ದಿಶಾ ಪಟಾನಿ ಸೊಂಟದ ಮೇಲಿನ ಟ್ಯಾಟೂ ಅರ್ಥವೇನು? ಯಾವ ಭಾಷೆ ಅದು?

ಬಾಲಿವುಡ್ ಗ್ಲಾಮರ್ ಡಾಲ್ ದಿಶಾ ಪಟಾನಿ ಇತ್ತೀಚೆಗೆ ಸೌತ್ ಸಿನಿಮಾಗಳಲ್ಲಿ ಕೂಡ ನಟಿಸುತ್ತಿದ್ದಾರೆ. ಪ್ರಭಾಸ್ ನಟನೆಯ 'ಕಲ್ಕಿ 2898 AD' ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ್ದಾರೆ. ಈ ಸಿನಿಮಾ 900 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ ಎಂದು ಚಿತ್ರತಂಡ ಹೇಳಿದೆ.

'ಕಲ್ಕಿ 2898 AD' ಚಿತ್ರದಲ್ಲಿ ಭೈರವ(ಪ್ರಭಾಸ್)ನ ಪ್ರೇಯಸಿ ರಾಕ್ಸಿ ಆಗಿ ದಿಶಾ ಮಿಂಚಿದ್ದಾರೆ. ಆದರೆ ಆಕೆಗೆ ಚಿತ್ರದಲ್ಲಿ ಹೆಚ್ಚು ಅವಕಾಶ ಸಿಗಲಿಲ್ಲ. ಒಂದೆರಡು ದೃಶ್ಯ ಹಾಗೂ ಒಂದು ಹಾಡಿಗೆ ಮಾತ್ರ ಸೀಮಿತವಾಗಿಬಿಟ್ಟಿದ್ದರು. ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ, ಕಮಲ್ ಹಾಸನ್ ರೀತಿ ದಿಗ್ಗಜ ಕಲಾವಿದರ ಎದುರು ಬಿಂದಾಸ್ ಬೆಡಗಿ ಡಲ್ಲಾಗಿಬಿಟ್ಟಿದ್ದಾರೆ.

Disha Patani shares glimpse of tattoo on her waist for kalki 2898 ad film

ಸಿನಿಮಾ ಬಿಡುಗಡೆ ಸಮಯದಲ್ಲಿ ದಿಶಾ ಪಟಾನಿ 'PD' ಎನ್ನುವ ಟ್ಯಾಟೂ ಹಾಕಿಸಿಕೊಂಡು ದರ್ಶನ ಕೊಟ್ಟಿದ್ದಾರೆ. ಆಕೆಯ ಕೈಮೇಲೆ ಇದ್ದ ಟ್ಯಾಟೂ ನೋಡಿ ಇದರ ಅರ್ಥ ಏನು ಎಂದು ಕೆಲವರು ತಲೆ ಕೆಡಿಸಿಕೊಂಡಿದ್ದರು. ಸಾಮಾನ್ಯವಾಗಿ ತಮ್ಮ ಪ್ರೀತಿ ಪಾತ್ರರ ಹೆಸರನ್ನು ಅಥವಾ ಹೆಸರಿನ ಮೊದಲಿನ ಅಕ್ಷರಗಳನ್ನು ಸೇರಿಸಿ ಈ ರೀತಿ ಹಚ್ಚೆ ಹಾಕಿಸಿಕೊಳ್ಳುತ್ತಾರೆ.

'PD' ಅಂದ್ರೆ ಪ್ರಭಾಸ್- ದಿಶಾ ಎಂದು ಕೆಲವರು ಪ್ರಭುದೇವಾ ಎಂದು ಕೆಲವರು ಕಾಮೆಂಟ್ ಮಾಡಿದ್ದರು. ಇದೀಗ ಸೊಂಟದ ಮೇಲೆ ವಿಚಿತ್ರ ಭಾಷೆಯ ಸಾಲುಗಳಿರುವ ಹೊಸ ಟ್ಯಾಟೂ ಹಾಕಿಸಿಕೊಂಡು ದಿಶಾ ಕಾಣಿಸಿಕೊಂಡಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. 'ಕಲ್ಕಿ 2898 AD' ಚಿತ್ರದಲ್ಲಿ ರಾಕ್ಸಿ ಪಾತ್ರಕ್ಕಾಗಿ ದಿಶಾ ಹಾಕಿಸಿಕೊಂಡಿದ್ದ ಟ್ಯಾಟೂ ಇದು.

ಅಂದಹಾಗೆ ಇದು ಪರ್ಮನೆಂಟ್ ಟ್ಯಾಟೂ ಅಲ್ಲ, ಚಿತ್ರೀಕರಣಕ್ಕಾಗಿ ಹಾಕಿಸಿಕೊಂಡಿರುವ ಟ್ಯಾಟೂ ಎನ್ನುವುದು ಗೊತ್ತಾಗುತ್ತಿದೆ. ಆದರೆ ಅದರ ಅರ್ಥ ಏನು ಎಂದು ಮಾತ್ರ ಕೆಲವರು ತಲೆ ಕಡೆಸಿಕೊಂಡು ಹುಡುಕಾಟ ನಡೆಸುತ್ತಿದ್ದಾರೆ. ದಿಶಾ ಸೊಂಟದ ಮೇಲೆ ಇರುವುದು ಹೀಬ್ರೂ ಭಾಷೆಯ ಸಾಲುಗಳು ಎನ್ನಲಾಗ್ತಿದೆ. ಇಜ್ರಾಯಲ್, ಏಷ್ಯಾ, ಆಫ್ರಿಕಾ ಮಧ್ಯದಲ್ಲಿ ಕೆಲವು ದೇಶಗಳಲ್ಲಿ ಈ ಭಾಷೆ ಮಾತನಾಡುತ್ತಾರೆ. "ಆತ ನಂಬುವ ಪ್ರತಿಯೊಂದನ್ನು ಪಡೆಯಬಹುದು" ಎನ್ನುವುದು ಈ ಸಾಲಿನ ಅರ್ಥ ಎನ್ನಲಾಗ್ತಿದೆ.

ಉತ್ತರ ಪ್ರದೇಶದ ಬರೇಲಿ ಮೂಲದ ದಿಶಾ ಪಟಾನಿ ತೆಲುಗಿನ 'ಲೋಫರ್' ಚಿತ್ರದಲ್ಲಿ ಮೊದಲಿಗೆ ನಟಿಸಿದ್ದರು. ಬಳಿಕ 'ಧೋನಿ' ಬಯೋಪಿಕ್‌ನಲ್ಲಿ ಪ್ರಿಯಾಂಕ ಝಾ ಆಗಿ ಮಿಂಚಿದ್ದರು. 'ಭಾಘಿ-2', 'ಮಲಂಗ್', 'ರಾಧೆ' ಹಾಗೂ 'ಯೋಧ' ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. 'ಕಲ್ಕಿ 2898 AD' ಬಳಿಕ ತಮಿಳಿನ 'ಕಂಗುವ' ಚಿತ್ರದಲ್ಲಿ ಆಕೆ ನಟಿಸಿದ್ದು ಶೀಘ್ರದಲ್ಲೇ ಸಿನಿಮಾ ತೆರೆಗೆ ಬರಲಿದೆ. ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಲಿದೆ.

'ವೆಲ್‌ ಕಂ ಟು ದಿ ಜಂಗಲ್' ಎನ್ನುವ ಮತ್ತೊಂದು ಚಿತ್ರದಲ್ಲಿ ದಿಶಾ ನಟಿಸುತ್ತಿದ್ದಾರೆ. ಬಾಲಿವುಡ್ ನಟ ಟೈಗರ್ ಶ್ರಾಫ್ ಜೊತೆ ಬಿಂದಾಸ್ ಬೆಡಗಿ ಹೆಸರು ತಳಕು ಹಾಕಿಕೊಂಡಿದೆ. ಇಬ್ಬರೂ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನಲಾಗ್ತಿದೆ. ದಿಶಾ 'ಕಲ್ಕಿ 2898 AD' ಸಿನಿಮಾ ಸೀಕ್ವೆಲ್‌ನಲ್ಲಿ ಇರ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.

More from Filmibeat

English summary
Kalki 2898 ad actress Disha Patani waist tattoo meaning revealed;
Read more about: disha patani bollywood hindi
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X