ಪತ್ನಿ ರಮಾ ಜೊತೆ ರಾಜಮೌಳಿ ಡ್ಯಾನ್ಸ್ ರಿಹರ್ಸಲ್; ಈಗ ಕಷ್ಟ ಗೊತ್ತಾಯ್ತಾ?

ಎಸ್‌. ಎಸ್‌ ರಾಜಮೌಳಿ ಹಾಗೂ ಪತ್ನಿ ರಮಾ ಡ್ಯಾನ್ಸ್ ರಿಹರ್ಸಲ್ ಮಾಡುತ್ತಿರುವ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ತೆಲುಗು ನಿರ್ದೇಶಕ ರಾಜಮೌಳಿ ಪ್ರತಿಭೆ ಬಗ್ಗೆ ಬಿಡಿಸಿ ಹೇಳುವುದು ಬೇಕಾಗಿಲ್ಲ. ಅದ್ಭುತ ಸಿನಿಮಾಗಳ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಜಕ್ಕಣ್ಣ ಕ್ರೇಜ್ ಸಂಪಾದಿಸಿದ್ದಾರೆ.

'RRR' ಸಿನಿಮಾ ಮಾಡಿ ಜೇಮ್ಸ್ ಕ್ಯಾಮರೂನ್ ಬಳಿಯೂ ಮೌಳಿ ಮೆಚ್ಚುಗೆ ಪಡೆದುಕೊಂಡಿದ್ದರು. ಹಾಲಿವುಡ್‌ನಲ್ಲೂ ಈ ಸಿನಿಮಾ ಸದ್ದು ಮಾಡಿದ್ದು ವಿಶೇಷ. ರಾಜಮೌಳಿ ಚಿತ್ರಕಥೆ, ಚಿತ್ರ ನಿರೂಪಣೆ, ನಿರ್ದೇಶನದ ಬಗ್ಗೆ ಎಲ್ಲರಿಗೂ ಗೊತ್ತಿದೆ. ಇವತ್ತು ಜಕ್ಕಣ್ಣನನ್ನು ನಂಬಿ ನೂರಾರು ಕೋಟಿ ಬಂಡವಾಳ ಹೂಡಲು ನಿರ್ದೇಶಕರು ಸಿದ್ಧರಾಗಿದ್ದಾರೆ.

Director SS Rajamouli Dance Practice With Wife Rama video goes viral

ಮೊದಲಿಗೆ ಧಾರಾವಾಹಿಗಳನ್ನು ಸಹಾಯಕರಾಗಿ ಕೆಲಸ ಮಾಡಲು ಆರಂಭಿಸಿದ ರಾಜಮೌಳಿ ಬಳಿಕ ಚಿತ್ರ ನಿರ್ದೇಶನಕ್ಕಿಳಿದರು. 'ಸ್ಟೂಡೆಂಟ್ ನಂಬರ್ 01' ಸಿನಿಮಾ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಜಕ್ಕಣ್ಣ ಸಕ್ಸಸ್ ಕಂಡರು. ಬಳಿಕ 'ಸಿಂಹಾದ್ರಿ', 'ಸೈ', 'ಛತ್ರಪತಿ', 'ವಿಕ್ರಮಾರ್ಕುಡು', 'ಯಮದೊಂಗ', 'ಮಗಧೀರ', 'ಮರ್ಯಾದ ರಾಮಣ್ಣ', 'ಈಗ', 'ಬಾಹುಬಲಿ' ಹೀಗೆ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ಕೊಟ್ಟರು.

ಒಂದಕ್ಕಿಂತ ಒಂದು ವಿಭಿನ್ನ ಜಾನರ್ ಸಿನಿಮಾಗಳನ್ನು ಮೌಳಿ ಕಟ್ಟಿಕೊಡುತ್ತಾ ಬರುತ್ತಿದ್ದಾರೆ. ಸದ್ಯ ಮಹೇಶ್ ಬಾಬು ಕಾಂಬಿನೇಷನ್‌ನಲ್ಲಿ ಪ್ಯಾನ್ ವರ್ಲ್ಡ್ ಸಿನಿಮಾ ಪ್ಲ್ಯಾನ್ ಮಾಡುತ್ತಿದ್ದಾರೆ. ಶೀಘ್ರದಲ್ಲೇ ಸಿನಿಮಾ ಸೆಟ್ಟೇರಲಿದೆ. ಸದ್ಯ ಚಿತ್ರದ ಪ್ರೀ ಪ್ರೊಡಕ್ಷನ್ ವರ್ಕ್ ಶುರುವಾಗಿದೆ. ಇದೆಲ್ಲದರ ನಡುವೆ ರಾಜಮೌಳಿ ತಮ್ಮ ಪತ್ನಿ ರಮಾ ಜೊತೆ ಡ್ಯಾನ್ಸ್ ಕ್ಲಾಸ್‌ನಲ್ಲಿ ಹೆಜ್ಜೆ ಹಾಕುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ.

ಸಿನಿಮಾ ನಿರ್ದೇಶಕರಾಗಿದ್ದ ಮೌಳಿ ಇದ್ದಕ್ಕಿದಂತೆ ಡ್ಯಾನ್ಸ್ ಮಾಡೋಕೆ ಆರಂಭಿಸಿರುವುದು ಯಾಕೆ? ಎಂದು ಕೆಲವರು ಹುಬ್ಬೇರಿಸಿದ್ದಾರೆ. ಇತ್ತೀಚೆಗೆ ಪತ್ನಿ ಜೊತೆ ಜಕ್ಕಣ್ಣ ಮದುವೆ ಸಮಾರಂಭವೊಂದರಲ್ಲಿ ಹೆಜ್ಜೆ ಹಾಕಿದ್ದರು. ಅದಕ್ಕಾಗಿ ರಿಹರ್ಸಲ್ ನಡೆಸಿರುವ ವೀಡಿಯೋ ಇದು. ಇನ್ನು ಮೌಳಿ ಸಿಂಪಲ್ ಸ್ಟೆಪ್ಸ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಅಂದಹಾಗೆ ರಮಾ ಕೂಡ ಕಾಸ್ಟ್ಯೂಮ್ ಡಿಸೈನರ್ ಆಗಿ ರಾಜಮೌಳಿ ನಿರ್ದೇಶನದ ಸಿನಿಮಾಗಳಲ್ಲಿ ಕೆಲಸ ಮಾಡುತ್ತಿರುತ್ತಾರೆ.

ರಾಜಮೌಳಿ ಹಾಗೂ ರಮಾ ಡ್ಯಾನ್ಸ್ ರಿಹರ್ಸಲ್ ವಿಡಿಯೋ ನೋಡಿ ಅಭಿಮಾನಿಗಳು ಕ್ರೇಜಿ ಕಾಮೆಂಟ್ಸ್ ಮಾಡುತ್ತಿದ್ದಾರೆ. ಜಕ್ಕಣ್ಣ ಮಿಸ್ಟರ್ ಪರ್ಫೆಕ್ಷನಿಸ್ಟ್. ತಮ್ಮ ಸಿನಿಮಾಗಳಲ್ಲಿ ಹಾಡುಗಳನ್ನು ಬಹಳ ಸೊಗಸಾಗಿ ಶೂಟ್ ಮಾಡುತ್ತಾರೆ. ಡ್ಯಾನ್ಸ್ ವಿಚಾರದಲ್ಲಿ ಕೂಡ ಬಹಳ ಕೇರ್ ತೆಗೆದುಕೊಳ್ಳುತ್ತಾರೆ. ತಾವು ಅಂದುಕೊಂಡ ಮಟ್ಟಿಗೆ ಟೇಕ್ ಓಕೆ ಆಗುವವರೆಗೂ ಬಿಡುವವರಲ್ಲ. 'RRR' ಚಿತ್ರದ 'ನಾಟು ನಾಟು' ಗೀತೆಗೆ ಮೌಳಿ ಒಪ್ಪುವಂತೆ ಹೆಜ್ಜೆ ಹಾಕುವುದು ಬಹಳ ಕಷ್ಟವಾಯಿತು ಎಂದು ಚರಣ್-ತಾರಕ್ ಹೇಳಿದ್ದರು.

ಸದ್ಯ ಮೌಳಿ ಡ್ಯಾನ್ಸ್ ರಿಹರ್ಸಲ್ ನೋಡಿದ ಅಭಿಮಾನಿಗಳು "ಈಗ ಅರ್ಥ ಆಯ್ತಾ?" ಡ್ಯಾನ್ಸ್ ಮಾಡೋದು ಎಷ್ಟು ಕಷ್ಟ ಅಂತ? ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇಷ್ಟು ದಿನ ನಿರ್ದೇಶಕರಾಗಿದ್ದ ಜಕ್ಕಣ್ಣ ಇನ್ನು ಮುಂದೆ ಡ್ಯಾನ್ಸ್ ಕೊರಿಯೋಗ್ರಫರ್ ಆದರೂ ಅಚ್ಚರಿಪಡಬೇಕಿಲ್ಲ ಎಂದು ಮತ್ತೆ ಕೆಲವರು ಹೇಳುತ್ತಿದ್ದಾರೆ. ಇನ್ನು ಮುಂದೆ ರಾಜಮೌಳಿ ಚಿತ್ರದಲ್ಲಿ ನಟಿಸುವವರು ಡ್ಯಾನ್ಸ್ ಮಾಡಲು ಇನ್ನಷ್ಟು ಕಷ್ಟಪಡಬೇಕಾಗುತ್ತದೆ ಎನ್ನುವ ಕಾಮೆಂಟ್‌ಗಳು ಬರುತ್ತಿವೆ.

ಮಹೇಶ್ ಬಾಬು ಜೊತೆ ಮೌಳಿ ಮತ್ತೊಂದು ಹೈ ಬಜೆಟ್ ಸಿನಿಮಾ ಪ್ಲ್ಯಾನ್ ಮಾಡುತ್ತಿದ್ದಾರೆ. ಇದೊಂದು ಆಕ್ಷನ್ ಎಂಟರ್‌ಟೈನರ್ ಕಥೆ ಆಗಿದ್ದು ದೇಶ ವಿದೇಶಗಳಲ್ಲಿ ಚಿತ್ರೀಕರಣ ನಡೆಯಲಿದೆ. ಈಗಾಗಲೇ ಸ್ಕ್ರಿಪ್ಟ್ ಕೆಲಸ ಕಂಪ್ಲೀಟ್ ಆಗಿದೆ. ತಂದೆ ವಿಜಯೇಂದ್ರ ಪ್ರಸಾದ್ ಕಥೆ ಬರೆದಿದ್ದು ಮೌಳಿ ಮತ್ತವರ ತಂಡ ಚಿತ್ರಕಥೆ ಸಿದ್ಧಪಡಿಸಿದೆ.

More from Filmibeat

English summary
SS Rajamouli and Rama dance rehearsals video;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X