ದುಂಡು ಮಲ್ಲಿಗೆಯಂತೆ ಇದ್ದ ಅಭಿನಯಶ್ರೀ ಈಗ ಎಷ್ಟೊಂದು ಬದಲಾಗಿದ್ದಾರೆ ನೋಡಿ..!

ಅಭಿನಯಶ್ರೀ.. ನಿಮಗೆ ನೆನಪಿರಬೇಕು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕರಿಯ ಚಿತ್ರದ ಕಥಾನಾಯಕಿ. ಕರಿಯ ಚಿತ್ರಕ್ಕೂ ಮುನ್ನ ಕನ್ನಡದ ಫ್ರೆಂಡ್ಸ್ ಚಿತ್ರದ ಮೂಲಕ ಬಣ್ಣದ ಬದುಕಿಗೆ ಬಂದ ಅಭಿನಯಶ್ರೀ ಕೇವಲ ಒಂದೇ ವರ್ಷದಲ್ಲಿ ಕನ್ನಡವೂ ಸೇರಿ ತೆಲುಗು, ತಮಿಳು ಮತ್ತು ಮಲಯಾಳಂ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಜನ ಮನ ಗೆದ್ದಿದ್ದರು.

ನೋಡಲು ದುಂಡು ಮಲ್ಲಿಗೆಯಂತೆ ಇದ್ದ ಅಭಿನಯಶ್ರೀಯ ಈ ವೇಗವನ್ನ ಕಂಡು, ಚಿತ್ರರಂಗದಲ್ಲಿ ಅಭಿನಯಶ್ರೀ ಬಹುಕಾಲ ನೆಲೆಯೂರುತ್ತಾರೆ ಎಂದು ಎಲ್ಲರು ಅಂದುಕೊಂಡಿದ್ದರು. ಆದರೆ ಅದೇನಾಯ್ತೋ.. ಅಭಿನಯಶ್ರೀ ಕೇವಲ ಹಾಡುಗಳಿಗಷ್ಟೇ ಸೀಮಿತವಾದರು. ಐಟಂ ಸಾಂಗ್‌ಗಳಿಗೆ ಸೊಂಟ ಬಳುಕಿಸಿದರು. ಆ ಪೈಕಿ ಅಲ್ಲು ಅರ್ಜುನ್ ಅವರಿಗೆ ಸ್ಟಾರ್ ಪಟ್ಟವನ್ನ ತಂದು ಕೊಟ್ಟ ಆರ್ಯ ಸಿನಿಮಾ ಕೂಡ ಒಂದು.

Do you know how much Abhinayashree the heroine of Kariya s film has changed

ಆರ್ಯ ಚಿತ್ರದಲ್ಲಿ ಆ ಅಂಟೆ ಅಮಲಾಪುರ ಹಾಡಿಗೆ ಕುಣಿದು ಆ ಕಾಲಕ್ಕೆ ಎಲ್ಲರನ್ನೂ ಹುಚ್ಚೆದ್ದು ಕುಣಿಯುವಂತೆ ಮಾಡಿದ್ದ ಅಭಿನಯಶ್ರೀ ಈಗ ಮೊದಲಿನಂತೆ ಇಲ್ಲ. ಸಿಕ್ಕಾಪಟ್ಟೆ ಸಣ್ಣ ಆಗಿದ್ದಾರೆ. ತಕ್ಷಣಕ್ಕೆ ಇವರನ್ನ ನೋಡಿದರೆ ಗುರುತು ಹಿಡಿಯುವುದು ಕೂಡ ಕಷ್ಟ. ಹೀಗಾಗಿಯೇ .. ನಿನ್ನೆ, ಇವರನ್ನ ನೋಡಿದ ಅನೇಕರು, ಇವರು ನಿಜವಾಗಿಯೂ ನಾವು ಅವತ್ತು ನೋಡಿದ್ದ ಅಭಿನಯಶ್ರೀ ಅವರೇನಾ ಎಂದು ಅನುಮಾನವನ್ನ ವ್ಯಕ್ತಪಡಿಸಿದ್ದಾರೆ

ಹೌದು, ಅಸಲಿಗೆ ಆರ್ಯ ಎರಡು ದಶಕ ಪೂರೈಸಿದೆ. ಈ ಹಿನ್ನೆಲೆಯಲ್ಲಿ ಬದುಕಿಗೆ ಅಡಿಪಾಯ ಹಾಕಿದ ಚಿತ್ರದ ನೆನಪು ಮೆಲುಕು ಹಾಕಲು ಚಿತ್ರತಂಡ ವಿಶೇಷ ಕಾರ್ಯಕ್ರಮ ಆಯೋಜಿಸಿತ್ತು. ಅಲ್ಲು ಅರ್ಜುನ್.. ನಿರ್ದೇಶಕ ಸುಕುಮಾರ್ ಸೇರಿ ಚಿತ್ರತಂಡಕ್ಕೆ ಕೆಲಸ ಮಾಡಿದ ಬಹುತೇಕರು ಕಾರ್ಯಕ್ರಮಕ್ಕೆ ಬಂದಿದ್ದರು. ಅಭಿನಯಶ್ರೀ ಇದೇ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡರು. ವೇದಿಕೆಯನ್ನೇರಿದರು. ಭಾರೀ ಜನಾಭಿಪ್ರಾಯಕ್ಕೆ ಮಣಿದು ತಮಗೆ ಹೆಸರು, ಕೀರ್ತಿಯನ್ನ ತಂದು ಕೊಟ್ಟಿದ್ದ ಆ ಅಂಟೆ ಅಮಲಾಪುರ ಹಾಡಿಗೆ ಹೆಜ್ಜೆ ಹಾಕಿದರು. ವಿಶೇಷ ಅಂದರೆ ಅಲ್ಲು ಅರ್ಜುನ್ ಅವತ್ತು ಕೂಡ ಅಭಿನಯಶ್ರೀ ಡ್ಯಾನ್ಸ್ ಮತ್ತು ಅವರಲ್ಲಿನ ಎನರ್ಜಿಗೆ ಮನ ಸೋತಿದ್ದರು. ನಿನ್ನೆ ಕೂಡ ಅಭಿನಯಶ್ರೀಯ ಹೆಜ್ಜೆಗಳನ್ನ ಬೆರಗುಗಣ್ಣಿಂದ ನೋಡಿದರು. ಖುಷಿ ಪಟ್ಟರು

ಇನ್ನೂ ಕಾರ್ಯಕ್ರಮದಲ್ಲಿ ಮಾತನಾಡಿದ ಅಭಿನಯಶ್ರೀ ಶಂಕರ್ ಮೇಷ್ಟ್ರು ಯಾವುದೋ ಚಿತ್ರಕ್ಕೆ ಡ್ಯಾನ್ಸರ್ ಹುಡುಕುತ್ತಿದ್ದಾರೆ ಎಂದು ಗೊತ್ತಾದ ನಂತರ ಈ ಚಿತ್ರದ ಆಫರ್ ಬಂತು ಎಂದರು. ಈ ಸಾಂಗ್ ಗೆ ಆರು ದಿನ ನಿದ್ದೆಗೆಟ್ಟು ಕೆಲಸ ಮಾಡಿದ್ದೇವೆ ಎಂದರು. ನನ್ನ ಜೀವಮಾನವಿಡೀ ನೆನಪಿನಲ್ಲಿ ಉಳಿಯುವಂತ ಹಾಡು ಇದು ಎಂದು ಆ ದಿನಗಳನ್ನ ಮೆಲುಕು ಹಾಕಿದರು ಅಭಿನಯಶ್ರೀ

Do you know how much Abhinayashree the heroine of Kariya s film has changed

ಸದ್ಯಕ್ಕೆ ಅಭಿನಯಶ್ರೀ ಅವರ ಈ ಬದಲಾದ ರೂಪದ ಬಗ್ಗೆ ಚರ್ಚೆ ಆರಂಭವಾಗಿದೆ. ಸಣ್ಣಗಾದ ಅಭಿನಯಶ್ರೀಗೆ ಇನ್ನು ಮುಂದಾದರೂ ಚಿತ್ರರಂಗದಲ್ಲಿ ಒಳ್ಳೆಯ ಅವಕಾಶ ಸಿಗಬಹುದು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಉಳಿದಂತೆ 2023ರಲ್ಲಿ ತೆರೆಗೆ ಬಂದಿದ್ದ ಸ್ಟ್ರೈಕರ್ ಚಿತ್ರದಲ್ಲಿ ಅಭಿನಯಶ್ರೀ ಮುಖ್ಯವಾದ ಪಾತ್ರ ನಿರ್ವಹಿಸಿದ್ದರು. ಸದ್ಯಕ್ಕೆ.. ಇವರ ಬಳಿ ಹೇಳಿಕೊಳ್ಳುವಂತಹ ಅವಕಾಶ ಇಲ್ಲ. ಇನ್ನೂ ಅಭಿನಯಶ್ರೀ ಕೇವಲ ನಟಿ ಮತ್ತು ಒಳ್ಳೆಯ ಡ್ಯಾನ್ಸರ್ ಅಷ್ಟೇ ಅಲ್ಲ ಕೊರಿಯೊಗ್ರಾಫರ್ ಕೂಡ ಹೌದು ಅನ್ನುವುದು ಬಹುತೇಕರಿಗೆ ಗೊತ್ತಿರದ ವಿಚಾರ

ಒಟ್ನಲ್ಲಿ ಎರಡು ದಶಕದ ಹಿಂದೆ ಇದ್ದ ಅಭಿನಯಶ್ರೀ ಮತ್ತು ಈಗ ಕಾಣಿಸುವ ಅಭಿನಯಶ್ರೀಗೆ ಬಹಳಷ್ಟು ವ್ಯತ್ಯಾಸ ಇದೆ. ಇದರಿಂದ ವೃತ್ತಿ ಬದುಕಿನಲ್ಲಿಯೂ ಏನಾದರೂ ವ್ಯತ್ಯಾಸ ಕಂಡು ಬರುತ್ತಾ ಅನ್ನುವುದನ್ನ ಈಗ ಕಾದು ನೋಡಬೇಕಿದೆ

More from Filmibeat

English summary
Many people were surprised to see Kariya fame actress Abhinayashree who had arrived at the event of Arya's 20th anniversary.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X