ಹೊಸ ಬದುಕು, ಹೊಸ ಮನೆ ; ಸಮಂತಾ ಬದುಕಿನಲ್ಲಿ ಹೊಸ ಬೆಳಕು- ಬಾಯ್​​ಫ್ರೆಂಡ್ ಜೊತೆ ದೀಪಾವಳಿ ಆಚರಿಸಿದ ನಟಿ

ದೀಪಾವಳಿ ಅಂದರೆ ಸಂಭ್ರಮ.. ಸಡಗರ. ದೀವಳಿಗೆಯ ದೀಪದ ಬತ್ತಿ ಉರಿದು ಬೆಳಕನ್ನು ಸುತ್ತಲೂ ಬೀರಿ ಕತ್ತಲಿನ ನಿವಾರಣೆಗೆ ನೆರವಾಗುವಂತೆ ಮಾನವನ ಬದುಕೂ ಕೂಡ ಜಗದ ಸಂಸಾರದ ಕತ್ತಲಿನ ನಿವಾರಣೆಗೆ ವಿನಿಯೋಗವಾಗುತ್ತಾ ನೆರವಾಗಬೇಕು ಎಂಬುದನ್ನು ದೀಪಾವಳಿ ಹಬ್ಬ ವರ್ಷಾನು ವರ್ಷ ನಮಗೆ ನೆನಪು ಮಾಡುತ್ತೆ. ಇನ್ನೂ ವೈದಿಕ ಜ್ಯೋತಿಷ್ಯದ ಪ್ರಕಾರ, ಹಬ್ಬಗಳ ಸಮಯದಲ್ಲಿ, ಗ್ರಹಗಳು ಸಂಚಾರ ಮಾಡಿ ಅನೇಕ ಶುಭ ಮತ್ತು...

ರಾಜಯೋಗಗಳನ್ನು ಸೃಷ್ಟಿಸುತ್ತವೆ. ಈ ವರ್ಷ, ದೀಪಾವಳಿ ಹಬ್ಬವು ಅಕ್ಟೋಬರ್ 20 ರಿಂದ ಪ್ರಾರಂಭವಾಗುತ್ತಿದೆ. ಈ ದಿನ ಗ್ರಹಗಳ ಸ್ಥಾನಗಳು ಅಪರೂಪದ ಮತ್ತು ಶಕ್ತಿಯುತವಾದ ಯೋಗಗಳನ್ನು ರೂಪಿಸುತ್ತವೆ. ಸದ್ಯ ಇಂತಹದ್ದೇ ಶಕ್ತಿಯುತವಾದ ಯೋಗಗಳು ಸಮಂತಾ ಬದುಕನ್ನು ರೂಪಿಸುತ್ತಿದೆಯಾ..? ಗೊತ್ತಿಲ್ಲ. ಆದರೆ, ಸದ್ಯ ಸಮಂತಾ ಬದುಕಿನಲ್ಲಿ ಹೊಸ ಬೆಳಕು ಮೂಡಿದಂತೆ ಇದೆ. ಇದಕ್ಕೆ ಸಮಂತಾ ಹಂಚಿಕೊಂಡ ದೀಪಾವಳಿ ಹಬ್ಬದ ಸಂಭ್ರಮದ ಫೋಟೊಗಳು ಸದ್ಯದ ಸಾಕ್ಷಿ.

Diwali Duo Samantha Ruth Prabhu amp amp Raj Nidimoru s Intimate Celebration Sparks Relationship Buzz

ಹೌದು, ಸಮಂತಾ ಮತ್ತು ದಿ ಫ್ಯಾಮಿಲಿ ಮ್ಯಾನ್ ವೆಬ್ ಸರಣಿಯ ನಿರ್ಮಾಪಕ ಮತ್ತು ನಿರ್ದೇಶಕರಲ್ಲಿ ಒಬ್ಬರಾದ ರಾಜ್ ನಿಡಿಮೋರು ನಡುವೆ ಸ್ನೇಹಕ್ಕೂ ಮೀರಿದ ಸಂಬಂಧ ಇದೆ ಎನ್ನುವ ಅನುಮಾನ ಅನೇಕರಲ್ಲಿ ಹಲವು ದಿನಗಳಿಂದ ಇದೆ. ಇವರಿಬ್ಬರ ಹಾವ-ಭಾವ ಕೂಡ ಇದಕ್ಕೆ ತಕ್ಕಂತೆಯೇ ಇದೆ.

ಹೋದಲ್ಲಿ .. ಬಂದಲ್ಲಿ .. ಕುಂತಲ್ಲಿ.. ನಿಂತಲ್ಲಿ.. ಸಮಂತಾ ಅವರನ್ನು ರಾಜ್ ನಿಡಿಮೋರು ನೆರಳಿನಂತೆ ಹಿಂಬಾಲಿಸುತ್ತಿದ್ದಾರೆ. ಮುಂಬೈಯಿಂದ ಹಿಡಿದು ತಿರುಪತಿಯವರೆಗೂ.. ಹೈದರಾಬಾದ್‌ದಿಂದ ಹಿಡಿದು ಅಮೆರಿಕಾದವರೆಗೂ ಇಬ್ಬರು ಜೊತೆ ಜೊತೆಯಲ್ಲಿ ಓಡಾಡುತ್ತಿದ್ದಾರೆ. ಕೈ ಕೈ ಹಿಡಿದುಕೊಂಡು ಊರ್‌ ತುಂಬಾ ಸುತ್ತುತ್ತಿದ್ದಾರೆ.

ಇನ್ನು ಬೆಂಕಿ ಇಲ್ಲದೇ ಹೊಗೆಯಾಡಲ್ಲ. ಸಮಂತಾ ಮತ್ತು ರಾಜ್ ನಿಡಿಮೋರು ಅವರ ಈ ಆತ್ಮೀಯತೆಯನ್ನು ಕಂಡು ರಾಜ್ ನಿಡಿಮೋರು ಅವರ ಮಾಜಿ ಪತ್ನಿ ಶ್ಯಾಮಲಿ ಡೇ ಆಗಾಗ ಕೆರಳಿ ಕೆಂಡವಾಗುತ್ತಿದ್ದಾರೆ. ನಿಗೂಡಾರ್ಥದ ಪೋಸ್ಟ್‌ಗಳನ್ನು ಹಂಚಿಕೊಂಡು ಬದುಕು-ಕರ್ಮ-ಪಾಪ-ಪುಣ್ಯದ ಪಾಠವನ್ನು ಕೂಡ ಮಾಡುತ್ತಿರುತ್ತಾರೆ.

ಆದರೆ. ಪ್ರಯೋಜನ ಇಲ್ಲ. ಯಾಕೆಂದರೆ ಪ್ರೀತಿ ಕುರುಡು ಮಾತ್ರವಲ್ಲ ಕಿವುಡು ಕೂಡ ಹೌದು. ಇದಕ್ಕೆ ಕೈಗನ್ನಡಿ ಎಂಬಂತೆ ಯಾರೇನೇ ಹೇಳಲಿ.. ಯಾರೇನೇ ಅಂದುಕೊಳ್ಳಲಿ.. ಇದ್ದರೆ ನೆಮ್ಮದಿಯಾಗಿರಬೇಕು ಎಂದು ತೀರ್ಮಾನಕ್ಕೆ ಬಂದಂತೆ ಇರುವ ರಾಜ್ ಮತ್ತು ಸಮಂತಾ ಸದ್ಯ ಜೊತೆಯಲ್ಲಿ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ.

ದೀಪಾವಳಿ ಹಬ್ಬದ ಸಂಭ್ರಮದಲ್ಲಿ ರಾಜ್ ನಿಡಿಮೋರು ಜೊತೆ ಸಮಂತಾ ಕ್ಯಾಮರಾಗೆ ವೆರೈಟಿ ಫೋಸ್ ನೀಡಿದ್ದಾರೆ. ರಾಜ್ ನಿಡಿಮೋರು ಅವರ ಕುಟುಂಬದ ಜೊತೆ ಕಾಲ ಕಳೆದಿದ್ದಾರೆ. ದೀಪ ಬೆಳಗಿ ದೀಪಾವಳಿ ಹಬ್ಬವನ್ನು ಆಚರಿಸಿದ್ದಾರೆ. ಇದು ಸಾಲದು ಎಂಬಂತೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಫೋಟೊಗಳನ್ನು ಕೂಡ ಹಂಚಿಕೊಂಡಿದ್ದಾರೆ ಸಮಂತಾ.

ಸದ್ಯ ಸಮಂತಾ ಹಂಚಿಕೊಂಡ ಈ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿವೆ. ನಾನಾ ಬಗೆಯ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಹಲವರು ಸಮಂತಾ ಅವರ ವಿರುದ್ಧ ಕಿಡಿ ಕಾರುತ್ತಿದ್ದಾರೆ. ಇನ್ನೂ ಕೆಲವರು ಸಮಂತಾ ಅವರ ಮುಂದಿನ ಜೀವನಕ್ಕೆ ಶುಭಾಶಯವನ್ನು ಕೋರುತ್ತಿದ್ದಾರೆ.

ಎಂದಿನಂತೆ ನಡೆಯುತ್ತಿರುವ ಈ ಬೆಳವಣಿಗೆ ಬಗ್ಗೆ, ತಮ್ಮ ಬಗ್ಗೆ ವ್ಯಕ್ತವಾಗುತ್ತಿರುವ ಈ ಅಭಿಪ್ರಾಯಗಳ ಬಗ್ಗೆ, ಸಮಂತಾ ಆಗಲಿ ರಾಜ್ ಆಗಲಿ ಪ್ರತಿಕ್ರಿಯೆಯನ್ನು ನೀಡಿಲ್ಲ. ಬದಲಿಗೆ ತಮ್ಮ ಲೈಫ್‌ನ ಸಂಪೂರ್ಣವಾಗಿ ಇಬ್ಬರು ಎಂಜಾಯ್ ಮಾಡುತ್ತಿದ್ದಾರೆ. ಆದರೆ ಇವರ ಅಭಿಮಾನಿಗಳು ಮಾತ್ರ ತಮ್ಮ ಬದುಕಿನ ಚಿಕ್ಕ ಪುಟ್ಟ ಖುಷಿಯನ್ನು ಕಡೆಗಣಿಸಿ ಇವರಿಬ್ಬರ ಸಂಬಂಧದ ಕುರಿತು ಯೋಚನೆ ಮಾಡುತ್ತಾ ಕಾಲಹರಣವನ್ನು ಮಾಡುತ್ತಿದ್ದಾರೆ. ಟ್ರೋಲಿಗರು ಇಬ್ಬರನ್ನು ಟ್ರೋಲ್ ಮಾಡುತ್ತಿದ್ದಾರೆ.

More from Filmibeat

English summary
Are they official? Samantha and Raj Nidimoru's heartfelt Diwali pictures have surfaced, sparking massive relationship buzz. See the intimate moments here.
Read more about: samantha love affair
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X