ಅಧಿಕೃತವಾಗಿ 'ವಾರಣಾಸಿ' ಸಿನಿಮಾ ಬಿಡುಗಡೆ ದಿನಾಂಕ ಘೋಷಿಸಿದ ರಾಜಮೌಳಿ
ಮಹೇಶ್ ಬಾಬು ಹಾಗೂ ರಾಜಮೌಳಿ ಕಾಂಬಿನೇಷನ್ ಸಿನಿಮಾ 'ವಾರಣಾಸಿ' ಸಿಕ್ಕಾಪಟ್ಟೆ ಕುತೂಹಲ ಮೂಡಿಸಿದೆ. ದೇಶ ವಿದೇಶಗಳಲ್ಲಿ ಸಿನಿಮಾ ಚಿತ್ರೀಕರಣ ನಡೀತಿದೆ. ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. 1000 ಕೋಟಿ ರೂ.ಗೂ ಅಧಿಕ ಬಂಡವಾಳ ವ್ಯಯಿಸುತ್ತಿದ್ದಾರೆ.
'ವಾರಣಾಸಿ' ಸಿನಿಮಾ ಬಿಡುಗಡೆ ಯಾವಗಾ ಎನ್ನುವ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿತ್ತು. ಇದೀಗ ಚಿತ್ರತಂಡವೇ ಅಧಿಕೃತವಾಗಿ ಮಾಹಿತಿ ನೀಡಿದೆ. ಮಹೇಶ್ ಬಾಬು ಜೊತೆಗೆ ಪ್ರಿಯಾಂಕ ಚೋಪ್ರಾ, ಪೃಥ್ವಿರಾಜ್ ಸುಕುಮಾರನ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. 'RRR' ಸಿನಿಮಾ ಬಳಿಕ ಜಕ್ಕಣ್ಣ ಈ ಚಿತ್ರಕ್ಕೆ ಕೈ ಹಾಕಿದ್ದಾರೆ. ಫಸ್ಟ್ ಗ್ಲಿಂಪ್ಸ್ ಮೂಲಕ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದ್ದಾರೆ.

ಹಾಲಿವುಡ್ ಕಂಪನಿಗಳ ಜೊತೆ ಕೈ ಜೋಡಿಸಿ 'ವಾರಣಾಸಿ' ಸಿನಿಮಾವನ್ನು ತೆರೆಗೆ ತರುವ ಪ್ರಯತ್ನ ನಡೀತಿದೆ. ಭಾರತದ ಸಿನಿರಸಿಕರು ಮಾತ್ರವಲ್ಲ ಹಾಲಿವುಡ್ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಜಕ್ಕಣ್ಣ ಈ ಸಿನಿಮಾ ಕಟ್ಟಿಕೊಡುತ್ತಿದ್ದಾರೆ. ತೆರೆಮೇಲೆ ವಿಷ್ಯುವಲ್ ವಂಡರ್ ಕ್ರಿಯೇಟ್ ಮಾಡುವ ಸಾಹಸಕ್ಕೆ ಕೈಹಾಕಿದ್ದಾರೆ.
ಗ್ಲೋಬ್‌ಟ್ರೋಟರ್, ಟೈಮ್‌ಟ್ರೋಟರ್ ಸಿನಿಮಾ ಇದಾಗಿದದ್ದು ದೊಡ್ಡಮಟ್ಟದಲ್ಲಿ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ. ಐಮ್ಯಾಕ್ಸ್ ಸ್ಕ್ರೀನ್‌ಗಳಿಗಾಗಿ 'ವಾರಣಾಸಿ' ಚಿತ್ರವನ್ನು ಕಟ್ಟಿಕೊಡಲಾಗ್ತಿದೆ. ಶ್ರಿ ದುರ್ಗಾ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಕೆ.ಎಲ್ ನಾರಾಯಣ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ರಾಜಮೌಳಿ ಪುತ್ರ ಎಸ್.ಎಸ್ ಕಾರ್ತಿಕೇಯ ಸಹ ನಿರ್ಮಾಪಕನಾಗಿ ಕೈಜೋಡಿಸಿದ್ದಾರೆ. ಎಂ. ಎಂ ಕೀರವಾಣಿ ಸಂಗೀತ, ಪಿ. ಎಸ್ ವಿನೋದ್ ಛಾಯಾಗ್ರಹಣ ಚಿತ್ರಕ್ಕಿದೆ.
ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ 'ವಾರಣಾಸಿ' ಚಿತ್ರಕ್ಕೆ ಕಥೆ ಬರೆದಿದ್ದಾರೆ. ಮಹೇಶ್ ಬಾಬು ರುದ್ರ ಎಂಬ ಪವರ್‌ಫುಲ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಶ್ರೀರಾಮನ ಅವತಾರದಲ್ಲಿ ಕೂಡ ತೆರೆಮೇಲೆ ದರ್ಶನ ಕೊಡಲಿದ್ದಾರೆ. ಕುಂಭ ಎಂಬ ಖಳನಾಗಿ ಪೃಥ್ವಿರಾಜ್ ಅಬ್ಬರಿಸಲಿದ್ದಾರೆ. ಮಂದಾಕಿನಿಯಾಗಿ ಪ್ರಿಯಾಂಕಾ ಕಮಾಲ್ ಮಾಡಲಿದ್ದಾರೆ. ಪ್ರಕಾಶ್ ರಾಜ್ ಕೂಡ ತಂಡ ಸೇರಿಕೊಂಡಿದ್ದಾರೆ. ಮುಂದಿನ ವರ್ಷ ಏಪ್ರಿಲ್ 7ರಂದು ಸಿನಿಮಾ ಬಿಡುಗಡೆ ಮಾಡುವುದಾಗಿ ರಾಜಮೌಳಿ ಘೋಷಿಸಿದ್ದಾರೆ.
1300 ಕೋಟಿ ರೂ. ಬಜೆಟ್ ಸಿನಿಮಾ 3000 ಕೋಟಿ ರೂ. ಕಲೆಕ್ಷನ್ ಮಾಡುವ ನಿರೀಕ್ಷೆಯಿದೆ ಎಂದು ಲೆಕ್ಕಾಚಾರ ಶುರುವಾಗಿದೆ. ಚಿತ್ರದಲ್ಲಿ 5 ವಿಭಿನ್ನ ಗೆಟಪ್‌ಗಳಲ್ಲಿ ಮಹೇಶ್ ಬಾಬು ಅಬ್ಬರಿಸಲಿದ್ದಾರೆ. ಆಫ್ರಿಕಾ ಕಾಡುಗಳ ಹಿನ್ನೆಲೆಯಲ್ಲಿ ಸಿನಿಮಾ ಕಥೆ ಸಾಗುತ್ತದೆ. ಕಲಿಯುಗದಿಂದ ತ್ರೇತಾಯುಗದವರೆಗೂ ಕಥೆ ಸಾಗುತ್ತದೆ. ಪ್ರೇಕ್ಷಕರಿಗೆ ಅದ್ಭುತ ಅನುಭವ ನೀಡುತ್ತದೆ ಎನ್ನುವ ಚರ್ಚೆ ನಡೀತಿದೆ. ಮೊದಲ ದಿನವೇ 300ರಿಂದ 400 ಕೋಟಿ ರೂ. ಕಲೆಕ್ಷನ್ ಮಾಡುವ ಸಿನಿಮಾ ಮೊದಲ ವಾರವೇ 1200 ಕೋಟಿ ರೂ. ಗಳಿಕೆ ಕಾಣುತ್ತದೆ ಎಂದು ಕೆಲವರು ಲೆಕ್ಕ ಹಾಕುತ್ತಿದ್ದಾರೆ.
ಮಹೇಶ್ ಬಾಬು, ಪೃಥ್ವಿರಾಜ್, ಪ್ರಿಯಾಂಕ ಜೊತೆ ಬೇರೆ ಯಾರೆಲ್ಲಾ ನಟಿಸುತ್ತಾರೆ ಎನ್ನುವ ಕುತೂಹಲ ಪ್ರೇಕ್ಷಕರಲ್ಲಿದೆ. ಭರದಿಂದ ಸಿನಿಮಾ ಚಿತ್ರೀಕರಣ ನಡೆಯುತ್ತಿದೆ. ಇನ್ನು 6 ತಿಂಗಳಲ್ಲಿ ಶೂಟಿಂಗ್ ಮುಗಿಸಿ ಮುಂದಿನ ಏಳೆಂಟು ತಿಂಗಳು ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಜಕ್ಕಣ್ಣ ಬ್ಯುಸಿ ಆಗಲಿದ್ದಾರೆ. ಚಿತ್ರಕ್ಕೆ ಮಹೇಶ್ ಬಾಬು, ರಾಜಮೌಳಿ ಭಾರೀ ಮೊತ್ತದ ಸಂಭಾವನೆ ಪಡೆದಿದ್ದಾರೆ. ಜೊತೆಗೆ ಲಾಭದಲ್ಲಿ ಪಾಲು ಪಡೆಯುವ ಸಾಧ್ಯತೆಯಿದೆ.
'ವಾರಣಾಸಿ' ಚಿತ್ರಕ್ಕಾಗಿ ಮೂರ್ನಾಲ್ಕು ವರ್ಷ ಮಹೇಶ್ ಬಾಬು ವ್ಯಯಿಸುತ್ತಿದ್ದಾರೆ. ಈ ನಡುವೆ ಬೇರೆ ಸಿನಿಮಾಗಳನ್ನು ಒಪ್ಪಿಕೊಂಡಿಲ್ಲ. ರಾಜಮೌಳಿ ಮೇಲೆ ಬಹಳ ನಿರೀಕ್ಷೆ ಇಟ್ಟು ಕಾಯುತ್ತಿದ್ದಾರೆ. ಹೈದರಾಬಾದ್, ಕೀನ್ಯಾದಲ್ಲಿ ಮೊದಲ ಶೆಡ್ಯೂಲ್ ಚಿತ್ರೀಕರಣ ನಡೆಸಲಾಗಿತ್ತು. ಒಡಿಸ್ಸಾದಲ್ಲಿ 2ನೇ ಶೆಡ್ಯೂಲ್ ಪೂರೈಸಿದ್ದರು. ಸದ್ಯ ಕ್ಲೈಮ್ಯಾಕ್ಸ್ ದೃಶ್ಯಗಳನ್ನು ಸೆರೆಹಿಡಿಯುವ ಕೆಲಸದಲ್ಲಿ ಚಿತ್ರತಂಡ ತಲ್ಲೀನವಾಗಿದೆ.


Click it and Unblock the Notifications











