ರಾಮ್ ಚರಣ್-ಶಂಕರ್ ಪ್ಯಾನ್ ಇಂಡಿಯಾ ಸಿನಿಮಾ ಚಿತ್ರೀಕರಣದ ಫೋಟೋ ವೈರಲ್

By ಫಿಲ್ಮಿಬೀಟ್ ಡೆಸ್ಕ್

ದಕ್ಷಿಣ ಭಾರತೀಯ ಸಿನಿಮಾರಂಗದಲ್ಲಿ ಭಾರಿ ನಿರೀಕ್ಷೆ ಮೂಡಿಸಿರುವ ಸಿನಿಮಾಗಳಲ್ಲಿ ನಿರ್ದೇಶಕ ಶಂಕರ್ ಮತ್ತು ರಾಮ್ ಚರಣ್ ಸಿನಿಮಾ ಕೂಡ ಒಂದು. ಈಗಾಗಲೇ ಈ ಸಿನಿಮಾ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ ನಡೆಯುತ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಮೂಡಿಬರುತ್ತಿದ್ದು, 3ಡಿ ಸಿನಿಮಾ ಇದಾಗಿದೆ. ಅಂದಹಾಗೆ ಇತ್ತೀಚಿಗಷ್ಟೆ ಚಿತ್ರಕ್ಕೆ ನಾಯಕಿಯ ಎಂಟ್ರಿಯಾಗಿದೆ. ರಾಮ್ ಚರಣ್ ಗೆ ನಾಯಕಿಯಾಗಿ ಬಾಲಿವುಡ್ ಖ್ಯಾತ ನಟಿ ಕಿಯಾರಾ ಅಡ್ವಾಣಿ ಕಾಣಿಸಿಕೊಳ್ಳುತ್ತಿದ್ದಾರೆ.

ಶಂಕರ್ ಸಿನಿಮಾ ಘೋಷಣೆಯಾಗಿ ತಿಂಗಳ ಮೇಲಾಗಿತ್ತು. ಚಿತ್ರೀಕರಣ ಯಾವಾಗ ಪ್ರಾರಂಭಮಾಡಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆಮಾಡಿತ್ತು. ಇದೀಗ ಆ ಕುತೂಹಲಕ್ಕೆ ತೆರೆ ಎಳೆದಿದ್ದಾರೆ ನಿರ್ದೇಶಕ ಶಂಕರ್. ಈಗಾಗಲೇ ಚಿತ್ರದ ಚಿತ್ರೀಕರಣ ಪ್ರಾರಂಭ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಅಂದಹಾಗೆ ಮೊದಲ ಹಂತವಾಗಿ ಸಿನಿಮಾತಂಡ ಅದ್ದೂರಿಯಾಗಿ ಫೋಟೋಶೂಟ್ ಮಾಡಿಸುವಲ್ಲಿ ಬ್ಯುಸಿಯಾಗಿದೆ. ಮುಂದೆ ಓದಿ..

ಫೋಟೋಶೂಟ್ ನಲ್ಲಿ ಶಂಕರ್-ರಾಮ್ ಚರಣ್

ಫೋಟೋಶೂಟ್ ನಲ್ಲಿ ಶಂಕರ್-ರಾಮ್ ಚರಣ್

ಹೈದರಾಬಾದ್ ನ ಅನ್ನಪೂರ್ಣ ಸ್ಟುಡಿಯೋದಲ್ಲಿ ಶಂಕರ್ ಮುಂದಿನ ಸಿನಿಮಾದ ಫೋಟೋಶೂಟ್ ನಡೆಯುತ್ತಿದೆ. ಅಂದಹಾಗೆ ಈಗಾಗಲೇ ಫೋಟೋಶೂಟ್ ಮಾಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸೆಟ್ ನಲ್ಲಿ ರಾಮ್ ಚರಣ್ ಮತ್ತು ಶಂಕರ್ ಇಬ್ಬರು ಮಾತನಾಡುತ್ತಿರುವ ಫೋಟೋ ಎಲ್ಲಾ ಕಡೆ ಹರಿದಾಡುತ್ತಿದೆ.

ಹೈದರಾಬಾದ್ ಗೆ ಆಗಮಿಸಿದ ಕಿಯಾರಾ

ಹೈದರಾಬಾದ್ ಗೆ ಆಗಮಿಸಿದ ಕಿಯಾರಾ

ಇನ್ನು ಫೋಟೋ ಶೂಟ್ ಕಾರಣ ನಟಿ ಕಿಯಾರಾ ಅಡ್ವಾಣಿ ಕೂಡ ಈಗಾಗಲೇ ಹೈದರಾಬಾದ್ ತಲುಪಿದ್ದು, ಫೋಟೋಶೂಟ್ ನಲ್ಲಿ ಭಾಗಿಯಾಗಿದ್ದಾರೆ. ಕಿಯಾರಾ ಹೈದರಾಬಾದ್ ಏರ್ ಪೋರ್ಟ್ ನಲ್ಲಿ ಕಾಣಿಸಿಕೊಂಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಸದ್ಯ ಸಿನಿಮಾತಂಡ ಕೆಲಸವನ್ನು ಚುರುಕುಗೊಳಿಸಿದೆ. ಸದ್ಯ ಫೋಟೋಶೂಟ್ ಮಾಡುತ್ತಿರುವ ಸಿನಿಮಾತಂಡ ಸೆಪ್ಟಂಬರ್ 8ರಂದು ಮುಹೂರ್ತ ಸಮಾರಂಭ ಇಟ್ಟುಕೊಂಡಿದೆ ಎನ್ನುವ ಸುದ್ದಿ ಕೇಳಿಬರುತ್ತಿದೆ.

ಶೇರ್ ಷಾ ಸಕ್ಸಸ್ ನಲ್ಲಿ ಕಿಯಾರಾ

ಶೇರ್ ಷಾ ಸಕ್ಸಸ್ ನಲ್ಲಿ ಕಿಯಾರಾ

ಅಂದಹಾಗೆ ನಟಿ ಕಿಯಾರಾ ಸದ್ಯ ಶೇರ್ ಷಾ ಸಿನಿಮಾದ ಸೂಪರ್ ಸಕ್ಸಸ್ ನ ಖುಷಿಯಲ್ಲಿದ್ದಾರೆ. ಕಿಯಾರಾ ಮತ್ತು ಸಿದ್ಧಾರ್ಥ್ ಮಲ್ಹೋತ್ರ ನಟನೆಯ ಶೇರ್ ಷಾ ಸಿನಿಮಾ ಇತ್ತೀಚಿಗಷ್ಟೆ ಬಿಡುಗಡೆಯಾದೆ. ಒಟಿಟಿಯಲ್ಲಿ ಬಂದ ಸಿನಿಮಾಗೆ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಂದಹಾಗೆ ಶೇರ್ ಷಾ, ದಿವಂಗತ ಕ್ಯಾಪ್ಟನ್ ವಿಕ್ರಮ್ ಬಾತ್ರ ಅವರ ಜೀವನ ಆಧಾರಿತ ಸಿನಿಮಾವಾಗಿದೆ. ಈ ಸಿನಿಮಾದ ಯಶಸ್ಸಿನ ಖುಷಿಯಲ್ಲಿರುವ ಕಿಯಾರಾ ಈಗ ಮತ್ತೆ ದಕ್ಷಿಣದ ಕಡೆ ಮುಖಮಾಡಿದ್ದಾರೆ.

ದೊಡ್ಡ ಮಟ್ಟದಲ್ಲಿ ತಯಾರಾಗುತ್ತಿದೆ ಸಿನಿಮಾ

ದೊಡ್ಡ ಮಟ್ಟದಲ್ಲಿ ತಯಾರಾಗುತ್ತಿದೆ ಸಿನಿಮಾ

ಪ್ಯಾನ್ ಇಂಡಿಯಾ 3ಡಿ ಸಿನಿಮಾ ಇದಾಗಿದ್ದು, ಬಿಗ್ ಬಜೆಟ್ ನಲ್ಲಿ ಸಿನಿಮಾ ಮೂಡಿಬರುತ್ತಿದೆ. ಅಂದಹಾಗೆ ಇದು ರಾಮ್ ಚರಣ್ ನಟನೆಯ 15 ಸಿನಿಮಾವಾಗಿದೆ. ಚಿತ್ರಕ್ಕೆ ತೆಲುಗಿನ ಖ್ಯಾತ ನಿರ್ಮಾಪಕ ದಿಲ್ ರಾಜ್ ಬಂಡವಾಳ ಹೂಡುತ್ತಿದ್ದಾರೆ. ಸದ್ಯ ಚಿತ್ರೀಕರಣ ಪ್ರಾರಂಭ ಮಾಡುತ್ತಿರುವ ಸಿನಿಮಾತಂಡ ಮುಂದಿನ ವರ್ಷ ಈ ಸಿನಿಮಾವನ್ನು ಬಿಡುಗಡೆ ಮಾಡುವ ಪ್ಲಾನ್ ಮಾಡಿದೆ.

ವಿಲನ್ ಪಾತ್ರದಲ್ಲಿ ಫಹಾದ್ ನಟನೆ?

ವಿಲನ್ ಪಾತ್ರದಲ್ಲಿ ಫಹಾದ್ ನಟನೆ?

ಇನ್ನು ಸಿನಿಮಾದಲ್ಲಿ ದಕ್ಷಿಣ ಭಾರತೀಯ ಸಿನಿಮಾರಂಗದ ಖ್ಯಾತ ನಟ ಫಹಾದ್ ಫಾಸಿಲ್ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಈಗಾಗಲೇ ಭಾರಿ ಬೇಡಿಕೆಯ ನಟನಾಗಿ ಗುರುತಿಸಿಕೊಂಡಿರುವ ಫಹಾದ್ ಸದ್ಯ ತೆಲುಗಿನ ಪುಷ್ಪ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇತ್ತೀಚಿಗಷ್ಟೆ ಪುಷ್ಪ ಸಿನಿಮಾದ ಫಹಾದ್ ಲುಕ್ ಕೂಡ್ ರಿವೀಲ್ ಆಗಿದೆ. ಚಿತ್ರದಲ್ಲಿ ಫಹಾದ್ ವಿಲನ್ ಪೊಲೀಸ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಜೊತೆಗೆ ಫಹಾದ್ ಕಮಲ್ ಹಾಸನ್ ನಟನೆಯ ವಿಕ್ರಮ್ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಇದೀಗ ಮತ್ತೊಂದು ಬಿಗ್ ಬಜೆಟ್ ಸಿನಿಮಾ ಶಂಕರ್ ನಿರ್ದೇಶನದ ಚಿತ್ರದಲ್ಲೂ ನಟಿಸಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಸದ್ಯದಲ್ಲೇ ಈ ಬಗ್ಗೆ ಬಹಿರಂಗವಾಗುವ ಸಾಧ್ಯತೆ ಇದೆ.

RRR- ಆಚಾರ್ಯ ಮುಗಿಸಿರುವ ರಾಮ್ ಚರಣ್

RRR- ಆಚಾರ್ಯ ಮುಗಿಸಿರುವ ರಾಮ್ ಚರಣ್

ರಾಮ್ ಚರಣ್ ಸದ್ಯ ಆರ್ ಆರ್ ಆರ್ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಇತ್ತೀಚಿಗಷ್ಟೆ ವಿದೇಶದಲ್ಲಿ ಚಿತ್ರೀಕರಣ ಮುಗಿಸಿ ವಾಪಸ್ ಆಗಿದ್ದಾರೆ. ಆರ್ ಆರ್ ಆರ್ ಸಿನಿಮಾ ಜೊತೆಗೆ ರಾಮ್ ಚರಣ್ ಆಚಾರ್ಯ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಆಚಾರ್ಯ ಸಿನಿಮಾದ ಚಿತ್ರೀಕರಣ ಸಹ ಮುಗಿಸಿದ್ದಾರೆ. ಚಿತ್ರದಲ್ಲಿ ಚಿರಂಜೀವಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

More from Filmibeat

English summary
Tamil Director Shankar and Ram charan to begin photoshoot of next movie RC 15
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X