ರಶ್ಮಿಕಾ ಮಂದಣ್ಣ ಈ ಔಟ್ ಫಿಟ್ ಎಷ್ಟು ದುಬಾರಿ ಗೊತ್ತಾ? ಸಾವಿರ ಲೆಕ್ಕಕ್ಕಿಲ್ಲ ಲಕ್ಷಗಳಲ್ಲೇ ಎಲ್ಲ
ಬಹಳ ಬೇಗನೇ ಯಶಸ್ಸು ಕಂಡ ನಟಿ ಎಂದರೆ ಅದು ರಶ್ಮಿಕಾ ಮಂದಣ್ಣ. ದಕ್ಷಿಣದಿಂದ ಬಂದ ನಟಿ ಈಗ ಬಾಲಿವುಡ್‌ನಲ್ಲಿ ಬಹುಬೇಡಿಕೆಯ ನಟಿಯಾಗಿದ್ದಾರೆ. ಮೊದಲ ಸಿನಿಮಾದಲ್ಲಿಯೇ ಕನ್ನಡಿಗರ ಮನಸ್ಸು ಗೆದ್ದು ಕರ್ನಾಟಕದ ಕ್ರಶ್ ಎನಿಸಿಕೊಂಡಿದ್ದ ಈ ಕೊಡಗಿನ ಕುವರಿ ನೋಡ ನೋಡುತ್ತಲೇ ನ್ಯಾಷನಲ್ ಕ್ರಶ್ ಆಗಿ ಬೆಳೆದರು. ಕೇಳಿಸಿಕೊಂಡ ಟೀಕೆಗಳೆಷ್ಟೋ? ಟ್ರೋಲ್‌ಗಳೆಷ್ಟೋ? ಆರಂಭದಲ್ಲಿ ತಲೆ ಕೆಡಿಸಿಕೊಳ್ಳುತ್ತಿದ್ದ ರಶ್ಮಿಕಾ ನಂತರದ ದಿನಗಳಲ್ಲಿ ಡೋಂಟ್ ಕೇರ್ ಎನ್ನುವ ಸ್ವಭಾವ ತೋರಿದರು.
ಲಕ್ಷಗಳಲ್ಲಿ ಸಂಭಾವನೆ ಪಡೆಯುತ್ತಿದ್ದಈ ನಟಿ ಈಗ ಕೋಟಿ ಸಂಭಾವನೆಯ ಒಡತಿಯಾಗಿದ್ದಾರೆ. ರಶ್ಮಿಕಾ ಎಂದರೆ ಪಾಪರಾಜಿಗಳು ಕ್ಯೂನಲ್ಲಿ ನಿಲ್ತಾರೆ. ಏರ್ಪೋರ್ಟ್ ಹೋಗಲಿ, ಜಿಮ್ ಹೋಗಲಿ ಕ್ಯಾಮೆರಾಗಳ ಕಣ್ಣು ರಶ್ಮಿಕಾ ಮೇಲಿರುತ್ತದೆ. ರಶ್ಮಿಕಾ ಎಂದರೆ ಅಷ್ಟು ಕ್ರೇಜ್ ಇದೆ.

ರಶ್ಮಿಕಾ ಮಂದಣ್ಣ ಇನ್‌ಸ್ಟಾಗ್ರಾಂನಲ್ಲಿ ಒಂದೇ ಒಂದು ಪೋಸ್ಟರ್ ಹಾಕಿದರು ನಾ ಮುಂದು ತಾ ಮುಂದು ಅಂತ ಕ್ಯೂನಲ್ಲಿ ಬಂದು ಕಮೆಂಟ್ ಹಾಕುತ್ತಾರೆ. ಮಿಲಿಯನ್ ಗಟ್ಟಲೇ ವೀವ್ ಆಗುತ್ತೆ, ಲಕ್ಷಗಟ್ಟಲೇ ಲೈಕ್ಸ್ ಬರುತ್ತೆ, ಸಾವಿರಗಟ್ಟಲೇ ಕಮೆಂಟ್ಸ್ ಬರುತ್ತದೆ. ಅದರಲ್ಲಿ ನಮ್ಮ ಹೆಮ್ಮೆಯ ಕನ್ನಡಿಗರು ಇರ್ತಾರೆ.
ನಮ್ಮ ಕನ್ನಡ ಹುಡುಗಿ, ಅಷ್ಟು ದೊಡ್ಡ ಮಟ್ಟಕ್ಕೆ ಬೆಳೆಯುವಾಗ ನಮ್ಮದು ಒಂದು ಸಪೋರ್ಟ್ ಇರ್ಲಿ ಬಿಡಿ ಅಂತಾರೆ ವಿಶಾಲ ಮನಸ್ಸಿನ ಕರ್ನಾಟಕದವರು. ಆದರೆ ರಶ್ಮಿಕಾನೇ ಆಗಾಗ ನಾನು ಹೈದರಾಬಾದ್, ಮುಂಬೈ ಅನ್ನೋದು. ಇದೇ ಕಾರಣಕ್ಕೆ ಟ್ರೋಲ್ ಆಗೋದು. ಈ ವಿಚಾರ ಎಲ್ಲಾ ನಿಮಗೂ ಗೊತ್ತಿರೋದೆ ಬಿಡಿ. ಆದರೆ, ಇವತ್ತು ಹೇಳೋದಕ್ಕೆ ಹೊರಟಿರೋ ವಿಚಾರ ರಶ್ಮಿಕಾ ಮಂದಣ್ಣ ಔಟ್ ಫಿಟ್ ಬಗ್ಗೆ. ಒಮ್ಮೆ ಹೊರಗೆ ಹೋಗುವಾಗ ಹಾಕುವ ಲಕ್ಷ ರೂಪಾಯಿ ಬೆಲೆ ಬಾಳುವ ಡ್ರೆಸ್‌ಗಳನ್ನೇ ಹಾಕ್ತಾರೆ ಎನ್ನುವ ವಿಷಯ ನಿಮಗೆ ಗೊತ್ತಾ..? ಆ ಬಗ್ಗೆ ಹೇಳ್ತೀವಿ ಕೇಳಿ.
ನಾಳೆ (ಏಪ್ರಿಲ್ 5) ರಶ್ಮಿಕಾ ಮಂದಣ್ಣ ಹುಟ್ಟುಹಬ್ಬ. ಶೂಟಿಂಗ್‌ನಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಇದ್ದರು ಕೂಡ ತಮ್ಮ ಹುಟ್ಟುಹಬ್ಬದ ಆಚರಣೆಗೆ ವಿದೇಶಕ್ಕೆ ಹಾರಿದ್ದಾರೆ. ಅದು ಗಲ್ಫ್ ರಾಷ್ಟ್ರಗಳಲ್ಲಿ ಒಂದಾದ ಒಮನ್‌ಗೆ ಪಯಣ ಬೆಳೆಸಿದ್ದಾರೆ. ಅಲ್ಲಿಯೇ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದು, ಸ್ನೇಹಿತರು ಜೊತೆಯಾಗಲಿದ್ದಾರೆ.

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಪ್ರೀತಿಯಲ್ಲಿದ್ದಾರೆ ಎಂಬ ಸುದ್ದಿ ಹರಿದಾಡ್ತಾ ಇದೆ. ಇದೀಗ ರಶ್ಮಿಕಾ ಜೊತೆಗೆ ವಿಜಯ್ ದೇವರಕೊಂಡ ಕೂಡ ವಿದೇಶಕ್ಕೆ ಹಾರಿದ್ದಾರೆ ಎನ್ನಲಾಗಿದ್ದು, ಈ ಬಾರಿಯೂ ವಿದೇಶದಲ್ಲಿಯೇ ಹುಟ್ಟುಹಬ್ಬವನ್ನು ಆಚರಿಸಲಾಗುತ್ತಿದೆ. ನಾಳೆ ಯಾವ ಥರದ ಡ್ರೆಸ್ ಹಾಕಲಿದ್ದಾರೆ ಎಂಬ ಕುತೂಹಲ ಇದ್ದೇ ಇದೆ. ಆದರೆ ಇತ್ತೀಚೆಗೆ ಒಂದು ಔಟ್ ಫಿಟ್‌ನಲ್ಲಿ ಕಾಣಿಸಿಕೊಂಡಿದ್ದರು. ಅದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.
ಕಪ್ಪು ಕಲರ್ ಜಾಕೆಟ್ ಹಾಕಿದ್ದ ರಶ್ಮಿಕಾ, ಕಪ್ಪು ಬಣ್ಣದ ಡೆನಿಮ್ ಟಾಪ್ ಅನ್ನು ಧರಿಸಿದ್ದರು. ಆ ಟಾಪ್ ಅನ್ನು ಸರ್ಚ್ ಮಾಡಿದಾಗ ತಿಳಿದ ವಿಚಾರ ಅಂದರೆ, ಅದರ ಬೆಲೆ ಬರೋಬ್ಬರಿ 95 ಸಾವಿರ ರೂಪಾಯಿ. ಅದರ ಜೊತೆಗೆ ಅವರು ಧರಿಸಿರುವ ಜೀನ್ಸ್ ಬಗ್ಗೆ ಸ್ವಲ್ಪ ಕಷ್ಟ. ಬ್ರಾಂಡ್ ಯಾವುದು? ಬೆಲೆ ಯಾವುದು ಎಂಬ ಯಾವ ಮಾಹಿತಿಯೂ ಸಿಗುತ್ತಿಲ್ಲ. ಬಹುಶ: ಇದು ಡಿಸೈನರ್ ಜೀನ್ಸ್ ಆಗಿರಲಿಕ್ಕೂ ಸಾಕು. ಹಾಗೆ ಯಾವುದೇ ಆನ್ಲೈನ್ ಶಾಪಿಂಗ್ ಆಪ್‌ನಲ್ಲಿ ಹುಡುಕಿದರು ಅದೇ ಪ್ಯಾಂಟ್ ಸಿಗೋದು ಕಷ್ಟವಿದೆ. ಇನ್ನು ಅವರ ಸ್ಟೈಲ್ ಆಗಿ ಹಿಡಿದುಕೊಂಡಿದ್ದ ಬ್ಯಾಗ್ ಬೆಲೆ 2 ಲಕ್ಷದ 74 ಸಾವಿರದ 900 ರೂಪಾಯಿ. ಇನ್ನು ಇವರು ಧರಿಸಿರುವ ಟಾಪ್‌ನ ಬೆಲೆ ಬರೋಬ್ಬರಿ 95 ಸಾವಿರ. ಇನ್ನು ಆ ಜಾಕೆಟ್ ಹಾಗೂ ಕೋಟ್, ಜೀನ್ಸ್ ಬೆಲೆ ಎಷ್ಟಿರಬಹುದು ಅಂತ ನೀವೇ ಊಹಿಸಿ. ಐದಾರು ಲಕ್ಷ ರೂಪಾಯಿ ದಾಟಬಹುದು.


Click it and Unblock the Notifications











