For Quick Alerts
  ALLOW NOTIFICATIONS  
  For Daily Alerts

  ದುಬಾರಿ ಕಾರು ಖರೀದಿಸಿದ ರಿಷಬ್ ಶೆಟ್ಟಿ!

  |

  ಸ್ಯಾಂಡಲ್‌ವುಡ್‌ನ ಹೆಸರಾಂತ ನಿರ್ದೇಶಕ ಮತ್ತು ನಟ ರಿಷಬ್ ಶೆಟ್ಟಿ ತಮ್ಮ ಡಿಫ್ರೆಂಟ್ ಪ್ರಯೋಗಗಿಂದಲೇ ಹೆಸರುವಾಸಿ. ಸಿನಿಮಾ ನಿರ್ದೇಶನ ಇರಲಿ, ನಟನೆ ಇರಲಿ ಯಾವುದೇ ಇದ್ದರು ಅಲ್ಲೊಂದು ವಿಭಿನ್ನತೆ ಇದ್ದೇ ಇರುತ್ತದೆ. ಹಾಗಾಗಿ ತಮ್ಮ ಪ್ರಯೋಗಗಳ ಮೂಲಕವೇ ಗುರುತಿಸಿಕೊಂಡಿದ್ದಾರೆ.

  ರಿಷಬ್ ಶೆಟ್ಟಿ ಜೊತೆಗೆ, ಅವರ ಕುಟುಂಬ ಕೂಡ ಫೇಮಸ್. ರಿಷಬ್ ಲವ್ ಸ್ಟೋರಿ, ಮದುವೆ ಸ್ಟೋರಿ ಎಲ್ಲವೂ ಗೊತ್ತೇ ಇದೆ. ಹಲವು ಬಾರಿ ಅವರೇ ಅದನ್ನು ಹೇಳಿಕೊಂಡಿದ್ದಾರೆ. ಈಗ ರಿಷಬ್ ಬಗ್ಗೆ ಮಾತನಾಡಲು ಕಾರಣ ಅವರ ಕುಟುಂಬ.

  Harikathe Alla Girikathe Review: 'ಹರಿ ಕಥೆ ಅಲ್ಲ ಗಿರಿ ಕಥೆ' ಹಾಸ್ಯವೇ ಎಲ್ಲ, ಭಾವುಕತೆ ತಾಕಲ್Harikathe Alla Girikathe Review: 'ಹರಿ ಕಥೆ ಅಲ್ಲ ಗಿರಿ ಕಥೆ' ಹಾಸ್ಯವೇ ಎಲ್ಲ, ಭಾವುಕತೆ ತಾಕಲ್

  ರಿಷಬ್ ಶೆಟ್ಟಿ ಹೊಸ ಕಾರನ್ನು ಪರಿಚಯಿಸಿದೆ. ಅದು ದುಬಾರಿ ಬೆಲೆಯ ಐಷಾರಾಮಿ ಕಾರು. ಕಾರಿನ ಜೊತೆಗೆ ರಿಷಬ್ ಕುಟುಂಬ ಕ್ಲಿಕ್ಕಿಸಿಕೊಂಡ ಫೋಟೊಗಳು ವೈರಲ್ ಆಗಿವೆ. ಅಷ್ಟಕ್ಕೂ ರಿಷಬ್ ಖರೀದಿಸಿದ ಕಾರು ಯಾವುದು? ಎನ್ನುವುದನ್ನು ಮುಂದೆ ಓದಿ...

  ರಿಷಬ್ ಶೆಟ್ಟಿ ಮನೆಗೆ ಆಡಿ ಕ್ಯೂ7!

  ರಿಷಬ್ ಶೆಟ್ಟಿ ಮನೆಗೆ ಆಡಿ ಕ್ಯೂ7!

  ನಿರ್ದೇಶಕ ರಿಷಬ್ ಶೆಟ್ಟಿ ಈಗ ಐಷಾರಾಮಿ ಕಾರಿನ ಒಡೆಯರಾಗಿದ್ದಾರೆ. ಹೌದು, ರಿಷಬ್ ಶೆಟ್ಟಿ ದುಬಾರಿ ಕಾರುಗಳಲ್ಲಿ ಒಂದಾಗಿರುವ ಆಡಿ ಕ್ಯೂ7 ಕಾರನ್ನು ಖರೀದಿಸಿದ್ದಾರೆ. ಈ ಆಡಿ ಕ್ಯೂ7 ಸೆಲೆಬ್ರೆಟಿಗಳ ಅಚ್ಚು ಮೆಚ್ಚಿನ ಕಾರುಗಳಲ್ಲಿ ಜನಪ್ರಿಯ ಕಾರು. ಹಲವು ಸಿನಿಮಾ ತಾರೆಯರ ಬಳಿ ಈ ಕಾರು ಇದ್ದು, ಈಗ ರಿಷಬ್ ಶೆಟ್ಟಿ ಮನೆಗೂ ಈ ಕಾರು ಹೊಸ ಸದಸ್ಯನಾಗಿದ್ದಾನೆ.

  ಈ ವಾರ ತೆರೆಗೆ ಬಂದಿರುವ ಸಿನಿಮಾಗಳ ಪಟ್ಟಿ ಇಲ್ಲಿದೆ: ಕನ್ನಡದ ನಾಲ್ಕು ಸಿನಿಮಾ ರಿಲೀಸ್!ಈ ವಾರ ತೆರೆಗೆ ಬಂದಿರುವ ಸಿನಿಮಾಗಳ ಪಟ್ಟಿ ಇಲ್ಲಿದೆ: ಕನ್ನಡದ ನಾಲ್ಕು ಸಿನಿಮಾ ರಿಲೀಸ್!

  ರಿಷಬ್ ಕಾರಿನ ಫೋಟೊ ವೈರಲ್!

  ರಿಷಬ್ ಕಾರಿನ ಫೋಟೊ ವೈರಲ್!

  ಐಷಾರಾಮಿ ಆಡಿ ಕ್ಯೂ7 ಕಾರನ್ನು ಕೊಂಡುಕೊಂಡ ಸಂಭ್ರಮವನ್ನು ಪ್ರಗತಿ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಆಡಿ ಕ್ಯೂ7 ಕಾರಿನ ಮುಂದೆ ನಿಂತು ರಿಷಬ್ ಮತ್ತು ಪತ್ನಿ ಪ್ರಗತಿ ಶೆಟ್ಟಿ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ. ಜೊತೆಯಲ್ಲಿ ಇಬ್ಬರೂ ಮಕ್ಕಳನ್ನು ನೋಡಬಹುದು. ಪ್ರಗತಿ ಶೆಟ್ಟಿ ಸಿನಿಮಾಗಳಿಗೆ ಕಾಸ್ಟ್ಯೂಮ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದಾರೆ.

  ರಿಷಬ್ ಶೆಟ್ಟಿಯ 'ಹರಿಕಥೆ ಅಲ್ಲ ಗಿರಿಕಥೆ'!

  ರಿಷಬ್ ಶೆಟ್ಟಿಯ 'ಹರಿಕಥೆ ಅಲ್ಲ ಗಿರಿಕಥೆ'!

  ಸ್ಟಾರ್​​ ನಿರ್ದೇಶಕ ಹಾಗೂ ನಟ ರಿಷಬ್​ ಶೆಟ್ಟಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 'ಬೆಲ್‌ಬಾಟಂ' ಸಿನಿಮಾದ ಮೂಲಕ ನಾಯಕ ನಟನಾಗಿ ಬಣ್ಣ ಹಚ್ಚಿದರು. ಅವರ ನಟನೆಯ 'ಗರುಡ ಗಮನ ವೃಷಭ ವಾಹನ' ಸೂಪರ್ ಹಿಟ್ ಆಗಿದೆ. ಇತ್ತೀಚೆಗಷ್ಟೆ 'ಹರಿಕಥೆ ಅಲ್ಲ ಗಿರಿಕಥೆ' ಸಿನಿಮಾ ಮೂಲಕ ರಿಷಬ್ ಅಭಿಮಾನಿಗಳ ಮುಂದೆ ಬಂದಿದ್ದರು.

  ಡಿಫರೆಂಟ್ ಸ್ಟೈಲ್‌ನಲ್ಲಿ ಕಥೆ ಹೇಳಲು ರೆಡಿಯಾಗಿದೆ 'ಹರಿಕಥೆ ಅಲ್ಲ ಗಿರಿಕಥೆ' ಚಿತ್ರತಂಡಡಿಫರೆಂಟ್ ಸ್ಟೈಲ್‌ನಲ್ಲಿ ಕಥೆ ಹೇಳಲು ರೆಡಿಯಾಗಿದೆ 'ಹರಿಕಥೆ ಅಲ್ಲ ಗಿರಿಕಥೆ' ಚಿತ್ರತಂಡ

  ಸಾಲು, ಸಾಲು ಚಿತ್ರಗಳಲ್ಲಿ ರಿಷಬ್ ಬ್ಯುಸಿ!

  ಸಾಲು, ಸಾಲು ಚಿತ್ರಗಳಲ್ಲಿ ರಿಷಬ್ ಬ್ಯುಸಿ!

  ಸದ್ಯ ರಿಷಬ್ ಶೆಟ್ಟಿ ಸಾಲ, ಸಾಲು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. 'ಬೆಲ್ ಬಾಟಂ 2', 'ಮಹಾನೀಯರೆ ಮಹಿಳೆಯರೇ', 'ಆಂಟಗೋನಿ ಶೆಟ್ಟಿ', 'ಕಾಂತಾರ' ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೇ 'ಕಾಂತಾರ' ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು, ಸಾಕಷ್ಟು ಗಮನ ಸೆಳೆದಿದೆ.

  English summary
  Director Rishab Shetty Buys Audi Q7 Car, Know More,
  Saturday, July 2, 2022, 21:18
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X