For Quick Alerts
  ALLOW NOTIFICATIONS  
  For Daily Alerts

  ಪ್ರಭಾಸ್ ನಟಿಸಲಿರುವ 'ಸಲಾರ್' ಸಿನಿಮಾಕ್ಕೆ ಬಾಲಿವುಡ್‌ನಿಂದ ಬರಲಿದ್ದಾರೆ ನಟಿ?

  |

  ಪ್ರಭಾಸ್ ನಟಿಸಲಿರುವ ಸಲಾರ್ ಸಿನಿಮಾ ದಕ್ಷಿಣ ಭಾರತ ಚಿತ್ರರಂಗದ ಗಮನ ಸೆಳೆದಿದೆ. ಹಿಟ್ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶಿಸುತ್ತಿರುವ ಈ ಸಿನಿಮಾ ಪಕ್ಕಾ ಬ್ಲಾಕ್ ಬಸ್ಟರ್ ಎನ್ನುವ ಮಾತುಗಳು ಈಗಾಗಲೇ ಕೇಳಿಬರುತ್ತಿವೆ.

  ಪ್ರಭಾಸ್ ಜೊತೆ ನಟಿಸಲು ಅವಕಾಶ ಮಾಡಿಕೊಟ್ಟ ಪ್ರಶಾಂತ್ ನೀಲ್ | Filmibeat Kannada

  ಕೆಜಿಎಫ್ 2 ಸಿನಿಮಾದ ಕ್ಲೈಮ್ಯಾಕ್ಸ್‌ನ ಚಿತ್ರೀಕರಣದಲ್ಲಿರುವ ಪ್ರಶಾಂತ್ ನೀಲ್, ಈಗಾಗಲೇ ಸಲಾರ್ ಸಿನಿಮಾದ ಚಿತ್ರೀಕರಣದ ಯೋಜನೆ ಪ್ರಾರಂಭಿಸಿದ್ದಾರೆ. ಸಿನಿಮಾದ ಇತರೆ ಪಾತ್ರಗಳ ಆಯ್ಕೆ ಆರಂಭವಾಗಿದೆ.

  ಸಲಾರ್ ಸಿನಿಮಾದಲ್ಲಿ ಪ್ರಭಾಸ್ ಎದುರು ನಾಯಕಿ ಯಾರಾಗಲಿದ್ದಾರೆ ಎಂಬ ಕುತೂಹಲ ಎದ್ದಿದೆ. ಬಾಲಿವುಡ್‌ನಿಂದ ಹಾಟ್ ಬೆಡಗಿಯನ್ನು ಪ್ರಭಾಸ್ ಎದುರು ನಾಯಕಿಯಾಗಿ ಆಯ್ಕೆ ಮಾಡಲಾಗುತ್ತದೆ ಎನ್ನಲಾಗುತ್ತಿದೆ.

  ಬಾಲಿವುಡ್‌ ನಟಿ ದಿಶಾ ಪಟಾನಿ ಹೆಸರು ಸಲಾರ್ ನಾಯಕಿ ಪಾತ್ರಕ್ಕೆ ಜೋರಾಗಿ ಕೇಳಿಬರುತ್ತಿದೆ. ಈ ಹಿಂದೆ ಪ್ರಭಾಸ್ ನಟನೆಯ ಸಾಹೊ ಸಿನಿಮಾದಲ್ಲಿ ದಿಶಾ ಪಟಾನಿ ನಟಿಸಲಿದ್ದಾರೆ ಎನ್ನಲಾಗಿತ್ತು. ಆದರೆ ಆ ಪಾತ್ರ ಶ್ರದ್ಧಾ ಕಪೂರ್ ಪಾಲಾಯಿತು.

  ಇದೀಗ ದಿಶಾ ಪಟಾನಿ ಹೆಸರು ಮತ್ತೆ ಪ್ರಭಾಸ್ ಸಿನಿಮಾಕ್ಕಾಗಿ ಕೇಳಿಬರುತ್ತಿದೆ. ಈಗಾಗಲೇ ಲೋಫರ್ ಹೆಸರಿನ ತೆಲುಗು ಸಿನಿಮಾದಲ್ಲಿ ನಟ ವರುಣ್ ತೇಜ್ ಎದುರು ನಟಿಸಿದ್ದಾರೆ ದಿಶಾ ಪಟಾನಿ.

  ಬಾಲಿವುಡ್‌ನಲ್ಲಿ ಸಖತ್ ಬ್ಯುಸಿಯಾಗಿರುವ ದಿಶಾ ಪಟಾನಿ, ಕೆಟೀನಾ, ಯೋದ್ಧಾ, ಮಲಂಗ್ 2 ಸಿನಿಮಾಗಳಲ್ಲಿ ನಟಿಸಲಿದ್ದಾರೆ. ಇದರ ಜೊತೆಗೆ ಟೈಗರ್ ಶ್ರಾಫ್ ಜೊತೆಗಿನ ಪ್ರೀತಿ-ಪ್ರೇಮದಿಂದಲೂ ಸಖತ್ ಸುದ್ದಿಯಲ್ಲಿದ್ದಾರೆ ದಿಶಾ ಪಟಾನಿ.

  ಈ ನಡುವೆ ಸಲಾರ್ ಸಿನಿಮಾ ತಂಡದಿಂದ ಕಾಸ್ಟಿಂಗ್ ಕಾಲ್ ಸಹ ನೀಡಲಾಗಿದ್ದು. ಹೈದರಾಬಾದ್, ಬೆಂಗಳೂರು, ಚೆನ್ನೈಗಳಲ್ಲಿ ಹೊಸ ನಟರನ್ನು ಆಡಿಶನ್ ಮೂಲಕ ಆಯ್ಕೆ ಮಾಡಿ, ಸಿನಿಮಾದಲ್ಲಿ ಅವಕಾಶ ನೀಡಲಾಗುತ್ತದೆ. ಮೊದಲ ಆಡಿಶನ್ ಡಿಸೆಂಬರ್ 15 ರಂದು ಹೈದರಾಬಾದ್‌ನಲ್ಲಿ ನಡೆಯಲಿದೆ.

  English summary
  Disha Patani may act in Prabhas's Salaar movie directing by Prashant Neel. She is now busy in bollywood movies.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X