ಅಲ್ಲು ಅರ್ಜುನ್ ಡ್ಯಾನ್ಸ್ ಗೆ ಬಾಲಿವುಡ್ ಬೋಲ್ಡ್ ನಟಿ ಫಿದಾ: ಸ್ಟೈಲಿಶ್ ಸ್ಟಾರ್ ಪ್ರತಿಕ್ರಿಯೆ ಹೀಗಿದೆ

ತೆಲುಗು ಸ್ಟಾರ್ ನಟ ಅಲ್ಲು ಅರ್ಜುನ್ ಡ್ಯಾನ್ಸ್ ಇಷ್ಟಪಡದ ಅಭಿಮಾನಿಗಳಿಲ್ಲ. ಟಾಲಿವುಡ್ ನ ಸ್ಟೈಲಿಶ್ ಸ್ಟಾರ್ ಅಭಿನಯದ ಜೊತೆಗೆ ಅದ್ಭುತ ಡ್ಯಾನ್ಸರ್ ಎನ್ನುವುದು ಎಲ್ಲರಿಗೂ ಗೊತ್ತಿದೆ. ಅಲ್ಲು ನೃತ್ಯಕ್ಕೆ ಕೇವಲ ತೆಲುಗು ಅಭಿಮಾನಿಗಳು ಮಾತ್ರವಲ್ಲದೆ, ದಕ್ಷಿಣ ಭಾರತೀಯ ಚಿತ್ರರಂಗದ ಜೊತೆಗೆ ಬಾಲಿವುಡ್ ಮಂದಿ ಸಹ ಫಿದಾ ಆಗಿದ್ದಾರೆ.

ಇತ್ತೀಚಿಗೆ ಬಾಲಿವುಡ್ ನಟ ಹೃತಿಕ್ ರೋಷನ್ ಸಹ ಅಲ್ಲು ಡ್ಯಾನ್ಸ್ ಬಗ್ಗೆ ಹಾಡಿಹೊಗಳಿದ್ದರು. ಸೂಪರ್ ಹಿಟ್ ಅಲಾ ವೈಕುಂಠಪುರಂಲೋ ಸಿನಿಮಾ ಮೂಲಕ ಅಲ್ಲು ಜಭರ್ದಸ್ತ್ ಡ್ಯಾನ್ಸ್ ನೊಂದಿಗೆ ಮತ್ತೊಮ್ಮೆ ಸಿನಿಪ್ರಿಯರನ್ನು ಮೋಡಿದ್ದಾರೆ. ಈ ಚಿತ್ರದಲ್ಲಿನ ಅಲ್ಲು ನೃತ್ಯ ನೋಡಿ ಬಾಲಿವುಡ್ ನಟಿ ದಿಶಾ ಪಟಾಣಿ ಮನಸೋತಿದ್ದಾರೆ. ಅಲ್ಲು ಜೊತೆ ಚಿತ್ರದಲ್ಲಿ ನಾಯಕಿಯಾಗಿ ಪೂಜಾ ಹೆಗ್ಡೆ ಮಿಂಚಿದ್ದಾರೆ. ಮುಂದೆ ಓದಿ..

ಅಲ್ಲು ನೃತ್ಯಕ್ಕೆ ದಿಶಾ ಫಿದಾ

ಅಲ್ಲು ನೃತ್ಯಕ್ಕೆ ದಿಶಾ ಫಿದಾ

ಅಲಾ ವೈಕುಂಠಪುರಂಲೋ ಸಿನಿಮಾದ 'ಬುಟ್ಟ ಬೊಮ್ಮ...' ಹಾಡಿನಲ್ಲಿ ಸ್ಟೈಲಿಶ್ ಸ್ಟಾರ್ ಸಖತ್ ಸ್ಟೆಪ್ ಗೆ ದಿಶಾ ಕ್ಲೀನ್ ಬೋಲ್ಡ್ ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಹಾಡಿನ ವಿಡಿಯೋ ಕ್ಲಿಪ್ ಶೇರ್ ಮಾಡಿ "ಹೇಗೆ ಡ್ಯಾನ್ಸ್ ಮಾಡುತ್ತೀರಿ ಅಲ್ಲು ಅರ್ಜುನ್" ಎಂದು ಪ್ರಶ್ನಿಸಿದ್ದಾರೆ.

ಅಲ್ಲು ಪ್ರತಿಕ್ರಿಯೆ ಹೀಗಿದೆ

ಅಲ್ಲು ಪ್ರತಿಕ್ರಿಯೆ ಹೀಗಿದೆ

ಬಾಲಿವುಡ್ ನಟಿಯೊಬ್ಬಳು ದಕ್ಷಿಣ ಭಾರತೀಯ ನಟನ ನೃತ್ಯಕ್ಕೆ ಮನಸೋತಿರುವುದು ಅಲ್ಲು ಅಭಿಮಾನಿಗಳಿಗೆ ಸಂತಸ ಮೂಡಿಸಿದೆ. ಅಂದ್ಹಾಗೆ ದಿಶಾ ಪ್ರಶ್ನೆಗೆ ಉತ್ತರಿಸಿರುವ ಅಲ್ಲು "ನನಗೆ ಸಂಗೀತ ತುಂಬಾ ಇಷ್ಟ. ಉತ್ತಮ ಸಂಗೀತ ನೃತ್ಯಮಾಡಿಸುತ್ತೆ. ನೀವು ಇಷ್ಟ ಪಟ್ಟಿದ್ದಕ್ಕೆ ಧನ್ಯವಾದಗಳು" ಎಂದು ಅಲ್ಲು ಅರ್ಜುನ್, ದಿಶಾಗೆ ಪ್ರತಿಕ್ರಿಯೆ ನೀಡಿದ್ದಾರೆ.

ಬುಟ್ಟ ಬೊಮ್ಮ ಹಾಡು ಇಷ್ಟಪಟ್ಟಿದ್ದ ಶಿಲ್ಪ ಶೆಟ್ಟಿ

ಬುಟ್ಟ ಬೊಮ್ಮ ಹಾಡು ಇಷ್ಟಪಟ್ಟಿದ್ದ ಶಿಲ್ಪ ಶೆಟ್ಟಿ

ದಿಶಾ ಪಟಾಣಿ ಮಾತ್ರವಲ್ಲದೆ ಇತ್ತೀಚಿಗೆ ಬಾಲಿವುಡ್ ನ ಮತ್ತೋರ್ವ ಸ್ಟಾರ್ ನಟಿ ಶಿಲ್ಪ ಶೆಟ್ಟಿ ಕೂಡ ಬುಟ್ಟ ಬೊಮ್ಮ ಹಾಡನ್ನು ಮೆಚ್ಚಿಕೊಂಡಿದ್ದರು. ಶಿಲ್ಪ ಶೆಟ್ಟಿ ಈ ಹಾಡಿಗೆ ಟಿಕ್ ಟಾಕ್ ವಿಡಿಯೋ ಮಾಡಿ ಶೇರ್ ಮಾಡಿದ್ದರು.

ಅಲ್ಲು ಅರ್ಜುನ್ ಮುಂದಿನ ಸಿನಿಮಾ

ಅಲ್ಲು ಅರ್ಜುನ್ ಮುಂದಿನ ಸಿನಿಮಾ

ಅಲಾ ವೈಕುಂಠಪುರಂಲೋ ಸಕ್ಸಸ್ ಖುಷಿಯನ್ನು ಎಂಜಾಯ್ ಮಾಡುತ್ತಿರುವ ಅಲ್ಲು ಸದ್ಯ ನಿರ್ದೇಶಕ ಸುಕುಮಾರ್ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾದಲ್ಲಿ ಅಲ್ಲು ಅರ್ಜುನ್ ಗೆ ನಾಯಕಿಯಾಗಿ ನಟಿ ರಶ್ಮಿರಾ ಮಂದಣ್ಣ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಲಾಕ್ ಡೌನ್ ಮುಗಿಯುತ್ತಿದ್ದಂತೆ ಸುಕುಮಾರ್ ಸಿನಿಮಾ ಪ್ರಾರಂಭಿಸಲಿದ್ದಾರೆ ಅಲ್ಲು ಅರ್ಜುನ್.

More from Filmibeat

English summary
Bollywood Actress Disha Patani likes Allu Arjun Dance in Ala Vaikuntapuramlo.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X