ಅಲ್ಲು ಅರ್ಜುನ್ 'ಪುಷ್ಪ' ಸಿನಿಮಾಗೆ ಬಾಲಿವುಡ್ ಸ್ಟಾರ್ ನಟಿಯ ಎಂಟ್ರಿ?

ಟಾಲಿವುಡ್ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ "ಪುಷ್ಪ" ಸಿನಿಮಾದ ಬಗ್ಗೆ ಮತ್ತೊಂದು ಇಂಟ್ರಸ್ಟಿಂಗ್ ಸುದ್ದಿ ಹೊರಬಿದ್ದಿದೆ. ಚಿತ್ರದ ಪೋಸ್ಟರ್ ರಿಲೀಸ್ ಆದ ನಂತರ ಚಿತ್ರದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ಅಲ್ಲು ಲುಕ್ ಗೆ ಫಿದಾ ಆಗಿರುವ ಅಭಿಮಾನಿಗಳು ಪುಷ್ಪ ಸಿನಿಮಾಗಾಗಿ ಕಾತರದಿಂದ ಕಾಯುತ್ತಿದ್ದಾರೆ.

Recommended Video

Karabu song released date postponed | Pogaru | Dhruva sarja | Filmibeat kannada

ಸಿನಿಮಾ ಅನೌನ್ಸ್ ಆದಾಗಿನಿಂದ ಒಂದಲ್ಲೊಂದು ಸುದ್ದಿ ಹೊರಬೀಳುತ್ತಿದೆ. ಇತ್ತೀಚಿಗಷ್ಟೆ ನಟ ವಿಜಯ್ ಸೇತುಪತಿ ಸಿನಿಮಾದಿಂದ ಹೊರ ನಡೆದಿದ್ದಾರೆ ಎನ್ನುವ ಸುದ್ದಿ ಬೆನ್ನಲ್ಲೆ, ನಟಿ ನಿವೇತಾ ಥಾಮಸ್ ಸಿನಿಮಾದಲ್ಲಿ ಅಭಿನಯಿಸುತ್ತಿಲ್ಲ ಎನ್ನುವ ವಿಚಾರ ವೈರಲ್ ಆಗಿದೆ. ಇದರ ಬೆನ್ನಲ್ಲೆ ಈಗ ಮತ್ತೊಂದು ಇಂಟ್ರಸ್ಟಿಂಗ್ ಸುದ್ದಿ ಅಭಿಮಾನಿಗಳಿಗೆ ಕಿಕ್ ಕೊಡುತ್ತಿದೆ. ಹೌದು, ಬಾಲಿವುಡ್ ನ ಖ್ಯಾತ ನಟಿ ಪುಷ್ಪ ಸಿನಿಮಾಗೆ ಎಂಟ್ರಿಯಾಗಿದ್ದಾರೆ. ಮುಂದೆ ಓದಿ..

ಪುಷ್ಪಕ್ ನಾರಾಯಣ್ ಪಾತ್ರದಲ್ಲಿ ಅಲ್ಲು ಅರ್ಜುನ್

ಪುಷ್ಪಕ್ ನಾರಾಯಣ್ ಪಾತ್ರದಲ್ಲಿ ಅಲ್ಲು ಅರ್ಜುನ್

ಸ್ಟೈಲಿಶ್ ಸ್ಟಾರ್ ಆಗ ಮಿಂಚುತ್ತಿದ್ದ ಅಲ್ಲು ಅಲ್ಲು ಅರ್ಜುನ್ ಪುಷ್ಪ ಸಿನಿಮಾದಲ್ಲಿ ಡಿ ಗ್ಲಾಮ್ ಆಗಿ ಕಾಣಿಸಿಕೊಂಡಿದ್ದಾರೆ. ಸದ್ಯ ರಿಲೀಸ್ ಆಗಿರುವ ಪೋಸ್ಟರ್ ನಲ್ಲಿ ಅಲ್ಲು ಲುಕ್ ಅಭಿಮಾನಿಗಳ ನಿದ್ದೆಗೆಡಿಸಿದೆ. ಅಂದ್ಹಾಗೆ ಚಿತ್ರದಲ್ಲಿ ಅಲ್ಲು ಅರ್ಜುನ್ ಪುಷ್ಪಕ್ ನಾರಾಯಣ್ ಎನ್ನುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಲಾರಿ ಡ್ರೈವರ್ ಆಗಿ ಮಿಂಚಲಿದ್ದಾರಂತೆ.

ಸಿನಿಮಾದಿಂದ ವಿಜಯ್ ಸೇತುಪತಿ ಔಟ್?

ಸಿನಿಮಾದಿಂದ ವಿಜಯ್ ಸೇತುಪತಿ ಔಟ್?

ಖ್ಯಾತ ನಟ ವಿಜಯ್ ಸೇತುಪತಿ ಪುಷ್ಪ ಚಿತ್ರದಲ್ಲಿ ವಿಲನ್ ಆಗಿ ಅಬ್ಬರಿಸಲು ಸಜ್ಜಾಗಿದ್ದರು. ಅಲ್ಲು ಅರ್ಜುನ್ ವಿರುದ್ಧ ತೊಡೆತಟ್ಟಲು ಸಿದ್ಧರಾಗಿದ್ದರು. ಆದರೀಗ ವಿಜಯ್ ನಿರ್ಧಾರ ಬದಲಾಯಿಸಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ದೊಡ್ಡ ಪ್ರಾಜೆಕ್ಟ್ ನಿಂದ ವಿಜಯ್ ಸೇತುಪತಿ ಹೊರನಡೆಸಿದ್ದಾರಂತೆ. ಆದರೆ ಈ ಬಗ್ಗೆ ಸಿನಿಮಾತಂಡ ಯಾವುದೆ ಮಾಹಿತಿ ಬಹಿರಂಗ ಪಡಿಸಿಲ್ಲ.

ಚಿತ್ರದಲ್ಲಿಲ್ಲ ನಿವೇತಾ ಥಾಮಸ್

ಚಿತ್ರದಲ್ಲಿಲ್ಲ ನಿವೇತಾ ಥಾಮಸ್

ಪುಷ್ಪಾ ಸಿನಿಮಾದಲ್ಲಿ ಅಲ್ಲುಗೆ ನಾಯಕಿಯಾಗಿ ನಿವೇತಾ ಥಾಮಸ್ ನಾಯಕಿಯಾಗಿ ನಟಿಸುತ್ತಿದ್ದಾರೆ, ನಟಿ ರಶ್ಮಿಕಾ ಎರಡನೇ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿತ್ತು. ಆದರೀಗ ನಿವೇತಾ ಥಾಮಸ್ ಸಿನಿಮಾದಲ್ಲಿ ಅಭಿನಯಿಸುತ್ತಿಲ್ಲವಂತೆ. ಪಾತ್ರಕ್ಕೆ ಹೆಚ್ಚು ಪ್ರಾಮುಖ್ಯತೆ ಇಲ್ಲದ ಕಾರಣ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿಲ್ಲ ಎಂದು ಹೇಳಲಾಗುತ್ತಿದೆ. ಈ ಸುದ್ದಿ ಅಭಿಮಾನಿಗಳಿಗೆ ಬೇಸರ ತಂದಿದೆ.

ಅಲ್ಲು ಜೊತೆ ಬಾಲಿವುಡ್ ಬೋಲ್ಡ್ ನಟಿ ಡ್ಯಾನ್ಸ್

ಅಲ್ಲು ಜೊತೆ ಬಾಲಿವುಡ್ ಬೋಲ್ಡ್ ನಟಿ ಡ್ಯಾನ್ಸ್

ನಟ ಅಲ್ಲು ಅರ್ಜುನ್ ಜೊತೆ ಬಾಲಿವುಡ್ ನ ಬೋಲ್ಡ್ ನಟಿ ದಿಶಾ ಪಟಾನಿ ಹೆಜ್ಜೆ ಹಾಕಲಿದ್ದಾರೆ ಎಂದು ಹೇಳಲಾಗುತ್ತಿದೆ. ಚಿತ್ರದ ಐಟಂ ಹಾಡಿಗಾಗಿ ದಿಶಾ ಪಟಾನಿಗೆ ಸಿನಿಮಾತಂಡ ಆಫರ್ ನೀಡಿದೆಯಂತೆ. ಆದರೆ ದಿಶಾ ಕಡೆಯಿಂದ ಇನ್ನೂ ಗ್ರೀನ್ ಸಿಕ್ಕಿಲ್ಲ. ಅಲ್ಲು ಡ್ಯಾನ್ಸ್ ಅಂದರೆ ತುಂಬ ಇಷ್ಟ

ಅಲ್ಲು ನೃತ್ಯಗೆ ಫಿಧಾ ಆಗಿದ್ದ ದಿಶಾ

ಅಲ್ಲು ನೃತ್ಯಗೆ ಫಿಧಾ ಆಗಿದ್ದ ದಿಶಾ

ಅಲಾ ವೈಕುಂಠಪುರಂಲೋ ಸಿನಿಮಾದ 'ಬುಟ್ಟ ಬೊಮ್ಮ...' ಹಾಡಿನಲ್ಲಿ ಸ್ಟೈಲಿಶ್ ಸ್ಟಾರ್ ಸಖತ್ ಸ್ಟೆಪ್ ಗೆ ದಿಶಾ ಕ್ಲೀನ್ ಬೋಲ್ಡ್ ಆಗಿದ್ದರು. ಸಾಮಾಜಿಕ ಜಾಲತಾಣದಲ್ಲಿ "ಹೇಗೆ ಡ್ಯಾನ್ಸ್ ಮಾಡುತ್ತೀರಿ ಅಲ್ಲು ಅರ್ಜುನ್" ಎಂದು ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ ಅಲ್ಲು "ನನಗೆ ಸಂಗೀತ ತುಂಬಾ ಇಷ್ಟ. ಉತ್ತಮ ಸಂಗೀತ ನೃತ್ಯ ಮಾಡಿಸುತ್ತೆ. ನೀವು ಇಷ್ಟ ಪಟ್ಟಿದ್ದಕ್ಕೆ ಧನ್ಯವಾದಗಳು" ಎಂದಿದ್ದರು. ಸದ್ಯ ಅಲ್ಲು ಜೊತೆ ಹೆಜ್ಜೆ ಹಾಕಲು ಸಿಕ್ಕ ಅವಕಾಶವನ್ನು ಬಳಸಿಕೊಳ್ಳುತ್ತಾರೊ ಅಥವಾ ನಿರಾಕರಿಸುತ್ತಾರಾ ಎನ್ನುವುದು ಕುತೂಹಲ ಮೂಡಿಸಿದೆ.

More from Filmibeat

English summary
Bollywood Actress Disha Patani to make special appearance in Allu Arjun's Pushpa.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X