ಆರ್‌ಆರ್‌ಆರ್‌ ನಿರ್ದೇಶಕ ರಾಜಮೌಳಿಗೆ ಬರುತ್ತಿವೆ ಬೆದರಿಕೆ ಸಂದೇಶಗಳು!

ದೇಶದ ಅತ್ಯುತ್ತಮ ನಿರ್ದೇಶಕರಲ್ಲಿ ಒಬ್ಬರಾದ ರಾಜಮೌಳಿ ಅವರಿಗೆ ಯಾಕೋ ದಿನಗಳು ಸರಿಯಿದ್ದಂತಿಲ್ಲ. ಅವರಿಗೆ ಹಾಗೂ ಆರ್ಆರ್ಆರ್ ಸಿನಿಮಾಕ್ಕೆ ಸಮಸ್ಯೆಯ ಮೇಲೆ ಸಮಸ್ಯೆಗಳು ಬಂದೊದಗುತ್ತಿವೆ.

Recommended Video

Ambi-Vishnu|ಅಂಬಿ-ವಿಷ್ಣು ಸ್ನೇಹ ಬಾಂಧವ್ಯಕ್ಕೆ ಮಸಿ ಬಳಿಯೋದು ಬೇಡ ಎಂದ ಸುಮಲತಾ ಅಂಬರೀಶ್ | Filmibeat Kannada

ಆರ್‌ಆರ್‌ಆರ್ ಸಿನಿಮಾ ಕೊರೊನಾ ಸಂಕಷ್ಟದ ಕಾರಣದಿಂದಾಗಿ ಚಿತ್ರೀಕರಣ ಸ್ಥಗಿತಗೊಂಡಿದೆ. ಪಡೆದುಕೊಂಡಿದ್ದ ಸ್ಟಾರ್ ನಟ-ನಟಿಯರ ಡೇಟ್ಸ್‌ಗಳು ಮುಗಿಯುತ್ತಾ ಬಂದಿದ್ದು ಆತಂಕ ಎದುರಾಗಿದೆ. ಇದರೆಲ್ಲರ ನಡುವೆ ರಾಜಮೌಳಿ ಅವರಿಗೆ ಬೆದರಿಕೆ ಸಂದೇಶಗಳು ಬಂದಿವೆಯಂತೆ. ಅದೂ ಅಭಿಮಾನಿಗಳಿಂದಲೇ!

ಹೌದು, ಆರ್‌ಆರ್‌ಆರ್‌ ಸಿನಿಮಾದ ನಾಯಕಿಯರಲ್ಲಿ ಒಬ್ಬರನ್ನು ಬದಲಾಯಿಸುವಂತೆ ಹೇಳಿ ರಾಜಮೌಳಿ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಬಂದಿದೆಯಂತೆ.

ಹಲವು ನಟಿಯರು ಸಿನಿಮಾದಲ್ಲಿದ್ದಾರೆ

ಹಲವು ನಟಿಯರು ಸಿನಿಮಾದಲ್ಲಿದ್ದಾರೆ

ಆರ್‌ಆರ್‌ಆರ್‌ ಸಿನಿಮಾದಲ್ಲಿ ಬಾಲಿವುಡ್ ನಟಿ ಆಲಿಯಾ ಭಟ್, ಶ್ರಿಯಾ ಶಿರೀನ್, ವಿದೇಶಿ ನಟಿ ಒಲಿವಿಯಾ ಮತ್ತು ಅಲಿಸನ್ ಡೂಡಿ ನಟಿಸುತ್ತಿದ್ದಾರೆ. ಇವರಲ್ಲಿ ಒಬ್ಬ ನಟಿಯನ್ನು ಸಿನಿಮಾದಿಂದ ಕೈಬಿಡುವಂತೆ ರಾಜಮೌಳಿ ಮೇಲೆ ಒತ್ತಡ ಹೇರಲಾಗುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಸಂದೇಶಗಳು ಬರುತ್ತಿವೆಯಂತೆ.

ಸುಶಾಂತ್ ಸಾವಿನ ನಂತರ ಆಲಿಯಾ ಮೇಲೆ ಆಕ್ರೋಶ

ಸುಶಾಂತ್ ಸಾವಿನ ನಂತರ ಆಲಿಯಾ ಮೇಲೆ ಆಕ್ರೋಶ

ಸುಶಾಂತ್ ಸಿಂಗ್ ಆತ್ಮಹತ್ಯೆ ಬಳಿಕ ನೆಟ್ಟಿಜನರ ಸಿಟ್ಟು ಕರಣ್ ಜೋಹರ್ ಹಾಗೂ ಆಲಿಯಾ ಭಟ್ ಮೇಲೆ ತಿರುಗಿತ್ತು, ಸುಶಾಂತ್ ಬಗ್ಗೆ ಶೋ ಒಂದರಲ್ಲಿ ತುಚ್ಛವಾಗಿ ಆಲಿಯಾ ಮಾತನಾಡಿದ್ದರು. ಹಾಗಾಗಿ ಸುಶಾಂತ್ ಸಾವಿಗೆ ಆಲಿಯಾ ಸಹ ಕಾರಣ ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ.

ಆಲಿಯಾರನ್ನು ಕೈಬಿಡಿರೆಂದು ಒತ್ತಾಯ

ಆಲಿಯಾರನ್ನು ಕೈಬಿಡಿರೆಂದು ಒತ್ತಾಯ

ಇದೇ ಚರ್ಚೆಯನ್ನು ಮೂಲವಾಗಿಟ್ಟುಕೊಂಡು, ಆರ್‌ಆರ್‌ಆರ್‌ ಸಿನಿಮಾದಿಂದ ಆಲಿಯಾ ಭಟ್ ಅನ್ನು ತೆಗೆದು ಹಾಕಿರೆಂದು ರಾಜಮೌಳಿಗೆ ಒತ್ತಡ ಹೇರಲಾಗುತ್ತಿದೆಯಂತೆ. ಅಷ್ಟೆ ಅಲ್ಲ ಕೆಲವರು ಬೆದರಿಕೆ ಸಂದೇಶಗಳನ್ನು ಸಹ ಸಾಮಾಜಿಕ ಜಾಲತಾಣದಲ್ಲಿ ಕಳುಹಿಸಿದ್ದಾರಂತೆ.

ಭಾರಿ ಕುತೂಹಲ ಮೂಡಿಸಿರುವ ಸಿನಿಮಾ

ಭಾರಿ ಕುತೂಹಲ ಮೂಡಿಸಿರುವ ಸಿನಿಮಾ

ಭಾರಿ ಬಜೆಟ್‌ನ ಸಿನಿಮಾ ಆರ್‌ಆರ್‌ಆರ್‌ ಬಗ್ಗೆ ದೇಶದಾದ್ಯಂತ ಭಾರಿ ಕುತೂಹಲ ಏರ್ಪಟ್ಟಿದೆ. ಸಿನಿಮಾದಲ್ಲಿ ಇಬ್ಬರು ಸ್ಟಾರ್‌ಗಳಾದ ಜೂ.ಎನ್‌ಟಿಆರ್ ಮತ್ತು ರಾಮ್‌ಚರಣ್ ತೇಜ ನಟಿಸುತ್ತಿದ್ದಾರೆ. ಬಾಲಿವುಡ್ ನಟ ಅಜಯ್ ದೇವಗನ್ ಸಹ ಸಿನಿಮಾದಲ್ಲಿದ್ದಾರೆ. ಕೊರೊನಾ ಕಾರಣದಿಂದ ಸದ್ಯಕ್ಕೆ ಸಿನಿಮಾ ನಿಂತಿದೆ.

More from Filmibeat

English summary
RRR Movie director SS Rajamouli receives threat messages from social media to replace a heroine from his RRR movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X