For Quick Alerts
  ALLOW NOTIFICATIONS  
  For Daily Alerts

  'ಸಲಾರ್' ಸಿನಿಮಾ; ಈ ಇಬ್ಬರು ಸ್ಟಾರ್ ನಟಿಯರಲ್ಲಿ ಯಾರಾಗಲಿದ್ದಾರೆ ಪ್ರಭಾಸ್ ಗೆ ನಾಯಕಿ?

  |

  ಸ್ಯಾಂಡಲ್ ವುಡ್ ನಿರ್ದೇಶಕ ಪ್ರಶಾಂತ್ ನೀಲ್ ಸದ್ಯ ಕೆಜಿಎಫ್2 ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಹೈದರಾಬಾದ್ ನಲ್ಲಿ ಚಿತ್ರೀಕರಣ ಮಾಡುತ್ತಿದೆ ಸಿನಿಮಾತಂಡ. ಇಜದೇ ಸಮಯದಲ್ಲಿ ಪ್ರಶಾಂತ್ ನೀಲ್ ಅವರ ಹೊಸ ಸಿನಿಮಾದ ಬಗ್ಗೆಯೂ ಚರ್ಚೆ ಜೋರಾಗಿ ನಡೆಯುತ್ತಿದೆ.

  ಪ್ರಶಾಂತ್ ನೀಲ್ ಮತ್ತು ಪ್ರಭಾಸ್ ಕಾಂಬಿನೇಷನ್ ನ ಸಲಾರ್ ಸಿನಿಮಾ ದಕ್ಷಿಣ ಭಾರತದಿಂದ ಉತ್ತರ ಭಾರತದವರೆಗೂ ಸದ್ದು ಮಾಡುತ್ತಿದೆ. ಮುಖ್ಯವಾಗಿ ಚಿತ್ರದಲ್ಲಿ ನಾಯಕಿಯಾಗಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಅಭಿಮಾನಿಗಳಲ್ಲಿ ಕುತೂಹಲ ಮನೆ ಮಾಡಿದೆ. ಈಗಾಗಲೇ ಪ್ರಭಾಸ್ ಗೆ ನಾಯಕಿಯಾಗಲಿದ್ದಾರೆ ಎಂದು ಸಾಕಷ್ಟು ನಟಿಮಣಿಯರ ಹೆಸರುಗಳು ಕೇಳಿಬರುತ್ತಿದೆ.

  ಪ್ರಭಾಸ್ ಜೊತೆ ಸಿನಿಮಾದಲ್ಲಿ ನಟಿಸುವ ಆಸೆಯಿದೆಯೇ? ಹಾಗಿದ್ದರೆ ಹೀಗೆ ಮಾಡಿಪ್ರಭಾಸ್ ಜೊತೆ ಸಿನಿಮಾದಲ್ಲಿ ನಟಿಸುವ ಆಸೆಯಿದೆಯೇ? ಹಾಗಿದ್ದರೆ ಹೀಗೆ ಮಾಡಿ

  ಇದೀಗ ಪ್ರಭಾಸ್ ಜೊತೆ ಬಾಲಿವುಡ್ ನ ಖ್ಯಾತ ನಟಿ ದಿಶಾ ಪಟಾನಿ ನಟಿಸಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಹೊಂಬಾಳೆ ಫಿಲ್ಮ್ಸ್ ಈಗಾಗಲೇ ದಿಶಾ ಜೊತೆ ಮಾತುಕಥೆಗೆ ಪ್ರಯತ್ನಿಸುತ್ತಿದೆಯಂತೆ. ಸಲಾರ್ ನಲ್ಲಿ ಪ್ರಭಾಸ್ ಗೆ ಜೋಡಿಯಾಗಿ ದಿಶಾ ನಟಿಸಲಿದ್ದಾರೆ ಎನ್ನುವ ಮಾತು ಜೋರಾಗಿ ಕೇಳಿಬರುತ್ತಿದೆ.

  ದಿಶಾ ಹೆಸರಿನ ಜೊತೆಗೆ ಮತ್ತೋರ್ವ ನಟಿಯ ಹೆಸರು ಕೇಳಿಬರುತ್ತಿದೆ. ಬಾಲಿವುಡ್ ನಲ್ಲಿ ಟ್ರೆಂಡಿಂಗ್ ನಲ್ಲಿರುವ ನಟಿ ಸಾರಾ ಅಲಿ ಖಾನ್ ಹೆಸರು ಬಲವಾಗಿ ಹೇಳಿಬರುತ್ತಿದೆ. ಕೆಲವು ಮೂಲಗಳ ಪ್ರಕಾರ ಚಿತ್ರದಲ್ಲಿ ಇಬ್ಬರು ನಾಯಕಿಯರು ಇರಲಿದ್ದಾರೆ ಎಂದು ಹೇಳಲಾಗುತ್ತಿದೆ. ದಿಶಾ ಮತ್ತು ಸಾರಾ ಇಬ್ಬರು ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಆದರೆ ಪ್ರಭಾಸ್ ಜೊತೆ ರೊಮ್ಯಾನ್ಸ್ ಮಾಡಲಿರುವ ನಟಿ ಯಾರು ಎನ್ನುವುದು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ.

  ಸಮಂತಾ ಜೊತೆ ತನ್ನ ಆಸೆ ಹೇಳಿಕೊಂಡ ತಮನ್ನಾ | Filmibeat Kannada

  ಪ್ರಶಾಂತ್ ನೀಲ್ ಸದ್ಯ ಕೆಜಿಎಫ್-2 ಚಿತ್ರೀಕರಣ ಮುಗಿಸಿರುವ ಭರದಲ್ಲಿದ್ದಾರೆ. ಈ ತಿಂಗಳಲ್ಲಿ ಕೆಜಿಎಫ್-2 ಸಿನಿಮಾದ ಚಿತ್ರೀಕರಣ ಮುಕ್ತಾಯವಾಗಲಿದೆ. ಮುಂದಿನ ವರ್ಷ 2021ರಿಂದ ತೆಲುಗು ಸಿನಿಮಾದಲ್ಲಿ ಬ್ಯುಸಿಯಾಗಲಿದ್ದಾರೆ. ಇದೇ ಸಮಯದಲ್ಲಿ ಸಲಾರ್ ಟೀಂ ಆಡಿಷನ್ ಗೆ ಕರೆ ಮಾಡಿದ್ದು, ಇಂದೀಗ ಪ್ರಶಾಂತ್ ನೀಲ್ ತಂಡ ಆಡಿಷನ್ ಕಡೆ ಗಮನ ಹರಿಸಿದೆ.

  English summary
  Bollywood Actress Disha Patani Or Sara Ali khan likely to play female lead in Prabhas and Prashanth Neel's Salaar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X