ಸಿಕ್ಕಿದೆ ಸ್ಪಂದನಾ ಡೈರಿ, ಅವರಿಗಿದ್ದ ದೊಡ್ಡ ಕನಸುಗಳ ಬಗ್ಗೆ ಮಾವ ಹೇಳಿದ್ದು ಹೀಗೆ
ಕನ್ನಡ ಚಿತ್ರರಂಗವನ್ನು ಇತ್ತೀಚೆಗೆ ಶೋಕಕ್ಕೆ ನೂಕಿದ್ದು ಚಿನ್ನಾರಿಮುತ್ತ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರ ನಿಧನ. ಪತ್ನಿಯನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ರಾಘು ಅವರ ನೋವನ್ನು ಯಾರಿಂದಲೂ ಕಡಿಮೆ ಮಾಡಲಾಗದು. ಆದರೆ, ಇಷ್ಟು ದಿನಗಳ ಕಾಲ ಅವರು ವಹಿಸಿರುವ ತಾಳ್ಮೆ ಮಾತ್ರ ಮಾದರಿಯಾದದ್ದು.
ಬ್ಯಾಂಕಾಕ್ ಪ್ರವಾಸದಲ್ಲಿದ್ದ ಸ್ಪಂದನಾ ಅವರು ತೀವ್ರ ಹೃದಯಾಘಾತದಿಂದ ನಿಧನರಾಗಿದ್ದರು. ನಿನ್ನೆಯಷ್ಟೇ ಅವರ 11ನೇ ದಿನ ವೈಕುಂಠ ಸಮಾರಾಧನೆ ಮಲ್ಲೇಶ್ವರಂನ ಮೈದಾನದಲ್ಲಿ ನಡೆಯಿತ್ತು. ಸಮಾರಾಧನೆಯಲ್ಲಿ ಕುಟುಂಬಸ್ಥರು, ಸಂಬಂಧಿಕರು, ರಾಜಕಾರಣಿಗಳು ಮತ್ತು ಚಿತ್ರರಂಗದವರು ಭಾಗಿಯಾಗಿದ್ದರು.

ಸ್ಪಂದನಾ ಡೈರಿಯಲ್ಲಿ ಏನಿದೆ?
ವೈಕುಂಠ ಸಮಾರಾಧನೆಯಲ್ಲಿ ಸ್ಪಂದನಾ ಅವರನ್ನು ನೆನೆದು ಕಂಬನಿ ಹರಿಸಿದ್ದಾರೆ. ಕಾರ್ಯಕ್ರಮದಲ್ಲಿ ಒಂದು ವಿಚಾರ ಬಹಿರಂಗ ಆಗಿದೆ. ಸ್ಪಂದನಾ ಅವರು ಒಂದು ದೊಡ್ಡ ಕನಸು ಕಂಡಿದ್ದರಂತೆ. ಈ ಬಗ್ಗೆ ಸ್ಪಂದನಾ ಅವರು ಸ್ವತಃ ಡೈರಿಯಲ್ಲಿ ಬರೆದಿದ್ದಾರೆ. ಈ ವಿಚಾರವನ್ನು ಸ್ವತಃ ಅವರ ಸೋದರಮಾವ ಹೇಳಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸ್ಪಂದನಾ ಅವರ ಈಡೇರದ ಆಸೆ ಸುದ್ದಿಯಾಗುತ್ತಿದೆ.
ತನ್ನ ಪತಿ ಸಿನಿರಂಗದಲ್ಲಿ ದೊಡ್ಡ ನಟನಾಗಿರುವಾಗ ತಾವು ಚಿತ್ರರಂಗಲ್ಲಿ ನಿರ್ಮಾಪಕಿಯಾಗಬೇಕು ಎಂಬ ಆಸೆಯುತ್ತಂತೆ. ಸ್ಪಂದನಾ ಅವರಿಗೆ ಪಾರ್ವತಮ್ಮ ರಾಜ್‌ಕುಮಾರ್ ಅವರಂತೆ ದೊಡ್ಡ ನಿರ್ಮಾಪಕಿ ಆಗಬೇಕು ಎನ್ನುವ ಕನಸು ಇತ್ತಂತೆ. ತಮ್ಮ ಕನಸನ್ನು ಡೈರಿಯಲ್ಲಿ ಬರೆದಿದ್ದರು ಎಂದು ಸ್ಪಂದನಾ ಮಾವ ಪಿತಾಂಬರ ಹೇರಾಜೆ ತಿಳಿಸಿದ್ದಾರೆ.

ಸ್ಪಂದನಾ ಅವರಿಗೆ ಚಿತ್ರರಂಗದಲ್ಲಿ ನಿರ್ಮಾಪಕಿ ಆಗಬೇಕು ಜೊತೆಗೆ ಹಲವು ತಂತ್ರಜ್ಞರಿಗೆ ಕೆಲಸ ಕೊಡಬೇಕು. ಚಿತ್ರರಂಗದ ಕಲಾವಿದರಿಗೆ ಆಸರೆ ಆಗಬೇಕು ಅನ್ನೋ ಆಸೆಯಿತ್ತು ಎಂದು ಡೈರಿಯಲ್ಲಿ ಬರೆದಿದ್ದಾರೆ ಎಂದು ಪಿತಾಂಬರ ಹೇರಾಜೆ ಹೇಳಿದ್ದಾರೆ. ಇದಲ್ಲದೆ ಸ್ಪಂದನಾ ಅವರಿಗೆ ಮಗ ಶೌರ್ಯನನ್ನು ಚಿತ್ರರಂಗಕ್ಕೆ ತರಬೇಕು ಎನ್ನುವುದು ದೊಡ್ಡ ಆಸೆಯಿತ್ತಂತೆ.
'ವಿಜಯ್ ರಾಘವೇಂದ್ರ ಅವರಿಗೆ ಸ್ಪಂದನಾ ಮತ್ತು ಮಗ ಎಂದರೆ ಪ್ರೀತಿ. ಸ್ಪಂದನಾ ತನ್ನ ಆಸೆಯೆಲ್ಲಾ ಡೈರಿಯಲ್ಲಿ ಬರೆದಿದ್ದಾರೆ. ನಾನು ಡೈರಿಯನ್ನು ನೋಡಿಲ್ಲ. ಮನೆಯವರೆಲ್ಲಾ ದುಖಃದಲ್ಲಿದ್ದಾರೆ. ಸ್ಪಂದನಾ ಡೈರಿಯಲ್ಲಿ ಯಾವ್ಯಾವ ವಿಷಯಗಳಿವೆ? ಅವರ ಆಸೆಗಳೆನು ಎಂಬುದು ಕೆಲವು ದಿನಗಳಲ್ಲಿ ಸಂಪೂರ್ಣವಾಗಿ ತಿಳಿಯಲಿದೆ" ಎಂದು ಹೇಳಿದ್ದಾರೆ.
ಸ್ಪಂದನಾ ಕೆಲವು ದಿನಗಳ ಹಿಂದಷ್ಟೇ ಬ್ಯಾಂಕಾಕ್‌ಗೆ ಪ್ರವಾಸಕ್ಕೆಂದು ತೆರಳಿದ್ದರು. ಆದರೆ, ಆಗಸ್ಟ್ 6 ರಂದು ಸ್ಪಂದನಾ ಅವರಿಗೆ ತೀವ್ರ ಹೃದಯಾಘಾತವಾಗಿತ್ತು. ತಕ್ಷಣವೇ ಆಸ್ಪತ್ರೆಗೆ ಸೇರಿಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ವಿದೇಶದಲ್ಲಿ ನಿಧನರಾಗಿದ್ದರಿಂದ ಮರಣೋತ್ತರ ಪರೀಕ್ಷೆ ಮಾಡಿ, ವರದಿ ಸಲ್ಲಿಸಿದ ಬಳಿಕ ಕುಟುಂಬಕ್ಕೆ ಮೃತದೇಹವನ್ನು ಹಸ್ತಾಂತರ ಮಾಡಲಾಗಿತ್ತು. ಶ್ರೀರಾಮಪುರದ ಹರಿಶ್ಚಂದ್ರ ಘಾಟ್‌ನಲ್ಲಿ ಅವರ ಅಂತ್ಯಕ್ರಿಯೆ ನಡೆದಿತ್ತು, ಬಳಿಕ ಸ್ಪಂದನಾ ಅಸ್ಥಿ ವಿಸರ್ಜನೆ ಕಾರ್ಯ ಶ್ರೀರಂಗಪಟ್ಟಣದಲ್ಲಿ ವಿಜಯ್ರಾಘವೇಂದ್ರ ಹಾಗೂ ಶಿವರಾಂ ಕುಟುಂಬಸ್ಥರು ಸಲ್ಲಿಸಿದ್ದರು.


Click it and Unblock the Notifications











