'ರಣಬಾಲಿ' ಚಿತ್ರದ ಪೋಸ್ಟರ್‌ನಲ್ಲಿ ವಿಜಯ್, ರಶ್ಮಿಕಾ ಗಂಭೀರ ವದನರಾಗಿರುವುದು ಯಾಕೆ?

ಒಂದ್ಕಡೆ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮದುವೆ ಫೋಟೊಗಳು ಸಖತ್ ವೈರಲ್ ಆಗಿ ಸದ್ದು ಮಾಡ್ತಿದೆ. ಮತ್ತೊಂದು ಅವರಿಬ್ಬರು ನಟಿಸಿರು 'ರಣಬಾಲಿ' ಚಿತ್ರದ ಟೀಸರ್ ಹಾಗೂ ಪೋಸ್ಟರ್ ರಿಲೀಸ್ ಆಗಿ ಗಮನ ಸೆಳೆಯುತ್ತಿದೆ. ಇದು ವಿಜಯ್-ರಶ್ಮಿಕಾ ಜೋಡಿ ನಟನೆಯ 3ನೇ ಸಿನಿಮಾ.

ಈ ಐತಿಹಾಸಿಕ ಕಥಾಹಂದರದ ಚಿತ್ರಕ್ಕೆ ರಾಹುಲ್ ಸಂಕೃತ್ಯಾನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರದಲ್ಲಿ ನಾಯಕ-ನಾಯಕಿಯ ಮದುವೆ ಸನ್ನಿವೇಶ ಇದೆ. ವಿಜಯ್-ರಶ್ಮಿಕಾ ಮದುವೆ ಬೆನ್ನಲ್ಲೇ ಚಿತ್ರದ ಮದುವೆ ಸನ್ನಿವೇಶಗಳನ್ನು ಸೇರಿಸಿ ಸ್ಪೆಷಲ್ ಟೀಸರ್ ಕಟ್ ಮಾಡಿ ರಿಲೀಸ್ ಮಾಡಿದ್ದಾರೆ. ಅದಕ್ಕೆ ಒಳ್ಳೆ ರೆಸ್ಪಾನ್ಸ್ ಕೂಡ ಸಿಗುತ್ತಿದೆ. 18ನೇ ಶತಮಾನದ ಕಥೆಯನ್ನು ಚಿತ್ರದಲ್ಲಿ ಕಟ್ಟಿಕೊಡಲಾಗುತ್ತಿದೆ. ಆ ಕಾಲಘಟ್ಟವನ್ನು ಕಟ್ಟಿಕೊಡಲು ಚಿತ್ರತಂಡ ಶ್ರಮಿಸುತ್ತಿದೆ. ಟೈಟಲ್ ರೋಲ್‌ನಲ್ಲಿ ವಿಜಯ್ ನಟಿಸಿದ್ದು ಆತನ ಪತ್ನಿ ಜಯಮ್ಮ ಪಾತ್ರದಲ್ಲಿ ರಶ್ಮಿಕಾ ಮಿಂಚಿದ್ದಾರೆ.

Director Reveals Inspiration Behind Ranabaali Wedding Poster Featuring Vijay Deverakonda Rashmika

ಟೀಸರ್ ಓಕೆ ಆದರೆ ಪೋಸ್ಟರ್‌ನಲ್ಲಿ ಇಬ್ಬರೂ ಯಾಕೆ ಬಹಳ ಗಂಭೀರವಾಗಿ ಮುಖ ಊದಿಸಿಕೊಂಡು ಕೂತಿದ್ದಾರೆ. ಇದು ಯಾವ ಕಲ್ಪನೆಯ ಪೋಸ್ಟರ್ ಎಂದು ಕೆಲವರು ಟ್ರೋಲ್ ಮಾಡುತ್ತಿದ್ದಾರೆ. ಅದಕ್ಕೆ ಕೆಲವರು ಕೌಂಟರ್ ಕೊಡುತ್ತಿದ್ದಾರೆ. ಹಿಂದಿನ ಕಾಲದಲ್ಲಿ ಗಂಡ, ಹೆಂಡತಿ ಭಾವಚಿತ್ರವನ್ನು ಇದೇ ರೀತಿ ಚಿತ್ರ ಬಿಡಿಸುತ್ತಿದ್ದರು. ಫೋಟೊಗಳಲ್ಲಿ ಕೂಡ ಹೀಗೆ ಪೋಸ್ ಕೊಡುತ್ತಿದ್ದರು. ಕಥೆಗೆ ತಕ್ಕಂತೆ ಪೋಸ್ಟರ್ ಡಿಸೈನ್ ಮಾಡಲಾಗಿದೆ ಎಂದು ಟ್ರೋಲಿಗರಿಗೆ ತಿಳಿ ಹೇಳುವ ಪ್ರಯತ್ನ ಮಾಡುತ್ತಿದ್ದಾರೆ. ಇನ್ನು ವಿಜಯ್ ಹಾಗೂ ರಶ್ಮಿಕಾ ತಮ್ಮ ಪಾತ್ರಗಳಲ್ಲಿ ಲೀನ ಆಗಿರುವುದು ಟೀಸರ್, ಪೋಸ್ಟರ್ ನೋಡಿದರೆ ಗೊತ್ತಾಗುತ್ತದೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.

'ರಣಬಾಲಿ' ಚಿತ್ರದಲ್ಲಿ ನಾಯಕ-ನಾಯಕಿ ಮದುವೆ ಸನ್ನಿವೇಶದಂತೆಯೇ ಬಹಳ ಸಂಪ್ರದಾಯಬದ್ಧವಾಗಿ ನಿಜ ಜೀವನದಲ್ಲಿ ರಶ್ಮಿಕಾ, ವಿಜಯ್ ಮದುವೆ ಕೂಡ ನಡೆದಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಮದುಮಗ, ಮದುಮಗಳಾಗಿ ಜೋಡಿಯ ಉಡುಗೆ, ಆಭರಣ ಎಲ್ಲದ್ದಕ್ಕೂ ಈ ಚಿತ್ರವೇ ಸ್ಫೂರ್ತಿ ಎನ್ನುವಂತೆ ಕಾಣುತ್ತಿದೆ. ಚಿತ್ರದ ಪೋಸ್ಟರ್‌ನಲ್ಲಿ ಇರುವಂತೆ ವಿಜಯ್ ಮದುಮಗನಾಗಿ ಕಲ್ಯಾಣ ಮಂಟಪದಲ್ಲಿ ಕಂಡಿದ್ದಾರೆ. ಇನ್ನು 'ರಣಬಾಲಿ' ಚಿತ್ರದ ಪೋಸ್ಟರ್ ಬಗ್ಗೆ ನಿರ್ದೇಶಕ ರಾಹುಲ್ ಟ್ವೀಟ್ ಮಾಡಿದ್ದಾರೆ.

ಮದುವೆಯ ಪೋಸ್ಟರ್ ಹಿಂದಿನ ಕಥೆ ಏನಂದ್ರೆ "ನಾನು ಹಳೆಯ ಛಾಯಾಚಿತ್ರಗಳಿಂದ ಪ್ರಭಾವಿತನಾಗುತ್ತೇನೆ. ನಮ್ಮ ಪೋಷಕರು, ಅಜ್ಜ-ಅಜ್ಜಿ ... ಅವರು ಕ್ಯಾಮೆರಾದ ಮುಂದೆ ನಿಂತ ರೀತಿ. ಯಾವುದೇ ಪೋಸ್ ಇಲ್ಲ. ಪೂರ್ವಾಭ್ಯಾಸ ಮಾಡಿದ ನಗು ಇಲ್ಲ. ಅದು ಹೇಗೆ ಕಾಣುತ್ತದೆ ಎಂಬ ಬಗ್ಗೆ ಅವರಿಗೆ ಯಾವುದೇ ಆತಂಕವಿಲ್ಲ. ಕೇವಲ ಸತ್ಯ. ಕೇವಲ ಉಪಸ್ಥಿತಿ ಅಷ್ಟೆ. ಈ ಚಿತ್ರಗಳ ಬಹಳ ಸಹಜವಾಗಿದೆ. 'ರಣಬಾಲಿ'ಯ ಜಗತ್ತನ್ನು ನಿರ್ಮಿಸುವಾಗ, ನಾನು ಅದೇ ಪ್ರಾಮಾಣಿಕತೆಯನ್ನು ಬಯಸಿದ್ದೆ. 1800 ರ ದಶಕದ ಅಂತ್ಯವು ಆಕರ್ಷಕವಾಗಿರಲಿಲ್ಲ. ಬಹಳ ಕಠಿಣವಾಗಿತ್ತು. ಆ ಪ್ರಪಂಚದೊಳಗೆ, ಮದುವೆಗಳು ಘನತೆಯನ್ನು ಹೊಂದಿದ್ದವು" ಎಂದು ನಿರ್ದೇಶಕ ರಾಹುಲ್ ಬರೆದುಕೊಂಡಿದ್ದಾರೆ.

ಒಂದು ದಿನ, ವಿಜಯ್ ಮತ್ತು ರಶ್ಮಿಕಾ ತಮ್ಮ ಮದುವೆಯ ಉಡುಪಿನಲ್ಲಿ ಸೆಟ್‌ಗೆ ಬಂದಾಗ, ಏನೋ ಬದಲಾದಂತೆ ಭಾಸವಾಯಿತು ಎಂದು ಆ ದಿನವನ್ನು ರಾಹುಲ್ ನೆನಪಿಸಿಕೊಂಡಿದ್ದಾರೆ. "ಅವರಿಬ್ಬರು ಮದುವೆಯ ಉಡುಪಿನಲ್ಲಿ ಕಲಾವಿದರಂತೆ ಕಾಣಲಿಲ್ಲ. ನಿಜಕ್ಕೂ ಆ ಕಾಲಕ್ಕೆ ಜಾರಿದಂತೆ ಕಾಣುತ್ತಿದ್ದರು. ಅವರು ತುಂಬಾ ಸಹಜವಾಗಿ ಆ ಪಾತ್ರಗಳೇ ತಾವಾಗಿಬಿಟ್ಟಿದ್ದರು. ಸರಳವಾಗಿ ನಾನು ಚಿತ್ರವನ್ನು ತೆಗೆದಿದ್ದೇನೆ." ಎಂದು ಟ್ವೀಟ್ ಮಾಡಿದ್ದಾರೆ. ಸೆಪ್ಟೆಂಬರ್ 11ರಂದು 'ರಣಬಾಲಿ' ಸಿನಿಮಾ ತೆರೆಗೆ ಬರುವ ನಿರೀಕ್ಷೆಯಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X