ಪ್ರೇಯಸಿ ಜೊತೆ ಎಂಗೇಜ್ ಆದ 'ಸಾಹೋ' ನಿರ್ದೇಶಕ ಸುಜೀತ್
ಲಾಕ್ ಡೌನ್ ನಡುವೆಯೂ ಸಾಕಷ್ಟು ಮದುವೆ ಸಮಾರಂಭಗಳು ನಡೆಯುತ್ತಿವೆ. ಅದ್ದೂರಿ ಮದುವೆ ನಡೆಯದಿದ್ದರು ಸರಳವಾಗಿ ಹಸೆಮಣೆ ಏರುತ್ತಿದ್ದಾರೆ. ಅನೇಕ ನಟರು, ನಟಿಯರು, ತಂತ್ರಜ್ಞರು ಸರಳವಾಗಿ ಮದುವೆಯಾಗುವ ಮೂಲಕ ಹೊಸ ಜೀವನಕ್ಕೆ ಕಾಲಿರಿಸುತ್ತಿದ್ದಾರೆ.
Recommended Video
ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ನಿರ್ದೇಶಕರು ಹೊಸಜೀವನಕ್ಕೆ ಕಾಲಿಟ್ಟಿದ್ದಾರೆ. ಇತ್ತೀಚಿಗೆ ಪ್ರಭಾಸ್ ಅಭಿನಯದ ಸಾಹೋ ಖ್ಯಾತಿಯ ನಿರ್ದೇಶಕ ಸುಜೀತ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇತ್ತೀಚಿಗಷ್ಟೆ ನಟ ರಾಣದಗ್ಗುಬಾಟಿ ನಿಶ್ಚಿತಾರ್ಥ ಮಾಡಿಕೊಂಡ ಬೆನ್ನಲ್ಲೆ, ಸುಜೀತ್ ಎಂಗೇಜ್ ಆಗಿದ್ದಾರೆ. ಆಪ್ತರು ಮತ್ತು ಕುಟುಂಬದವರ ಸಮ್ಮುಖದಲ್ಲಿ ಸುಜೀತ್ ನಿಶ್ಚಿತಾರ್ಥ ಸಮಾರಂಭ ನಡೆದಿದೆ. ಮುಂದೆ ಓದಿ...

ಹೈದರಾಬಾದ್ ನಲ್ಲಿ ನಡೆದ ನಿಶ್ಚಿತಾರ್ಥ
ಹೈದರಾಬಾದ್ ನಲ್ಲಿ ನಡೆದ ನಿಶ್ಚಿತಾರ್ಥ ಸಮಾರಂಭದಲ್ಲಿ ನಿರ್ದೇಶಕ ಸುಜೀತ್ ಭಾವಿ ಪತ್ನಿ ಪ್ರವಾಲಿಕಾಗೆ ಉಂಗುರ ತೊಡೆಸಿದ್ದಾರೆ. ತೀರ ಸರಳವಾಗಿ ನಡೆದ ನಿಶ್ಚಿತಾರ್ಥ ಸಮಾರಂಭದಲ್ಲಿ ಕುಟುಂಬದವರು ಮತ್ತು ಆಪ್ತರು ಮಾತ್ರ ಭಾಗಿಯಾಗಿದ್ದರು.

ವರ್ಷಗಳಿಂದ ಪ್ರೀತಿಸುತ್ತಿದ್ದರು ಸುಜೀತ್- ಪ್ರವಾಲಿಕಾ
ಸುಜೀತ್ ಮತ್ತು ಪ್ರವಲ್ಲಿಕಾ ಹಲವು ವರ್ಷಗಳಿಂದ ಸ್ನೇಹಿತರಾಗಿದ್ದು, ಇಬ್ಬರ ಪ್ರೇಮಕ್ಕೆ ಕುಟುಂಬದವರಿಂದ ಸಮ್ಮತಿ ದೊರೆತು, ಈಗ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಆದರೆ ಮದುವೆ ದಿನಾಂಕ ಇನ್ನೂ ರಿವೀಲ್ ಆಗಿಲ್ಲ. ಕೊರೊನಾ ವೈರಸ್ ಬಿಕ್ಕಟ್ಟು ಕಡಿಮೆಯಾದ ನಂತರ ಮದುವೆ ಯಾಗುವ ಸಾಧ್ಯತೆ ಇದೆ.

ಸುಜೀತ್ ಸಿನಿಮಾ
ನಿರ್ದೇಶಕ ಸುಜೀತ್ ರನ್ ರಾಜ ರನ್ ಸಿನಿಮಾ ಮೂಲಕ ನಿರ್ದೇಶಕರಾಗಿ ಟಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. 2014ರಲ್ಲಿ ಸಿನಿಮಾ ರಿಲೀಸ್ ಆಗಿದೆ. ಆ ನಂತರ ಸುಜೀತ್ ವರ್ಷಗಳ ಬಳಿಕ ಅಂದರೆ 2019ರಲ್ಲಿ ಪ್ರಭಾಸ್ ಗೆ ನಿರ್ದೇಶನ ಮಾಡುವ ಮೂಲಕ ದೊಡ್ಡ ಮಟ್ಟಕ್ಕೆ ಸದ್ದು ಮಾಡಿದರು.

ಚಿರಂಜೀವಿ ಜತೆ ಸಿನಿಮಾ
ಸಜೀತ್, ಸಾಹೋ ಸಿನಿಮಾದ ನಂತರ ಮೆಗಾ ಸ್ಟಾರ್ ಚಿರಂಜೀವಿಗೆ ನಿರ್ದೇಶನ ಮಾಡಲು ಸಜ್ಜಾಗಿದ್ದಾರೆ. ಮಲಯಾಳಂನ ಹಿಟ್ ಚಿತ್ರ 'ಲೂಸಿಫರ್' ಸಿನಿಮಾ ತೆಲುಗಿಗೆ ರಿಮೇಕ್ ಆಗುತ್ತಿದೆ. ತೆಲುಗು ರಿಮೇಕ್ ಗೆ ಸುಜೀತ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.


Click it and Unblock the Notifications