ನಿರ್ದೇಶಕ ರಾಜಮೌಳಿ- ಆಂಕರ್ ರಶ್ಮಿ ಲವ್ ಟ್ರ್ಯಾಕ್ ನಿಮಗೆ ಗೊತ್ತಾ?

ಖ್ಯಾತ ನಿರ್ದೇಶಕ ಎಸ್‌. ಎಸ್ ರಾಜಮೌಳಿ ಸದ್ಯ SSMB29 ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಸದ್ದಿಲ್ಲದೇ ಚಿತ್ರೀಕರಣ ಆರಂಭಿಸಿದ್ದಾರೆ ಎನ್ನಲಾಗ್ತಿದೆ. ಚಿತ್ರದಲ್ಲಿ ಮಹೇಶ್ ಬಾಬು ಜೊತೆ ಗ್ಲೋಬರ್ ಸ್ಟಾರ್ ಪ್ರಿಯಾಂಕಾ ಚೋಪ್ರಾ ನಟಿಸುತ್ತಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಸಿನಿಮಾ ಕಟ್ಟಿಕೊಡುವ ಪ್ರಯತ್ನ ನಡೀತಿದೆ.

ಸೂಪರ್ ಹಿಟ್ ಸಿನಿಮಾಗಳ ಮೂಲಕ ಸದ್ದು ಮಾಡಿದ ನಿರ್ದೇಶಕ ರಾಜಮೌಳಿ. ಭಾರತೀಯ ಚಿತ್ರರಂಗದ ದಿಕ್ಕು ಬದಲಿಸಿದ 'ಬಾಹುಬಲಿ' ರೀತಿಯ ಅದ್ಭುತ ಸಿನಿಮಾಗಳನ್ನು ಕೊಟ್ಟವರು. ಅದಕ್ಕೂ ಮುನ್ನ 'ಮಗಧೀರ', 'ಈಗ', 'ವಿಕ್ರಮಾರ್ಕುಡು' ಹಾಗೂ 'ಯಮದೊಂಗ' ರೀತಿಯ ಸೆನ್ಸೇಷನ್ ಚಿತ್ರಗಳನ್ನು ಪ್ರೇಕ್ಷಕರ ಮುಂದೆ ತಂದಿದ್ದಾರೆ.

Director SS Rajamouli Anchor Rashmi s Love track in this old tv serial video

3 ವರ್ಷಗಳ ಹಿಂದೆ 'RRR' ಚಿತ್ರದ ಮೂಲಕ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಸದ್ದು ಮಾಡಿದರು. ಆಸ್ಕರ್, ಗೋಲ್ಡನ್ ಗ್ಲೋಬ್ ರೀತಿಯ ಪ್ರಶಸ್ತಿಗಳು ಆ ಚಿತ್ರಕ್ಕೆ ಸಿಕ್ಕಿತ್ತು. ಜೇಮ್ಸ್‌ ಕ್ಯಾಮರೂನ್ ರೀತಿಯ ಹಾಲಿವುಡ್ ನಿರ್ದೇಶಕರು ಜಕ್ಕಣ್ಣ ಪ್ರತಿಭೆ ಮೆಚ್ಚಿಕೊಂಡಾಡಿದರು. ಅದೇ ಕಾರಣಕ್ಕೆ ಈಗ ಹಾಲಿವುಡ್ ರೇಂಜ್‌ನಲ್ಲಿ ಸಿನಿಮಾ ಮಾಡುವ ಸಾಹಸಕ್ಕೆ ಕೈ ಹಾಕಿದ್ದಾರೆ. ತೆರೆಮರೆಯಲ್ಲಿ ಚಿತ್ರೀಕರಣ ಶುರು ನಡೀತಿದೆ ಎನ್ನುವ ಮಾತುಗಳು ಕೇಳಿಬರ್ತಿದೆ. ಈ ಬಾರಿ ಮಹೇಶ್ ಬಾಬು ಜೊತೆ ಸೇರಿ ಮತ್ತೊಂದು ಮ್ಯಾಜಿಕ್ ಮಾಡಲು ಮುಂದಾಗಿದ್ದಾರೆ.

ಖ್ಯಾತ ನಿರ್ದೇಶಕರ ಬಳಿ ಸಹಾಯಕರಾಗಿ ಚಿತ್ರರಂಗಕ್ಕೆ ಬಂದ ರಾಜಮೌಳಿ ಬಳಿಕ ಸ್ವತಂತ್ರ ನಿರ್ದೇಶಕರಾಗಿದ್ದರು. ಕೆಲೆ ಜಾಹೀರಾತು, ಧಾರಾವಾಹಿ ಸಂಚಿಕೆಗಳನ್ನು ಕೂಡ ಜಕ್ಕಣ್ಣ ಕಟ್ಟಿಕೊಟ್ಟಿದ್ದರು. ಆದರೆ ರಾಜಮೌಳಿ ತೆರೆಮೇಲೆ ಕಾಣಿಸಿಕೊಂಡಿದ್ದು ತೀರ ಕಡಿಮೆ. ತಮ್ಮದೇ ಸಿನಿಮಾ ಹಾಡಿನ ಝಲಕ್‌ಗಳಲ್ಲಿ ಬಂದು ಹೋಗುತ್ತಾರೆ. 'ಬಾಹುಬಲಿ' ಚಿತ್ರದ ಸಣ್ಣ ಝಲಕ್‌ನಲ್ಲಿ ಕೂಡ ಮಿಂಚಿದ್ದರು. ಆದರೆ ಕಿರುತೆರೆ ಧಾರಾವಾಹಿಯಲ್ಲಿ ಕೂಡ ನಟಿಸಿದ್ದರು ಎನ್ನುವುದು ಬಹಳ ಜನರಿಗೆ ಗೊತ್ತಿಲ್ಲ.

ಎಸ್. ಎಸ್ ರಾಜಮೌಳಿ ತೆಲುಗು ಕಿರುತೆರೆಯ 'ಯುವ' ಧಾರಾವಾಹಿಯಲ್ಲಿ ಅತಿಥಿ ಪಾತ್ರದಲ್ಲಿ ಮಿಂಚಿದ್ದರು. ಸದ್ಯ ಆಂಕರ್ ಆಗಿ ಕಮಾಲ್ ಮಾಡುತ್ತಿರುವ ರಶ್ಮಿ ಆ ಧಾರಾವಾಹಿಯ ಲೀಡ್ ರೋಲ್‌ನಲ್ಲಿ ನಟಿಸಿದ್ದರು. 2007ರಲ್ಲಿ ನಟ ನಾಗಾರ್ಜುನ ಈ ಧಾರಾವಾಹಿ ನಿರ್ಮಾಣ ಮಾಡಿದ್ದರು. ಅಂದಹಾಗೆ ಧಾರಾವಾಹಿ ಸನ್ನಿವೇಶದಲ್ಲಿ ರಾಜಮೌಳಿಗೆ ರಶ್ಮಿ ಪ್ರಪೋಸ್ ಮಾಡುವ ಸನ್ನಿವೇಶ ಇತ್ತು. ಆ ವೀಡಿಯೋ ಈಗ ವೈರಲ್ ಆಗುತ್ತಿದೆ.

ರಾಜಮೌಳಿ ಹಾಗೂ ರಶ್ಮಿ ಒಟ್ಟಿಗೆ ನಟಿಸಿದ್ರಾ? ಇದು ಯಾವಾಗ? ಅಂತ ಕೆಲವರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ರಾಜಮೌಳಿ ಒಳ್ಳೆ ನಿರ್ದೇಶಕ ಮಾತ್ರವಲ್ಲ, ಒಳ್ಳೆ ನಟ ಕೂಡ ಹೌದು. ಮನಸ್ಸು ಮಾಡಿದರೆ ಯಾವುದಾದರೂ ಚಿತ್ರದಲ್ಲಿ ಒಳ್ಳೆ ಪಾತ್ರವನ್ನೇ ಮಾಡಬಹುದು ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.

ಜಕ್ಕಣ್ಣ ಒಳ್ಳೆ ನಟ ಎಂದು ಸಾಕಷ್ಟು ಕಲಾವಿದರು ಹೇಳಿದ್ದಾರೆ. ತಮ್ಮ ಚಿತ್ರದ ಕಥೆಗೆ ಏನು ಬೇಕು? ಕಲಾವಿದರು ಹೇಗೆ ನಟಿಸಬೇಕು ಎಂದು ಸ್ವತಃ ನಟಿಸು ತೋರಿಸುತ್ತಾರೆ. ಅವರು ಮಾಡಿದ್ದನ್ನು ನಾವು ಕಾಪಿ ಮಾಡಿಬಿಟ್ಟರೆ ಸಾಕು ಎಂದು ಸ್ಟಾರ್ ನಟ, ನಟಿಯರು ಹೇಳಿದ್ದಾರೆ. ಅವರ ಸಿನಿಮಾ ಮೇಕಿಂಗ್ ವೀಡಿಯೋಗಳಲ್ಲಿ ಕೂಡ ಅದನ್ನು ನೋಡಿದ್ದೇವೆ. ಸದ್ಯ ಧಾರಾವಾಹಿಯಲ್ಲಿ ರಶ್ಮಿ ಜೊತೆ ಜಕ್ಕಣ್ಣ ಲವ್ ಟ್ರ್ಯಾಕ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.

'ವಿಕ್ರಮಾರ್ಕುಡು' ಸಿನಿಮಾ ಬಳಿಕ ಈ ಧಾರಾವಾಹಿ ಬಂದಿರುವುದು ಗೊತ್ತಾಗುತ್ತದೆ. ಸನ್ನಿವೇಶವೊಂದರಲ್ಲಿ ಜಿಂತಾತ ಜಿತ್ತ ಜಿತ್ತ ಎಂದು ಜಕ್ಕಣ್ಣ ಕೈ ತಟ್ಟಿ ತೋರಿಸಿದಿರುವುದನ್ನು ನೋಡಬಹುದು. ಇನ್ನು ವೀಡಿಯೋದಲ್ಲಿ ರಶ್ಮಿನಾ ನೋಡಿ ಆಕೆಗೆ ಈಗ ಬಹಳ ವಯಸ್ಸಾದಂತೆ ಇದೆ. ಅಷ್ಟು ಹಿಂದೆಯೇ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸಿದ್ರಾ? ಎಂದು ಕೆಲವರು ಹುಬ್ಬೇರಿಸಿದ್ದಾರೆ.

More from Filmibeat

English summary
SS Rajamouli And Anchor Rashmi's Yuva Serial Video surfaces now
Read more about: rajamouli tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X