ಪ್ರಭಾಸ್ ಮೇಲೆ ಅವರ ವಕ್ರದೃಷ್ಟಿ, ಮೊದಲ ದಿನವೇ ರಾಜಾ ಸಾಬ್‌ಗೆ ಆಘಾತ-ಅಮೆರಿಕಾದಲ್ಲಿ ನಡೆಯಿತು ನಾಚಿಕೆಗೇಡಿನ ಸಂಗತಿ

ಒಂದು ಚಿತ್ರದ ಹಿಂದೆ ಹತ್ತಾರು ಕಥೆಗಳಿರುತ್ತವೆ, ವ್ಯಥೆಗಳಿರುತ್ತವೆ. ಸಿನಿಮಾ ನಿರ್ಮಾಣ ಚಿತ್ರಮಂದಿರದಲ್ಲಿ ಕುಳಿತು ಸಿನಿಮಾವೊಂದನ್ನು ನೋಡಿದಷ್ಟು ಸುಲಭವಲ್ಲ. ಇಲ್ಲಿ ಎಲ್ಲೆಲ್ಲಿಂದಲೋ ದುಡ್ಡು ಹೊಂಚಿತಂದು ಚಿತ್ರವನ್ನು ಮಾಡುವ ನಿರ್ಮಾಪಕರಿದ್ದಾರೆ. ಜೀವವನ್ನೇ ಬಸಿದು ನಿರ್ದೇಶನ ಮಾಡುವ ನಿರ್ದೇಶಕರಿದ್ದಾರೆ .ತಮ್ಮ ಚಿತ್ರಕ್ಕೆ ತಿಂಗಳಾನುಗಟ್ಟಲೆ ಕುಳಿತು ಸ್ಕ್ರಿಪ್ಟು, ಪ್ಲ್ಯಾನಿಂಗು, ನೂರಾರು ದಿನಗಳ ಚಿತ್ರೀಕರಣವನ್ನು ಮಾಡಿ ಜವಾಬ್ದಾರಿಗಳನ್ನು ಹೆಗಲಿಗೇರಿಸಿಕೊಂಡು ಅನೇಕರು ಇಲ್ಲಿ ದುಡಿಯುತ್ತಾರೆ.

ಆದರೆ ಈಗೀಗ ಯಾವ ಭಯ ಇಲ್ಲದೇ ಈಗಷ್ಟೇ ಬಿಡುಗಡೆಯಾದ ಚಿತ್ರಗಳನ್ನು ಆನ್‌ಲೈನ್‌ನಲ್ಲಿ ಲೀಕ್ ಮಾಡುವುದು, ಪೈರಸಿಯನ್ನು ಮಾಡುವ ಲೀಕಾಸುರರ ಹಾವಳಿ ಹೆಚ್ಚಾಗಿದೆ. ಈ ತರಹದ ವಿದ್ಯಮಾನ ಚಿತ್ರದ ಮಾರುಕಟ್ಟೆಗೆ ಗಳಿಕೆಗೆ ಪೆಟ್ಟು ನೀಡಬಹುದು ಎಂಬ ಅರಿವು ಇದ್ದರೂ ಕೂಡ ಅರಿವು ಇಲ್ಲದಂತೆ ಸೋಶಿಯಲ್ ಮೀಡಿಯಾದಲ್ಲಿ ಇಡೀ ಚಿತ್ರವನ್ನು ಅಪ್‌ಲೋಡ್ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

Disgraceful Prabhas The Raja Saab Leaked and Screened Illegally at USA Restaurant Fans Outraged

ಎಷ್ಟೇ ಜಾಗರೂಕತೆಯಿಂದ ಇದ್ದರೂ ಕೂಡ ಕಿಡಿಗೇಡಿಗಳು ಚಿತ್ರವನ್ನು ಸೆರೆ ಹಿಡಿದು ಕ್ಷಣಾರ್ಧದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡುತ್ತಾರೆ. ಆನ್‌ಲೈನ್‌ನಲ್ಲಿ ಇಡೀ ಚಿತ್ರ ಹರಿಬಿಡ್ತಾರೆ. ಕಿಡಿಗೇಡಿಗಳ ಈ ಕೆಲಸಕ್ಕೆ ಇಲ್ಲಿಯವರೆಗೆ ಹಲವಾರು ಚಿತ್ರಗಳು ಬಲಿಯಾಗಿವೆ. ಈ ಸಾಲಿಗೆ ಈಗ ''ದಿ ರಾಜಾ ಸಾಬ್'' ಕೂಡ ಸೇರಿಕೊಂಡಿದೆ.

ಹೌದು, ''ದಿ ರಾಜಾ ಸಾಬ್''.. ಪ್ರಭಾಸ್ ಅಭಿನಯದ ಮಹತ್ವಕಾಂಕ್ಷೆಯ ಚಿತ್ರ. ನಿನ್ನೆಯಷ್ಟೇ (ಜನವರಿ 9) ತೆರೆಗೆ ಬಂದ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಮತ್ತು ವಿಮರ್ಷಕರಿಂದ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಆದಾಗ್ಯೂ ಮೊದಲ ದಿನ ''ದಿ ರಾಜಾ ಸಾಬ್'' ಬಾಕ್ಸಾಫೀಸ್‌ನಲ್ಲಿ ದಾಖಲೆಯ ಗಳಿಕೆಯನ್ನು ಮಾಡಿದೆ. ವಾರಾಂತ್ಯದ ನಂತರ ಈ ಚಿತ್ರದ ಗಳಿಕೆ ಚಿತ್ರದ ಮುಂದಿನ ಭವಿಷ್ಯವನ್ನು ನಿರ್ಧಾರ ಮಾಡುತ್ತಾದರೂ ಸದ್ಯ ಪೈರಸಿಗೆ ಈ ಚಿತ್ರ ಬಲಿಯಾಗಿದೆ.

''ತಮಿಳ್ ರಾಕರ್ಸ್''.. ''ಇಸೈಮಿನಿ''.. ''ಫಿಲ್ಮಿಜಿಲ್ಲಾ'' ಮತ್ತು ''ಎಂಪಿ4ಮೂವೀಸ್‌''ನಂತಹ ಕುಖ್ಯಾತ ವೆಬ್‌ಸೈಟ್‌ಗಳಲ್ಲಿ ಸದ್ಯ ''ದಿ ರಾಜಾ ಸಾಬ್'' ಚಿತ್ರದ ಹೆಚ್‌ಡಿ ಪ್ರಿಂಟ್ ಬಿಡುಗಡೆಯಾದ ಕೇವಲ ಒಂದೇ ದಿನಕ್ಕೆ ಹರಿದಾಡುತ್ತಿದೆ.

ಇನ್ನು ದುರಂತ ಅಂದರೆ ದೇಶ-ವಿದೇಶಗಳಲ್ಲಿ ಅಭಿಮಾನಿಗಳನ್ನೊಂದಿರುವ ಪ್ರಭಾಸ್ ಅವರ ಈ ಚಿತ್ರದ ಹೆಚ್‌ಡಿ ಪ್ರಿಂಟ್‌ನ್ನು ಅಮೆರಿಕಾದ ಡಬ್ಲಿನ್‌ ನಗರದ ಭಾರತೀಯ ಮೂಲದ ರೆಸ್ಟೋರೆಂಟ್‌ನ ಟಿವಿಯಲ್ಲಿ ಯಾವ ಭಯವೂ ಇಲ್ಲದೇ ಪ್ರದರ್ಶನ ಮಾಡಲಾಗುತ್ತಿದೆ.

Disgraceful Prabhas The Raja Saab Leaked and Screened Illegally at USA Restaurant Fans Outraged

ಅಮೆರಿಕಾದ ಹೊಟೇಲ್‌ನಲ್ಲಿ ''ದಿ ರಾಜಾ ಸಾಬ್'' ಪ್ರದರ್ಶನವಾಗುತ್ತಿರುವ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ ಬಳಕೆದಾರರೊಬ್ಬರು ಹಂಚಿಕೊಂಡಿದ್ದು, ಚಿತ್ರ ಬಿಡುಗಡೆಯಾದ ಕೂಡಲೇ ರೆಸ್ಟೋರೆಂಟ್‌ನವರಿಗೆ ಚಿತ್ರ ಸಿಕ್ಕಿದ್ದು ಹೇಗೆ..? ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಕಾನೂನಿನ ಪ್ರಕಾರ ಇದು ಶಿಕ್ಷಾರ್ಹ ಅಪರಾಧ ಆದರೂ ಕೂಡ ಇಂತಹ ಕುಕೃತ್ಯಗಳನ್ನು ಇವರು ಹೇಗೆ ಮಾಡುತ್ತಾರೆ ಎಂದು ಪ್ರಶ್ನಿಸಿದ್ದಾರೆ.

ಅಂದ್ಹಾಗೇ ಕೆಲ ತಿಂಗಳ ಹಿಂದೆಯಷ್ಟೇ ಪೈರಸಿ ಮಾಡುತ್ತಿದ್ದ ''ಐಬೊಮ್ಮಾ'' ಸೈಟ್‌ನ ರವಿ ಅವರನ್ನು ಅರೆಸ್ಟ್ ಮಾಡಲಾಗಿತ್ತು. ರವಿ ಬಂಧದ ನಂತರ ಪೈರಸಿ ವಿರುದ್ಧದ ಹೋರಾಟದಲ್ಲಿ ಚಿತ್ರರಂಗ ಒಂದು ಹೆಜ್ಜೆ ಮುಂದಿಟ್ಟಿದೆ ಎಂದು ಅಂದುಕೊಂಡಿತ್ತು. ಆದರೆ.. ಪೈರಸಿಗೆ ಕಡಿವಾಣ ಬಿದ್ದಿಲ್ಲ. ಅದರಲ್ಲಿಯೂ ಅಮೆರಿಕಾದಲ್ಲೇ ಈ ತರಹದ ಘಟನೆ ನಡೆದಿರುವುದು ಆಘಾತಕಾರಿ ಬೆಳವಣಿಗೆ. ಪೈರಸಿ ತಡೆಗಟ್ಟುವ ಪ್ರಯತ್ನಗಳಿಗೆ ಇದು ದೊಡ್ಡ ಹಿನ್ನೆಡೆ ಕೂಡ ಹೌದು.

ಸದ್ಯ ವೈರಲ್ ಆದ ವಿಡಿಯೋಗೆ ಹಲವರು ಪ್ರತಿಕ್ರಿಯೆ ನೀಡಿದ್ದು ಇಂತಹ ಕೃತ್ಯ ಎಸಗಿರುವ ರೆಸ್ಟೋರೆಂಟ್ ಆಡಳಿತ ಮಂಡಳಿ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದೂ ಒತ್ತಾಯಿಸಿದ್ದಾರೆ. ಈ ರೀತಿಯ ಅಕ್ರಮ ಚಟುವಟಿಕೆಗಳು ಚಿತ್ರೋದ್ಯಮಕ್ಕೆ ಹಾನಿ ಮಾಡುವುದಲ್ಲದೇ ನಿರ್ಮಾಪಕರ ಮತ್ತು ಕಲಾವಿದರ ಶ್ರಮಕ್ಕೆ ಬೆಲೆ ಇಲ್ಲದಂತೆ ಮಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಮೆರಿಕಾದ ರೆಸ್ಟೋರೆಂಟ್‌ನಲ್ಲಿ ''ದಿ ರಾಜಾ ಸಾಬ್'' ಚಿತ್ರದ ಪೈರೆಟೆಡ್ ಕಾಪಿ ಪ್ರದರ್ಶಿಸಿದ್ದು ನಾಚಿಕೆಗೇಡಿನ ಸಂಗತಿ ಎಂದು ಕಿಡಿ ಕಾರುತ್ತಿದ್ದಾರೆ. ಈ ಕುರಿತು ಚಿತ್ರತಂಡ ಹೆಚ್ಚಿನ ಮಾಹಿತಿ ನೀಡುವ ನಿರೀಕ್ಷೆ ಇದೆ. ಕ್ರಮ ಕೈಗೊಳ್ಳುವ ಸಾಧ್ಯತೆ ಕೂಡ ಇದೆ.

More from Filmibeat

English summary
Prabhas' The Raja Saab Leaked Online and Screened Illegally at USA Restaurant; Fans Outraged
Read more about: prabhas piracy tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X