For Quick Alerts
  ALLOW NOTIFICATIONS  
  For Daily Alerts

  "ನನ್ನ ಕರಿಯರ್‌ನಲ್ಲೇ ಬಿಗ್ಗೆಸ್ಟ್ ಸಿನಿಮಾ": ಮಹೇಶ್ ಬಾಬು ಸಿನಿಮಾ ಬಗ್ಗೆ ಮೌನ ಮುರಿದ ಮೌಳಿ!

  |

  ಎಸ್‌. ಎಸ್ ರಾಜಮೌಳಿ ನಿರ್ದೇಶನದ 'RRR' ಸಿನಿಮಾ ಹವಾ ಇನ್ನು ಕಮ್ಮಿ ಆಗಿಲ್ಲ. ವಿದೇಶಗಳಲ್ಲಿ ಸಿನಿಮಾ ಸದ್ದು ಮಾಡ್ತಾನೇ ಇದೆ. ಅಮೆರಿಕಾದ ಬಿಯಾಂಡ್ ಫೆಸ್ಟ್‌ನಲ್ಲಿ ಸಿನಿಮಾ ಪ್ರದರ್ಶನವಾಗ್ತಿದ್ದು, ಪ್ರೇಕ್ಷಕರು ಶಿಳ್ಳೆ ಚಪ್ಪಾಳೆ ಹೊಡೆದು ಸಿನಿಮಾ ಎಂಜಾಯ್ ಮಾಡ್ತಿದ್ದಾರೆ. ಶೋ ಮುಗಿದ ನಂತರ ರಾಜಮೌಳಿ ಮಾತನಾಡಿದ್ದು, ತಮ್ಮ ಮುಂದಿನ ಸಿನಿಮಾ ಬಗ್ಗೆಯೂ ಸುಳಿವು ನೀಡಿದ್ದಾರೆ.

  ಜಕ್ಕಣ್ಣ ನಿರ್ದೇಶನದ 'RRR' ಚಿತ್ರಕ್ಕೆ ಎಲ್ಲೆಡೆ ಅಭೂತಪೂರ್ವ ಬೆಂಬಲ ಸಿಕ್ತಿದೆ. ಶೀಘ್ರದಲ್ಲೇ ಜಪಾನ್ ಭಾಷೆಗೂ ಸಿನಿಮಾ ಡಬ್ ಆಗಿ ರಿಲೀಸ್ ಆಗ್ತಿದೆ. ಇಬ್ಬರು ಸ್ವಾತಂತ್ರ್ಯ ಹೋರಾಟಗಾರರ ಪಾತ್ರಗಳನ್ನು ಬಳಸಿಕೊಂಡು ಒಂದು ಕಾಲ್ಪನಿಕ ಕಥೆ ಕಟ್ಟಿ ರೀತಿ ಅದ್ಭುತ ಅಂತಲೇ ಹೇಳಬಹುದು. ಇನ್ನು ರಾಮ್‌- ಭೀಮ್ ಆಗಿ ರಾಮ್‌ಚರಣ್ ಹಾಗೂ ಜ್ಯೂ. ಎನ್‌ಟಿಆರ್ ಅಬ್ಬರಿಸಿ ಗೆದ್ದಿದ್ದರು. 1000 ಕೋಟಿ ರೂ. ಅಧಿಕ ಕಲೆಕ್ಷನ್ ಮಾಡಿ ಸಿನಿಮಾ ದಾಖಲೆ ಬರೆದಿತ್ತು.

  ಇನ್ನು ಜಕ್ಕಣ್ಣನ ಮುಂದಿನ ಸಿನಿಮಾ ಯಾವುದು ಎನ್ನುವ ಚರ್ಚೆ ಕೂಡ ಜೋರಾಗಿ ನಡೀತಿದೆ. ಲಾಕ್‌ಡೌನ್ ಸಮಯದಲ್ಲೇ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಮೌಳಿ ತಮ್ಮ ಮುಂದಿನ ಸಿನಿಮಾ ಮಹೇಶ್ ಬಾಬು ಜೊತೆ ಎಂದು ಹೇಳಿದ್ದರು. ನಂತರ ಆ ಬಗ್ಗೆ ಎಲ್ಲಿಯೂ ಮಾತನಾಡುವ ಗೋಜಿಗೆ ಹೋಗಿರಲಿಲ್ಲ. ಆದರೆ ಇವರಿಬ್ಬರ ಕಾಂಬಿನೇಷನ್ ಸಿನಿಮಾ ಬಗ್ಗೆ ದಿನಕ್ಕೊಂದು ಸುದ್ದಿ ವೈರಲ್ ಆಗ್ತಿದೆ. ಇದರ ಬಗ್ಗೆ ಅಮೆರಿಕಾದ ಬಿಯಾಂಡ್ ಫೆಸ್ಟ್‌ನಲ್ಲಿ ರಾಜಮೌಳಿ ಮಾತನಾಡಿದ್ದಾರೆ.

  "ನಾನು ಮುಂದೆ ಮಹೇಶ್‌ ಬಾಬು ಸಿನಿಮಾ ಮಾಡ್ತಿದ್ದು, ಇದು ನನ್ನ ಅತಿ ದೊಡ್ಡ ಸಿನಿಮಾ ಆಗಿರಲಿದೆ, ಅದು ಪ್ರಪಂಚದ ಸುತ್ತಾ ಸುತ್ತಾಡುವಂತೆ ಸಾಹಸಮಯ ಸಿನಿಮಾ, ಈಗ ಇದೇ ಭಾರತದಲ್ಲಿ ಟ್ರೆಂಡಿಂಗ್ ಟಾಪಿಕ್" ಎಂದು ರಾಜಮೌಳಿ ಹೇಳಿದ್ದಾರೆ. ಇದನ್ನು ಹೇಳಿ ಥಿಯೇಟರ್‌ನಲ್ಲಿದ್ದ ಪ್ರೇಕ್ಷಕರು ಹರ್ಷೋದ್ಘಾರ ಮಾಡಿದ್ದಾರೆ. ಇತ್ತ ಮಹೇಶ್ ಬಾಬು ಫ್ಯಾನ್ಸ್ ರಾಜಮೌಳಿ ಮಾತನಾಡಿರೋ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿದ್ದಾರೆ. ನೆಚ್ಚಿನ ನಟನ ಮುಂದಿನ ಸಿನಿಮಾ ಹೇಗಿರುತ್ತೋ ಎಂದು ಮನಸ್ಸಿನಲ್ಲೇ ಊಹಿಸಿಕೊಂಡು ಥ್ರಿಲ್ಲಾಗ್ತಿದ್ದಾರೆ.

  director-ss-rajamouli-spills-the-beans-on-his-next-with-mahesh-babu
  ಸದ್ಯ ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಸಿನಿಮಾದಲ್ಲಿ ಮಹೇಶ್ ಬಾಬು ನಟಿಸ್ತಿದ್ದಾರೆ. ಆದಷ್ಟು ಬೇಗ ಆ ಸಿನಿಮಾ ಮುಗಿಸಿ ರಾಜಮೌಳಿ ಜೊತೆ ಕೈ ಜೋಡಿಸಲಿದ್ದಾರೆ. ಮತ್ತೊಂದು ಕಡೆ ವಿಜಯೇಂದ್ರ ಪ್ರಸಾದ್ ಅಂಡ್ ಟೀಂ ಮುಂದಿನ ಸಿನಿಮಾ ಪ್ರೀಪ್ರೊಡಕ್ಷನ್‌ ವರ್ಕ್‌ನಲ್ಲಿ ಬ್ಯುಸಿಯಾಗಿದ್ದಾರೆ. ಎಲ್ಲಾ ಅಂದುಕೊಂಡಂತೆ ಆದರೆ ಮುಂದಿನ ವರ್ಷ ಆರಂಭದಲ್ಲೇ ಮೌಳಿ- ಮಹೇಶ್ ಬಿಗ್ಗೆಸ್ಟ್ ಸಿನಿಮಾ ಸೆಟ್ಟೇರಲಿದೆ. ಹಾಲಿವುಡ್ ಕಲಾವಿದರು, ತಂತ್ರಜ್ಞರು ಈ ಚಿತ್ರದಲ್ಲಿ ಕೆಲಸ ಮಾಡುವ ಸಾಧ್ಯತೆಯಿದೆ.
  English summary
  Director SS rajamouli spills the beans on his next with Mahesh babu. Rajamouli has hinted that this project is going to be huge and Mahesh’s fans are now hoping a film of international standards.
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X