೆ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ, ರಾಜ್ ತರುಣ್ ಪ್ರಮುಖ ಪಾತ್ರದಲ್ಲಿದ್ದಾರೆ.

ನಟಿ ಮನ್ನಾರ ಬಾಲಿವುಡ್‌ನ ಜಿದ್ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ನಂತರ ತೆಲುಗಿನಲ್ಲಿ ಪ್ರೇಮ ಗೀಮಾ ಜಂತ ನೈ ಚಿತ್ರದ್ಲಿ ನಟಿಸಿದ್ದರು. ಸಂದಮಾರುತಮ್ (2015) ಮತ್ತು ಜಕ್ಕಣ್ಣ (2019) ಮತ್ತು ಸೀತಾ (2019) ಚಿತ್ರದಲ್ಲಿ ನಟಿಸಿದ್ದಾರೆ.

More from Filmibeat

English summary
Director Ravi Kumar Chowdary kissed Mannara Chopra in Public.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X