ಅಲ್ಲು ಅರ್ಜುನ್ ಬಳಿಕ ಸ್ಟಾರ್ ನಿರ್ದೇಶಕನ ಕಾರು ತಡೆದು ದಂಡ ಹಾಕಿದ ಪೊಲೀಸರು

ತೆಲುಗು ಚಿತ್ರರಂಗದ ಮೇಲೆ ಹೈದರಾಬಾದ್ ಪೊಲೀಸರ ಕಣ್ಣು ಬಿದ್ದಂತಿದೆ. ನಿನ್ನೆಯಷ್ಟೆ ತೆಲುಗು ಚಿತ್ರರಂಗದ ಸ್ಟಾರ್‌ಗಳ ಮೆಚ್ಚಿನ ಐಶಾರಾಮಿ ಪಬ್‌ ಮೇಲೆ ದಾಳಿ ಮಾಡಿದ್ದರು. ಈಗ ತೆಲುಗು ಚಿತ್ರರಂಗದ ಗಣ್ಯರ ಕಾರುಗಳನ್ನು ಹುಡುಕಿ-ಹುಡುಕಿ ದಂಡ ವಿಧಿಸುತ್ತಿದ್ದಾರೆ.

ಕೆಲವು ದಿನಗಳ ಹಿಂದಷ್ಟೆ ನಟ ಅಲ್ಲು ಅರ್ಜುನ್ ಕಾರು ತಡೆದಿದ್ದ ಹೈದರಾಬಾದ್ ಪೊಲೀಸರು ಕಾರಿನ ಕಿಟಕಿ ಗಾಜಿಗೆ ಅಳವಡಿಸಲಾಗಿದ್ದ ಟಿಂಟ್ ಅನ್ನು ತೆಗೆಸಿದ್ದರು. ಮಾತ್ರವಲ್ಲದೆ ದಂಡ ಸಹ ವಿಧಿಸಿದ್ದರು. ಅಲ್ಲು ಅರ್ಜುನ್ ಬಳಿಕ ಜೂ ಎನ್‌ಟಿಆರ್‌ ಹಾಗೂ ಮಂಚು ಮನೋಜ್ ಕಾರಿಗೂ ದಂಡ ವಿಧಿಸಲಾಯ್ತು. ಈಗ ಸ್ಟಾರ್ ನಿರ್ದೇಶಕರೊಬ್ಬರ ಸರದಿ.

ನಿರ್ದೇಶಕ ತ್ರಿವಿಕ್ರಮ್ ಕಾರನ್ನು ನಡು ರಸ್ತೆಯಲ್ಲಿ ತಡೆದ ಪೊಲೀಸರು ಕಾರಿನ ಕಿಟಕಿಗೆ ಅಳವಡಿಸಲಾಗಿದ್ದ ಟಿಂಟ್ ತೆಗೆದುಹಾಕಿರುವ ಪೊಲೀಸರು ದಂಡ ಸಹ ವಿಧಿಸಿದ್ದಾರೆ. ತ್ರಿವಿಕ್ರಮ್‌ರ ಐಶಾರಾಮಿ ಕಾರನ್ನು ಪೊಲೀಸರು ತಪಾಸಣೆ ನಡೆಸುತ್ತಿರುವ ಚಿತ್ರ ಇದೀಗ ಸಾಮಾಜಿಕ ಜಾಲತಾಣದಲ್ಲಿಸ ವೈರಲ್ ಆಗಿದೆ.

Director Trivikram Has Been Fined By Hyderabad Traffic Police

ನಿರ್ದೇಶಕ ತ್ರಿವಿಕ್ರಮ್ ಟಾಲಿವುಡ್‌ನ ಸ್ಟಾರ್ ನಿರ್ದೇಶಕರಲ್ಲಿ ಒಬ್ಬರು. ರಾಜಮೌಳಿ, ಪುರಿ ಜಗನ್ನಾಥ್ ಬಳಿಕ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ, ಸತತ ಸೂಪರ್ ಹಿಟ್ ನೀಡಿರುವ ನಿರ್ದೇಶಕ ತ್ರಿವಿಕ್ರಮ್.

ಪವನ್ ಕಲ್ಯಾಣ್‌ ನಟನೆಯ 'ಭೀಮ್ಲ ನಾಯಕ್' ಸಿನಿಮಾಕ್ಕೆ ಚಿತ್ರಕತೆ ಬರೆದಿದ್ದ ತ್ರಿವಿಕ್ರಮ್ ಇದೀಗ ಮಹೇಶ್ ಬಾಬು ಜೊತೆ ಸಿನಿಮಾ ಮಾಡಲು ಸಜ್ಜಾಗಿದ್ದಾರೆ. ಈ ಸಿನಿಮಾದಲ್ಲಿ ಕನ್ನಡದ ಉಪೇಂದ್ರ ಸಹ ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾದ ನಾಯಕಿ ಪೂಜಾ ಹೆಗ್ಡೆ.

More from Filmibeat

English summary
Director Trivikram has been fined by Hyderabad traffic police for not removing tint from in car window. Recently Allu Arjun, Jr NTR also has been fined for the same.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X