'ಪುಷ್ಪ' ಅಂದ್ರೆ ಫ್ಲವರ್ ಅಲ್ಲ ಫೈಯರ್: ಪೂರಿ ಎದುರು ಸಿನಿಮಾ ಕ್ಲೈಮ್ಯಾಕ್ಸ್ ಸೀಕ್ರೆಟ್ ಬಿಚ್ಚಿಟ್ಟ ಸುಕ್ಕು!

ಕಳೆದ ವರ್ಷ ಇಂಡಿಯನ್ ಬಾಕ್ಸಾಫೀಸ್ ಶೇಕ್ ಮಾಡಿದ ಪ್ಯಾನ್ ಇಂಡಿಯಾ ಸಿನಿಮಾ 'ಪುಷ್ಪ'. ಸುಕುಮಾರ್ ನಿರ್ದೇಶನದಲ್ಲಿ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ಮಾಸ್ ಮಸಾಲಾ ಸಿನಿಮಾ ಭಾಷೆಯ ಗಡಿ ಮೀರಿ ಸಿನಿರಸಿಕರನ್ನು ರಂಜಿಸಿತ್ತು. ಅದರಲ್ಲೂ ಚಿತ್ರದ ಇಂಟರ್‌ವಲ್ ಹಾಗೂ ಕ್ಲೈಮ್ಯಾಕ್ಸ್ ಸೀನ್ ಸಿನಿರಸಿಕರಿಗೆ ಸಖತ್ ಥ್ರಿಲ್ ಕೊಟ್ಟಿತ್ತು. ಅಸಲಿಗೆ ಒಂದೇ ಸಿನಿಮಾ ಆಗಬೇಕಿದ್ದ 'ಪುಷ್ಪ' ಕಥೆ ಎರಡು ಭಾಗಗಳಾಗಿದ್ದು ಯಾಕೆ? ಇಂಟರ್‌ವಲ್ ಸೀನ್ ಕ್ಲೈಮ್ಯಾಕ್ಸ್ ಸೀನ್ ಆಗಿ ಬದಲಾಗಿದ್ಯಾಕೆ? ಅನ್ನುವ ಇಂಟ್ರೆಸ್ಟಿಂಗ್ ಕಹಾನಿಯನ್ನು ನಿರ್ದೇಶಕ ಸುಕುಮಾರ್ ಬಿಚ್ಚಿಟ್ಟಿದ್ದಾರೆ.

ಪೂರಿ ಜಗನ್ನಾಥ್ ನಿರ್ದೇಶನದ 'ಲೈಗರ್' ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ವಿಜಯ್ ದೇವರಕೊಂಡ, ಅನನ್ಯಾ ಪಾಂಡೆ, ರಮ್ಯಾಕೃಷ್ಣ, ಮೈಕ್ ಟೈಸನ್ ನಟನೆಯ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ತೆರೆಗಪ್ಪಳಿಸ್ತಿದೆ. ಸಿನಿಮಾ ರಿಲೀಸ್ ಹೊಸ್ತಿಲಲ್ಲಿ ನಿರ್ದೇಶಕ ಪೂರಿ ಜಗನ್ನಾಥ್‌ನ ಮತ್ತೊಬ್ಬ ಸ್ಟಾರ್‌ ಡೈರೆಕ್ಟರ್ ಸುಕುಮಾರ್ ಸಂದರ್ಶನ ಮಾಡಿದ್ದಾರೆ. ಈ ಸಂದರ್ಶನದಲ್ಲಿ ಸ್ಟಾರ್‌ ನಿರ್ದೇಶಕರಿಬ್ಬರು ಒಬ್ಬರ ಸಿನಿಮಾ ನೋಡಿ ಮತ್ತೊಬ್ಬರು ಇನ್‌ಸ್ಪೈರ್ ಆದ ಸಂಗತಿಯನ್ನು ಹಂಚಿಕೊಂಡಿದ್ದಾರೆ. ಇನ್ನು 'ಲೈಗರ್' ಸಿನಿಮಾ ಬಗ್ಗೆ ಸುಕುಮಾರ್, 'ಪುಷ್ಪ' ಸಿನಿಮಾ ಬಗ್ಗೆ ಪೂರಿ ಸಾಕಷ್ಟು ಚರ್ಚಿಸಿದ್ದಾರೆ.

'ಪುಷ್ಪ' ಸಿನಿಮಾ ಬಗ್ಗೆ ನಿರ್ದೇಶಕ ಪೂರಿ ಜಗನ್ನಾಥ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆ ದೃಶ್ಯ ಹೇಗೆ ಕಟ್ಟಿಕೊಟ್ಟಿದ್ದೇಗೆ ಎಂದು ಕೇಳಿದ ಪ್ರಶ್ನೆಗೆ ಸುಕುಮಾರ್ ವಿವರಣೆ ನೀಡಿದ್ದಾರೆ. ಇಂಟರ್‌ವಲ್‌ಗೆ ಬರೆದ ಸೀನ್ ಕ್ಲೈಮ್ಯಾಕ್ಸ್ ಆಯ್ತು, ಹಾಗಾಗಿ ಬೇರೆ ಸೀನ್‌ನ ಇಂಟರ್‌ವಲ್‌ ಮಾಡಬೇಕಾಯಿತು ಎಂದಿದ್ದಾರೆ. ಮಂಗಳ ಸೀನುಗೆ 'ಪುಷ್ಪ'ರಾಜ್ ವಾರ್ನಿಂಗ್ ಕೊಡುವ ಸೀನ್ ಹುಟ್ಟಿದ್ದೇಗೆ ಎಂದು ಸುಕುಮಾರ್ ಹೇಳಿದ್ದಾರೆ.

ಒಂದೇ ಚಿತ್ರಕ್ಕೆ ಮುಗಿಬೇಕಿತ್ತಾ 'ಪುಷ್ಪ' ಕಥೆ?

ಒಂದೇ ಚಿತ್ರಕ್ಕೆ ಮುಗಿಬೇಕಿತ್ತಾ 'ಪುಷ್ಪ' ಕಥೆ?

"ಮೊದಲಿಗೆ 'ಪುಷ್ಪ' ಕಥೆ ಒಂದೇ ಸಿನಿಮಾ ಅಂದುಕೊಂಡಿದ್ವಿ. ಫಸ್ಟ್ ಹಾಫ್ ಶೂಟ್ ಮಾಡುತ್ತಿದ್ದಂತೆ ಸಿನಿಮಾ ಕಾಲಾವಧಿ 3 ಗಂಟೆ ಬಂದುಬಿಡ್ತು. ಎಲ್ಲೂ ಕಟ್ ಮಾಡೋಕೆ ಸಾಧ್ಯವಿಲ್ಲ ಅನ್ನಿಸಿದಾಗ ಇಂಟರ್‌ವಲ್ ಸೀನ್‌ನ ಕೈಮ್ಯಾಕ್ಸ್ ಅಂದುಕೊಂಡೆವು. ಆಗಲೇ ಮಂಗಳಂ ಸೀನುಗೆ 'ಪುಷ್ಪ'ರಾಜ್ ವಾರ್ನಿಂಗ್ ಕೂಡುವ ಸೀನ್‌ನ ಇಂಟರ್‌ವಲ್ ಆಗಿ ಬದಲಿಸಿದೆವು. ಬರೀ ಫೈಟ್ ಸಾಕಾಗಲ್ಲ ಎಂದು ಹೀರೊ ವಾಪಸ್ ಬಂದು ವಾರ್ನಿಂಗ್ ಕೊಡುವಂತೆ ಮಾಡಿದೆವು. ಮೊದಲು ಬರೆದುಕೊಂಡ ಚಿತ್ರಕಥೆಯಲ್ಲಿ ಹೀರೊ ಫೈಟ್ ಮಾಡಿ ಹೊರಟು ಹೋಗುತ್ತಾನೆ. ನಂತರ ಮತ್ತೆ ಬಂದು ವಾರ್ನಿಂಗ್ ಕೊಡುವಂತೆ ಮಾಡಿದೆವು. ಹಾಗಾಗಿ ಇಂಟರ್‌ವಲ್‌ಗೆ ಅಂತ ಮಾಡಿದ್ದ 'ಪುಷ್ಪ'ರಾಜ್ ವರ್ಸಸ್ ಭನ್ವರ್ ಸಿಂಗ್ ಶೇಖಾವತ್ ಏಟು ಎದಿರೇಟಿನ ಸೀನ್ ಕ್ಲೈಮ್ಯಾಕ್ಸ್ ಆಯಿತು" ಎಂದು ವಿವರಿಸಿದ್ದಾರೆ.

ಕ್ಲೈಮ್ಯಾಕ್ಸ್‌ನಲ್ಲಿ ಫೈಟ್ ಯಾಕೆ ಇಲ್ಲ?

ಕ್ಲೈಮ್ಯಾಕ್ಸ್‌ನಲ್ಲಿ ಫೈಟ್ ಯಾಕೆ ಇಲ್ಲ?

ಆಕ್ಷನ್ ಸಿನಿಮಾ ಅಂದಮೇಲೆ ಕ್ಲೈಮ್ಯಾಕ್ಸ್‌ನಲ್ಲಿ ಭರ್ಜರಿ ಫೈಟ್ ಇರಬೇಕು ಎಂದು ಮಾಸ್ ಪ್ರೇಕ್ಷಕರು ಬಯಸುತ್ತಾರೆ. ಆದರೆ 'ಪುಷ್ಪ' ಕ್ಲೈಮ್ಯಾಕ್ಸ್‌ನಲ್ಲಿ ರಕ್ತಚಂದನ ಸ್ಮಗ್ಲರ್ 'ಪುಷ್ಪ'ರಾಜ್ ಹಾಗೂ ಎಸ್‌ಪಿ ಭನ್ವರ್ ಸಿಂಗ್ ಶೇಖಾವತ್ ಕೂತು ಮಾತನಾಡುತ್ತಾರೆ. ಒಬ್ಬರಿಗೊಬ್ಬರು ಸವಾಲ್ ಹಾಕುತ್ತಾರೆ. ಇದು ಪ್ರೇಕ್ಷಕರಿಗೆ ಸಖತ್ ಮಜಾ ಕೊಟ್ಟಿತ್ತು. " ಅಲ್ಲು ಅರ್ಜುನ್ ಹಾಗೂ ಫಹಾದ್ ಫಾಸಿಲ್ ಇಬ್ಬರೂ ಅದ್ಭುತ ಕಲಾವಿದರು. ಇಬ್ಬರು ಬಡಿದಾಡಿಕೊಳ್ಳುದಕ್ಕಿಂತ ಮಾತಲ್ಲೇ ಅಬ್ಬರಿಸಿದರೇ ಹೇಗಿರುತ್ತೆ ಎಂದು ಟ್ರೈ ಮಾಡಿದ್ವಿ. ಪರ್ಫಾರ್ಮೆನ್ಸ್‌ನಲ್ಲೇ ವಾರ್ ನಡೆದರೇ ಹೇಗಿರುತ್ತೆ ಅನ್ನುವುದನ್ನು ತೋರಿಸಿದ್ದೀವಿ" ಎಂದು ಸುಕುಮಾರ್ ಹೇಳಿದ್ದಾರೆ. "ನಿಮ್ಮ ನಿರ್ಧಾರ ಸರಿಯಾಗಿದೆ" ಎಂದು ಪೂರಿ ಜಗನ್ನಾಥ್ ಪ್ರತಿಕ್ರಿಯಿಸಿದ್ದಾರೆ.

ಇತ್ತೀಚೆಗೆ 'ಪುಷ್ಪ'-2 ಮುಹೂರ್ತ

ಇತ್ತೀಚೆಗೆ 'ಪುಷ್ಪ'-2 ಮುಹೂರ್ತ

ಮೊನ್ನೆಯಷ್ಟೇ ಪೂಜೆ ನೆರವೇರಿಸಿ 'ಪುಷ್ಪ'-2 ಚಿತ್ರಕ್ಕೆ ನಿರ್ದೇಶಕ ಸುಕುಮಾರ್ ಚಾಲನೆ ಕೊಟ್ಟಿದ್ದಾರೆ. ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಅನುಪಸ್ಥಿತಿಯಲ್ಲೇ ಸಿನಿಮಾ ಮಹೂರ್ತ ಸಮಾರಂಭ ನೆರವೇರಿದೆ. ಪ್ರೀಕ್ವೆಲ್ ನಿರೀಕ್ಷೆ ಮೀರಿ ಸಕ್ಸಸ್ ಕಂಡಿದ್ದು, ಸೀಕ್ವೆಲ್ ಬಗ್ಗೆ ಕುತೂಹಲ ಹೆಚ್ಚಾಗಿದೆ. ಹಾಗಾಗಿ ಸಹಜವಾಗಿಯೇ ಸುಕುಮಾರ್ ಮೇಲೆ ಭಾರೀ ಒತ್ತಡ ಇದೆ. ಅದಕ್ಕೆ ತಕ್ಕಂತೆ ಕಥೆಯನ್ನು ತಿದ್ದಿ ತೀಡಿ ಇದೀಗ ಚಿತ್ರೀಕರಣ ಪ್ರಾರಂಭಿಸಲು ಮನಸ್ಸು ಮಾಡಿದ್ದಾರೆ.

ಭಾರೀ ಬಜೆಟ್‌ನಲ್ಲಿ 'ಪುಷ್ಪ'-2

ಭಾರೀ ಬಜೆಟ್‌ನಲ್ಲಿ 'ಪುಷ್ಪ'-2

ಪ್ರೀಕ್ವೆಲ್‌ ನಿರೀಕ್ಷೆ ಮೀರಿ ಗೆದ್ದಿರುವ ಪರಿಣಾಮ ಸೀಕ್ವೆಲ್‌ ಚಿತ್ರವನ್ನು ಅದಕ್ಕಿಂತ ಹಲವು ಪಟ್ಟು ದೊಡ್ಡದಾಗಿ ಕಟ್ಟಿಕೊಡುವ ಪ್ರಯತ್ನ ನಡೀತಿದೆ. ಅದಕ್ಕೆ ತಕ್ಕಂತೆ ಸಿನಿಮಾ ಬಜೆಟ್ ಹೆಚ್ಚಾಗಿದೆ. ಅಲ್ಲು ಅರ್ಜುನ್, ಸುಕುಮಾರ್ ಸಂಭಾವನೆಯೂ ಕೂಡ ಹೆಚ್ಚಾಗಿದೆ. ಆದಷ್ಟು ಬೇಗ ಶೂಟಿಂಗ್ ಕಂಪ್ಲೀಟ್ ಮಾಡಿ 'ಪುಷ್ಪ'ರಾಜ್ ಆರ್ಭಟವನ್ನು ಪ್ರೇಕ್ಷಕರಿಗೆ ತೋರಿಸುವ ಪ್ರಯತ್ನ ನಡೀತಿದೆ.

More from Filmibeat

English summary
Allu Arjun Starrer Pushpa, Pushpa The Rise, Pushpa The Rule, Sukumar Directed Pushpa, Puri jagannadh Liger, Puri jagannadh About Pushpa Climax, Sukumar About Pushpa Climax, Allu Arjun Rashmika Mandanna Starrer Pushpa, Pushpa 2 Launch, Pushpa-2 Release Date,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X