twitter
    For Quick Alerts
    ALLOW NOTIFICATIONS  
    For Daily Alerts

    ಪ್ರೇಯಸಿ ಜೊತೆ ಎಂಗೇಜ್ ಆದ 'ಸಾಹೋ' ನಿರ್ದೇಶಕ ಸುಜೀತ್

    |

    ಲಾಕ್ ಡೌನ್ ನಡುವೆಯೂ ಸಾಕಷ್ಟು ಮದುವೆ ಸಮಾರಂಭಗಳು ನಡೆಯುತ್ತಿವೆ. ಅದ್ದೂರಿ ಮದುವೆ ನಡೆಯದಿದ್ದರು ಸರಳವಾಗಿ ಹಸೆಮಣೆ ಏರುತ್ತಿದ್ದಾರೆ. ಅನೇಕ ನಟರು, ನಟಿಯರು, ತಂತ್ರಜ್ಞರು ಸರಳವಾಗಿ ಮದುವೆಯಾಗುವ ಮೂಲಕ ಹೊಸ ಜೀವನಕ್ಕೆ ಕಾಲಿರಿಸುತ್ತಿದ್ದಾರೆ.

    Recommended Video

    ಪ್ರಭಾಸ್ ಸೀಕ್ರೆಟ್ ಒಂದನ್ನು ರಿವೀಲ್ ಮಾಡಿದ ತಮನ್ನಾ..? | Prabhas | Tamannaah Bhatia

    ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ನಿರ್ದೇಶಕರು ಹೊಸಜೀವನಕ್ಕೆ ಕಾಲಿಟ್ಟಿದ್ದಾರೆ. ಇತ್ತೀಚಿಗೆ ಪ್ರಭಾಸ್ ಅಭಿನಯದ ಸಾಹೋ ಖ್ಯಾತಿಯ ನಿರ್ದೇಶಕ ಸುಜೀತ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇತ್ತೀಚಿಗಷ್ಟೆ ನಟ ರಾಣದಗ್ಗುಬಾಟಿ ನಿಶ್ಚಿತಾರ್ಥ ಮಾಡಿಕೊಂಡ ಬೆನ್ನಲ್ಲೆ, ಸುಜೀತ್ ಎಂಗೇಜ್ ಆಗಿದ್ದಾರೆ. ಆಪ್ತರು ಮತ್ತು ಕುಟುಂಬದವರ ಸಮ್ಮುಖದಲ್ಲಿ ಸುಜೀತ್ ನಿಶ್ಚಿತಾರ್ಥ ಸಮಾರಂಭ ನಡೆದಿದೆ. ಮುಂದೆ ಓದಿ...

    ನಟ ಪ್ರಭಾಸ್ ಬಗ್ಗೆ ಗುಟ್ಟು ಬಿಚ್ಚಿಟ್ಟ ನಟಿ ತಮನ್ನಾನಟ ಪ್ರಭಾಸ್ ಬಗ್ಗೆ ಗುಟ್ಟು ಬಿಚ್ಚಿಟ್ಟ ನಟಿ ತಮನ್ನಾ

    ಹೈದರಾಬಾದ್ ನಲ್ಲಿ ನಡೆದ ನಿಶ್ಚಿತಾರ್ಥ

    ಹೈದರಾಬಾದ್ ನಲ್ಲಿ ನಡೆದ ನಿಶ್ಚಿತಾರ್ಥ

    ಹೈದರಾಬಾದ್ ನಲ್ಲಿ ನಡೆದ ನಿಶ್ಚಿತಾರ್ಥ ಸಮಾರಂಭದಲ್ಲಿ ನಿರ್ದೇಶಕ ಸುಜೀತ್ ಭಾವಿ ಪತ್ನಿ ಪ್ರವಾಲಿಕಾಗೆ ಉಂಗುರ ತೊಡೆಸಿದ್ದಾರೆ. ತೀರ ಸರಳವಾಗಿ ನಡೆದ ನಿಶ್ಚಿತಾರ್ಥ ಸಮಾರಂಭದಲ್ಲಿ ಕುಟುಂಬದವರು ಮತ್ತು ಆಪ್ತರು ಮಾತ್ರ ಭಾಗಿಯಾಗಿದ್ದರು.

    ಜೂನ್ 2ನೇ ವಾರ ಪ್ರಭಾಸ್ ಅಭಿಮಾನಿಗಳಿಗೆ ಕಾದಿದೆ ಬಿಗ್ ಸರ್ಪ್ರೈಸ್ಜೂನ್ 2ನೇ ವಾರ ಪ್ರಭಾಸ್ ಅಭಿಮಾನಿಗಳಿಗೆ ಕಾದಿದೆ ಬಿಗ್ ಸರ್ಪ್ರೈಸ್

    ವರ್ಷಗಳಿಂದ ಪ್ರೀತಿಸುತ್ತಿದ್ದರು ಸುಜೀತ್- ಪ್ರವಾಲಿಕಾ

    ವರ್ಷಗಳಿಂದ ಪ್ರೀತಿಸುತ್ತಿದ್ದರು ಸುಜೀತ್- ಪ್ರವಾಲಿಕಾ

    ಸುಜೀತ್ ಮತ್ತು ಪ್ರವಲ್ಲಿಕಾ ಹಲವು ವರ್ಷಗಳಿಂದ ಸ್ನೇಹಿತರಾಗಿದ್ದು, ಇಬ್ಬರ ಪ್ರೇಮಕ್ಕೆ ಕುಟುಂಬದವರಿಂದ ಸಮ್ಮತಿ ದೊರೆತು, ಈಗ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಆದರೆ ಮದುವೆ ದಿನಾಂಕ ಇನ್ನೂ ರಿವೀಲ್ ಆಗಿಲ್ಲ. ಕೊರೊನಾ ವೈರಸ್ ಬಿಕ್ಕಟ್ಟು ಕಡಿಮೆಯಾದ ನಂತರ ಮದುವೆ ಯಾಗುವ ಸಾಧ್ಯತೆ ಇದೆ.

    ಸುಜೀತ್ ಸಿನಿಮಾ

    ಸುಜೀತ್ ಸಿನಿಮಾ

    ನಿರ್ದೇಶಕ ಸುಜೀತ್ ರನ್ ರಾಜ ರನ್ ಸಿನಿಮಾ ಮೂಲಕ ನಿರ್ದೇಶಕರಾಗಿ ಟಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. 2014ರಲ್ಲಿ ಸಿನಿಮಾ ರಿಲೀಸ್ ಆಗಿದೆ. ಆ ನಂತರ ಸುಜೀತ್ ವರ್ಷಗಳ ಬಳಿಕ ಅಂದರೆ 2019ರಲ್ಲಿ ಪ್ರಭಾಸ್ ಗೆ ನಿರ್ದೇಶನ ಮಾಡುವ ಮೂಲಕ ದೊಡ್ಡ ಮಟ್ಟಕ್ಕೆ ಸದ್ದು ಮಾಡಿದರು.

    ನಟ ಪ್ರಭಾಸ್ ನಿಜವಾದ ಹೆಸರು ಕೇಳಿದ್ರೆ ನಿಜಕ್ಕೂ ಅಚ್ಚರಿ ಪಡುತ್ತೀರಿನಟ ಪ್ರಭಾಸ್ ನಿಜವಾದ ಹೆಸರು ಕೇಳಿದ್ರೆ ನಿಜಕ್ಕೂ ಅಚ್ಚರಿ ಪಡುತ್ತೀರಿ

    ಚಿರಂಜೀವಿ ಜತೆ ಸಿನಿಮಾ

    ಚಿರಂಜೀವಿ ಜತೆ ಸಿನಿಮಾ

    ಸಜೀತ್, ಸಾಹೋ ಸಿನಿಮಾದ ನಂತರ ಮೆಗಾ ಸ್ಟಾರ್ ಚಿರಂಜೀವಿಗೆ ನಿರ್ದೇಶನ ಮಾಡಲು ಸಜ್ಜಾಗಿದ್ದಾರೆ. ಮಲಯಾಳಂನ ಹಿಟ್ ಚಿತ್ರ 'ಲೂಸಿಫರ್' ಸಿನಿಮಾ ತೆಲುಗಿಗೆ ರಿಮೇಕ್ ಆಗುತ್ತಿದೆ. ತೆಲುಗು ರಿಮೇಕ್ ಗೆ ಸುಜೀತ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.

    English summary
    Director sujeeth got engaged with pravalika in Hyderabad.
    Thursday, June 11, 2020, 17:58
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X